Breaking News

ರಾಜ್ಯ

‘ಪೊಲೀಸ್ ಪೇದೆಯ ಎಸ್​ಪಿ ಮಾಡ್ತೀನಿ ಹುಷಾರ್’ -SP ವೇದಮೂರ್ತಿಗೆ ಆರ್​.ಶಂಕರ್ ಎಚ್ಚರಿಕೆ

ಯಾದಗಿರಿ: ಜಿಲ್ಲಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್, ಎಸ್​ಪಿ ವೇದಮೂರ್ತಿಗೆ ಕ್ಲಾಸ್​​ ತೆಗೆದುಕೊಂಡ ಪ್ರಸಂಗ ನಡೆಯಿತು. ಜಿಲ್ಲೆಯ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಆರ್ ಶಂಕರ್, ಜನರ ಬಳಿ ತೆರಳಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸಚಿವರಿಂದ ದೂರ ನಿಲ್ಲುತ್ತಿದ್ದ ಎಸ್ಪಿ ವೇದಮೂರ್ತಿಯನ್ನು ಕರೆದು ಪಕ್ಕದಲ್ಲಿ ನಿಂತು ಜನರ ಸಮಸ್ಯೆ ಆಲಿಸುವಂತೆ ಹೇಳಿದ್ದಾರೆ.   ಹೀಗಿದ್ದರೂ ಮತ್ತೆ ಸಚಿವರಿಂದ ಅಂತರ ಕಾಯ್ದುಕೊಂಡು ದೂರದಲ್ಲಿ ವೇದಮೂರ್ತಿ …

Read More »

ಗ್ರಾಮದೇವರಿಗೆ ಕೈಮುಗಿದ.. ಬಳಿಕ ಗಣೇಶ ವಿಗ್ರಹವನ್ನೇ ಕದ್ದ

ಧಾರವಾಡ: ದೇವರಿಗೆ ಕೈ ಮುಗಿಯಲು ಬಂದ ವ್ಯಕ್ತಿ ದೇವರ ಮೂರ್ತಿಯನ್ನೆ ದರೋಡೆ ಮಾಡಿ ಪರಾರಿಯಾದ ವಿಕ್ಷಿಪ್ತ ಘಟನೆಯೊಂದು ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗ್ರಾಮದೇವಿಯ ದೇವಸ್ಥಾನದಲ್ಲಿ ಗ್ರಾಮಸ್ಥರು ಬೆಳ್ಳಿ ಲೇಪಿತ ಗಣೇಶನ ಪ್ರದರ್ಶಿತ ಮೂರ್ತಿಯನ್ನ ಪ್ರತಿಷ್ಟಾಪಿಸಿದ್ದರು. ಈ ವಿಗ್ರಹದ ಮೇಲೆ ಕಳ್ಳನೊಬ್ಬನ ಕಣ್ಣು ಬಿದ್ದಿದ್ದು ಆ ವಿಗ್ರಹ ಶುದ್ಧ ಬೆಳ್ಳಿಯ ಮೂರ್ತಿಯೆಂದು ನಂಬಿ ದರೋಡೆ ಮಾಡಲು ಸಂಚು ರೂಪಿಸಿದ್ದಾನೆ. ತಡರಾತ್ರಿ ಭಕ್ತರ ಸೋಗಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಕಳ್ಳ …

Read More »

ಈ ವರ್ಷವೂ ಪಠ್ಯಕ್ರಮ ಕಡಿತ : ಕಲಿಕಾ ಅಂತರ ಇನ್ನಷ್ಟು ಹೆಚ್ಚು ಸಾಧ್ಯತೆ

ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. 2020-21ನೇ ಸಾಲಿನಲ್ಲಿ ಕೊರೊನಾದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್‌, ಆಫ್ಲೈನ್‌ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಮತ್ತು ಸದ್ಯ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಶೇ.70ರಷ್ಟು ಪಠ್ಯದಂತೆಯೇ …

Read More »

ನಟ ವಿಜಯ್ ಗೆ 1 ಲಕ್ಷ ರೂ. ದಂಡ!

