ಉಡುಪಿ ಮಾರ್ಚ್ 13: ಕಸ ವಿಂಗಡಣೆ ಕುರಿತಂತೆ ನಗರಸಭೆಯ ಕಸ ಸಂಗ್ರಹ ಮಾಡುವ ಕಾರ್ಮಿಕರೊಬ್ಬರ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನೇಜಾರಿನ ಇಸ್ಮಾಯಿಲ್(55) ಹಾಗೂ ಹೂಡೆಯ ಸೊಹೇಲ್(28) ಎಂದು ಗುರುತಿಸಲಾಗಿದೆ. ಉಡುಪಿ ನಗರಸಭೆಯ ಕಾರ್ಮಿಕ ಬಾಗಲಕೋಟೆ ಮೂಲದ ನಿಟ್ಟೂರು ನಿವಾಸಿ ಸಂಜು ಎಂಬವರಿಗೆ ಕಸದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ರಸ್ತೆ ಮಧ್ಯೆ ಹಲ್ಲೆ ನಡಸಿದ್ದಾರೆ. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ …
Read More »ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.
ಬೆಳಗಾವಿ-ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ,ಎಸ್‌ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡ್ತೇನೆ,ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು, ನಾವು ಸದ್ಯಕ್ಕೆ ಎಸ್‌ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ, ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ, ನಿನ್ನೆ …
Read More »ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ ಕೊಲ್ಹಾಪುರದಲ್ಲಿ ಗಲಾಟೆ ಹಿನ್ನೆಲೆ
ಬೆಳಗಾವಿ:ಕೊಲ್ಹಾಪುರದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಕರ್ನಾಟಕ ಹಾಗೂ ಮಾಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ 400 ಬಸ್ ಗಳು ಸಂಚರಿಸುತ್ತಿದ್ದವು. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಗಲಾಟೆ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿನ್ನೆ ಕೊಲ್ಹಾಪುರದಲ್ಲಿ ಗಲಾಟೆ ನಡೆದಿದ್ದು, ಇದೇ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
Read More »ಐಎಂಎ ವಂಚನೆ ಪ್ರಕರಣ: ಬಿಡಿಎ ಕುಮಾರ್ ವಿರುದ್ಧ ಆರೋಪಪಟ್ಟಿ
ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ₹ 5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿಂದಿನ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಡಿ. ಕುಮಾರ್ ಅಲಿಯಾಸ್ ಬಿಡಿಎ ಕುಮಾರ್ ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಐಎಂಎ ಮುಖ್ಯ ಕಾನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ಮನ್ಸೂರ್ ಖಾನ್, …
Read More »ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿ ಹೌದೋ ಅಲ್ಲವೋ ಎಂಬುದಕ್ಕಿಂತ ಯಡಿಯೂರಪ್ಪ ಭ್ರಷ್ಟ ಎಂದು ಹೇಳಿರುವ ಬಗ್ಗೆಯೂ ತನಿಖೆಯಾಗಬೇಕು: ಡಿ.ಕೆ.ಶಿವಕುಮಾರ್
ಬೆಂಗಳೂರು: ಎಸ್‌ಐಟಿ ತನಿಖೆಗೆ ವಹಿಸಿರುವ ಸಿಡಿ ಪ್ರಕರಣದ ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿ ಹೌದೋ ಅಲ್ಲವೋ ಎಂಬುದಕ್ಕಿಂತ ಯಡಿಯೂರಪ್ಪ ಭ್ರಷ್ಟ ಎಂದು ಹೇಳಿರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಡಿಯೋದಲ್ಲಿ ಯಾರಿದ್ದಾರೆ ಎನ್ನುವುದಕ್ಕಿಂತ ಯಡಿಯೂರಪ್ಪ ಭ್ರಷ್ಟ, ಕನ್ನಡಿಗರು ಹಾಗೂ ಮಾಧ್ಯಮಗಳ ನಿಂದನೆ, ಬೆಳಗಾವಿ ಪ್ರತ್ಯೇಕ ರಾಜ್ಯ ಎಂದು ಹೇಳಿರುವುದು ಗಂಭೀರ ವಿಚಾರಗಳಾಗಿವೆ. ಇವುಗಳ ಬಗ್ಗೆ ಚರ್ಚೆ ಆಗಬೇಕು ಎಂದು …
Read More »ಆ. 1ರಂದು ನೀಟ್ ಪರೀಕ್ಷೆ : ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ
ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ(NEET) ದಿನಾಂಕ ಪ್ರಕಟಿಸಲಾಗಿದೆ. ಆಗಸ್ಟ್ 1 ರಂದು 11 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮಾಹಿತಿ ನೀಡಿದೆ. ಹಿಂದಿ, ಇಂಗ್ಲಿಷ್ ಸೇರಿದಂತೆ 11 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಎಂಬಿಬಿಎಸ್, ಬಿಎಎಂಎಸ್, ಬಿಡಿಎಸ್, ಬಿಎಂಎಸ್ ಸೇರಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ನಡೆಸಲಾಗುವುದು.
