Breaking News

ರಾಜ್ಯ

ಅವರದ್ದೇ ಪಕ್ಷದಿಂದ ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಬಹಿರಂಗ -ಸಿ.ಟಿ ರವಿ

ಬೆಂಗಳೂರು: ಬೆಂಗಳೂರು: ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ಆಡಿರುವ ಮಾತುಗಳು ರಾಜ್ಯ ಕಾಂಗ್ರೆಸ್​ನಲ್ಲಿ ಹೊಸ ಬಿರುಗಾಳಿ ಸೃಷ್ಟಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ‘ಕಲೆಕ್ಷನ್ ಗಿರಾಕಿ’ ಎಂದು ಸಲೀಂ ಹೇಳಿದ್ದಾರೆ. ಇದರ ಜೊತೆಗೆ ಡಿಕೆ ಶಿವಕುಮಾರ್, ಕುಡಿಯುವ ವಿಚಾರ ಸೇರಿದಂತೆ ಅನೇಕ ವಿಚಾರಗಳು ಹೊರ ಬಂದಿದೆ. ಈ ಕುರಿತು ಬಿಜೆಪಿ ನಾಯಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಕುರಿತು ಟ್ವೀಟ್​ ಮಾಡಿ …

Read More »

BREAKING ಡಿಕೆಎಸ್ ಕಮೀಷನ್ ಗಿರಾಕಿ ಹೇಳಿಕೆ; ಸಲೀಂ ಉಚ್ಛಾಟನೆ; ಉಗ್ರಪ್ಪ ಅಮಾನತು..!

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಕಮೀಷನ್ ಗಿರಾಕಿ’ ಎಂಬ ಚರ್ಚೆ ರಾಜ್ಯ ಕಾಂಗ್ರೆಸ್​ನಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಮುಂದುವರಿದ ಭಾಗವಾಗಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಲ್ಲದೇ ಸಂಸದ ಉಗ್ರಪ್ಪರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ. ಮಾಧ್ಯಮಗಳಲ್ಲಿ ಉಗ್ರಪ್ಪ ಮತ್ತು ಸಲೀಂ ನಡುವಿನ ಸಂಭಾಷಣೆ ವೈರಲ್​ ಆಗುತ್ತಿದ್ದಂತೆಯೇ ಕಾಂಗ್ರೆಸ್​ ಎಚ್ಚೆತ್ತುಕೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ವಿರುದ್ಧವೇ ಮಾತನಾಡಿರೋದಕ್ಕೆ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ ಎಂದು …

Read More »

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ: ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ- ಇಬ್ಬರು ಕಾಂಗ್ರೆಸ್ ನಾಯಕರ ಸ್ಫೊಟಕ ಮಾತು ವೈರಲ್.

ಬೆಂಗಳೂರು, ಅಧ್ಯಕ್ಷ ಡಿ ಕೆ ಶಿವಕುಮಾರ್  ಅವರ ಬಗ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ರದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್,ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ. ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿರುವ ಆಡಿಯೋ ವೈರಲ್ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ …

Read More »

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

ಬಾಗಲಕೋಟೆ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಿಎಸ್ಎಪ್ ಯೋಧ ಮೃತಪಟ್ಟಿದ್ದಾರೆ. ಹುನಗುಂದ ತಾಲೂಕಿನ ಕೂಡಲಸಂಗಮದ ಮಹಾಂತೇಶ್ ಚೌಧರಿ ಮೃತ ಯೋಧ. ಮಹಾಂತೇಶ್ ಚೌಧರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇಂದು (ಅ.13) ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿದೆ.   ಸದ್ಯ ಯೋಧ ಮಹಾಂತೇಶ್ ಚೌಧರಿ ರಾಜಸ್ಥಾನದ ಚಾರ್ಲಿ ಬಟಾಲಿಯನ್ 161ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ …

Read More »

ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ

ಸಿರಗುಪ್ಪ(ಬಳ್ಳಾರಿ): ಆಕೆಯ ವಯಸ್ಸಿನ್ನೂ 28. ಎರಡು ವರ್ಷದ ಹಿಂದೆ ದಂತ ವೈದ್ಯರೊಬ್ಬರ ಜತೆ ಮದುವೆ ಆಗಿದ್ದಳು. ಎಫ್​ಡಿಎ ಪರೀಕ್ಷೆಯಲ್ಲಿ ಪಾಸ್ ಆಗಿ ಕಂದಾಯ ನಿರೀಕ್ಷಕ ಹುದ್ದೆಯೂ ಸಿಕ್ಕಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿ ದುರಂತ ಅಂತ್ಯ ಕಂಡಿದ್ದು, ಸಾವಿನ ಸುತ್ತ ಅನುಮಾನ ಮೂಡಿದೆ. ಹೌದು, ಕೊಪ್ಪಳದ ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚೈತ್ರಾ ಇಂದು(ಮಂಗಳವಾರ) ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸಿರಗುಪ್ಪದ ಸದಾಶಿವ ನಗರದ ನಿವಾಸಿ ಶಿವಶಂಕರಗೌಡರ …

Read More »

