ಬೆಂಗಳೂರು, ಜೂ.18: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದರೆ ಯಾರಿಗೂ …
Read More »ಅರುಣ್ ಸಿಂಗ್ ಬಂದುಹೋದ ಬಳಿಕ ಜಾಲಿ ಮೂಡ್ ನಲ್ಲಿದ್ದಾರೆ ಸಿಎಂ ಯಡಿಯೂರಪ್ಪ
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿದ ಕಾರಣ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಮೂರು ದಿನ ಚರ್ಚೆ ಮಾಡಿ ಹೋಗಿದ್ದಾರೆ. ಕೆಲವು ಶಾಸಕರ ಜೊತೆ ವೈಯಕ್ತಿಕವಾಗಿ ಮಾತನಾಡಿರುವ ಅರುಣ್ ಸಿಂಗ್ ಸದ್ಯ ದೆಹಲಿಗೆ ತೆರಳಿದ್ದಾರೆ. ಆದರೆ ಇದಾದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾಲಿ ಮೂಡ್ ನಲ್ಲಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ ತೆರಳುವಾಗ ಸಚಿವ ಅಶೋಕ್ ಗೆ “ಎಲ್ಲಿಗೆ ಹೋಗ್ತಾ ಇದ್ದೀಯಾ ಎಂದರು. ಇದಕ್ಕೆ ‘ಸರ್, …
Read More »ಕೋವಿಡ್ 3ನೇ ಅಲೆ ಅಪಾಯ: ಲಾಕ್ ಡೌನ್ ಸಡಿಲಿಕೆ ಮುನ್ನ ಎಚ್ಚರವಹಿಸಿ: ರಾಜ್ಯಗಳಿಗೆ ಕೇಂದ್ರ
ನವದೆಹಲಿ: ಕೋವಿಡ್ 19 ಸೋಂಕು ಹಾಗೂ ಸಕ್ರಿಯ ಪ್ರಕರಣಗಳ ಇಳಿಕೆಯ ಆಧಾರದ ಮೇಲೆ ಕೋವಿಡ್ ಲಾಕ್ ಡೌನ್ ನಿರ್ಬಂಧಗಳನ್ನು ಐದು ಹಂತಗಳಲ್ಲಿ ಸಡಿಲಿಕೆ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ(ಜೂನ್ 19) ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ಕೋವಿಡ್ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡುವ ಜತೆಗೆ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕೆ …
Read More »ರಾಹುಲ್ ಗಾಂಧಿ ಜನ್ಮದಿನಕ್ಕೆ ಒಂದೇ ವಾಕ್ಯದಲ್ಲಿ ರಮ್ಯಾ ವಿಶ್; ಆ ಮಾತು ನೀವು ಒಪ್ಪುತ್ತೀರಾ?
ನಟಿ ರಮ್ಯಾ ಈಗ ಸ್ಯಾಂಡಲ್ವುಡ್ನಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ. ಹಾಗಿದ್ದರೂ ಕೂಡ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸದಾ ಕಾಲ ಆಯಕ್ಟೀವ್ ಆಗಿರುತ್ತಾರೆ. ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಆತ್ಮೀಯರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಇಂದು (ಜೂ.19) ರಾಹುಲ್ ಗಾಂಧಿ ಜನ್ಮದಿನಕ್ಕೆ ರಮ್ಯಾ ಶುಭ ಕೋರಿದ್ದಾರೆ. ಅದು ಅನೇಕರ ಗಮನ ಸೆಳೆಯುತ್ತಿದೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ರಾಹುಲ್ ಗಾಂಧಿಗೆ ರಮ್ಯಾ ವಿಶ್ ಮಾಡಿದ್ದಾರೆ. …
Read More »ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್ ನಿಧನಕ್ಕೆ ಫರ್ಹಾನ್ ಅಖ್ತರ್ ಸಂತಾಪ
ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ಶುಕ್ರವಾರ (ಜೂ.18) ಮಧ್ಯರಾತ್ರಿ ನಿಧನರಾದರು. ಅವರ ಅಗಲಿಕೆಗೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಿಲ್ಖಾ ಸಿಂಗ್ ಜೀವನವನ್ನು ಆಧರಿಸಿ ‘ಭಾಗ್ ಮಿಲ್ಖಾ ಭಾಗ್’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್ ಪಾತ್ರವನ್ನು ಫರ್ಹಾನ್ ಅಖ್ತರ್ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ …
Read More »ಬೆಳಗಾವಿಯ ಜಲಾಶಯ ನೀರಿನ ಮಟ್ಟ….
