Breaking News

ರಾಜ್ಯ

ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿ

ಹಾವೇರಿ: ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್‌, ಓಸಿ, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿವೆ. ಕೂಡಲೇ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ‘ಹಾವೇರಿ ಜಿಲ್ಲೆ ನಾಡಿನ ಹೆಸರಾಂತ ಸಂತ ಶರಣರ ಹಾಗೂ ಸಾಹಿತಿಗಳ ನೆಲೆಬೀಡಾಗಿದೆ. ಇಂತಹ ನೆಲದಲ್ಲಿ ಅಕ್ರಮ ಚಟುವಟಿಕೆಗಳು …

Read More »

ಮುಂಡರಗಿ: ಅಕ್ರಮ ಮರಳು ಅಡ್ಡೆಗಳ ಮೇಲೆ ಜಿಲ್ಲಾಧಿಕಾರಿ ದಾಳಿ

ಮುಂಡರಗಿ (ಗದಗ): ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ತಲೆಎತ್ತಿರುವ ಅಕ್ರಮ ಮರಳು ಅಡ್ಡೆಗಳ ಮೇಲೆ ಸ್ವತಃ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹಾಗೂ ಎಸ್ಪಿ ಯತೀಶ್ ಎನ್. ಜಂಟಿಯಾಗಿ ಮಂಗಳವಾರ ದಾಳಿ ನಡೆಸಿದ್ದು, ಸುಮಾರು 200 ಟಿಪ್ಪರ್‌ಗಿಂತ ಅಧಿಕ ಮರಳು ರಾಶಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಸಿಂಗಟಾಲಕೇರಿ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ …

Read More »

ಸರಕಾರಿ ಕೆಲಸಕ್ಕೆ ಗೈರಾಗಿ ತನ್ನ ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ!

ಕಲಬುರಗಿ: ಸರ್ಕಾರಿ ವೈದ್ಯರೊಬ್ಬರು ಸಾರ್ವಜನಿಕ ಸೇವೆಗೆ ಹಾಜರಾಗದೆ ತಮ್ಮ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಡಾ.ಸಂಗಮೇಶ ಟಕ್ಕಳಕಿ ಎಂಬುವವರೇ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ವೈದ್ಯ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞರಾದ ಡಾ.ಸಂಗಮೇಶ ಟಕ್ಕಳಕಿ ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಆಗಿದ್ದರು. ಈ ಸಂಬಂಧ ಮೇಲಾಧಿಕಾರಿಗಳು ದೂರವಾಣಿ …

Read More »

ಚಿಕ್ಕಪ್ಪನಿಂದಲೇ ನೀಚ ಕೃತ್ಯ: ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ, ಬೆದರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಸಂಬಂಧಿ ಯುವತಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಪಿ ಬಿ.ಸಿ. ರೋಡ್ ಸಮೀಪದ ಭಂಡಾರಿ ಬೆಟ್ಟುವಿನಲ್ಲಿ ಘಟನೆ ನಡೆದಿದೆ. ತನ್ನ ಪತ್ನಿಯ ಅಕ್ಕನ ಮಗಳ ಮೇಲೆ ನಿರಂತರ ಆರೋಪಿ ನಿರಂತರ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಅಜ್ಜಿಯ ಮನೆಯಲ್ಲಿ ವಿದ್ಯಾರ್ಥಿನಿ ವಾಸವಾಗಿದ್ದು, ಕಾಲೇಜಿಗೆ ಹೋಗಿ ಬರುತ್ತಿದ್ದಳು. ಆರೋಪಿ …

Read More »

ನಿರಾಶ್ರಿತರ ಕೇಂದ್ರದಲ್ಲಿ ಆರತಕ್ಷರತೆ – ಜನಮೆಚ್ಚುಗೆ

ಹೊಸಪೇಟೆ: ವಿವಾಹ ನಿಶ್ಚಯವಾಗಿರುವ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಮರಿಯಮ್ಮನಹಳ್ಳಿಯ ಚಿರಂಜೀವಿ(23) ಈ ರೀತಿ ಹೈಡ್ರಾಮಾ ಸೃಷ್ಠಿಸಿದ ಯುವಕ. ನಿಶ್ಚಯವಾಗಿದ್ದ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಪೋಷಕರಿಗೆ ಒತ್ತಾಯಿಸಿ ಮೊಬೈಲ್ ಟವರ್ ಏರಿದ್ದಾನೆ. ಅಣ್ಣನ ಮದುವೆಯಾದ ನಂತರ ನಿನಗೆ ಮದುವೆ ಮಾಡುವುದಾಗಿ ಪೋಷಕರು ಹೇಳಿದರೂ ಕೇಳದ ಆತ ಮೊಬೈಲ್ ಟವರ್ ಏರಿ ಕುಳಿತಿದ್ದು, …

Read More »

