Breaking News

ರಾಜ್ಯ

ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ.ಅಭಿವೃದ್ಧಿ

ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ. ಚಿತ್ರದುರ್ಗ ನಗರದ ಬಳಿಯ ಜೋಗಿಮಟ್ಟಿ ತಪ್ಪಲಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯವು ಸಾಕಷ್ಟು ವರ್ಷಗಳ ಹಿಂದೆಯೇ ನಿರ್ಮಾಣ ಆಗಿದ್ದು, ಈ ಭಾಗದ ಜನರಿಗೆ ಕಾಡುಪ್ರಾಣಿಗಳನ್ನು ನೋಡುವ ಭಾಗ್ಯ ಕರುಣಿಸಿದೆ.   ಈ ಪ್ರಾಣಿ ಸಂಗ್ರಹಾಲಯ ವಿಸ್ತೀರ್ಣಗೊಳಿಸಿ …

Read More »

ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಾಜಿ ಮೇಯರ್​ ಸಂಪತ್​ ರಾಜ್​​ ಕೊನೆಗೂ ನಿನ್ನೆ ಅರೆಸ್ಟ್​ ಆಗಿದ್ದಾರೆ.

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪ ಹೊತ್ತು, ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಾಜಿ ಮೇಯರ್​ ಸಂಪತ್​ ರಾಜ್​​ ಕೊನೆಗೂ ನಿನ್ನೆ ಅರೆಸ್ಟ್​ ಆಗಿದ್ದಾರೆ. ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಡಿಸ್ಚಾರ್ಜ್​​​ ಆದ ಬಳಿಕ ಸಣ್ಣ ಸುಳಿವು ಸಿಗದೆ ಸಂಪತ್​ ರಾಜ್ ಕಣ್ಮರೆಯಾಗಿದ್ದರು. ಅವರನ್ನ ಹುಡುಕಲು ಪೊಲೀಸರು ಒಂದು ತಿಂಗಳಿನಿಂದ ಪ್ರಯತ್ನಿಸಿದ್ದರು. ಸಂಪತ್ ರಾಜ್​ರನ್ನ ಹಿಡಿಯೋದಿರಲಿ, ಅವರ ಸುಳಿವು ಪತ್ತೆ ಮಾಡೋದ್ರಲ್ಲೇ ಹೈರಾಣಾಗಿದ್ದರು. ನಾಗರಹೊಳೆ, …

Read More »

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು,

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನವೆಂಬರ್ 18 ರಿಂದ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 18 ರಿಂದ 30 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಜನವರಿ 4 ರಿಂದ ಮೂರು ಹಂತದ ಕೌನ್ಸಲಿಂಗ್ ನಡೆಯಲಿದೆ. ಮಾರ್ಚ್ ಮಧ್ಯಂತರದ ವರೆಗೆ ಮುಂದುವರೆಯಲಿದೆ. ಈ ವರ್ಷ ಲಕ್ಷಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ. ಇವರಲ್ಲಿ ಶೇ. …

Read More »

ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು 6 ಮಂದಿ ಸಾವನ್ನಪ್ಪಿರುವ ಘಟನೆ

ಶಿಮ್ಲಾ: ವಾಹನವೊಂದು ಓವರ್ ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು 6 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಈ ಅವಘಡದಲ್ಲಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಕ್ಕೆ ಕಾರಣವೇನು? ವಾಹನ ಓವರ್ ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸುಕೇತಿ ಖುದ್ ನದಿಗೆ ಬಿದ್ದು ಈ …

Read More »

5 ಸಾವಿರ ಮಾಸ್ಕ್ ಹಂಚಿ ಮಾನವೀಯತೆ ಮೆರೆದ ಯುವ ಡಾಕ್ಟರ್

ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. …

Read More »

ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಪ್ರವೀಣ್ ಶೆಟ್ಟಿ ಸರಕಾರಕ್ಕೆ ಎಚ್ಚರಿಕೆ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಆದೇಶ ವಾಪಾಸ್ ಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅಧ್ಯಕ್ಷ ಪ್ರವೀಣ್ ಶೆಟ್ಟಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಇಂದು ಮರಾಠರು ನಾಳೆ ಮಾರವಾಡಿಗಳು, ತಮಿಳರು ಹೀಗೆ ಸರಕಾರ ಬೇರೆಯವರಿಗೆ ಪ್ರಾಧಿಕಾರ ರಚನೆ ಮಾಡಲು ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ, ಸರಕಾರ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಮರಾಠಿಗರು ಕನ್ನಡ ರಾಜ್ಯೋತ್ಸವದ …

Read More »

ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ/ ನಿಗಮವನ್ನು ಕೂಡಲೇ ಸ್ಥಾಪಿಸಬೇಕೆಂದು ತನ್ನ ಫೇಸ್ ಬುಕ್ ಪುಟದಲ್ಲಿ ಬರೆದಿರುವ ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ/ ನಿಗಮವನ್ನು ಕೂಡಲೇ ಸ್ಥಾಪಿಸಬೇಕೆಂದು ತನ್ನ ಫೇಸ್ ಬುಕ್ ಪುಟದಲ್ಲಿ ಬರೆದಿರುವ ಡಿಸಿಎಂ ಲಕ್ಷ್ಮಣ ಸವದಿ ಸಿಎಂಗೆ ಮನವಿ ಮಾಡಿದ್ದಾರೆ. ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ಸಂಬಂಧಿಸಿದಂತೆ ಸರಕಾರದ ಈ ನಿರ್ಧಾರದ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದು, ಇದರ ನಡುವೆ ಡಿಸಿಎಂ ಲಕ್ಷ್ಮಣ ಸವದಿ ಸೋಮವಾರ ಸಿಎಂ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. …

Read More »

ಖಾನಾಪುರದ ಇಬ್ಬರು ಯುವಕರು ನೀರುಪಾಲ, ಬ್ಬರು ಯುವಕರ ಶವಗಳು ಪತ್ತೆ

ಬೆಳಗಾವಿ: ಪಿಕ್‍ನಿಕ್ ಮಾಡಲು ಹೋಗಿದ್ದ ಖಾನಾಪುರದ ಇಬ್ಬರು ಯುವಕರು ನೀರುಪಾಲಾದ ಘಟನೆ ಖಾನಾಪುರದ ಅಸೋಗಾ ಬಳಿ ಇರುವ ಹಾಲತ್ರಿ ಹಳ್ಳದ ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ನಡೆದಿದೆ. ಮೃತ ಯುವಕರನ್ನು ಉಮರ್ ಖಲೀಫ್(16), ಅರಘಾತ ಅರಘಾಟಿ(16) ಎಂದು ಗುರುತಿಸಲಾಗಿದ್ದು, ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಖಾನಾಪುರ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು, ಕಾರ್ಯಾಚರಣೆಯಲ್ಲಿ ನಿನ್ನೆ ಪೊಲೀಸರಿಗೆ ಇಬ್ಬರು ಯುವಕರ ಬಟ್ಟೆ, ಮತ್ತು ಮೊಬೈಲ್ ಫೋನ್‍ಗಳು ಹಾಲತ್ರಿ …

Read More »

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ಕೋಟಿ ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಕನ್ನಡಕ್ಕಿಂತ ಮರಾಠಿನೇ ಮುಖ್ಯನಾ?

ಬೆಂಗಳೂರು: ಉಪ ಚುನಾವಣೆ ಗೆಲ್ಲಲು ಬಿಜೆಪಿ ಮರಾಠಿ ಮಂತ್ರ ಜಪಿಸುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ನಿಗಮ ಕರುನಾಡಿನಲ್ಲಿ ಕಿಚ್ಚು ಹೊತ್ತಿಸಿದೆ. ಬಿಎಸ್‍ವೈ ಸರ್ಕಾರ ಶಿರಾ ಬೈ ಎಲೆಕ್ಷನ್ ಗೆಲ್ಲಲು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮ ರಚಿಸಿ, 50 ಕೋಟಿ ಮೀಸಲಿರಿಸಿತ್ತು. ಎರಡು ದಿನಗಳ ಹಿಂದೆ ಮಠ ಮಾನ್ಯಗಳಿಗೆ 88 ಕೋಟಿ ರೂಪಾಯಿಯ ಹೊಳೆ ಹರಿಸಿತ್ತು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಗೆಲ್ಲುವ …

Read More »

ನಾಳೆಯಿಂದ ಕಾಲೇಜ್ ಓಪನ್

ಬೆಂಗಳೂರು: ಕೊರೊನಾ ವೈರಸ್ ಮಧ್ಯೆ ನಾಳೆಯಿಂದ ಕಾಲೇಜ್ ಓಪನ್ ಆಗಲಿದೆ. ಬರೋಬ್ಬರಿ 8 ತಿಂಗಳ ಬಳಿಕ ಡಿಗ್ರಿ, ಪಿಜಿ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜ್ ಆರಂಭವಾಗಲಿದೆ. ಕಾಲೇಜ್ ಶುರು ಮಾಡಲು ಸರ್ಕಾರ ಏನು ಸಿದ್ಧತೆ ನಡೆಸಿದೆ?, ಮಾರ್ಗಸೂಚಿ ಏನು ಎಂಬುದರ ಬಗ್ಗೆ ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಕಠಿಣ ನಿಯಮ ಜಾರಿಗೆ ತಂದಿದೆ. ಈಗಾಗಲೇ ಕಾಲೇಜುಗಳಿಗೆ ಮಾರ್ಗಸೂಚಿಗಳ ವಿವರ ಕೂಡ ನೀಡಿದೆ. ಮಾರ್ಗಸೂಚಿ ಏನು..? ಕಾಲೇಜ್‍ಗೆ …

Read More »