ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫನ್ನಿ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಮತ್ತೊಂದು ಫೋಟೋ ಇಂಟರ್ನೆಟ್ನಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ಬಳಿಕ ನಿಮಗೆ ನಿಮ್ಮ ಲವ್ ಲೈಫ್ ನೆನಪಾಗೋದಂತು ಫಿಕ್ಸ್. ಮನುಷ್ಯ ಪ್ರೀತಿಯಲ್ಲಿ ಬಿದ್ದ ಅಂದರೆ ಸಾಕು ಆತನಿಗೆ ಹಸಿವು – ನಿದ್ದೆಯ ಅರಿವು ಇರೋದಿಲ್ಲ ಅಂತಾರೆ. ಅಕ್ಕಪಕ್ಕದಲ್ಲಿ ಏನು ನಡೀತಾ ಇದೆ ಅನ್ನೋದೇ ಅವರ ಗಮನಕ್ಕೆ ಬರೋದಿಲ್ಲ. ಇಂಟರ್ನೆಟ್ನಲ್ಲಿ ವೈರಲ್ ಆದ ಫೋಟೋ ಕೂಡ …
Read More »ಉದ್ಯೋಗಿಗಳಿಗೆ ಮಹತ್ವದ ಮಾಹಿತಿ : ಏಪ್ರಿಲ್ 1ರಿಂದ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ?
ನವದೆಹಲಿ: ಕಚೇರಿಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಬಹುದು ಎನ್ನಲಾಗಿದ್ದು, ಅಂದ ಹಾಗೇ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಜಾರಿಗೆ ತರುತ್ತಿದ್ದು, ಇದರಿಂದ ದುಡಿಯುವ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಿದ ವೇತನ ಸಂಹಿತೆ ಮಸೂದೆಯಲ್ಲಿ ಮಂಡಿಸಲಾದ ಬದಲಾವಣೆಗಳ ಭಾಗವೇ ಇದಾಗಿದೆ. ಅಂದ ಹಾಗೇ ಹೊಸ ಕಾನೂನಿನ ಪ್ರಕಾರ, 15-30 ನಿಮಿಷಗಳ ಹೆಚ್ಚುವರಿ …
Read More »ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭ
ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಮಾರ್ಚ್ 31 ರವರೆಗೆ ನಡೆಯಲಿದೆ. ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ರಣತಂತ್ರ ರೂಪಿಸಿವೆ. ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಎರಡು ದಿನ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಚಾರವಾಗಿ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ನೀಡಲಾಗುವುದು. ಇಂದಿನಿಂದ ಮಾರ್ಚ್ …
Read More »ಸಿಮ್ ಹ್ಯಾಕ್ : ಮಣಿಪಾಲದವರ ನಂಬರ್ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್
ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸದ್ದು ಮಾಡಿದ್ದ ಎಟಿಎಂ ಸ್ಕಿಮ್ಮಿಂಗ್ ಪ್ರಕರಣ ಇನ್ನೂ ವಿಸ್ತರಣೆಯಾಗುತ್ತಲೇ ಇದೆ. ಹೊಸ ಹೊಸ ದೂರುಗಳು ದಾಖಲಾಗುತ್ತಿವೆ. ಈ ಮಧ್ಯೆಯೇ ಮೊಬೈಲ್ ಸಿಮ್ ಹ್ಯಾಕ್ ಅಥವಾ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಹದಿನೈದು ವರ್ಷಗಳಿಂದ ಬಳಸುತ್ತಿದ್ದª ವ್ಯಕ್ತಿಯೋರ್ವರ ಸಿಮ್ ನಂಬರ್ ಕೆಲವೇ ದಿನಗಳ ಅಂತರದಲ್ಲಿ ಬಿಹಾರದಲ್ಲಿ ಬೇರೆ ವ್ಯಕ್ತಿಯ ಬಳಿಯಿತ್ತು. ಘಟನೆ ನಡೆದಿದ್ದು ಹೀಗೆ. ಫೆ. 6ರ ಶನಿವಾರ ಅಪರಾಹ್ನ ಮಣಿಪಾಲದ ಯೋಗೀಶ್ ಶೆಟ್ಟಿ ಅವರು …
Read More »ಮಾ.4ರಿಂದ 4 ದಿನಗಳ ಕಾಲ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಸ್ಥಗಿತ
