ಚೆನ್ನೈ, ಡಿ.9- ಖಿನ್ನತೆಗೆ ಒಳಗಾಗಿದ್ದ ಕಿರುತೆರೆ ನಟಿ ಹಾಗೂ ನಿರೂಪಕಿಯೊಬ್ಬರು ಚೆನ್ನೈನ ನಜರೆತ ಪೆಟ್ಟೈನಲ್ಲಿರುವ ಪಂಚತಾರಾ ಹೋಟೆಲ್‍ನ ಕೊಠಡಿಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿ.ಜೆ. ಚಿತ್ರಾ (28) ಆತ್ಮಹತ್ಯೆ ಮಾಡಿಕೊಂಡಿರುವ ನಟಿ. ಇವಿಪಿ ಫಿಲ್ಮ್ ಸಿಟಿಯಲ್ಲಿ ನಿನ್ನೆ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಚಿತ್ರಾ ಆತ್ಮಹತ್ಯೆಗೆ ಶರಣಾಗಿರುವುದು ಕಿರುತೆರೆ ಕಲಾವಿದರು, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಆಘಾತ ಉಂಟುಮಾಡಿದೆ. ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯ ಮುಲೈ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದ …
Read More »ಡಿಕೆಶಿ ರಾಜಿನಾಮಗೆ ಒತ್ತಾಯ! ಸತೀಶ ಜಾರಕಿಹೋಳಿ ಹೇಳಿದ್ದೇನು
ಬೆಂಗಳೂರು: ನಮ್ಮದು ಸಾಮೂಹಿಕ ನಾಯಕತ್ವ. ಸೋಲಿನ ಹೊಣೆಗೆ ಡಿ.ಕೆ. ಶಿವಕುಮಾರ್ ಒಬ್ಬರೇ ಕಾರಣವಲ್ಲ. ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವೇ ಗೆಲ್ಲುತ್ತೆ. ಹಾಗಾಗಿ ರಾಜೀನಾಮೆ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
Read More »ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದ ನೇಪಾಳ ಹಾಗೂ ಚೀನಾ
ನವದೆಹಲಿ: ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದು ನೇಪಾಳ ಹಾಗೂ ಚೀನಾ ಹೇಳಿವೆ.ಹೊಸ ಅಧ್ಯಯನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಣೆ ಮಾಡಿವೆ. ಈ ಮೂಲಕ ಮೌಂಟ್ ಎವರೆಸ್ಟ್ ಮತ್ತಷ್ಟು ಎತ್ತರ ಬೆಳೆದಿದೆ. 1954ಕ್ಕೆ ಹೋಲಿಸಿದರೆ ಮೌಂಟ್ ಎವರೆಸ್ಟ್ ಎತ್ತರ 86 ಸೆಂಟಿಮೀಟರ್ ಹೆಚ್ಚಿದೆ ಎಂದು ತಿಳಿಸಿದೆ. 2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ …
Read More »ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್
ಬೆಂಗಳೂರು: ಭಾರತ್ ಬಂದ್ ನಡುವೆಯೇ ವಿವಾದಾತ್ಮಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗಿದೆ. ಸದನದ ಹೊರಗೆ ರೈತರ ಹೋರಾಟವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್‍ನಲ್ಲಿ ಮಾತ್ರ ವಿಧೇಯಕವನ್ನು ಇದ್ದಕ್ಕಿದ್ದಂತೆ ಬೆಂಬಲಿಸಿ ಅಚ್ಚರಿ ಮೂಡಿಸಿತು. ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಂತು ಬೆಂಬಲ ಸೂಚಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಧೇಯಕದ ಪರ 37 ಮತ ಬಿದ್ದರೆ, ವಿರುದ್ಧ 21 ಮತ ಬಿದ್ದವು. …
Read More »ಬ್ರಿಡ್ಜ್ ಕಂ ಬ್ಯಾರೇಜ್ ದಾಟುತ್ತಿದ್ದ ವೇಳೆತಾಯಿ ಮತ್ತು ಮಗ ಬೈಕ್ ಸಮೇತ ನೀರಿಗೆ
ಹಾವೇರಿ: ಧರ್ಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್ ದಾಟುತ್ತಿದ್ದ ವೇಳೆ ತಾಯಿ ಮತ್ತು ಮಗ ಬೈಕ್ ಸಮೇತ ನೀರಿಗೆ ಬಿದ್ದಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಮೃತರನ್ನು ಬಸವರಾಜ್ ಕುಂದೂರ(22) ಮತ್ತು ತಾಯಿ ಚನ್ನವ್ವ ಕುಂದೂರ(45) ಎಂದು ಗುರುತಿಸಲಾಗಿದೆ. ಕಂಚಿನೆಗಳೂರು ಗ್ರಾಮದಿಂದ ಕಾಡಶೆಟ್ಟಿಹಳ್ಳಿ ಗ್ರಾಮದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ …
Read More »ಬೆಂಗಳೂರಲ್ಲಿ ಭಾರತ್ ಬಂದ್ ಹೇಗಿತ್ತು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಬೆಂಗಳೂರು, ಡಿ.8- ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿ ಏರಿತ್ತು. ಮೈಸೂರು ಬ್ಯಾಂಕ್ ವೃತ್ತ, ಟೌನ್‍ಹಾಲ್, ಮೌರ್ಯ ವೃತ್ತದಲ್ಲಿ ರೈತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದವು. ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಪಿಎಂ, ಎಎಪಿ, ಕಾಂಗ್ರೆಸ್ , ಜೆಡಿಎಸ್ ಪಕ್ಷಗಳು, ಕನ್ನಡ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, …
Read More »ಪುರೋಹಿತರ ಮಂತ್ರವಿಲ್ಲದೆ, ಶಾಸ್ತ್ರ-ಸಂಪ್ರದಾಯವಿಲ್ಲದೆ ನಡೀತು ಮದುವೆ..!
