Breaking News

ರಾಜ್ಯ

ಉಮೇಶ ಕತ್ತಿ ಸೇರಿ ಏಳು ಜನರಿಗೆ ಸಚಿವ ಭಾಗ್ಯ

ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ನೂತನ ಸಚಿವರ ಪಟ್ಟಿ ರಾಜಭವನ ತಲುಪಿದ್ದು, ಕತ್ತಿ ಅವರೊಂದಿಗೆ ಎಂಟಿಬಿ ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಮುರುಗೇಶ ನಿರಾಣಿ, ಸಿ.ಪಿ.ಯೋಗೇಶ್ವರ ಸಚಿವರಾಗುತ್ತಿದ್ದಾರೆ‌. ಇನ್ನೂ ಒಂದೆರಡು ಬದಲಾವಣೆ ನಿರೀಕ್ಷಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನೂತನವಾಗಿ ಸಂಪುಟ ಸೇರುವ ಸಚಿವರ ಮಾಹಿತಿ. 1- ಉಮೇಶ ಕತ್ತಿ 2- ಎಂಟಿಬಿ ನಾಗರಾಜ 3- ಆರ್.ಶಂಕರ 4- ಎಸ್.ಅಂಗಾರ 5- …

Read More »

ಬೆಂಗಳೂರಲ್ಲಿ ನಮ್ಮದೇನೈತ್ರಿ ಕೆಲಸ, ನಮ್​ ಮೊಬೈಲ್​ ಕರೆನ್ಸಿ ಖಾಲಿ ಆಗಿದೆ -ಫೋನ್​ ಕರೆ ಬಂತ ಅಂತಾ ಕೇಳಿದ್ದಕ್ಕೆ ಯತ್ನಾಳ್ ಬೇಸರ!

ವಿಜಯಪುರ: ‘ನನ್ನ ಮೊಬೈಲ್ ಫೋನ್‌ ಕರೆನ್ಸಿ ಖಾಲಿಯಾಗಿದೆ, ಯಾರ ಕರೆಯೂ ಬಂದಿಲ್ಲ’ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಖ್ಯಮಂತ್ರಿಯಿಂದ ಕರೆ ಬಂದಿಲ್ಲ, ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ನಿರಾಸೆ ವ್ಯಕ್ತಪಡಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಿಮಗೆ ಮುಖ್ಯಮಂತ್ರಿಯಿಂದ ಕರೆ ಬಂದಿದೆಯಾ? ಬೆಂಗಳೂರಿಗೆ ಹೋಗುತ್ತಿದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನಲ್ಲಿ ನನಗೇನೂ ಕೆಲಸ ಇಲ್ಲ, ಅಲ್ಲಿಗೆ ನಾನು ಹೋಗುತ್ತಿಲ್ಲ’ …

Read More »

ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು

ಮಂಗಳೂರು: ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ  ದಾಳಿ ನಡೆಸಿದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೆ.ಎಸ್.ರಾವ್.ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ನಿರಂತರವಾಗಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿತ್ತು. ದಂಧೆ ನಡೆಸುತ್ತಿದ್ದವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ.

Read More »

ಡಾಬಾ ಬಳಿ ಮಗುವನ್ನ ಬಿಟ್ಟು ಹೋಗಿರೋ ಪೋಷಕರು

ಹಾವೇರಿ: ಹತ್ತು ತಿಂಗಳ ಮುದ್ದಾದ ಗಂಡು ಮಗುವನ್ನ ಪೋಷಕರು ಡಾಬಾ ಬಳಿ ಬಿಟ್ಟು ಹೋಗಿರೋ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ನಡೆದಿದೆ. ಮುದ್ದಾಗಿರೋ ಗಂಡು ಮಗುವನ್ನ ಪೋಷಕರು ಬಿಟ್ಟು ಹೋಗಿದ್ದಾರೆ. ನಾಲ್ಕರ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದು, ಪೋಷಕರು ಬಂದು ಮಗುವನ್ನು ಕೊಂಡೊಯ್ಯಬಹುದೆಂದು ಸ್ಥಳೀಯರು 5-6 ಗಂಟೆ ಮಗುವಿನ ಹಿಡಿದು ಕಾಯ್ದಿದ್ದಾರೆ. ಆದರೆ ಯಾರೂ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …

Read More »

ಮೂರನೇ ಬಾರಿಗೆ ಕತ್ತಿ ಕೈ ಹಿಡಿದ ಸಿಎಂ ಬಿಎಸ್​ವೈ; ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಪಕ್ಕಾ?

ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದೆ. ಈಗಾಗಲೇ ನೂತನ ಸಚಿವ ಪಟ್ಟಿಯನ್ನು ಸಿಎಂ ಬಿಎಸ್​ವೈ ರಾಜ್ಯಪಾಲರಿಗೆ ಕಳುಹಿಸಿದ್ದು, ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎಂಬುದು ಈಗಲೂ ನಿಗೂಢವಾಗಿದೆ. ಏತನ್ಮಧ್ಯೆ, ಕಳೆದ ಎರಡು ಬಾರಿ ಸಂಪುಟ ವಿಸ್ತರಣೆಯಾದಾಗ ಅವಕಾಶ ವಂಚಿತರಾಗಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದು …

Read More »

ಈ ಏಳು ಜನರು ಸಚಿವರಾಗುವುದು ಬಹುತೇಕ ಖಚಿತ ಆಗಿದೆ.

