ನವ ದೆಹಲಿ : ಜಾಗ್ವಾರ್ ಲ್ಯಾಂಡ್ ರೋವರ್ ನ, ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ಕಾರು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ ಎಂಬ ಸುದ್ದಿಯನ್ನು ಕಂಪೆನಿ ಈಗ ಬಹಿರಂಗ ಪಡಿಸಿದೆ., ಹೌದು, ಬರುವ ಮಾರ್ಚ್ 9ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಜಾಗ್ವಾರ್ ಐ ಪೇಸ್. ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ನ ಪ್ರಾಥಮಿಕ ಮಾಡೆಲ್ ಜನವರಿಯಲ್ಲಿ ಭಾರತಕ್ಕೆ ಬಿಡುಗಡೆಗೊಂಡಿತ್ತು. ಮಾತ್ರವಲ್ಲದೇ, ದೇಶದ ಮೊದಲ ಎಲೆಕ್ಟ್ರಿಕ್ …
Read More »ಹುಕ್ಕೇರಿ ನೂತನ ತಹಶೀಲ್ದಾರ್ ಡಿ.ಎಚ್. ಹೂಗಾರ ಅಧಿಕಾರ ಸ್ವೀಕಾರ
ಹುಕ್ಕೇರಿ: ತಾಲೂಕಿನ ನೂತನ ತಹಶೀಲ್ದಾರ ಆಗಿ ಡಿ.ಎಚ್. ಹೂಗಾರ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ನೂತನ ತಹಶೀಲ್ದಾರರನ್ನು ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೂಗಾರ ಅವರು ಶಾಸಕ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
Read More »ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ
ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ವೀರಾ ರಾಘುವೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …
Read More »ಪೊಲೀಸ್ ದಾಳಿಗೆ ಹೆದರಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ನೀರು ಪಾಲು
ರಾಮದುರ್ಗ: ಯುವಕರ ಗುಂಪು ಜೂಜಾಟದಲ್ಲಿ ತೊಡಗಿದ್ದು, ಪೊಲೀಸ್ ದಾಳಿ ನಡೆಸಿದ್ದರಿಂದ ಇಬ್ಬರು ಮಲಪ್ರಭಾ ನದಿಗೆ ಹಾರಿದ ಘಟನೆ ನಡೆದಿದೆ. ನದಿಯ ಪಕ್ಕದ ಪೊದೆಯ ಬಳಿ ಗುಂಪು ಪೊಲೀಸರು ಬಂದಿದ್ದರಿಂದ ಹೆದರಿ ಓಡಿಹೋಗಿದ್ದಾರೆ. ಈ ವೇಳೆ ಇಬ್ಬರು ನದಿ ನೀರಿಗೆ ಹಾರಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಗೆ …
Read More »ವಿದೇಶಿ ವಿನಾಶಕಾರಿ ಸಿದ್ಧಾಂತ, ಆಂದೋಲನ ಜೀವಿಗಳಿಂದ ದೇಶ ರಕ್ಷಿಸಬೇಕಿದೆ: ಮೋದಿ
ನವದೆಹಲಿ: ವಿವಾದಿತ ಕೃಷಿ ಕಾನೂನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿ ಮಾತನಾಡಿದ್ದು ‘ವಿದೇಶಿ ವಿನಾಶಕಾರಿ ಸಿದ್ಧಾಂತ’ (ಎಫ್‌ಡಿಐ) ಆಂದೋಲನ ಜೀವಿಗಳಿಂದ ನಾವು ದೇಶವನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ದೇಶದ ಹೊಸ ತಲೆಮಾರಿನ ಜನರನ್ನು ವಿದೇಶಿ ವಿನಾಶಕಾರಿ ಸಿದ್ಧಾಂತಗಳಿಂದ ರಕ್ಷಿಸಿಬೇಕಿದ್ದು, ಅವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಹೊಸ ತಲೆಮಾರಿನ ಜನರನ್ನು …
Read More »ಬೆಳಗಾವಿ ಲೋಕಸಭೆ ಉಪಚುನಾವಣೆ: ಮತಗಟ್ಟೆಗಳ ತಯಾರಿ ನಡೆಸಿರುವ ಅಧಿಕಾರಿಗಳು
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತಗಟ್ಟೆಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಅಧಿಕಾರಿಗಳು, ವಿವಿಧ ಸರ್ಕಾರಿ ಶಾಲೆಗಳಿಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳು ಮತ್ತು ಮತಗಟ್ಟೆಯಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸೆ. 23ರಂದು ಕೋವಿಡ್‌ನಿಂದಾಗಿ …
Read More »ಕೊನೆಗೂ ಬಳ್ಳಾರಿಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯನ್ನು ಘೋಷಿಸಿದ ಸರ್ಕಾರ; ಹೊಸಪೇಟೆ ಕಾರ್ಯಸ್ಥಾನ!
