ದಾವಣಗೆರೆ: ಸೆ.18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಕರ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಸೆಪ್ಟಂಬರ್ 18ರ ಸಂಜೆ ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ಕಾರ್ಯಕಾರಿಣಿ ಸಬೆ ನಡೆಯಲಿದೆ. ಅಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಂದು ಬೆಳಿಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, …
Read More »ಬೆಳಗಾವಿಯ 46 ಅನಧಿಕೃತ ಧಾರ್ಮಿಕ ಕಟ್ಟಡಗಳ ಗುರುತು, ಶೀಘ್ರವೇ ತೆರವು ಎಂದ ಬೆಳಗಾವಿ ಡಿಸಿ….!
ಬೆಳಗಾವಿ: ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಶೀಘ್ರವೇ ಈ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ. ಈ ಎಲ್ಲ 46 ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಈಗಾಗಲೇ ಒಟ್ಟು 17 ಅನಧಿಕೃತ ಧಾರ್ಮಿಕ ಕೇಂದ್ರದ ಕಟ್ಟಡಗಳ ತೆರವು ಮಾಡಲಾಗಿದೆ. ಇನ್ನುಳಿದ 29 ಅನಧಿಕೃತ ಧಾರ್ಮಿಕ ಕೇಂದ್ರ …
Read More »ಗೋಕಾಕ ಸರಕಾರಿ ಆಸ್ಪತ್ರೆ ಅವಾಚ್ಯ ಶಬ್ದಗಳ ಬಳಕೆ ಪ್ರಕರಣ ಹಿನ್ನೆಲೆ ಗೋಕಾಕ ಶಹರ ಪಿಎಸ್‌ಐ ಅಮ್ಮಿನಭಾವಿಯನ್ನು ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ
ಗೋಕಾಕ ಸರಕಾರಿ ಆಸ್ಪತ್ರೆ ಅವಾಚ್ಯ ಶಬ್ದಗಳ ಬಳಕೆ ಪ್ರಕರಣ ಹಿನ್ನೆಲೆ ಗೋಕಾಕ ಶಹರ ಪಿಎಸ್‌ಐ ಅಮ್ಮಿನಭಾವಿ ವರ್ಗಾವಣೆ ಗೋಕಾಕ ಶಹರ ಪೊಲೀಸ್ ಠಾಣೆ ಪಿಎಸ್‌ಐ ಅಮ್ಮಿನಭಾವಿ ಮಧ್ಯಪಾನ ಮಾಡಿ ಗೋಕಾಕ ಸರ್ಕಾರಿ ಆಸ್ಪತ್ರೆಗೆ ಹೋಗಿ ಡ್ಯೂಟಿಯಲ್ಲಿದ್ದ ಡಾ.ವಿಶ್ವನಾಥ ಭೋವಿ ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನ ಮಾಡಿರುವ ಪ್ರಕರಣ ಹಿನ್ನೆಲೆ ಅವರನ್ನು ಗೋಕಾಕ ಶಹರ ಪೊಲೀಸ್ ಠಾಣೆ ಯಿಂದ ಚಿಕ್ಕೋಡಿ ಸಂಚಾರಿ …
Read More »ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರು – ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ. ಈ ಸ್ಕೂಟರ್ ನ ನಂಬರ್ ಪ್ಲೇಟ್ ನಲ್ಲಿ ಕನ್ನಡದ ಅಭಿಮಾನಿ ಎಳೆದ ಕನ್ನಡದ ಬಾವುಟದ ಗೆರೆ ಪೋಲಿಸರ ಕಣ್ಣಿಗೆ ಬಿದ್ದಿದೆ. ಬಾಪೂಜಿ ನಗರದಲ್ಲಿ ಆತನನ್ನು ನಿಲ್ಲಿಸಿದ ಪೊಲೀಸರು 500 ರೂಪಾಯಿ ದಂಡ ಕಟ್ಟಿಸಿಕೊಂಡರು. ದಂಡದ ಪಾವತಿಯಲ್ಲಿ …
Read More »7 ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೌಲ್ಯದ ಅಡಿಕೆ ಎಕ್ಸೈಸ್ ಅಧಿಕಾರಿಗಳ ವಶ
ಬೆಳಗಾವಿ – ಜಿಎಸ್ ಟಿ ದಾಖಲೆಗಳಿಲ್ಲದೆ 7 ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೌಲ್ಯದ ಅಡಿಕೆಗಳನ್ನು ಬೆಳಗಾವಿ ಸೆಂಟ್ರಲ್ ಜಿಎಸ್ಟಿ ಮತ್ತು ಸೆಂಟ್ರಲ್ ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಿಂದ ಬಂದ ಮಾಹಿತಿ ಮೇರೆಗೆ ಹುಬ್ಬಳ್ಳಿ – ನವಲಗುಂದ ರಸ್ತೆಯಲ್ಲಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್ ಗಳಿಗೆ ಅಡಿಕೆ ಸಾಗಿಸಲಾಗುತ್ತಿತ್ತು. ಅಡಿಕೆಗೆ ಶೇ. 5ರಷ್ಟು ಜಿಎಸ್ಟಿ ಕಟ್ಟಬೇಕಿತ್ತು. ಆದರೆ ಜಿಎಸ್ಟಿ ಕಟ್ಟಿರುವ ಯಾವುದೇ ದಾಖಲೆ …
Read More »ಅವಸರದಿಂದ ದೇವಸ್ಥಾನ ಒಡೆಯಬೇಡಿ :ಬೊಮ್ಮಾಯಿ
ಬೆಂಗಳೂರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. …
Read More »ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್ಫೋನಲ್ಲಿತ್ತು 6 ಯುವತಿಯರ ವಿಡಿಯೋ..
