Breaking News

ರಾಜ್ಯ

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು ಗೊತ್ತಾ..?

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಗರಿಗೆದರಿರುವಂತ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಯ ಹಿನ್ನಲೆಯಲ್ಲಿ, ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಆಗಮಿಸಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಮದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊರೋನಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಕಾಂಗ್ರೆಸ್ ಸಹಿಸದೇ ಬರೀ ವಾಗ್ದಾಳಿ ನಡೆಸುತ್ತಿದೆ. ಜೆಡಿಎಸ್ ಮಾತ್ರ ಐಸೋಲೇಷನ್ ನಲ್ಲಿ ಇದೆ. …

Read More »

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಬೆಂಗಳೂರು: “ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ” ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಆ’ಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ ‘ಶಾಪ’ ತಟ್ಟಿದಂತೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಗೈಯಲಾಗಿದೆ. ಅರುಣ್ ಸಿಂಗ್ ಅವರೇ, …

Read More »

ವಯಸ್ಸಲ್ಲದ ವಯಸ್ಸಲ್ಲಿ ಮಗಳ ಮದುವೆ ಮಾಡಲು ಮುಂದಾದ ಪೋಷಕರಿಗೆ ಬಿಗ್ ಶಾಕ್

ಬಾಗಲಕೋಟೆ: ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಜೂನ್ 18 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಂದ್ರಾಳ ಗ್ರಾಮದಲ್ಲಿ 9ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮದುವೆ ನಿಗದಿಯಾಗಿತ್ತು. ಮಕ್ಕಳ ಸಹಾಯವಾಣಿಗೆ ಬಂದ ಕರೆಯ ಮಾಹಿತಿ ಆಧರಿಸಿ ಅಧಿಕಾರಿಗಳು, ಪೊಲೀಸರು ಗ್ರಾಮಕ್ಕೆ ತೆರಳಿದ್ದು, ನಿಗದಿಯಾಗಿದ್ದ ಮದುವೆಯನ್ನು ತಡೆದಿದ್ದಾರೆ. ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಬಾಲ್ಯವಿವಾಹ ಮಾಡದಂತೆ ಪೋಷಕರಿಗೆ ತಾಕೀತು …

Read More »

ಬ್ರಾಹ್ಮಣರ ವಿರುದ್ಧ ಅವಹೇಳನ ಆರೋಪ: ವಿಚಾರಣೆಗೆ ಹಾಜರಾದ ನಟ ಚೇತನ್

ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಕೇಸ್​ ದಾಖಲಾಗಿರೋ ಹಿನ್ನೆಲೆ, ಇಂದು ನಟ ಚೇತನ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ರು ಚೇತನ್​ಗೆ ನೋಟೀಸ್ ನೀಡಿದ್ದರು. ಹೀಗಾಗಿ ತಮ್ಮ ಸ್ನೇಹಿತರು ಹಾಗೂ ವಕೀಲರ ಜೊತೆ ಚೇತನ್ ಇಂದು ಬಸವನಗುಡಿ ಇನ್ಸ್​ಪೆಕ್ಟರ್ ಆರ್. ರಮೇಶ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ವಿಪ್ರ ಯುವ ವೇದಿಕೆಯ ಪವನ್ …

Read More »

ASI ಮನೆ ಮೇಲಿನ ಎಸಿಬಿ ದಾಳಿ: ₹6 ಕೋಟಿ ಬಂಗಲೆಯಲ್ಲಿ ಎಲ್ಲವೂ ಖಾಲಿ ಖಾಲಿ

ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್‌ಐ ದಯಾನಂದಸ್ವಾಮಿ ಮನೆ ಮೇಲೆ ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೇವಲ ಐವತ್ತು ಸಾವಿರ ನಗದು ಪತ್ತೆಯಾಗಿದ್ದು, ಅಧಿಕಾರಿಗಳೇ ಶಾಕ್ ಆಗಿದ್ರು. ಆರು ಕೋಟಿ ಮೌಲ್ಯದ ಬಂಗಲೆಯಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದ್ದು, ದಯಾನಂದಸ್ವಾಮಿ ದಾಳಿಗೂ ಮುನ್ನವೇ ದಾಖಲೆಗಳನ್ನ ಎಸ್ಕೇಪ್ ಮಾಡಿಸಿರುವ ಅನುಮಾನ ಮೂಡಿದೆ. ಮನೆಯ ದಾಖಲೆಗಳು, ಹಾಗೂ ಕೆಲವು ವಾಹನಗಳ ದಾಖಲೆಗಳು ಮಾತ್ರ ನಿನ್ನೆ ಪತ್ತೆಯಾಗಿದೆ. …

Read More »