ಬೆಂಗಳೂರು (ಫೆಬ್ರವರಿ 08); ಸಚಿವ ಆನಂದ್ ಸಿಂಗ್ ಅವರ ಮನವಿಗೆ ಕೊನೆಗೂ ಮನ್ನಣೆ ನೀಡಿರುವ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ವಿಜಯನಗರ ಜಿಲ್ಲೆಯನ್ನು ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಘೋಷಿಸಿದೆ. ಆ ಕುರಿತು ಅಧಿಕೃತ ಆದೇಶವನ್ನೂ ಸಹ ರಾಜ್ಯ ಸರ್ಕಾರ ಹೊರಡಿಸಿದೆ. ಹೊಸಪೇಟೆಯನ್ನು ಕಾರ್ಯಸ್ಥಾನವನ್ನಾಗಿಸಿ ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ಘೋಷಿಸಬೇಕು ಎಂಬ ಕೂಗು ಬಹುದಿನಗಳಿಂದಲೂ ಇದೆ. ಕೊಪ್ಪಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಸಂದರ್ಭದಲ್ಲೇ ಈ ಕೂಗು …
Read More »ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಗೋಕಾಕ : ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆ ವಿಷಯವಾಗಿ ವಾಲ್ಮೀಕಿ ಜಾತ್ರೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ …
Read More »ಲಕ್ಷ್ಮೀನ ಶಿಕ್ಷಣ ಸಂಸ್ಥೆಯಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನೆಯನ್ನು ಸುವರ್ಣಾ ಭೀಮಶಿ ಜಾರಕಿಹೊಳಿ ನೆರವೇರಿಸಿದರು.
ಗೋಕಾಕ: ಮಕ್ಕಳಿಗೆ ಉಪಕರಣಗಳೊಂದಿಗೆ ಪ್ರಾಯೋಗಿಕವಾಗಿ ಕಲಿಸುವ ಕಲಿಕಾ ಕ್ರಮವು ಅತ್ಯಂತ ಪರಿಣಾಮಕಾರಿ ಆಗಿರುತ್ತದೆ ಎಂದು ಬೆಂಗಳೂಇನ ಕ್ರೀಡೋ ಸಂಸ್ಥೆಯ ಆಯೇಷಾ ಶೇಖ ಹೇಳಿದರು. ಶನಿವಾರ ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟಿನಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಅಧುನಿಕ ಕಲಿಕಾ ಕ್ರಮಗಳನ್ನು …
Read More »ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ:
ಮಂಗಳೂರು: ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂ ನೀಡುವುದಾಗಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್, ಬಿಲ್ಲವ ಸಮುದಾಯದ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಕೋಟಿ ಚೆನ್ನೈಯ್ಯರ ವಿರುದ್ಧ ಕೀಳಾಗಿ ಮಾತನಾಡಿದ್ದರು. ನಾಲ್ಕು ದಿನಗಳ ಒಳಗಾಗಿ ಜಗದೀಶ್ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುತ್ತೇವೆ. ಹೀಗೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ 1 ಲಕ್ಷ …
Read More »
Laxmi News 24×7