ಬೆಂಗಳೂರು: ಈತ ವೃತ್ತಿಯಿಂದ ಆಟೋ ಚಾಲಕ, ಆದರೆ ಚಾಳಿಯಿಂದ ಪ್ರೀತಿಸುವ ಸೋಗಲ್ಲಿ ಯುವತಿಯರನ್ನು ಮೋಸ ಮಾಡಿ ಬ್ಲ್ಯಾಕ್ಮೇಲ್ ಮಾಡುವ ಕಿರಾತಕ. ಮೊದಲಿಗೆ ಪ್ರೀತಿಯ ನೆಪದಲ್ಲಿ ಯುವತಿಯರನ್ನು ಬಲೆಗೆ ಬೀಸಿಕೊಂಡು, ನಂತರ ಮಾಡಬಾರದ್ದನ್ನೆಲ್ಲ ಮಾಡಿ, ವಿಡಿಯೋ ಕೂಡ ಮಾಡಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣವನ್ನೂ ಕಿತ್ತುಕೊಳ್ಳುತ್ತಿದ್ದ. ಹೀಗೆ ಹುಡುಗಿಯರನ್ನು ವಂಚಿಸುತ್ತಿದ್ದ ರಾಕೇಶದ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಈತ ಪ್ರೀತಿ ಮಾಡುವುದಾಗಿ ಹೇಳಿ ಹುಡುಗಿಯರನ್ನು ಒಲಿಸಿಕೊಂಡು ಬಳಿಕ ಅವರನ್ನು ನಿರ್ಜನ …
Read More »ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು
ಚಾಮರಾಜನಗರ: ಬಾಲಕಿಯನ್ನು ಮದುವೆಯಾಗುವುದಾಗಿ ಕರೆದೊಯ್ದು ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 20 ವರ್ಷ ಜೈಲುಶಿಕ್ಷೆ ಹಾಗೂ 6.25 ಲಕ್ಷ ರೂ ದಂಡ ವಿಧಿಸಿದೆ. ಆರೋಪಿಯ ಕೃತ್ಯಕ್ಕೆ ಸಹಕರಿಸಿದ ಮಹಿಳೆಗೆ 5 ವರ್ಷ ಶಿಕ್ಷೆ 2 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ನಿವಾಸಿ ಚಂದ್ರಶೇಖರ (21) ಶಿಕ್ಷೆಗೆ ಒಳಗಾದವ. ಈತ 2018ರ ಜುಲೈ 11ರಂದು …
Read More »ರಾಜ್ಯ ವಿಧಾನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 10 ಮಸೂದೆಗಳ ಮಂಡನೆ
ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ 10 ಮಸೂದೆಗಳನ್ನು ಮಂಡಿಸಲಾಯಿತು. ಬಜೆಟ್‌ನಲ್ಲಿ ಘೋಷಣೆ ಮಾಡಿರು ವಂತೆ ಕರ್ನಾಟಕ ಸ್ಟಾಂಪ್ ತಿದ್ದುಪಡಿ ಮಸೂದೆ 2021 ಅನ್ನು ಕಂದಾಯ ಸಚಿವ ಆರ್. ಅಶೋಕ್ ಮಂಡನೆ ಮಾಡಿದರು. 35-45 ಲಕ್ಷ ರೂ. ನಡುವಿನ ಮೌಲ್ಯದ ಅಪಾರ್ಟ್ ಮೆಂಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಸುಂಕ ಕಡಿಮೆ ಮಾಡಲು ಈ ತಿದ್ದುಪಡಿ ಮಸೂದೆ ತರಲಾಗಿದೆ. ಮಳೆ ಕೊಯ್ಲು ಕಡ್ಡಾಯ : ಕಾವೇರಿ ನೀರು ಅಥವಾ …
Read More »ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆಭುಗಿಲೆದ್ದಿದೆ ವಿವಾದ .
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿನ ದೇಗುಲ ನೆಲಸಮದ ಅನಂತರ ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ಕಾರ್ಯಾಚರಣೆ ವಿವಾದ ಭುಗಿಲೆದ್ದಿದೆ. ಸದ್ಯ ಇದು ರಾಜಕೀಯಕ್ಕೂ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ. ಹಾಗಾದರೆ ಈ ದೇಗುಲ ನೆಲಸಮ ವಿವಾದವೆಂದರೆ ಏನು? ಎತ್ತ? ಎಂಬುದರ ಒಂದು ನೋಟ ಇಲ್ಲಿದೆ. ಸುಪ್ರೀಂ ತೀರ್ಪು ಏನು?: 2006ರಲ್ಲಿ ಎಸ್‌ಎಲ್‌ಪಿ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2009ರ ಸೆ.30ರಂದು ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ …
Read More »
Laxmi News 24×7