ನವದೆಹಲಿ, ಮಾರ್ಚ್ 24: ಭಾರತದ ರಾಷ್ಟ್ರೀಯ ಹೆದ್ದಾರಿ ಟೋಲ್‌ನಿಂದ ತಿಂಗಳಾಂತ್ಯದ ವೇಳೆಗೆ 34,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನವದೆಹಲಿ ಮೂಲದ ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. “ನಾವು ರಸ್ತೆಗಳಿಂದ ಹಣ ಗಳಿಸುತ್ತಿದ್ದೇವೆ. ಸಾರ್ವಜನಿಕರಿಂದಲೂ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2021ನೇ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31ರ …
Read More »ಸುಧಾಕರ್ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ: ಕಲಾಪ ಅನಿರ್ಧಿಷ್ಟ ಕಾಲ ಮುಂದೂಡಿಕೆ
ಬೆಂಗಳೂರು: ರಾಜ್ಯದ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಭೋಜನ ವಿರಾಮದ ಬಳಿಕ ಕಲಾಪ ಸೇರಿದಾಗ ಸುಧಾಕರ್ ಹೇಳಿಕೆಯನ್ನು ವಿಪಕ್ಷ ಸದಸ್ಯರು ಕಟುವಾಗಿ ಟೀಕಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಮಾತನಾಡಿ, ‘ಸುಧಾಕರ್ …
Read More »ಐದು ನೋಟಿಸ್ ಗಳಿಗೂ ಯುವತಿಯಿಂದ ನೋ ರೆಸ್ಪಾನ್ಸ್ :ವಿಧಾನಸೌಧಕ್ಕೆ ದೌಡಾಯಿಸಿದ ಎಸ್ ಐಟಿ ಅಧಿಕಾರಿಗಳು
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಎಸ್‌ಐಟಿ ತನಿಖೆ ಗಂಟೆಗೊಂದು ಟ್ವಿಸ್ಟ್ ಗಳನ್ನು ಪಡೆಯುತ್ತಿದ್ದು, ಸಾಲು ಸಾಲು ಸುದ್ದಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಕರಣದ ಕುರಿತು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಇಮೇಲ್ನಲ್ಲಿ ಕಳುಹಿಸಿದ್ದ ನೋಟಿಸ್ನ್ನು ಯುವತಿ ನೋಡಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಪೊಲೀಸರ ನೋಟಿಸ್ಗೆ ಆಕೆಯಿಂದ ಯಾವುದೇ ಉತ್ತರ ದೊರೆತಿಲ್ಲ ಎನ್ನಲಾಗ್ತಿದೆ. ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ …
Read More »ನನಗಿರುವುದು ಒಬ್ಬಳೆ ಹೆಂಡ್ತಿ, ಒಂದೇ ಸಂಸಾರ’ : ಸಚಿವ ಸುಧಾಕರ್ ಗೆ ಡಿ.ಕೆ. ಶಿವಕುಮಾರ್ ತಿರುಗೇಟು
ಬೆಂಗಳೂರು : ರಾಜ್ಯದ 224 ಶಾಸಕರದ್ದೂ ತನಿಖೆಯಾಗಲಿ ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂದು ಗೊತ್ತಾಗಲಿದೆ ಎಂದು ಸಚಿವ ಸುಧಾಕರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವ ಸುಧಾಕರ್ ನುಡಿಮುತ್ತುಗಳನ್ನು ಇಡೀ ರಾಜ್ಯಕ್ಕೆ ಕೊಟ್ಟಿದ್ದಾರೆ. ಇವರ ಹೇಳಿಕೆ ಹೇಳಿಕೆಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಬೇಕು. ಇದು ಸಾಮೂಹಿಕ ವಿಚಾರ, ನನಗಿರುವುದು ಒಬ್ಬ ಹೆಂಡತಿ, ನಂದು ಒಂದೇ ಸಂಸಾರ ಎಂದು ಹೇಳಿದ್ದಾರೆ. ಯಾವ್ಯಾವ ಮುಖ್ಯಮಂತ್ರಿಗಳು …
Read More »ಮುಂದಿನ 8-10 ವರ್ಷ ಪೆಟ್ರೋಲ್ ಮತ್ತು ಡೀಸೆಲ್ ನ್ನು ಜಿಎಸ್ ಟಿ ವ್ಯಾಪ್ತಿಯಡಿ ತರಲು ಸಾಧ್ಯವಿಲ್ಲ: ಸುಶಿಲ್ ಕುಮಾರ್ ಮೋದಿ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ನ್ನು ಇನ್ನು 8-10 ವರ್ಷ ಜಿಎಸ್ ಟಿ ಆಡಳಿತದಡಿ ತರಲು ಸಾಧ್ಯವಿಲ್ಲ, ಇದರಿಂದ ವಾರ್ಷಿಕವಾಗಿ ಎಲ್ಲಾ ರಾಜ್ಯಗಳಿಗೆ 2 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ. ಹಣಕಾಸು ಮಸೂದೆ 2021ರ ಕುರಿತು ಇಂದು ರಾಜ್ಯಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ 5 ಲಕ್ಷ ಕೋಟಿಗಿಂತಲೂ …