ಕೊನೆಗೂ ಜಾರಿಯಾಯ್ತು ರೋಹಿಣಿ ಸಿಂಧೂರಿ ಆದೇಶ.. ಭೂಗಳ್ಳರಲ್ಲಿ ನಡುಕ

ಮೈಸೂರು: ಭೂ ಕಬಳಿಕೆ ಪ್ರಕರಣ ಸಂಬಂಧ ಕೊನೆಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶ ಜಾರಿಯಾಗಿದೆ. ನಿರ್ಗಮಿತ ಡಿಸಿ ರೋಹಿಣಿ ಆದೇಶದಿಂದ ನಗರಾಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತಿದ್ದು, ಮೂಡಾದಿಂದ ಇಂದು ಕೇರ್ಗಳ್ಳಿಯಲ್ಲಿ ಅನಧಿಕೃತ ಒತ್ತುವರಿ ತೆರವು ಮಾಡಲಾಗ್ತಿದೆ. ಕೇರ್ಗಳ್ಳಿ ಸರ್ವೆ ನಂಬರ್​ 115ರಲ್ಲಿ ಒತ್ತುವರಿ ಆಗಿದೆ ಎನ್ನಲಾಗಿದ್ದು, ಆರ್​ಟಿಸಿಯಲ್ಲಿ 61 ಎಕರೆ ಹೆಚ್ಚುವರಿಯಾಗಿ ಭೂಮಿ ದಾಖಲಾಗಿದೆ. ಆರ್.ಟಿ.ನಗರ ಬಡಾವಣೆ ಉದ್ದೇಶಕ್ಕಾಗಿ ಮೂಡಾ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಖಾಸಗಿಯವರು ಅನಧಿಕೃತವಾಗಿ ಅನುಭವದಲ್ಲಿರುವುದು ಪತ್ತೆಯಾಗಿದೆ. …

Read More »

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ನಡುವೆ ಮತ್ತೊಂದು ಅಪಾಯಕಾರಿ ಗ್ರೀನ್ ಫಂಗಸ್ ಪ್ರಕರಣ ಪತ್ತೆ

ನವದೆಹಲಿ: ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಗಳು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಗ್ರೀನ್ ಫಂಗಸ್ ಎಂಬ ಮತ್ತೊಂದು ಅಪಾಯಕಾರಿ ಫಂಗಸ್ ಭಾರತದಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ಗುಣಮುಖನಾಗಿದ್ದ ಮಧ್ಯಪ್ರದೇಶದ ಒಂದೋರ್ ನಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ಇದು ದೇಶದಲ್ಲೇ ಮೊದಲ ಗ್ರೀನ್ ಫಂಗಸ್ ಪ್ರಕರಣವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಅರಬಿಂದೋ ಇನ್ಸ್ ಟಿಟ್ಯೂಟ್ ಆಫ್ …

Read More »

ಕನ್ನಡ ಸಿನಿ ಕಾರ್ಮಿಕರ ನೆರವಿಗೆ ನಿಂತ ಸಾಯಿ ಕುಮಾರ್ ಸಹೋದರರು

ಕೊರೊನಾ ಎರಡನೇ ಅಲೆ ಭೀಕರ ಪರಿಸ್ಥಿತಿ ಎದುರಿಸಲು ಸಾಕಷ್ಟು ಮಂದಿ ನೆರವಿಗೆ ನಿಂತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಮಂದಿಗೆ ಸಿನಿ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ಲಾಕ್ ಡೌನ್‌ನಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದೆ. ಸಿನಿ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕೆಲಸವಿಲ್ಲದೆ ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಅನೇಕ ಸ್ಟಾರ್ ಕಲಾವಿದರು ನೆರವು ನೀಡಿದ್ದಾರೆ. ಸುದೀಪ್, ಉಪೇಂದ್ರ, …

Read More »

ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಸಿಎಂ ನಿವಾಸ ಕಾವೇರಿಗೆ ಶಾಸಕರು ದೌಡಾಯಿಸುತ್ತಿದ್ದು, ಕಾವೇರಿ ನಿವಾಸದಲ್ಲಿ ಚರ್ಚೆ ಕಾವೇರಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಶಾಸಕ ಅರವಿಂದ್ ಬೆಲ್ಲದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಅರವಿಂದ್ ಬೆಲ್ಲದ್ ಕರೆಸಿಕೊಂಡು, ದೆಹಲಿಯ …

Read More »

ಲಕ್ಷಾಂತರ ರೂ.ಮೌಲ್ಯದ ನಕಲಿ ರಸಗೊಬ್ಬರ ಸಾಗಾಣಿಕೆ: ಪೊಲೀಸರು-ಅಧಿಕಾರಿಗಳ ದಾಳಿ

ಗಂಗಾವತಿ: ನಕಲಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು ,ಗಂಗಾವತಿಯಲ್ಲಿ ಕೃಷಿ ಜಾಗೃತದಳ ಹಾಗೂ ಪೊಲೀಸರು ದಾಳಿ ನಡೆಸಿ ಸುಮಾರು 300 ಚೀಲ (15 ಟನ್) ಜೈಕಿಸಾನ್ ರಸಗೊಬ್ಬರದ ಚೀಲಗಳಲ್ಲಿ ತುಂಬಿದ್ದ ಡಿಎಪಿ ರಸಗೊಬ್ಬರ ವಶಕ್ಕೆ ಪಡೆದು ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೃಷಿ ಜಾಗೃತ ದಳದ ಅಧಿಕಾರಿಗಳಾದ ಎಡಿಎ ಸಂತೋಷ ಪಟ್ಟದಕಲ್ಲು, ತಾಂತ್ರಿಕ ಅಧಿಕಾರಿ ಲಿಂಗಪ್ಪ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ …

Read More »