Breaking News

ರಾಜ್ಯ

ಸಚಿವರ ಸಾಮೂಹಿಕ ಗೈರು: ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ ‘

ಬೆಂಗಳೂರು: ಕಲಾಪದಲ್ಲಿ ಭಾಗವಹಿಸಬೇಕಿದ್ದ ಸಚಿವರು ಸಾಮೂಹಿಕವಾಗಿ ಗೈರಾಗಿದ್ದರಿಂದ ಬುಧವಾರ ಮಧ್ಯಾಹ್ನದ ಬಳಿಕ ವಿಧಾನ ಪರಿಷತ್ ಕಲಾಪ ನಡೆಯಲಿಲ್ಲ. ಮಧ್ಯಾಹ್ನ 1.45ಕ್ಕೆ ಗಂಟೆಗೆ ಸದನದ ಕೋರಂ ಬೆಲ್ ಹಾಕಲಾಯಿತು. 15 ನಿಮಿಷಗಳ ಬಳಿಕ ಕಲಾಪ ಆರಂಭವಾಯಿತು. ಆದರೆ, ಸಭಾ ನಾಯಕ‌ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಲವು ಸದಸ್ಯರು ಮಾತ್ರ ಆಡಳಿತ ಪಕ್ಷದ ಸಾಲಿನಲ್ಲಿದ್ದರು. ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಸಿ.ಪಿ. ಯೋಗೇಶ್ವರ ಹಾಜರಿರಬೇಕಿತ್ತು. …

Read More »

ಅರಣ್ಯ ಇಲಾಖೆ ಬೋನಿಗೆ ಸೆರೆಸಿಕ್ಕ ಚಿರತೆ

ಶಿಕಾರಿಪುರ: ತಾಲ್ಲೂಕಿನ ಮದಗಹಾರನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ ಬೋನಿನಲ್ಲಿ ಬುಧವಾರ ಮುಂಜಾನೆ ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಸುತ್ತಲೂ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿಯನ್ನು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು. ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗೋಪ್ಯಾನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಚಿರತೆ ಚಲನವಲನ ಗಮನಿಸಿ ಎರಡು ದಿನಗಳ ಹಿಂದೆ ಗ್ರಾಮ ಸಮೀಪವೇ ನಾಯಿ …

Read More »

ಸರ್ಕಾರದ ಮೇಲೆ ಅಶೋಕ್ ಪೂಜಾರಿ ಗಂಭೀರ್ ಆರೋಪ..

ಓರ್ವ ಜವಾಬ್ದಾರಿಯುತ ಹಿರಿಯ ಸಚಿವ ರಾಸಲೀಲೆ ಸಿಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪೂಜಾರಿ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣವಾಗಿ ಇದು ಫೇಕ್ ವಿಡಿಯೋ ಇದೆ ಎಂದು …

Read More »

2020ರಲ್ಲಿ ದೇಶದ 10 ಸಾವಿರ ಕಂಪನಿಗಳು ಬಂದ್! ಕರ್ನಾಟಕದಲ್ಲಿ ಎಷ್ಟು ಗೊತ್ತಾ?

ನವದೆಹಲಿ : 2020ರ ಏಪ್ರಿಲ್ ನಿಂದ ಈ ವರ್ಷದ ಫೆಬ್ರವರಿವರೆಗೆ ದೇಶದಲ್ಲಿ 10,000 ಕ್ಕೂ ಹೆಚ್ಚು ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು 10,113 ಕಂಪನಿಗಳು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248(2) ರ ಅಡಿಯಲ್ಲಿ ಸ್ಥಗಿತವಾಗಿವೆ.ಸೆಕ್ಷನ್ 248(2) ಪ್ರಕಾರ ಕಂಪನಿಗಳು ಸ್ವಯಂ ಪ್ರೇರಿತವಾಗಿ …

Read More »

ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ. ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್​ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. …

Read More »

ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!

