Breaking News

ರಾಜ್ಯ

ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ : ಸಿಡಿ ಯುವತಿ ಪೋಷಕರು

ಬೆಂಗಳೂರು : ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ, ಕೆಲಸ ಕೊಡಿಸುವುದಾಗಿ ಡಿಕೆಶಿ ಹುಡುಗರು ಹೇಳಿದ್ದರು. ರಾಜಕೀಯ ದಾಳವಾಗಿ ನಮ್ಮ ಮಗಳನ್ನು ಬಳಕೆ ಮಾಡಿದ್ದಾರೆ, ಡಿಕೆಶಿ ಮತ್ತು ತಮ್ಮ ಮಗಳ ವಿರುದ್ಧವೇ ಸಿಡಿ ಯುವತಿಯ ಪೋಷಕರು ಹೇಳಿಕೆ ನೀಡಿದ್ದಾರೆ. ಇನ್ನು ವಿಚಾರಣೆ ಬಗ್ಗೆ ಮಾತನಾಡಿರುವ ಯುವತಿ ಪರ ವಕೀಲ ಜಗದೀಶ್, ಇಂದೇ ಹಾಜರು ಪಡಿಸಲು ಕೇಳಿದ್ರೆ ನಾವು ಸಿದ್ದರಿದ್ದೇವೆ. ಅಲ್ಲದೆ ನ್ಯಾಯಾಧೀಶರ ಮನೆಗೂ ಹಾಜರು ಪಡಿಸಲು ನಾವು ಸಿದ್ದರಾಗಿದ್ದೇವೆ ಎಂದಿದ್ದಾರೆ.

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ : ಬೆಳಗಾವಿ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಆರ್ ಟಿಒ ನಗರದಲ್ಲಿರುವ ಕಾಂಗ್ರೆಸ್ ಭವನದಿಂದ ಮೂರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಹಸಿರು ಶಾಲು ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ …

Read More »

ಇಂದೇ ತನ್ನ ಹೇಳಿಕೆ ದಾಖಲಿಸುತ್ತಾರೆಯೇ ಸಿಡಿ ಲೇಡಿ?

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದೇ ತನ್ನ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುವತಿ ಯಾವುದೇ ಕ್ಷಣದಲ್ಲಾದರೂ ಕೋರ್ಟ್ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಕೂಡ ಯುವತಿ ಭದ್ರತೆಗಾಗಿ ಓರ್ವ ಮಹಿಳಾ ಪಿಎಸ್ ಐ ಸೇರಿದಂತೆ 8 ಮಹಿಳಾ ಪೊಲೀಸ್ ಸಿಬ್ಬಂದಿಯ …

Read More »

ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:‌ ನ್ಯಾಯಾಧೀಶರೆದುರು ʼಸಿಡಿ ಲೇಡಿʼ ಹಾಜರಾಗಲು ಕೋರ್ಟ್‌ ಅನುಮತಿ..!

ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಈ ಸಿಡಿ ಪ್ರಕರಣದಲ್ಲಿ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಸಧ್ಯ ನ್ಯಾಯಾಧೀಶರ ಎದುರು ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಆದ್ರೆ, ಯುವತಿ ಇವತ್ತೇ ನ್ಯಾಯಾಲಯದ ಮುಂದೆ ಇಂದೇ ಹಾಜರಾಗ್ತಾಳಾ? ಅಥ್ವಾ ಕೋರ್ಟ್‌ ಬೇರೆ ಸಮಯ ನೀಡಿದ್ಯಾ? ಅನ್ನೋ ಮಾಹಿತಿ ತಿಳಿಯಬೇಕಿದೆ.

Read More »

ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ

ಕೋಲಾರ: ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಗಾರ್ಜುನ್‌ ಮದುವೆಯಾದ ಕೆಲವೇ ತಾಸುಗಳಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ. ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್‌ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ (ಮಾರ್ಚ್ 28) ಬೆಳಿಗ್ಗೆಯಷ್ಟೇ ಮದುವೆಯಾಗಿದ್ದರು. ಬಳಿಕ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಗೆ ಪರಸ್ಪರ ದೂರು ಕೊಟ್ಟಿದ್ದಾರೆ. …

Read More »