ಮೂರು ಕೈಗಾರಿಕಾ ಟೌನ್​ಶಿಪ್​ಗಳಿಂದ ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಬೆಂಗಳೂರು: ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಕಾರಿಡಾರ್‌ಗಳು ಈಮುನ್ನ ಬಜೆಟ್‌ನಲ್ಲಿ ಘೋಷಿಸಲ್ಪಟ್ಟಿದ್ದವು. ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಗೊಳ್ಳಲಿವೆ. ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕೈಗಾರಿಕಾ ಪ್ರದೇಶದಲ್ಲಿ ರೆಸಿಡೆನ್ಷಿಯಲ್ ಟೌನ್​ಶಿಪ್ ನಿರ್ಮಾಣ; ಸಚಿವ …

Read More »

ಯಾವುದೇ ನಿರ್ಬಂಧ ಇಲ್ಲ.ಅ.18ರಿಂದ ಎಲ್ಲಾ ದೇಶೀಯ ವಿಮಾನ ಸಂಚಾರಕ್ಕೆ ಕೇಂದ್ರದ ಅನುಮತಿ

ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 18ರಿಂದ ಪೂರ್ಣಪ್ರಮಾಣದಲ್ಲಿ ದೇಶೀಯ ವಿಮಾನ ಸಂಚರಿಸಲಿದೆ ನಾಗರಿಕ ವಿಮಾನಯಾನ ಸಚಿವಾಲಯ ಯಾವುದೇ ನಿರ್ಬಂಧ ವಿಧಿಸದೇ ಮಂಗಳವಾರ(ಅಕ್ಟೋಬರ್ 12) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.   ವಿಮಾನ ಪ್ರಯಾಣದ ಕುರಿತು ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶದಲ್ಲಿ ತಿಳಿಸಿದೆ. ಅಲ್ಲದೇ ಯಾವುದೇ ನಿರ್ಬಂಧ ವಿಧಿಸದೇ ಅಕ್ಟೋಬರ್ 18ರಿಂದ ನಿಗದಿತ ಎಲ್ಲಾ …

Read More »

ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ

ಕಲಬುರಗಿ: ಭೂಕಂಪನದ ಆತಂಕದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಧೈರ್ಯ ತುಂಬಲು ಹಾಗೂ ಆಹವಾಲು ಆಲಿಸಿ ಜನತೆಯನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಭೂಕಂಪನವಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಹಾಗೂ ಸುತ್ತ ಮುತ್ತ ಗ್ರಾಮ ಭೂಕಂಪನವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ನಿರ್ಮಾಣದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಗಡಿಕೇಶ್ವಾರ ಗ್ರಾಮಕ್ಕೆ ಸಿದ್ದರಾಮಯ್ಯ ತೆರಳಿದ್ದು, ಜನರ ಅಹವಾಲು ಅಲಿಸಿ ಮಾತನಾಡುವಾಗಲೇ ಸಿದ್ದರಾಮಯ್ಯ ಅವರಿಗೆ ಭೂಕಂಪನದ ಅನುಭವ …

Read More »

ಜಮ್ಮು & ಕಾಶ್ಮೀರದಲ್ಲಿ ಭದ್ರತಾಪಡೆಯ ಕಾರ್ಯಾಚರಣೆ : ಐವರು ಉಗ್ರರ ಹತ್ಯೆ

ನವದೆಹಲಿ: ನಿನ್ನೆ (ಮಂಗಳವಾರ) ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ರೆಸಿಸ್ಟೆನ್ಸ್ ಫ್ರಂಟ್ ನೊಂದಿಗೆ ಸಂಪರ್ಕ ಹೊಂದಿದ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಭದ್ರತಾ ಪಡೆಯಿಂದ ಎನ್‌ಕೌಂಟರ್ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು-ಸೇನೆಯ ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಎನ್ ಕೌಂಟರ್ ನಡೆದಿದೆ. ಇನ್ನೊಂದು ಕಡೆ ದೆಹಲಿ …

Read More »

100 ಲಕ್ಷ ಕೋಟಿ ರೂ. ಮೊತ್ತದ ‘ಪಿಎಂ ಗತಿ ಶಕ್ತಿ ಯೋಜನೆ’ಗೆ ಇಂದು ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗತಿ ಶಕ್ತಿ ಯೋಜನೆಯನ್ನು (PM Gati Shakti Yojana) ಜಾರಿಗೆ ತರಲು ಮುಂದಾಗಿದ್ದು, ಇಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆ ಬರೋಬ್ಬರಿ ₹100 ಲಕ್ಷ ಕೋಟಿ ಮೊತ್ತದ್ದಾಗಿದೆ. ಇನ್ನು ಈ ಯೋಜನೆಯಿಂದ ದೇಶದಲ್ಲಿ ಉದ್ಯೋಗಾವಕಾಶ ಸುಧಾರಿಸಲಿವೆ. ಗತಿ ಶಕ್ತಿ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 100 ಲಕ್ಷ ಕೋಟಿ ರೂಪಾಯಿ ಮೊತ್ತದ ಈ …

Read More »