ಬೆಂಗಳೂರು: ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್‌ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ ಘೋಷಣೆಯಾಗಿದ್ದು, ಟಾಲಿವುಡ್ ನಟ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್ ಘೋಷಿಸಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್-1 ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಕೆಜಿಎಫ್-2 ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಭಾರತೀಯ ಸಿನಿರಂಗದಲ್ಲಿ ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಇದೇ ವೇಳೆ ಕೆಜಿಎಫ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ …
Read More »ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಗ್ರಾಮದ ಚಾಂದಿನಿ ಅವರು ಹೆರಿಗೆ ನೋವಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ, ತಾಯಿ ಇಲ್ಲದ ಚಾಂದಿನಿಯನ್ನು ಅವರ ಅಣ್ಣನೇ ಕಾಳಜಿ ವಹಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದರುಹೆರಿಗೆ ನೋವಿನ ಕಾರಣ ಹಾಸನ ಹಿಮ್ಸ್ …
Read More »ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ
ಚಿಕ್ಕಮಗಳೂರು:ಗ್ರಾಮ ಪಂಚಾಯತ್ ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್‌ಲೈನ್ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಸರ್ವಜನಿಕರು ಸೂಚಿಸಿದ್ದಾರೆ.ಶತಮಾನಗಳ ಬದುಕೆ ಬೀದಿಗೆ ಬೀಳುವಾಗ ಚುನಾವಣೆ ಬೇಕೇ …
Read More »ಬಿಜೆಪಿ ಸೇರಿದ 17 ಶಾಸಕರೂ ಸಚಿವರಾಗಲು ಅರ್ಹರು: ನಳೀನ್ ಕುಮಾರ್ ಕಟೀಲ್
ಬೆಂಗಳೂರು : ಬಿಜೆಪಿಯಲ್ಲಿ ಮೂಲ, ವಲಸಿಗ ಬಿಜೆಪಿಗರು ಎಂಬುದು ಇಲ್ಲ. ನಾವೆಲ್ಲರೂ ಒಂದೇ ಯಾಗಿದ್ದೇವೆ. ಬಿಜೆಪಿ ಸೇರಿದ 17 ಶಾಸಕರೂ ಸಚಿವರಾಗಲು ಅರ್ಹರು. ಸಿಎಂ ಹಾಗೂ ಬಿಜೆಪಿ ವರಿಷ್ಠರ ಜೊತೆಗೆ ಚರ್ಚಿಸಿ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬೆಂಗಳೂರಿನ ಆನೇಕಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲ, ಪುನರ್ ರಚನೆಯಾಗಲಿದೆ ಎಂಬ ಸುಳಿವು ನೀಡಿದರು. ರಾಜ್ಯದಲ್ಲಿ ಮೂಲ …
Read More »ರಾಜ್ಯದ ಹಿತದಿಂದ ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ : ಮಹದಾಯಿ ವಿಚಾರದಲ್ಲಿ ಕಾನೂನು ಬದ್ಧವಾಗಿ ನಾವು ನಮ್ಮ ಸರ್ಕಾರ ತಯಾರಿದ್ದು, ನಮ್ಮ ರಾಜ್ಯದ ಹಿತದಿಂದ ಈ ಕುರಿತು ಮಾಧ್ಯಮಗಳಲ್ಲಿ ಮಾತನಾಡುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಹೇಳಿಕೆ ಕುರಿತು ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋವಾದವರು ಯಾವುದೇ ರೂಪದಲ್ಲಿ ಬಂದರೂ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಪಾಪ ಅವರಿಗೆ ಅನಿವಾರ್ಯವಿದೆ. …
Read More »ನಿಮ್ಮ ದುರಹಂಕಾರವನ್ನು ಬದಿಗಿಡಿ: ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ
ಹೊಸದಿಲ್ಲಿ: ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ ಸುಳ್ಳುಗಾರನು ಟಿವಿ ಚಾನೆಲ್‍ಗಳಲ್ಲಿ ಭಾಷಣ ಬಿಗಿಯುವುದರಲ್ಲಿ ನಿರತನಾಗಿದ್ದಾನೆ. ದುರಹಂಕಾರ ಬದಿಗಿಟ್ಟು ರೈತರ ಹಕ್ಕುಗಳನ್ನು ಅವರಿಗೆ ನೀಡುವತ್ತ ಗಮನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ. ಶ್ರಮಜೀವಿಗಳಾದ ರೈತರಿಗೆ ನಾವು ಋಣಿಯಾಗಿರಬೇಕು. ಅವರ ಹಕ್ಕುಗಳನ್ನು ನೀಡುವ ಮೂಲಕ, ಅವರಿಗೆ ನ್ಯಾಯ ಒದಗಿಸುವ ಮೂಲಕ ಋಣ ಸಂದಾಯ ಮಾಡಬೇಕು. ಲಾಠಿ ಬೀಸುವುದು, ಅಶ್ರುವಾಯು ಪ್ರಯೋಗಿಸುವ ಮೂಲಕವಲ್ಲ ಎಂದು …
Read More »ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದ ಪೊಲೀಸರ ಸೈಕಲ್ ಜಾಥಾ
ಬೆಳಗಾವಿ: ಕೆಎಸ್‍ಆರ್ ಪಿ ಉತ್ಸವದ ಅಂಗವಾಗಿ ಇಂದು ಬೆಳಗಾವಿಯಲ್ಲಿ ಸೈಕಲ್ ಜಾಥಾ ನಡೆಯಿತು. ಹಿರಿಯ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಸೈಕಲ್ ಓಡಿಸಿ ಎಲ್ಲರ ಗಮನ ಸೆಳೆದರು. ಅನೇಕ ಪೊಲೀಸ್ ಅಧಿಕಾರಿಗಳು ಸೈಕಲ್ ಓಡಿಸಿ ಅಲೋಕ್ ಕುಮಾರ್ ಅವರಿಗೆ ಸಾಥ್ ನೀಡಿದರು. ಇಂದು ಬೆಳಗ್ಗೆ ಬೆಳಗಾವಿಯ ಸುವರ್ಣ ಸೌಧದಿಂದ ಪ್ರಾರಂಭವಾದ ಸೈಕಲ್ ಜಾಥಾ ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆಯಿತು. ಸೈಕಲ್ ಜಾಥಾದಲ್ಲಿ ಬೆಳಗಾವಿ ಪೊಲೀಸ್ …
Read More »LPG ಗ್ರಾಹಕರಿಗೆ ಶಾಕ್: ಸಿಲಿಂಡರ್ ದರ 55 ರೂ. ಹೆಚ್ಚಳ
ನವದೆಹಲಿ: ಕಚ್ಚಾತೈಲದ ಬೆಲೆ ಏರಿಕೆಯಾಗಿರುವ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾದಿಯಲ್ಲಿದೆ. ಅದೇ ರೀತಿ ಎಲ್ಪಿಜಿ ಗ್ರಾಹಕರಿಗೂ ಕೂಡ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 55 ರೂಪಾಯಿ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರ್ ದರದಲ್ಲಿ ಬದಲಾವಣೆ ಮಾಡಿಲ್ಲ. ಜುಲೈನಲ್ಲಿ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ದರ ಪರಿಷ್ಕರಿಸಿದ್ದು, 4 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಅದಕ್ಕಿಂತ ಹಿಂದೆ …
Read More »ರಾಜ್ಯದಲ್ಲಿ 2 ದಿನ ಭಾರೀ ಮಳೆ : 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಡಿಸೆಂಬರ್ 3 ರಂದು ಕನ್ಯಾಕುಮಾರಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಮೈಸೂರಿನಲ್ಲಿ …
Read More »ಕೋವಿಡ್-19 : ವಿಶ್ವದಾದ್ಯಂತ 4.41 ಕೋಟಿ ಜನರು ಗುಣಮುಖ, 1.81 ಲಕ್ಷ ಸಕ್ರಿಯ ಪ್ರಕರಣ
ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.83 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 4,235 ಜನರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್ ವರದಿ ಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 6.37 ಕೋಟಿಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ 14.77 ಲಕ್ಷಕ್ಕೆ ತಲುಪಿದೆ. ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿರುವ ಅಮೆರಿಕದಲ್ಲಿ ಈವರೆಗೆ 1.39 ಕೋಟಿಗೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 2.74 ಲಕ್ಷಕ್ಕೂ …
Read More »
Laxmi News 24×7