ಗೋಕಾಕ ಡೆವಲಪರ್ಸ್ ಕಡೆಯಿಂದ ಉಚಿತ ವೀಲ್ ಚೆರ್ ವಿತರಣೆ

ಗೋಕಾಕ: ಇಲ್ಲಿಯ ಉಪನೊಂದಣಿ ಕಚೇರಿಗೆ ಆಗಮಿಸುವ ಅಂಗವಿಕಲರಿಗೆ, ವಯಸ್ಸಾದ ವೃದ್ದರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗೋಕಾಕ ಡೆವಲಪರ್ಸ್ ಅವರು ವ್ಹೀಲ್‍ಚೇರ್‍ನ್ನು ಸೋಮವಾರದಂದು ಉಪನೊಂದಣಿ ಅಧಿಕಾರಿ ಶ್ರೀಮತಿ ಕಲಾವತಿ ಮಳವಾಡೆ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದಸ್ತ ಬರಹಗಾರರಾದ ಮಹೇಶ ಕುಲಕರ್ಣಿ, ವಿಶ್ವಾಸ ಸುಣಧೋಳಿ, ಮಹ್ಮದಅಲಿ ನೇಗಿನಹಾಳ, ರಾಜು ಅಥಣಿ, ಶಿವಾನಂದ ಶಿರಸಂಗಿ, ಪಂಚಾಕ್ಷರಿ ಹಿರೇಮಠ, ಅಪ್ಪು ವಾಲಿಕರ ಸೇರಿದಂತೆ ಅನೇಕರು ಇದ್ದರು.

Read More »

ಮೂಡಲಗಿಯಲ್ಲಿಂದು ಜರುಗಿದ ಟಾಸ್ಕ್‍ಪೋರ್ಸ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳ ಕಾರ್ಯ ಶ್ಲಾಘನೀಯವಾದದ್ದು. ದುಡಿದ ಎಲ್ಲ ವಾರಿಯರ್ಸ್‍ಗಳಿಗೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲಿಸಿದರು. ಸೋಮವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್-19 ಟಾಸ್ಕಪೋರ್ಸ ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರದಂತೆ ಇದರಲ್ಲಿ ಭಾಗಿಯಾಗಿರುವ ಎಲ್ಲ ವಾರಿಯರ್ಸ್‍ಗಳ ಕಾರ್ಯಕ್ಕೆ …

Read More »

ಸುಶಾಂತ್‌ ಸಿಂಗ್ ಸಾವನ್ನಪ್ಪಿ 1 ವರ್ಷ ಕಳೆದರೂ ಮುಗಿದಿಲ್ಲ CBI ತನಿಖೆ; ನಿಗೂಢವಾಗಿದೆ ಸಾವಿನ ರಹಸ್ಯ!

ಮುಂಬೈ (ಜೂನ್ 14): ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಜೂನ್ 14,2020 ರಂದು ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ವರ್ಷ ಬಿಹಾರ ಪೊಲೀಸರು ದಾಖಲಿಸಿದ್ದ ಕೊಲೆ ಪ್ರಕರಣವನ್ನು ವಹಿಸಿಕೊಂಡ ಸಿಬಿಐ ಇದುವರೆಗೆ ತನ್ನ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಹಾರ ಪೊಲೀಸರು ಪ್ರಕರಣವನ್ನು ವಹಿಸಿಕೊಂಡ ಕೂಡಲೇ ಸಿಬಿಐ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದರೂ, ಈ …

Read More »

5 ಗಂಟೆ ವಿಚಾರಣೆ ಎದುರಿಸಿದ ನರೇಶ್; ಇಂದು ಏನೆಲ್ಲಾ ನಡೀತು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಹಿರಂಗ ಪ್ರಕರಣದಲ್ಲಿ ಆರೋಪಿಯಾಗಿರುವ ನರೇಶ್​ ಗೌಡನ ವಿಚಾರಣೆ ಇಂದು ಕೂಡ ನಡೆಯಿತು. ಐದು ಗಂಟೆಗಳ ಕಾಲ ನಡೆದ ಇಂದಿನ ಎಸ್‌ಐಟಿ ವಿಚಾರಣೆ ಅಂತ್ಯವಾಗಿದೆ. ಅದರಂತೆ 2ನೇ ದಿನದ ವಿಚಾರಣೆ ಮುಗಿಸಿ ವಕೀಲರೊಂದಿಗೆ ನರೇಶ್ ಗೌಡ ತೆರಳಿದ್ದಾರೆ. ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್​​ನನ್ನ ವಿಚಾರಣೆಗೆ ಕರೆಯಲಾಗಿತ್ತು. ಅಗತ್ಯವಿದ್ದಲ್ಲಿ‌ ವಿಚಾರಣೆಗೆ ಕರೆಯುವುದಾಗಿ ಹೇಳಿ ಎಸ್‌ಐಟಿ ಅಧಿಕಾರಿಗಳ ತಂಡ ವಾಪಸ್ …

Read More »

ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ.

ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ. ಇದೊಂದು ಕೌತುಕ.. ವಿಸ್ಮಯ.. ಮೈಯ್ಯಲ್ಲಿ ಅಯಸ್ಕಾಂತೀಯ ಶಕ್ತಿಯಿದೆ. ಹೀಗಂತ ಒಂದು ವೀಡಿಯೋ ಉಡುಪಿಯಲ್ಲಿ ಶೇರ್ ಆಗುತ್ತಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆ ಪೂರ್ಣಪ್ರಜ್ಞ ಕಾಲೇಜು ಸಮೀಪದವರಾಗಿದ್ದಾರೆ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು …

Read More »