Read More »224-225 ಜನರಲ್ಲಿ ಎಲ್ಲರೂ ಶ್ರೀರಾಮಚಂದ್ರ-ಸೀತಾ ಮಾತೆಯರೇ ಅಲ್ಲ: ಬಿ.ಸಿ ಪಾಟೀಲ್
ಬೆಂಗಳೂರು: 224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ‘224-225 ಜನರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಅಲ್ಲ. ಯಾವ ಸಚಿವರು ಹೇಳಿಕೆ ನೀಡಿದ್ರೂ ಎಲ್ಲರೂ ಅವ್ರವ್ರ ಆತ್ಮ ಮುಟ್ಟಿ ನೋಡಿಕೊಳ್ಳಲಿ’ ಎಂದು ಹೇಳಿದರು. ಒಂದು ಬೆರಳು ಒಬ್ಬರ ಕಡೆ ತೋರಿಸಿದ್ರೆ, ಉಳಿದ ನಾಲ್ಕು ಬೆರಳು ನಮ್ಮ …
Read More »ಡೀಸೆಲ್ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶ
ಬೆಳಗಾವಿ : ಬೆಳಿಗ್ಗೆ9 ಗಂಟೆಗೆ ಲೋಕಸಭಾ ಉಪ ಚುನಾವಣೆ ನಿಮಿತ್ಯ ಬಾತ್ಮಿ ಮೇರೆಗೆ ಬೆಳಗಾವಿ ತಾಲ್ಲೂಕಿನ ಕಿಣಯೇ ಕ್ರಾಸ್ ಬಳಿ ಡೀಸೆಲ್ ಟ್ಯಾಂಕರ್ ವಾಹನದಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ. ಲಿಂಗಸ್ವಾಮಿ ನರಸಿಂಹ ತಾ : ನರಸಿಂಗ್ ಬಬ್ಲಾ ಜಿ : ನಲಗೊಂಡ – 508001 ರಾಜ್ಯ: ತೆಲಂಗಾಣ ಎಂಬಾತನನ್ನು ದಸ್ತಗೀರ ಮಾಡಿ ಟ್ಯಾಂಕರ್‌ನ2 ಕಂಪಾಟಮೆಂಟ್‌ನಲ್ಲಿ ಗೋವಾ ರಾಜ್ಯದ ವಿವಿಧ ನಮೂನೆಯ121ಪೆಟ್ಟಿಗೆಗಳನ್ನು ಜಪ್ತು ಮಾಡಲಾಯಿತು. ಡಾ ವೈ …
Read More »ಏ.1ಕ್ಕಿಂತ ಮೊದ್ಲೇ ಈ ಕೆಲ್ಸ ಮಾಡಿ.. ಇಲ್ಲದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತೆ..!
ಪ್ಯಾನ್ ಕಾರ್ಡ್ ಹೊಂದಿರುವವರು ಇದನ್ನ ಎಚ್ಚರಿಕೆಯಿಂದ ಓದಿ. ಯಾಕಂದ್ರೆ, ಆದಾಯ ತೆರಿಗೆ ಇಲಾಖೆಯು 2021ರ ಮಾರ್ಚ್ 31ಕ್ಕೆ ಆಧಾರ್ ಪ್ಯಾನ್ ಲಿಂಕ್ ಗಡುವು ನೀಡಿದೆ. ಒಂದ್ವೇಳೆ ನಿಮ್ಮ ಪ್ಯಾನ್ʼನ್ನ ನಿಮ್ಮ ಆಧಾರ್ʼಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1 ರಿಂದ ನೀವು ಯಾವುದೇ ಹಣಕಾಸು ವ್ಯವಹಾರವನ್ನ ಮಾಡೋಕೆ ಸಾಧ್ಯವಾಗೋಲ್ಲ. ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ರೆ, ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಹೇಳಿದೆ. …
Read More »ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಭರ್ಜರಿ ಗುಡ್ ನ್ಯೂಸ್
ನವದೆಹಲಿ: ಕಳೆದ 15 ದಿನಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಭಾರೀ ಇಳಿಕೆಯಾಗಿದೆ. ಬ್ಯಾರಲ್ ಗೆ 71 ಡಾಲರ್ ನಿಂದ 64 ಡಾಲರ್ ಗೆ ಕಡಿಮೆಯಾಗಿದೆ. ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಕಡಿಮೆ ಮಾಡಲು ಅವಕಾಶ ಸೃಷ್ಟಿಯಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ್ದು, ಕಚ್ಚಾತೈಲದ ಬೆಲೆ ಏರಿಕೆ ನೆಪ ಹೇಳುತ್ತಿದ್ದ ಕಂಪನಿಗಳು ಈಗ ಬೆಲೆ ಕಡಿಮೆ ಮಾಡಲಿವೆ ಎಂದು …
Read More »ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕಠಿಣ ಕ್ರಮ : ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು : ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅಂತಹ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಮಾತನಾಡಿದ ಸಚಿವರು, ಕೈಗಾರಿಕಾ ನೀತಿ 2020-25 ರ ಅನ್ವಯ ಸರ್ಕಾರದ ಸೌಲಭ್ಯ ಪಡೆದು ಸ್ಥಾಪಿಸಿರುವ ಕೈಗಾರಿಕೆಗಳಲ್ಲಿ ಅರ್ಹತೆ ಇರುವ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ. 100 …
Read More »
Laxmi News 24×7