ಐಷಾರಾಮಿ ರೋಲ್ಸ್ ರಾಯ್ಸ್ ಗೋಸ್ಟ್ ಕಾರಿಗೆ 6.95ರಿಂದ 7.95 ಕೋಟಿ ರೂ.ಗೆ ವಿಧಿಸಿರುವ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು ಕೋರಿದ್ದ ತಮಿಳು ನಟ ವಿಜಯ್ ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಮ್ ನೇತೃತ್ವದ ಪೀಠ, 2012ರಲ್ಲಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದೂ ಅಲ್ಲದೇ 1 ಲಕ್ಷ ರೂ. ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸೂಚಿಸಿದೆ. ಇತ್ತೀಚೆಗಷ್ಟೇ …

Read More »

ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ

ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ. ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ …

Read More »

ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ : ಈ ತಿಂಗಳ ಅಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.   ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸ್ಥಿರತೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದ್ದು, ಈ ತಿಂಗಳ ಅಂತ್ಯಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.   ಪ್ರತಿ ಬ್ಯಾರೆಲ್ …

Read More »

ಭಾರತದ ಮೊದಲ ಕೋವಿಡ್‌ ರೋಗಿಯಲ್ಲಿ ಮತ್ತೊಮ್ಮೆ ಸೋಂಕು ದೃಢ

 (ಕೇರಳ): ‘ಭಾರತದ ಮೊದಲ ಕೋವಿಡ್‌ ರೋಗಿ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೊಮ್ಮೆ ಸೋಂಕು ತಗುಲಿದೆ’ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು. ‘ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆಯಂಟಿಜನ್‌ ಪರೀಕ್ಷೆಯ ಫಲಿತಾಂಶವು ನೆಗೆಟಿವ್‌ ಬಂದಿತ್ತು’ ಎಂದು ತ್ರಿಶೂರ್‌ನ ಡಿಎಂಆರ್‌ ಡಾ.ಕೆ.ಜೆ ರೀನಾ ಅವರು ಮಾಹಿತಿ ನೀಡಿದರು. ‘ವಿದ್ಯಾಭ್ಯಾಸಕ್ಕೆಂದು ನವದೆಹಲಿಗೆ ತೆರಳಲು ಅವರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅವರು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳ‍ಪಟ್ಟಿದ್ದಾರೆ. ಈ ವೇಳೆ ಅವರಿಗೆ ಸೋಂಕು …

Read More »

ವಿಷಪೂರಿತ ಆಹಾರ ಸೇವಿಸಿ ಮೂವರ ದುರ್ಮರಣ; ಇಬ್ಬರು ಗಂಭೀರ

ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಮತ್ತಿಬ್ಬರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ.     ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ (75) ಸಾವನ್ನಪ್ಪಿದವರು. ನಿನ್ನೆ ರಾತ್ರಿ ಮುದ್ದೆ ಸಾರು ಸೇವನೆ ಬಳಿಕ ಕುಟುಂಬಸ್ಥರು ಅಸ್ವಸ್ಥರಾಗಿದ್ದು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಘಟನೆ ಕುರಿತು …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ

ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …

Read More »

ನಮ್ಮ ನೀರು ನಾವು ಬಳಸಿಕೊಳ್ಳಲು ತಮಿಳುನಾಡು ಹಸ್ತಕ್ಷೇಪ ಸರಿಯಲ್ಲ: ಎಂ.ಬಿ.ಪಾಟೀಲ

ವಿಜಯಪುರ: ಮೇಕೆದಾಟು ಯೋಜನೆಯಡಿ ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ ಸಹಾಯವಾಗಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು ಅಭಿಪ್ರಾಯ ಪಡೆದು ನಂತರ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು …

Read More »