Breaking News

ರಾಜ್ಯ

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಡಿಸಿಎಂ ಲಕ್ಷ್ಮಣ ಸವದಿ ಸಿಹಿ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಹಿ ಸುದ್ದಿ ನೀಡಿದ್ದಾರೆ. ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ವೇತನ ಪರಿಷ್ಕರಣೆ ಕುರಿತ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿ ವೇತನ …

Read More »

ಸಿಡಿ ಪ್ರಕರಣ; ಯುವತಿಗೆ ಕಬ್ಬನ್ ಪಾರ್ಕ್ ಪೊಲೀಸರ ನೋಟಿಸ್

ಬೆಂಗಳೂರು, ಮಾರ್ಚ್ 29; ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಮಾರ್ಚ್ 30ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಯುವತಿ ಪರ ವಕೀಲ ಜಗದೀಶ್ ಮೂಲಕ ಸಂತ್ರಸ್ತ ಯುವತಿಗೆ ನೋಟಿಸ್ ನೀಡಿದ್ದಾರೆ. ಸೋಮವಾರ ಕಬ್ಬನ್ ಪಾರ್ಕ್ ಪೊಲೀಸರು ರಮೇಶ್ ಜಾರಕಿಹೊಳಿ ವಿಚಾರಣೆಯನ್ನು ನಡೆಸಿದ್ದರು. ಏಪ್ರಿಲ್ 2ರಂದು ಪುನಃ ವಿಚಾರಣೆಗೆ ಆಗಮಿಸಬೇಕು …

Read More »

ಎರಡು‌ವಾರಗಳ ಕಾಲ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ:B.S.Y.

ಬೆಂಗಳೂರು:  ಎರಡು‌ವಾರಗಳ ಕಾಲ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ರಂದು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಕರೋನಾ ಹೆಚ್ಚಳದ ಹಿನ್ನೆಲೆಯಲ್ಲಿ‌ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ನಡೆಸಿದರು. ರಾಜ್ಯದಲ್ಲಿ‌ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಟಫ್ ರೂಲ್ಸ್ ಜಾರಿಗೆ ತರಲಾಗುವುದು ಎಂದು‌ ಮಾಹಿತಿಙೀಡಿದರು.ಜೊತೆ ಯಾವುದೇ ಜಾತ್ರಾ ಮಹೋತ್ಸವ ಹಾಗೂ ಸಭೆ ಸಮಾರಂಭಗಳಿ‌ಗೆ ಸದ್ಯಕ್ಕೆ ಬ್ರೇಲ್ ಹಾಕಲಾಗುವುದು ಎಂದು ಮಾಹಿತಿ‌ ನೀಡಿದರು

Read More »

ಸಾರಿಗೆ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು, ಖಾಸಗಿ ಬಸ್‌ಗಳಿಗೆ ಅವಕಾಶ

ಬೆಂಗಳೂರು, ಮಾರ್ಚ್ 30: ವಿವಿಧ ಬೇಡಿಕೆಗಳನ್ನು ಇರಿಸಿಕೊಂಡು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಆಪರೇಟರ್‌ಗಳನ್ನು ಮುಂದಿರಿಕೊಂಡು ಟಕ್ಕರ್ ನೀಡಲು ಸರ್ಕಾರ ಮುಂದಾಗಿದೆ. ಏಪ್ರಿಲ್ 7 ರಂದು ಸರ್ಕಾರಿ ಬಸ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಖಾಸಗಿ ಬಸ್‌ಗಳ ಜತೆ ಕೈಜೋಡಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ 10 ಸಾವಿರ ಖಾಸಗಿ ಬಸ್ ಹಾಗೂ 1 ಲಕ್ಷ ಟ್ಯಾಕ್ಸಿಗಳಿದ್ದು, ಒಂದೊಮ್ಮೆ ಬಸ್‌ಗಳನ್ನು ನಿಲ್ಲಿಸಿದ್ದೇ ಆದಲ್ಲಿ ಈ ಖಾಸಗಿ …

Read More »

ಚಿನ್ನದ ನಾಣ್ಯಗಳಿಂದ ಕರ್ನಾಟಕ ಬ್ರ್ಯಾಂಡ್‌

ಬೆಂಗಳೂರು : ಚಿನ್ನದ ನಾಣ್ಯಗಳ ಮೇಲೆ ನಾಡಿನ ಪಾರಂಪರಿಕ ಸ್ಥಳಗಳು ಮತ್ತು ಮಹನೀಯರ ಭಾವಚಿತ್ರಗಳನ್ನು ಟಂಕಿಸಿ ಮಾರುಕಟ್ಟೆ ಮಾಡುವ ಮೂಲಕ ರಾಜ್ಯದಲ್ಲಿ ಉತ್ಪಾದನೆಯಾಗುವ ಬಂಗಾರಕ್ಕೆ ಕರ್ನಾಟಕ ಬ್ರ್ಯಾಂಡ್‌ ಸೃಷ್ಟಿಸಲು ಸರಕಾರವು ಯೋಜನೆ ರೂಪಿಸಿದೆ. ಸರಕಾರವೇ ಚಿನ್ನದ ಅಂಗಡಿ ತೆರೆದು ಜನರಿಗೆ ಗುಣ ಮಟ್ಟದ ಚಿನ್ನ ಒದಗಿಸಲು ಮುಂದಾಗಿದೆ. ಬಂಗಾರದ ನಾಣ್ಯಗಳಲ್ಲಿ ರಾಜ್ಯ ಸರಕಾರದ ಲಾಂಛನ ಗಂಡ ಭೇರುಂಡದ ಜತೆಗೆ ರಾಜ್ಯದ ಇತಿಹಾಸ ಮತ್ತು ಪರಂಪರೆ ಸಾರುವ ಪಾರಂಪರಿಕ ಸ್ಥಳಗಳು ಹಾಗೂ ಮಹನೀಯರ ಭಾವಚಿತ್ರ …