ಬೆಳಗಾವಿ – ಮಾ.4ರಿಂದ 4 ದಿನಗಳ ಕಾಲ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ನೀರು ಸರಬರಾಜು ನಿಗಮ ತಿಳಿಸಿದೆ. ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುವ ಗೇಟ್ ಮುರಿದಿದ್ದು ಇದರಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ನೀರು ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಹಾನಗರ ಪಾಲಿಕೆಗೆ ತಿಳಿಸಿದ್ದಾರೆ. ಮುರಿದಿರುವ ಗೇಟನ್ನು ಪರಿಶೀಲಿಸಲಾಗಿ ಮುಂದಿನ ನೀರು ಬಿಡುಗಡೆ …
Read More »ಮತ್ಸ್ಯೋದ್ಯಮಕ್ಕೆ ಬೇಕಿದೆ ನೆರವಿನ ಟಾನಿಕ್
ಉಡುಪಿ: ಈ ಬಾರಿಯ ರಾಜ್ಯ ಬಜೆಟ್ ಮೇಲೆ ಮೀನುಗಾರರು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರೇ ಇರುವುದರಿಂದ ಸಹಜವಾಗಿ ಜಿಲ್ಲೆಗೆ ಬಜೆಟ್‌ನಲ್ಲಿ ಹೆಚ್ಚಿನ ಕೊಡುಗೆಗಳು ಸಿಗುವ ನಿರೀಕ್ಷೆಗಳಿವೆ. ಕೋವಿಡ್‌ನಿಂದ ನಲುಗಿರುವ ಪ್ರವಾಸೋದ್ಯಮಕ್ಕೆ ಚೇತರಿಕೆ, ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಮೀನುಗಾರರಿಗೆ ನೆರವು, ಸಣ್ಣ ಉದ್ಯಮಗಳಿಗೆ ಆರ್ಥಿಕ ಪುನಶ್ಚೇತನ, ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಸ್ತು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ, …
Read More »ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ: ಗ್ರಾಹಕರಿಗೆ SBI ಗಿಫ್ಟ್
ಮಾರ್ಚ್ 31, 2021ರ ವರೆಗೂ ಗೃಹ ಸಾಲದ ಮೇಲಿನ ಪರಿಷ್ಕರಣಾ ಶುಲ್ಕ ಕಡಿತಗೊಳಿಸಿರುವ ಸ್ಟೇಟ್ ಬ್ಯಾಂಕ್, ವಾರ್ಷಿಕ 6.8% ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಸಾಮಾನ್ಯ ಗೃಹ ಸಾಲ, ಸರ್ಕಾರೀ ನೌಕರರಿಗೆ ಗೃಹ ಸಾಲ, ಸೇನೆಯ ಸಿಬ್ಬಂದಿಗೆ ಶೌರ್ಯ ಗೃಹ ಸಾಲ, ಚಾಲ್ತಿ ಗ್ರಾಹಕರಿಗೆ ಟಾಪ್-ಅಪ್ ಸಾಲ, ಮ್ಯಾಕ್ಸಿಗೇನ್, ಸ್ಮಾರ್ಟ್ ಹೌಸ್, ಫ್ಲೆಕ್ಸಿಪೇ ಹಾಗೂ ಮಹಿಳೆಯರಿಗೆ ಹರ್‌ಘರ್ ಯೋಜನೆಗಳ ಮೂಲಕ ಸಾಲ ಕೊಡುವ ವ್ಯವಸ್ಥೆಯನ್ನು ಎಸ್‌ಬಿಐ ಇಟ್ಟುಕೊಂಡಿದೆ. ಗೃಹ …
Read More »ಚೀನದಿಂದ ಸೈಬರ್ ದಾಳಿ ಯತ್ನ: ನಿಗಾ ಅನಿವಾರ್ಯ
ಭಾರತದ ನಿರಂತರ ಒತ್ತಡ ಮತ್ತು ಪರಿಣಾಮಕಾರಿ ರಾಜತಾಂತ್ರಿಕ ನಡೆಗಳಿಗೆ ಮಣಿದಿದ್ದ ಚೀನ ಸರಕಾರ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಿದ್ದ ತನ್ನ ಸೇನಾ ತುಕಡಿಗಳನ್ನು ವಾಪಸು ಕರೆಸಿ ಕೊಳ್ಳುವ ಮೂಲಕ ಗಡಿಯಲ್ಲಿ ಸೃಷ್ಟಿಯಾಗಿದ್ದ ಸಂಘರ್ಷದ ವಾತಾವರ ಣವನ್ನು ತಿಳಿಗೊಳಿಸಿತ್ತು. ಇದರಿಂದಾಗಿ ಗಡಿಯಲ್ಲಿ 10 ತಿಂಗಳುಗಳಿಂದ ಇದ್ದ ಸಮರ ಭೀತಿ ದೂರವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಇದರ ನಡುವೆ ಚೀನ ಹ್ಯಾಕರ್‌ಗಳು ದೇಶದ ವಿದ್ಯುತ್ ವಿತರಣ ಜಾಲದ ಮೇಲೆ ಸೈಬರ್ …
Read More »ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್!
