ಕೊಪ್ಪಳ: ಕೋವಿಡ್ ಆರ್ಭಟದ ಮಧ್ಯೆ ಅಜ್ಜನ ಜಾತ್ರೆ ನಡೆಯುತ್ತದೆಯೋ ?ಇಲ್ಲವೋ ? ಎನ್ನುವ ಗೊಂದಲ್ಲಿದ್ದ ಭಕ್ತ ಸಮೂಹಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಅಜ್ಜನ ಜಾತ್ರೆಗೆ ಸರಳತೆಯ ಶ್ರೀಕಾರ ಹಾಕಿದ್ದಾರೆ. ಮೈಸೂರು ದಸರಾ, ಪುರಿ ಜಗನ್ನಾಥ ಮಾದರಿ ಸರ್ಕಾರದ ನಿಯಮಾವಳಿಗೆ ಒಳಪಟ್ಟು, ಸಂಪ್ರದಾಯ ಮುರಿಯದೆ, ಸರಳತೆಯಿಂದ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ ಎಂದು ಗವಿಮಠ ತಿಳಿಸಿದೆ. ಜಾತ್ರೆಯಲ್ಲಿ ಏನು ಇರುತ್ತದೆ ? : ಜ.26 ಕ್ಕೆ ಜಾತ್ರೆ ಸಂಪ್ರದಾಯ …
Read More »ಕೊರೋನಾ ಲಸಿಕೆ ಬೇಕು, ಬೇಡಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು ಇವಿಷ್ಟು..
ನವದೆಹಲಿ : ಲಸಿಕೆ ಅಭಿಯಾನವು ನಾಳೆಯಿಂದ ಆರಂಭವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಲಸಿಕೆಗಳ ಪಟ್ಟಿ, ದೈಹಿಕ ನಿರ್ದಿಷ್ಟತೆ, ಡೋಸೇಜ್, ಕೋಲ್ಡ್ ಚೈನ್ ಸ್ಟೋರೇಜ್ ಅವಶ್ಯಕತೆಗಳು, ನಿರ್ಬಂಧಗಳು ಮತ್ತು ಸಣ್ಣ ಎಇಎಫ್ ಐಗಳು (ಪ್ರತಿರಕ್ಷಣಾ ನಂತರದ ಘಟನೆ) ಕುರಿತು ಮಾಹಿತಿ ಹೊಂದಿರುವ ಲಸಿಕೆಗಳ (ಕೋವಿಶೀಲ್ಡ್ ಮತ್ತು ಕೊವಾಕ್ಸಿನ್) ಎರಡೂ ಲಸಿಕೆಗಳ ಸಮಗ್ರ ಫ್ಯಾಕ್ಟ್ ಶೀಟ್ ಅನ್ನು ರಾಜ್ಯಗಳಿಗೆ ಕಳುಹಿಸಿದೆ. ಕೊರೋನಾ ಲಸಿಕೆ ಬೇಕು, ಬೇಡಗಳನ್ನು ಒಳಗೊಂಡ ದಾಖಲೆಯನ್ನು ಎಲ್ಲಾ …
Read More »ಶಬರಿಗಿರಿಯಲ್ಲಿ ಮಕರ ಜ್ಯೋತಿ ದರ್ಶನ: ಪುಳಕಗೊಂಡ ಭಕ್ತಸಾಗರ
ಶಬರಿಮಲೆ : ಪ್ರತಿವರ್ಷದಂತೆ ಸಂಕ್ರಾಂತಿಯಂದು ಮಕರ ಜ್ಯೋತಿ ದರ್ಶನ ಶಬರಿಮಲೆಯಲ್ಲಿ ಇಂದು ಆಗಿದೆ. ಕೇವಲ 5 ಸಾವಿರ ಭಕ್ತರಿಗೆ ಮಾತ್ರವೇ ಅವಕಾಶವಿದ್ದ ನಡುವೆಯೂ ಶಬರಿಮಲೆಯಲ್ಲಿ ಅಯ್ಯಪ್ಪನ ಭಕ್ತರು ಮಕರ ಜ್ಯೋತಿಯ ದರ್ಶನವನ್ನು ಪಡೆದರು. ಶಬರಿಮಲೆಯಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಮೂಲಕ ಕೇವಲ 5 ಸಾವಿರ ಅಯ್ಯಪ್ಪನ ಭಕ್ತರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಸಂಕ್ರಾಂತಿಯ ದಿನವಾದ್ದರಿಂದ ಅಯ್ಯಪ್ಪನ ಭಕ್ತರು ಶಬರಿಮಲೆಗೆ ಆಗಮಿಸಿದ್ದರು. ಇಂತಹ ಭಕ್ತರಿಗೆ ಮೂರು ಬಾರಿ …
Read More »ಸಿಡಿ ವಿವಾದವು ಬಿಜೆಪಿ ಮುಕ್ತ ರಾಜ್ಯಕ್ಕೆ ಮುನ್ನುಡಿ ಬರೆದಿದೆ | ಭವಿಷ್ಯ ನುಡಿದ ಪ್ರಿಯಾಂಕ್ ಖರ್ಗೆ
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿವಾದ ಸೃಷ್ಟಿಯಾಗಿದ್ದು, ಇದು ಬಿಜೆಪಿ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಲಿದೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೇವಲ ಬಿಎಸ್ ವೈ ಮುಕ್ತ ಬಿಜೆಪಿ ಮಾತ್ರವಲ್ಲ, ಬಿಜೆಪಿ ಮುಕ್ತ ರಾಜ್ಯ ಆಗುವ ಮುನ್ನುಡಿ …
Read More »ದಡ್ಡಿ, ಮಜತಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ
ಬೆಳಗಾವಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ದಡ್ಡಿ, ಮಜತಿ ಹಾಗೂ ಚಿಕ್ಕಲದಿನ್ನಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಸುಮಾರು 45 ಲಕ್ಷ ರೂ. ಅನುದಾನದಲ್ಲಿ ದಡ್ಡಿ, ಮಜತಿ, ಮಾವನೂರು, ಕುರ್ಣಿ, ಚಿಕ್ಕಲದಿನ್ನಿ ಗ್ರಾಮದಲ್ಲಿನ ಎಸ್, ಸಿ ಕಾಲೋನಿಗಳಲ್ಲಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ರಮೇಶ ಪಾಟೀಲ್, ಸುರೇಶ ಬೆನ್ನಿ, ಮಾಲಿಂಗ ಶಿರಗುಪ್ಪಿ, …
Read More »ತಮಿಳುನಾಡಿನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ಮಧುರೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಅವನಿಯಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವೀಕ್ಷಿಸಿದರು. ಪೊಂಗಲ್ ಹಬ್ಬದಲ್ಲಿ ಪಾಲ್ಗೊಳ್ಳಲೆಂದು ತಮಿಳುನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಿಸಿದರು. ಈ ವೇಳೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಭಾಷೆ, ಸಂಸ್ಕೃತಿಯನ್ನು ಬದಿಗಿರಿಸಿ, ತಮಿಳುನಾಡು ಜನರ ಮೇಲೆ …
Read More »ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ
ಬೆಂಗಳೂರು, ಜ.14- ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಂದು ಬೃಹತ್ ಪಾದಯಾತ್ರೆ ಪ್ರಾರಂಭಿಸಲಾಯಿತು. ಪಂಚಮಸಾಲಿ ಸಮಾಜದ ಪಂಚಲಕ್ಷ ಹೆಜ್ಜೆಗಳು ಎಂಬ ಶೀರ್ಷಿಕೆಯಡಿ ಕೈಗೊಂಡಿರುವ ಈ ಪಾದಯಾತ್ರೆಯನ್ನು ಬಸವಣ್ಣನವರ ಐಕ್ಯ ಮಂಟಪ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದು, ಪಂಚಮಸಾಲಿ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ರಾಜ್ಯದ ವಿವಿಧ ಘಟಕಗಳ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. …
Read More »ದೆಹಲಿಯ ಜನತೆಗೆ ನಾವು ಕೋವಿಡ್ 19 ಲಸಿಕೆ ಉಚಿತವಾಗಿ ನೀಡುತ್ತೇವೆ: ಕೇಜ್ರಿವಾಲ್
ನವದೆಹಲಿ : ಆಮ್ ಆದ್ಮಿ ಸರ್ಕಾರ ದೆಹಲಿ ಜನರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಉಚಿತ ವ್ಯಾಕ್ಸಿನೇಷನ್ ಮಾಡಬೇಕೆಂದು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರವು ಏನು ಮಾಡುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಅಗತ್ಯವಿದ್ದರೆ, ಕೇಂದ್ರವು ಲಸಿಕೆಯನ್ನು ಉಚಿತವಾಗಿ ನೀಡದಿದ್ದರೆ, ನಾವು ಲಸಿಕೆಯನ್ನು ದೆಹಲಿ …
Read More »ಮಕ್ಕಳ ಎದುರೇ ಪತ್ನಿ, ಅತ್ತೆಯನ್ನು ಹತ್ಯೆ ಮಾಡಿದ ಭೂಪ
ಗುವಾಹತಿ : ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಲ್ಲದೆ ಕೋಳಿ ಮಾಂಸ ಕಟ್ ಮಾಡುವ ಹಾಗೆ ಅವರಿಬ್ಬರನ್ನು ತುಂಡರಿಸಿದ್ದಾನೆ. ತ್ರಿಪುರಾದಧಲೈ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲು …
Read More »ಹೈಕಮಾಂಡ್ ಗೆ ದೂರು ನೀಡಲು ಶಾಸಕ ರೇಣುಕಾಚಾರ್ಯ ದೆಹಲಿಗೆ ಪ್ರಯಾಣ
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾಣ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹೈಕಮಾಂಡ್ ಗೆ ದೂರು ನೀಡಲು ಇಂದು ಶಾಸಕ ರೇಣುಕಾಚಾರ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 8.20 ರ ಸುಮಾರಿಗೆ ಶಾಸಕ ರೇಣುಕಾಚಾರ್ಯ ಅವರು ದೆಹಲಿಗೆ ಪ್ರಯಾಣ ಬೆಳಸಲಿದ್ದು, ಹೈಕಮಾಂಡ್ ಗೆ ದೂರು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಎಂಎಲ್ ಸಿಗಳಿಗೆ ಸಚಿವ ಸ್ಥಾನ ನೀಡಿದ್ದಾರೆ. ಗೆದ್ದವರನ್ನು ಬಿಟ್ಟು ಸೋತವರನ್ನು ಮಂತ್ರಿ …
Read More »
Laxmi News 24×7