Read More »ಲಂಚ ಪಡೆಯುತ್ತಿದ್ದ ಚಳ್ಳಕೆರೆ ತಾ.ಪಂ ಇಒ ಎಸಿಬಿ ಬಲೆಗೆ
ಚಿತ್ರದುರ್ಗ: ಪಿಡಿಒ ಒಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ ಬಾರಿಕೇರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಬೆಳಗೆರೆ ಪಿಡಿಒ ಗುಂಡಪ್ಪ ಅವರಿಂದ ಕಾರ್ಯಯೋಜಿತ ಮಂಜೂರಾತಿಗಾಗಿ ತಾಲೂಕು ಪಂಚಾಯತಿ ಬಳಿ 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಬಸವರಾಜ್ ಮಗುದಮ್, ಪಿಐಗಳಾದ ಪ್ರವೀಣ್ …
Read More »ಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಸಂಚಾರವನ್ನು ಮಾರ್ಚ್ 14ರಿಂದ ಆರಂಭ
ಮೈಸೂರು, ಮಾರ್ಚ್ 12; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಸಂಚಾರವನ್ನು ಮಾರ್ಚ್ 14ರಿಂದ ಆರಂಭಿಸಲಾಗುತ್ತದೆ ಎಂದು ಐಆರ್‌ಸಿಟಿಸಿ ಹೇಳಿದೆ. 2020ರಲ್ಲಿ ಕೆಎಸ್‌ಟಿಡಿಸಿಯಿಂದ ರೈಲಿನ ನಿರ್ವಹಣೆಯನ್ನು ಐಆರ್‌ಸಿಟಿಸಿ ಪಡೆದಿದೆ. 6 ರಾತ್ರಿ 7 ಹಗಲುಗಳ ಪ್ರವಾಸಿ ಪ್ಯಾಕೇಜ್ ಪ್ರಯಾಣ ಮೊದಲು ಆರಂಭವಾಗಲಿದೆ. ಬೆಂಗಳೂರು ನಗರದಿಂದ ಆರಂಭವಾಗುವ ಪ್ರಯಾಣ ಬೆಂಗಳೂರಿನಲ್ಲಿಯೇ ಕೊನೆಗೊಳ್ಳಲಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ಯಾಕೇಜ್‌ಗಳ ದರಗಳು ಲಭ್ಯವಿದೆ. ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು …
Read More »ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ : ಈ ತಿಂಗಳೊಳಗೆ ಪ್ರಯಾಣಿಕ ರೈಲುಗಳ ಸಂಚಾರ ಆರಂಭ
ನವದೆಹಲಿ: ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಈ ತಿಂಗಳೊಳಗೆ ಶೇಕಡ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾರಂಭ ಮಾಡಲಿವೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಸದ್ಯ ಉಪನಗರ ರೈಲುಗಳ ಪೈಕಿ ಶೇಕಡ 95ರಷ್ಟು ರೈಲುಗಳು ಸಂಚಾರ ಆರಂಭಗೊಂಡಿದ್ದು, ಶೇ 75ರಷ್ಟು ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳು ಓಡಾಡುತ್ತಿವೆ. ಈ ಪ್ರಮಾಣವನ್ನ ಶೀಘ್ರವೇ ಶೇಕಡ 85ರಷ್ಟು ಹೆಚ್ಚಿಸಲಾಗುವುದು’ ಎಂದರು.
Read More »16 ವರ್ಷ ಮೇಲ್ಪಟ್ಟರೆ ಬಾಲಾರೋಪಿ ಅಲ್ಲ?
ನವದೆಹಲಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ವಯಸ್ಕ ಆರೋಪಿಯ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸಬೇಕು ಎಂದು ಉನ್ನತಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. 2017ರಲ್ಲಿ ಪೋಸ್ಕೊ ಅಡಿಯಲ್ಲಿ 32,608 ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಈ ಪ್ರಮಾಣ 47,325ಕ್ಕೆ (ಶೇ. 45) ಏರಿಕೆ ಆಗಿದೆ. ಆದ್ದರಿಂದ ವಯೋಮಿತಿಯನ್ನು ಪುನರ್ ಪರಿಶೀಲಿಸುವ ಮತ್ತು ಸೈಬರ್ ಅಪರಾಧ ಎಸಗುವವರ ವಯಸ್ಸನ್ನು ಪುನರ್ ವಿಮಶಿಸಬೇಕಿದೆ ಎಂದು ಸಮಿತಿ ಶಿಫಾರಸು …
Read More »
Laxmi News 24×7