ತುಮಕೂರು : ಈಗಾಗಲೇ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಅಡುಗೆ ಅನಿಲ ಸಿಲಿಂಡರ್ ತೂಕದಲ್ಲಿ ಮೋಸ ನಡೆಯುತ್ತಿದ್ದು, ತೂಕ ಪರೀಕ್ಷಿಸಿ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಿರಾ ತಾಲೂಕಿನಲ್ಲಿ ಹಾಡಹಾಗಲೇ ಕಡಿಮೆ ತೂಕದ ಅಡುಗೆ ಅನಿಲ ಪೂರೈಸುತ್ತಿರುವುದನ್ನು ಖುದ್ದು ಗ್ರಾಹಕರೇ ಪತ್ತೆ ಹಚ್ಚಿದ್ದಾರೆ. ಕಡಿಮೆ ತೂಕ ಹೊಂದಿದ್ದ ಅಡುಗೆ ಅನಿಲ ಸಿಲಿಂಡರ್ ಗಳೊಂದಿಗೆ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಶಿರಾ ನಗರದ ಸಿಲಿಂಡರ್ ವಿತರಕರಿಂದ ಗ್ರಾಹಕರಿಗೆ …
Read More »ದಾಖಲೆ ಪ್ರಮಾಣಕ್ಕೇರಿದ ಬಿಟ್ ಕಾಯಿನ್ ಮೌಲ್ಯ
ದಶಕಗಳ ಹಿಂದಷ್ಟೇ ಚಾಲ್ತಿಗೆ ಬಂದಿರುವ ಬಿಟ್ ಕಾಯಿನ್ (ಕ್ರಿಪ್ಟೋ ಕರೆನ್ಸಿ) ಮೌಲ್ಯ ಕೆಲವು ದಿನಗಳ ಹಿಂದೆ 38 ಲಕ್ಷ ರೂ. ದಾಟಿದೆ. ಈ ಬೆನ್ನಲ್ಲೇ ಬಿಟ್ ಕಾಯಿನ್‌ಗಳಿಗೆ ಬೇಡಿಕೆಯೂ ವಿಪರೀತವಾಗಿ ಹೆಚ್ಚಾಗಿದೆ. ಹೀಗಾಗಿ ಇಡೀ ಜಗತ್ತೇ ಈ ಬಿಟ್ ಕಾಯಿನ್‌ಗಳ ಹಿಂದೆ ಬಿದ್ದಿರುವಾಗ ಇವೂ ಸಾಮಾನ್ಯ ಹಣದಂತೆಯೇ ವ್ಯವಹಾರಗಳಲ್ಲಿ ಚಾಲ್ತಿಗೆ ಬರಲು ಹೆಚ್ಚು ಸಮಯವಿಲ್ಲ ಎಂಬುದು ಹೂಡಿಕೆದಾರರ ಲೆಕ್ಕಾಚಾರವಾಗಿದೆ. ಬಿಟ್ ಕಾಯಿನ್‌ಗಳಿಗೆ ಅದೃಷ್ಟ ಖುಲಾಯಿಸಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಇದರತ್ತ ಆಕರ್ಷಿತರಾಗಿದ್ದಾರೆ. …
Read More »
Laxmi News 24×7