Breaking News

ರಾಜ್ಯ

ಆತ್ಮಹತ್ಯೆಗೆ ಅವಕಾಶ ಕೊಡಿ ಎಂದ ಅನ್ವರ್ ಕಟುಂಬಸ್ಥರು; ಗೃಹ ಸಚಿವರಿಗೆ ಮನವಿ

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಕೊಲೆ ರಾಜಾರೋಷವಾಗಿ ನಗರದ ಹೃದಯಭಾಗದಲ್ಲೂ ನಡೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಇಲ್ಲಿವರೆಗೂ ಯಶಸ್ಸು ಕಂಡಿಲ್ಲ. ಚಿಕ್ಕಮಗಳೂರು: ಕಾಫಿನಾಡನ್ನು ಬೆಚ್ಚಿಬೀಳಿಸಿದ ಬಿಜೆಪಿ ಮುಖಂಡ ಅನ್ವರ್ ಕೊಲೆಯಾಗಿ ಬರೋಬ್ಬರಿ 3 ವರ್ಷ 2 ತಿಂಗಳಾಯ್ತು. ಪ್ರಕರಣ ಭೇದಿಸುವ ಪೊಲೀಸರು ದಿನ-ವಾರ-ತಿಂಗಳು-ವರ್ಷ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ಅನ್ವರ್ ಕುಟುಂಬಸ್ಥರು ಪೊಲೀಸ್ ಇಲಾಖೆ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇದೇ ಆಗಸ್ಟ್ 15ರಂದು ಜಿಲ್ಲೆಗೆ ಬಂದಿದ್ದ ಗೃಹ …

Read More »

ಮಧ್ಯ ರೈಲ್ವೇಯಿಂದ ಡಿಜಿ ಲಾಕರ್‌ ಸೌಲಭ್ಯ

ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್‌ ಸೌಲಭ್ಯವನ್ನು ಆರಂಭಿಸಿದೆ. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್‌ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್‌ ಮತ್ತು ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಹೆಸರು, ಮೊಬೈಲ್‌ ಸಂಖ್ಯೆ, ಪಿಎನ್‌ಆರ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿ ತುಂಬಿದ …

Read More »

ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಆರಂಭ : ಪ್ರಮೋದ್ ಸಾವಂತ್

ಪಣಜಿ : ರಾಜ್ಯದಲ್ಲಿ ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಗೋವಾ ಸರ್ಕಾರಿ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.   ಇಂದು(ಶುಕ್ರವಾರ, ಆಗಸ್ಟ್ 20) ದಕ್ಷಿಣ ಗೋವಾದ ಧಾರಬಾಂದೋರಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಾವಂತ್, ಹೊಸದಾಗಿ ರಚನೆಯಾದ ಗೋವಾ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಈಗಾಗಲೇ ಹರಾಜು ಮಾಡಿದ ಕಬ್ಬಿಣದ ಅದಿರು ಸಾಗಾಟದಂತಹ ಚಟುವಟಿಕೆಯನ್ನು ಆರಂಭಿಸಲಾಗುವುದು ಎಂದು ಮಾಹಿತಿ …

Read More »

ಗೋವಾ : ಶೇ. 70 ರಷ್ಟು ಮೀನುಗಾರಿಕಾ ಬೋಟ್‍ ಗಳು ದಡದಲ್ಲಿಯೇ ಸ್ತಬ್ಧ.!

ಪಣಜಿ : ಗೋವಾದಲ್ಲಿ ಮೀನುಗಾರಿಕೆ ಪುನರಾರಂಭಗೊಂಡು 20 ದಿನಗಳು ಕಳೆದರೂ ಕೂಡ ಕಾರ್ಮಿಕರ ಕೊರತೆಯಿಂದಾಗಿ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆಯೇ ಶೇ 70 ರಷ್ಟು ಮೀನುಗಾರಿಕಾ ಬೋಟ್‍ಗಳು ದಡದಲ್ಲಿಯೇ ನಿಂತಿರುವಂತಾಗಿದೆ. ರಾಜ್ಯದ ವಿವಿಧ ಜೆಟಿಗಳಲ್ಲಿ ಶೇ 70 ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‍ಗಳು ನಿಂತಿರುವ ದೃಶ್ಯ ಕಂಡುಬರುತ್ತಿದೆ. ಮಳೆಗಾಲದಲ್ಲಿ 61 ದಿನಗಳ ಮೀನುಗಾರಿಕಾ ನಿರ್ಬಂಧದ ನಂತರ ಅಗಷ್ಟ 1 ರಿಂದ ಮೀನುಗಾರಿಕೆ ಪುನರಾರಂಭಗೊಂಡಿದೆಯಾದರೂ ಹವಾಮಾನ ವೈಪರಿತ್ಯದಿಂದ …

Read More »

ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ, ಇಬ್ಬರ ಸಾವು

ವಿದ್ಯುತ್ ಸ್ಪರ್ಶದಿಂದ ನೆಲಕ್ಕೆ ಬಿದ್ದವರನ್ನ ಲಿಂಗಸಗೂರು ತಾಲುಕು ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರು: ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೊಹರಂ ದೇವರನ್ನ ಹೊತ್ತಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತಿದ್ದ ಹುಸೇನ್‌ ಸಾಬ್ (50) ಮತ್ತು ಒಬ್ಬ ಮಹಿಳೆ ಅಸುನೀಗಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆ ಕೆಲ್ಲೂರು …

Read More »

4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್​​ ಅಗ್ನಿ ಶ್ರೀಧರ್​​, ಬಚ್ಚನ್​​ಗೆ ವಾರ್ನಿಂಗ್​​ ಕೊಟ್ಟ ಪೊಲೀಸರು​?

ಬೆಂಗಳೂರು: ​ನಾಲ್ಕು ವರ್ಷಗಳ ಬಳಿಕ ಪತ್ರಕರ್ತ ಮತ್ತು ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್​​ ಅವರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್​​ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಡಿಸಿಪಿ ಹರೀಶ್​​ ಪಾಂಡೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಕರೆಸಿ ವಾರ್ನ್​​ ಮಾಡಿದ್ದಾರೆ. ಅಲ್ಲದೇ CRPC 110 ಅಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಅಗ್ನಿ ಶ್ರೀಧರ್​​​, ಬಚ್ಚನ್​​ ಸೇರಿದಂತೆ 100ಕ್ಕೂ ಹೆಚ್ಚು ರೌಡಿ ಶೀಟರ್​​​ಗಳಿಗೆ ವಾರ್ನಿಂಗ್​​ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. …

Read More »

ವರಮಹಾಲಕ್ಷ್ಮೀ ಹಬ್ಬಕ್ಕಿಲ್ಲ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ವರಮಹಾಲಕ್ಷ್ಮಿ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಭಕ್ತರಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಅವಕಾಶ ನೀಡದೆ ದೇವಾಲಯ ಬಂದ್ ಮಾಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯದ ಅರ್ಚಕರಿಂದ …

Read More »

NASA ಪ್ರಶಸ್ತಿಗೆ ಭಾಜನರಾದ ಕನ್ನಡಿಗ -ಬರೋಬ್ಬರಿ ₹1.41 ಕೋಟಿ ವಿದ್ಯಾರ್ಥಿ ವೇತನ

ಶಿರಸಿ: ಹಂಟ್ಸ್‌ವಿಲ್​​​ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು​ ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ NASA ಫ್ಯೂಚರ್​ ಇನ್​ವೆಸ್ಟಿಗೇಟರ್​ ಪ್ರಶಸ್ತಿಗೆ ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 1,35,000 ಅಮೆರಿಕನ್​ ಡಾಲರ್ ಅನ್ನು ​ಸ್ಟೈಫಂಡ್, ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು …

Read More »

ಹಬ್ಬದ ಖರೀದಿಯಲ್ಲಿ ಕೊರೋನಾ ಬಗ್ಗೆ ಮೈಮರೆತ ಜನ : ಕೆಆರ್ ಮಾರುಕಟ್ಟೆಯಲ್ಲಿ ಜನವೋ ಜನ

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬಗಳನ್ನು ಆಚರಿಸೋದಕ್ಕೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅಲ್ಲದೇ ಬಿಬಿಎಂಪಿ ಕೂಡ ಮಾರುಕಟ್ಟೆಯಲ್ಲಿ ಹಬ್ಬಗಳ ಖರೀದಿ ಸಂದರ್ಭದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಖರೀದಿಸಬೇಕು ಎನ್ನುವ ಬಗ್ಗೆಯೂ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಹೀಗಿದ್ದೂ.. ಇಂದು ಹಬ್ಬದ ದಿನದಂದು ಮಾತ್ರ, ಕೊರೋನಾಗೆ ಡೋಂಟ್ ಕೇರ್ ಎಂದಂತ ಜನರು, ಕೆ ಆರ್ ಮಾರುಕಟ್ಟೆ ಸೇರಿದಂತೆ ನಗರ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದಾರೆ.   ಹೌದು.. ಹಬ್ಬದ …

Read More »

ಹೊಟ್ಟೆ ಪಾಡಿಗಾಗಿ ಊರೂರು ಸುತ್ತುವ ಅಲೆಮಾರಿಗಳಿಗೆ ಸಿಕ್ಕಿಲ್ಲ ಕೊವಿಡ್ ಲಸಿಕೆ

ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸುತ್ತಿದೆ. ರಾಜ್ಯಗಳಿಗೆ ಬೇಕಾಗುವ ಅಗತ್ಯ ಲಸಿಕೆ ಪೂರೈಕೆ ಮಾಡಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿದೆ. ಆದ್ರೆ ಕೊವಿಡ್ …

Read More »