ಮಳವಳಿ, ಡಿ.8- ಮಂಗಳವಾದ್ಯದೊಡನೆ ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ಮಾಡಿಸಿ ಸಿಹಿ ಊಟ ಹಾಕಿಸುವ ಮೂಲಕ ವಿವಾಹ ಮಾಡುವುದು ನಮ್ಮ ಹಿಂದು ಸಂಪ್ರದಾಯದ ವಾಡಿಕೆ. ಆದರೆ ಯಾವುದೇ ಮಂತ್ರ ಪಟಣವಿಲ್ಲದೇ ಹಿತೈಷಿಗಳ ಸಮ್ಮುಖದಲ್ಲಿ ಮಾಂಗಲ್ಯ ಕಟ್ಟುವುದರ ಜತೆಗೆ ಮಧುವೆಗೆ ಬಂದವರಿಗೆ ಬಾಡೂಟ ಉಣಬಡಿಸಿದ ವಿವಾಹ ಸಮಾರಂಭ ಪಟ್ಟಣದ ಪಟ್ಟಲದಮ್ಮ ದೇವಸ್ಥಾನದ ಆವರಣ ಜರುಗಿತು. ತಾಲೂಕಿನ ಹೊಸಹಳ್ಳಿ ಗ್ರಾಮದ ಚಂದ್ರಶೇಖರ ಎಂಬುವರ ಪುತ್ರ ಶಿವಲಿಂಗೇಗೌಡ ಹಾಗೂ ಕೋಡಿಪುರದ ಸಿದ್ದೇಗೌಡರ ಪುತ್ರಿ ಶೃತಿ ದಾಂಪತ್ಯ …
Read More »ಕಾಯ್ದೆಯಿಂದ ರೈತರ ಆದಾಯ ಹೆಚ್ಚಳ – ಪ್ರತಿಪಕ್ಷಗಳ ವಿರುದ್ಧ ಬಿಎಸ್‍ವೈ ಕಿಡಿ
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್ ಕರೆ ನೀಡಲಾಗಿದ್ದು, ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಸಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯಲಿದೆ. …
Read More »ಐನಾಪುರ: ನೇಣು ಹಾಕಿಕೊಂಡು ಅಕ್ಕ, ತಂಗಿ ಆತ್ಮಹತ್ಯೆ
ಚಿಂಚೋಳಿ: ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ಅಕ್ಕ, ತಂಗಿ ಇಬ್ಬರೂ ಏಕಕಾಲಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಶ್ವರ್ಯ ವಿಶ್ವನಾಥ ಸುತಾರ (20) ಹಾಗೂ ಸಾರಿಕಾ ವಿಶ್ವನಾಥ ಸುತಾರ (17) ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕುಟುಂಬದ ಮುಖ್ಯಸ್ಥ ವಿಶ್ವನಾಥ ಸುತಾರ ಅವರು ಐನಾಪುರ ಗ್ರಾಮದಲ್ಲಿಯೇ ಚಹಾ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ ಒಟ್ಟು ಐವರವು ಹೆಣ್ಣುಮಕ್ಕಳಿದ್ದರು. ಈಗಾಗಲೇ ಮೂವರ ಮದುವೆಯಾಗಿದೆ. ಐದನೆಯವಳಾದ ಸಾರಿಕಾಗೆ ಒಂದೂವರೆ ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಆದರೆ, …
Read More »ಭಾರತ್ ಬಂದ್; ಬೆಳಗಾವಿಯಲ್ಲಿ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಬೆಳಗಾವಿ : ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್ ಪರಿಣಾಮ ನಗರದಲ್ಲಿ ಬಸ್ ಸಂಚಾರವಿಲ್ಲದೆ ನೂರಾರು ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿಯೇ ಪರದಾಡುವ ಸ್ಥಿತಿ ಉಂಟಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ಆರೋಪಿಸಿ ಇಡೀ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿಗೂ ಪ್ರತಿಭಟನೆ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ …
Read More »
Laxmi News 24×7