ಮೇಕೆದಾಟು ಮುತ್ತಿಗೆಗೆ ಮುಂದಾದ ತಮಿಳುನಾಡು ರೈತರು

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ಪ್ರತಿಭಟಿಸಲು ಬರುತ್ತಿದ್ದ ತಮಿಳುನಾಡು ರೈತ ಸಂಘಟನೆಗಳ ಸದಸ್ಯರನ್ನು ರಾಜ್ಯದ ಪೊಲೀಸರು ಭಾನುವಾರ ಕನಕಪುರ ಗಡಿಯಲ್ಲಿಯೇ ತಡೆದರು. ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಇದನ್ನು ವಿರೋಧಿಸಿ ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಮುಖಂಡರು ಕರೆ ಕೊಟ್ಟಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಬೆಳಿಗ್ಗೆಯಿಂದಲೇ ತಮಿಳುನಾಡಿನ ಒಬ್ಬ ಹೋರಾಟಗಾರನೂ ರಾಜ್ಯದ ಗಡಿ ಪ್ರವೇಶಿದಂತೆ …

Read More »

ಕಾಂಗ್ರೆಸ್‌ ಸೇರಿ ಗಳಿಸಿದ್ದೆಲ್ಲ ಕಳೆದುಕೊಂಡಿದ್ದೆ: ಜಗ್ಗೇಶ್‌

ಚಿತ್ರದುರ್ಗ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಹಿಂದೆ ಮಂಕುಬೂದಿ ಎರಚಿದ ಕಾಂಗ್ರೆಸ್‌ನ ಎಂ.ಡಿ. ಲಕ್ಷ್ಮಿನಾರಾಯಣ್ ನನಗೂ ಬೆಂಕಿ ಇಟ್ಟ. ಭವಿಷ್ಯಕ್ಕೆ ಕಲ್ಲು ಹಾಕಿದ’ ಎಂದು ಬಿಜೆಪಿ ರಾಜ್ಯ ವಕ್ತಾರ ಜಗ್ಗೇಶ್‌ ದೂರಿದರು. ಇಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ‘ಮಾಧ್ಯಮ ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎರಡು ದಶಕಗಳ ಕೆಳಗೆ ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿ ಕಾರ್ಯದರ್ಶಿಯಾಗಿ ಮಾಡಿದರು. ವೇದಿಕೆಗಳಲ್ಲಿ ಕೂರಿಸುವುದನ್ನು ನೋಡಿ ಭಾರಿ ದೊಡ್ಡ …

Read More »

ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು!

ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ ಈ ಪರಿಪ್ರಮಾಣದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು 27,13,875 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಮಾ.25 ರಂದು ರಾಜ್ಯದಲ್ಲಿ ಕೊರೋನಾ ಸಂಖ್ಯೆ 26 ಲಕ್ಷಕ್ಕೆ ಏರಿಕೆಯಾಗಿತ್ತು. ಕೊರೋನಾ ಕಾರಣದಿಂದಾಗಿ 108 ಮಂದಿ ಇತ್ತೀಚೆಗೆ ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 54,181ಕ್ಕೆ …

Read More »

ಸಿಡಿ ಲೇಡಿಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಇ-ಮೇಲ್ ರವಾನೆ

ಬೆಂಗಳೂರು, ಮಾರ್ಚ್ 29: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ತಮ್ಮ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಲಿ, ನನ್ನ ತಂದೆ ತಾಯಿಗೆ ರಕ್ಷಣೆ ಕೊಡಿ ಎಂದು ಇ-ಮೇಲ್‌ನಲ್ಲಿ ಮನವಿ ಮಾಡಿದ್ದಾರೆ. ಇಂದು ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ, ನನ್ನ ಪೋಷಕರಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ …

Read More »

ನಾಮಪತ್ರ ಸಲ್ಲಿಕೆಗೆ ‘ಕರಿ’ ದಿನವನ್ನು ಆಯ್ಕೆ ಮಾಡಿಕೊಂಡ ಸತೀಶ್ ಜಾರಕಿಹೊಳಿ.!

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮೂಢನಂಬಿಕೆಗಳ ವಿರೋಧಿ. ಹೀಗಾಗಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜಯ ಸಾಧಿಸಿದ್ದರು. ಅಲ್ಲದೆ ಮೂಢನಂಬಿಕೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಸತೀಶ್ ಜಾರಕಿಹೊಳಿ ಹಮ್ಮಿಕೊಳ್ಳುತ್ತಿರುತ್ತಾರೆ. ಇದೀಗ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಇದಕ್ಕಾಗಿ ‘ಕರಿ’ ದಿನವನ್ನು …

Read More »