ಯಾದಗಿರಿ: ಕರ್ನಾಟಕ ರಾಜ್ಯಕ್ಕೆ ಬೆಳಕಿನ ಸೌಲಭ್ಯ ಕಲ್ಪಿಸುವ ಆರ್ ಟಿಪಿಎಸ್ ಕೇಂದ್ರವು ಈಗ ರೈತರ ಜೀವಕ್ಕೆ ಮಾತ್ರ ಕತ್ತಲಾಗಿಸಿದೆ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್ ಕೇಂದ್ರಕ್ಕೆ ವಿದ್ಯುತ್ ಉತ್ಪಾದನೆ ಗಾಗಿ ನೀರು ಪೂರೈಕೆ ಮಾಡಲು ಸರಕಾರ 2016 ನೆ ಸಾಲಿನಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದ್ದು, ಈಗ ಬ್ಯಾರೇಜ್ ರೈತರ ಪಾಲಿಗೆ ಜಲಕಂಟಕ ತಂದಿದೆ. …

Read More »

ಏತ ನೀರಾವರಿ ಕಾಮಗಾರಿ ಮುಗಿಯದೇ ಹಣ ಡ್ರಾ!

ಯಳಂದೂರು: ತಾಲೂಕಿನ ಕೃಷ್ಣಾಪುರ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ನಡೆದಿರುವ ಯರಗಂಬಳ್ಳಿ ಎಲೆಕೆರೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಡಿ ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ. ಆದರೂ ಹಣವನ್ನು ಡ್ರಾ ಮಾಡಲಾಗಿದೆ ಎಂದು ರೈತರು ಆರೋಪಿಸಿದರು. ಸೋಮವಾರ ಈ ಸಂಬಂಧ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕತ್ಯಾ ಯಿನಿ ನೇತೃತ್ವದ ತಂಡ ಯಳಂದೂರು ತಾಲೂಕಿನ ಕೃಷ್ಣಾಪುರ ಬಳಿ ನಿರ್ಮಾಣಗೊಂಡಿರುವ ಜಾಕ್‌ ವೆಲ್‌ ಹಾಗೂ ಯರ ಗಂಬಳ್ಳಿ ಗ್ರಾಮದ ಎಲೆಕೆರೆಗೆ …

Read More »

ಬೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ ಮನೆ ಮೇಲೆ ಎಸಿಬಿ ದಾಳಿ

ಯಾದಗಿರಿ: ನಗರದ ಬೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ ಅವರ ಮನೆ, ಕಚೇರಿ, ಬ್ಯಾಂಕ್‌ ಲಾಕರ್‌ ಮೇಲೆ ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆಯೇ ಮೂರು ಕಡೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ₹1.71 ಲಕ್ಷ ನಗದು, 800 ಗ್ರಾಂ ಚಿನ್ನ, 1,362 ಗ್ರಾಂ ಬೆಳ್ಳಿ, ಯಾದಗಿರಿಯಲ್ಲಿ ಮೂರಂತಸ್ತಿನ ಮನೆ, ಇನ್ನುಳಿದ ಕಡೆ …

Read More »

ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

ದೆಹಲಿ: ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಮೂರು ರಾಜ್ಯಗಳಲ್ಲಿ ಪ್ರಸ್ತುತ ಆಡಳಿತ ವಹಿಸಿರುವ ರಾಜ್ಯಗಳೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಅಸ್ಸಾಂನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶಗಳು ತಿಳಿದುಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ …

Read More »

ದೇಶೀಯ ವಿಮಾನಯಾನ: ಪ್ರಯಾಣಿಕರ ಸಂಖ್ಯೆ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ ತಿಂಗಳು ವಿಮಾನಯಾನ ಕೈಗೊಳ್ಳುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ ಎಂದು ಡಿಜಿಸಿಎ ವರದಿ ಆಧರಿಸಿ ಐಸಿಆರ್‌ಎ ಹೇಳಿದೆ. ಪ್ರಯಾಣ ನಿರ್ಬಂಧ ಮತ್ತು ವಿಮಾನ ಪ್ರಯಾಣದಲ್ಲಿ ಇರುವ ಕೆಲವೊಂದು ನಿಯಮಗಳಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಫೆಬ್ರುವರಿ ತಿಂಗಳಿನಲ್ಲಿ ಒಟ್ಟಾರೆ ಶೇ 37 ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ. ಫೆಬ್ರುವರಿ ತಿಂಗಳಿನಲ್ಲಿ ದೇಶೀಯ ವಿಮಾನದಲ್ಲಿ ಒಟ್ಟು 78 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಆದರೆ ಜನವರಿ 2021ಕ್ಕೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ …

Read More »