ಹಿಡಕಲ್ ಜಲಾಶಯ ನೀರಿನ ಮಟ್ಟ ಘಟಪ್ರಭಾ ನದಿ ಹಿಡಕಲ್ ಜಲಾಶಯ ಗರಿಷ್ಠ ಮಟ್ಟ- 2175.00 ಅಡಿ ಇಂದಿನ ಮಟ್ಟ- 2110.80 ಅಡಿ ಒಳ ಹರಿವು- 39,515 ಕ್ಯೂಸೆಕ್ ಹೊರ ಹರಿವು- 94 ಕ್ಯೂಸೆಕ್ ನೀರು ಸಂಗ್ರಹ- 13.474 ಡ್ಯಾಂ ಸಾಮರ್ಥ್ಯ- 51.00 tmc ನವಿಲುತಿರ್ಥ ಜಲಾಶಯ ನೀರಿನ ಮಟ್ಟ ಮಲಪ್ರಭಾ ನದಿ ನವೀಲು ತೀರ್ಥ ಜಲಾಶಯ ಗರಿಷ್ಠ ಮಟ್ಟ- 2079.50 ಅಡಿ ಇಂದಿನ ಮಟ್ಟ- 2054.10 ಒಳ ಹರಿವು- 17208 …
Read More »ಸಂಕಷ್ಟ ಕಾಲದಲ್ಲಿ ಮೇದಾರ ಸಮಾಜದ ಬಡವರ ಸಹಾಯಕ್ಕೆ ನಿಂತ ನಾಗೇಶ ಕಡೋಲಿ ಮತ್ತು ಅರ್ಜುನ ಕಡೋಲಿ ಸಹೋದರರು
ಬೆಳಗಾವಿ :ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ,ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ಎಂಬ ಮಾತಿನಂತೆ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಮೇದಾರ ಗಲ್ಲಿ ನಿವಾಸಿ ನಾಗೇಶ ಕಡೋಲಿ ಹಾಗೂ ಅರ್ಜುನ ಕಡೋಲಿ ಸಹೋದರರು ನಡೆದುಕೊಳ್ಳುತ್ತಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ತಮ್ಮ ಸಮಾಜದ ಬಗ್ಗೆ ಅಪಾರ ಕಳಕಳಿ ಇಟ್ಟುಕೊಂಡು ಕೈಲಾದಷ್ಟು ಸೇವೆ ಸಲ್ಲಿಸುತ್ತ ಬಂದಿರುವ ಈ ಸಹೋದರರು ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮೇದಾರ ಸಮಾಜದ ಬಡ ಕುಟುಂಬಗಳಿಗೆ …
Read More »2ನೇ ಹಂತದ ಲಾಕ್‍ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಿಎಂ ಸಭೆ
ಬೆಂಗಳೂರು: ಕಟ್ಟುನಿಟ್ಟಿನ ಕ್ರಮಗಳ ಜಾರಿಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಮತ್ತು ಡೆತ್ ರೇಟ್ ಎರಡೂ ಕೂಡ ಇಳಿಕೆ ಕಂಡಿದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಲಾಕ್‍ಡೌನ್ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಸೋಮವಾರದಿಂದ ಜನರಿಗೆ ಮತ್ತಷ್ಟು ರಿಲೀಫ್ ನೀಡೋಕೆ ಮುಂದಾಗಿದೆ. ಅನ್ಲಾಕ್- 2 ರ ವಿಚಾರವಾಗಿ ಇಂದು ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ಸೇವೆಗಳಿಗೆಲ್ಲ ವಿನಾಯತಿ ನೀಡಬಹುದೆಂಬ ಬಗ್ಗೆ …
Read More »ರಾಜಕಾರಣಿಗಳಿಂದ ಕೊರೊನಾ ರೂಲ್ಸ್ ಬ್ರೇಕ್; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜಕಾರಣಿಗಳಿಂದ ಕೋವಿಡ್ ರೂಲ್ಸ್ ಬ್ರೇಕ್ ಮಾಡುವ ವಿಚಾರ ಸಂಬಂಧ ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ನಡೆಸಿತು. ರೂಲ್ಸ್ ಬ್ರೇಕ್ ಮಾಡಿ ಬೆಳಗಾವಿಯಲ್ಲಿ ಬಿಜೆಪಿ ನಡೆಸಿದ್ದ ಸಮಾವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತರ ಪ್ರಮಾಣಪತ್ರಕ್ಕೆ ಹೈಕೋರ್ಟ್ ಗರಂ ಆಯ್ತು. ಆಯುಕ್ತರ ಪ್ರಮಾಣಪತ್ರಗಳು ಹಾಸ್ಯಸ್ಪದವಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನೆ …
Read More »ಗೋವಾ : ವ್ಯಾಕ್ಸಿನ್ ಪಡೆಯದೇ ಇದ್ರೆ ಪ್ರವಾಸಿಗರಿಗೆ ನೋ ಎಂಟ್ರಿ..!
ಗೋವಾ : ಪ್ರವಾಸಿಗರ ಹಾಟ್ ಫೇವರೇಟ್ ತಾಣವಾಗಿರುವ ಗೋವಾಗೆ ಪ್ರವಾಸಿಗರು ವಿಸಿಟ್ ಮಾಡ್ಬೇಕಂದ್ರೆ ಇನ್ಮುಂದೆ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು.. ಅಲ್ಲದೇ ರಾಜ್ಯದಲ್ಲಿರುವ ಎಲ್ಲರಿಗೂ ಕೊರೊನಾ ಲಸಿಕೆಯನ್ನು ನೀಡದೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಜುಲೈ 30ರೊಳಗೆ ಶೇ.100ರಷ್ಟು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ರಾಜ್ಯವ್ಯಾಪಿ ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ. ಮೊದಲ ಡೋಸ್ ವ್ಯಾಕ್ಸಿನೇಷನ್‍ನನ್ನು ರಾಜ್ಯದಲ್ಲಿ ಪೂರ್ಣಗೊಳಿಸುವವರೆಗೆ ಪ್ರವಾಸೋದ್ಯಮವನ್ನು …
Read More »
Laxmi News 24×7