ಬೆಂಗಳೂರು; ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ನಾಳೆ ಮಧ್ಯಾಹ್ನ 3.55ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಏಳು ಮಂದಿ ಶಾಸಕರು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲಿದ್ದಾರೆ. ಆದರೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರು ಸೇರಿದಂತೆ ಬಿಜೆಪಿ ನಾಯಕರಲ್ಲಿಯೂ ಮೂಡಿದೆ. ಕಾರಣ ನೂತನ ಸಚಿವರ ಪಟ್ಟಿಯ ಗೌಪತ್ಯೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಕಾಯ್ದುಕೊಂಡಿದ್ದಾರೆ. ಅಲ್ಲದೇ , ನೂತನ ಸಚಿವರಿಗೆ ತಾವೇ ಖುದ್ದು …

Read More »

ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ

ಮುಂಬೈ,ಜ. 12- ಡ್ರಗ್ಸ್ ನಂಟಿನ ಸಂಬಂಧ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವುದರಿಂದ ತುಪ್ಪದ ಬೆಡಗಿ ಜೈಲಿನಲ್ಲೇ ಸಂಕ್ರಾಂತಿ ಅಚರಿಸಲಿದ್ದಾರೆ. ಜಾಮೀನು ಕೋರಿ ನಟಿ ರಾಗಿಣಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯನ್ನು ಜನವರಿ 19 ರಂದು ನಡೆಸುವುದಾಗಿ ಹೇಳಿರು ವುದರಿಂದ ಒಂದು ವಾರದ ಕಾಲ ರಾಗಿಣಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಈ ಹಿಂದೆ ರಾಗಿಣಿ ಡ್ರಗ್ಸ್ ನಂಟಿನ ಸಂಬಂಧ ವಾಗಿಯೇ ಹೈಕೋರ್ಟ್‍ಗೆ …

Read More »

ವಾಟ್ಸಪ್ ‌ಅಪ್‌ಡೇಟ್ : ಗೌಪ್ಯತೆಮೇಲೆ ಪರಿಣಾಮ ಬೀರಲ್ಲ

ನವದೆಹಲಿ: ಜ.12-ಫೇಸ್‌ಬುಕ್‌ ಒಡೆತನದ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಡೇಟಾದ ಸುರಕ್ಷತೆಯ ಬಗೆಗಿನ ಕಳವಳ ಪರಿಹರಿಸಲುವಾಟ್ಸಾಪ್‌ ಪ್ರಯತ್ನಿಸುತ್ತಿದೆ.ಅದರ ಇತ್ತೀಚಿನ ನೀತಿ ನವೀಕರಣವು(ಅಪ್‌ಡೇಟ್) ಬಳಕೆದಾರರ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾಟ್ಸಾಪ್‌ಮೂಲಗಳು ಮಂಗಳವಾರ ತಿಳಿಸಿವೆ. ಕಳೆದ ವಾರ ವಾಟ್ಸಾಪ್ ‌ತನ್ನ ಸೇವಾ ನಿಯಮಗಳು ಹಾಗೂಗೌಪ್ಯತೆ ನೀತಿಯಲ್ಲಿ ಬಳಕೆದಾರರ ಡೇಟಾವನ್ನು ಮತ್ತು ಫೇಸ್‌ಬುಕ್ ಪಾಲುದಾರರನ್ನು ಸಾಮಾಜಿಕ ಮಾಧ್ಯಮದೈತ್ಯ ಉತ್ಪನ್ನಗಳ ಏಕೀಕರಣವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರಕುರಿತು ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್ ಸೇವೆಯನ್ನು …

Read More »

ಮಹೇಶ ಫೌಂಡೇಶನ್ ನೂತನ ವೆಬ್‌ಸೈಟ್ ಗೆ ಚಾಲನೆ ನೀಡಿದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ಮಹೇಶ ಫೌಂಡೇಶನ ಸಂಸ್ಥೆಯ   ‘ಪ್ರಯತ್ನ’ ಎಂಬ ನೂತನ  ವೆಬ್‌ಸೈಟ್ ಅನ್ನು   ಸತೀಶ ಶುಗರ್ಸ್ ನಿರ್ದೇಶಕರಾದ  ರಾಹುಲ್  ಹಾಗೂ   ಪ್ರಿಯಾಂಕ್   ಜಾರಕಿಹೊಳಿ   ಬಿಡುಗಡೆಗೊಳಿಸಿದರು.   ಇಲ್ಲಿನ  ಕಣಬರ್ಗಿ ಮಹೇಶ ಪೌಂಡೇಶನ ಕಚೇರಿಯಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ  ರಾಷ್ಟ್ರೀಯ ಯುವ ದಿನಾಚರಣೆ,  ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.   ಬಳಿಕ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮಾಜದ ಸೌಲಭ್ಯ ವಂಚಿತ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ …

Read More »

ಗೋಹತ್ಯೆ ನಿಷೇಧ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದ್ದು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹಾಗೂ ಸಚಿನ್ ಶಂಕರ್ ಮಗುದಂ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ 19 (ಜಿ) ವಿಧಿ ಖಾತರಿಪಡಿಸಿದ …

Read More »