Read More »

ಬೆಂಜ್ ಕಾರು ಖರೀದಿಸಿದ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್

‘ಕನ್ನಡತಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿರುವ ಕಿರಣ್ ರಾಜ್ ಹೊಸ ಕಾರು ಖರೀದಿ ಮಾಡಿದ್ದಾರೆ. ಕಾರು ಖರೀದಿ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಿರಣ್ ರಾಜ್ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ಶುಭಾಶಯ ತಿಳಿಸಿದ್ದಾರೆ. ಯಾವ ಖುಷಿಗೆ ಕಾರು ಖರೀದಿಸಿದ್ದಾರೆ ಎಂದು ಕೇಳಿದ್ದಾರೆ. ಅಂದ್ಹಾಗೆ, ಕಿರಣ್ ರಾಜ್ ಕಪ್ಪು ಬಣ್ಣ ಮರ್ಸಿಡಿಸ್ ಬೆಂಜ್ ಕಾರು ಖರೀದಿ ಮಾಡಿದ್ದಾರೆ. …

Read More »

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಬರೋಬ್ಬರಿ ʼ100 ಇನ್ಸ್ ಪೆಕ್ಟರ್ʼಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 100 ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಲಾಗಿದ್ದು, ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುವಂತೆ ಸೂಚಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಸಿಬ್ಬಂದಿ ಮಂಡಳಿಯ ಆದೇಶದನ್ವಯ 100 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಿ ಕ್ರಮಕೈಗೊಂಡಿದ್ದಾರೆ. ಅಂದ್ಹಾಗೆ, ವರ್ಗಾವಣೆ ಆದೇಶವನ್ನ ಡಿಜಿ ಐಜಿಪಿ ಕಚೇರಿಯಿಂದ ಹೊರಡಿಸಲಾಗಿದೆ.  

Read More »

ಲಾಕ್​ಡೌನ್, ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ; B.S.Y.

ಬೆಂಗಳೂರು(ಮಾ.29): ಲಾಕ್ ಡೌನ್ , ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಲಾಕ್‌ಡೌನ್, ಕರ್ಫ್ಯೂ , ಕಂಟೋನ್ಮೆಂಟ್ ವಲಯಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವಾಲಯ ಮಾತ್ರ ಆದೇಶ ಹೊರಡಿಸಲಿದೆ. ಕೇಂದ್ರದ ಮಾದರಿಯಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶಗಳನ್ನು ಹೊರಡಿಸಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಸೂಚನೆ ಮತ್ತು …

Read More »

ರಾಜಕೀಯದವರ ಸಂಗ ಮಾಡ್ಬೇಡ ಅಂದ್ರೂ ನಮ್ಮ ಮಾತು ಕೇಳ್ಳಿಲ್ಲ: ಸಿಡಿ ಸಂತ್ರಸ್ತೆ ತಾಯಿ

ಬೆಳಗಾವಿ: ರಾಜಕೀಯದವರ ಸಂಗ ಮಾಡಬೇಡ ಅಂತ ಅವಳಿಗೆ ಹೇಳಿದ್ದೆ ಆದ್ರೆ ಅವಳು ಕೇಳಲಿಲ್ಲ ಎಂದು ಸಿಡಿ ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಂತ್ರಸ್ತೆಯ ತಾಯಿ, ಬಾರಮ್ಮ ಮನೆಗೆ ಮದುವೆ ಮಾಡ್ತೀವಿ, ರಾಜಕೀಯದವರ ಸಂಗ ಮಾಡಬೇಡ. ಯಾವತ್ತಿದ್ರೂ ಅಪಾಯ ಎಂದು ಅವಳಿಗೆ ಬುದ್ದಿ ಹೇಳಿದ್ದೆ ಆದ್ರ ನನ್ನ ಮಾತನ್ನು ಅವಳು ಕೇಳಲಿಲ್ಲ. ನಿನಗೆ 40 ಸಾವಿರ ರೂ. ಸಂಬಳ ಇದೆ ಸರ್ಕಾರಿ ಕೆಲಸ ಯಾಕೆ ಬೇಕು ಎಂದು …

Read More »

ಮಹಾನಾಯಕ ಆಗಲು ಹೊರಟವರು ಖಳನಾಯಕನಾಗಿದ್ದು ಕಾಂಗ್ರೆಸ್ ನ ನೈತಿಕ ದಿವಾಳಿತನ: ಬಿಜೆಪಿ

ಬೆಂಗಳೂರು: ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿಯು ಟ್ವೀಟ್ ವಾರ್ ಮುಂದುವರಿಸಿದೆ. ಸೆಕ್ಷನ್ ಸಿದ್ದರಾಮಯ್ಯನವರೇ ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, …

Read More »