ಹಾಸನ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕಾರು ಹತ್ತಿಸಿ ಓರ್ವನ ಹತ್ಯೆಗೆ ಕಾರಣವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಶಿವರ ಗ್ರಾಮದಲ್ಲಿ ಘಟನೆ ನಡೆದಿದೆ. ಎಂ. ಶಿವರ ಗ್ರಾಮದ ಬಾರ್ ಮುಂದೆ ನಿಂತಿದ್ದಾಗ ಹೊಂಗೇಹಳ್ಳಿಯ ನವೀನ್ ಎಂಬಾತನಿಂದ ಈ ಕುಕೃತ್ಯ ನಡೆದಿದೆ. ಬಾರ್ ಮುಂದೆ ನಿಂತಿದ್ದ ನಂದೀಶ್, ಗಿರೀಶ್ ಮತ್ತಿರರ ಮೇಲೆ ಕಾರು ಚಲಾಯಿರುವ ಆರೋಪಿ ಹಂತಕನಾಗಿದ್ದಾನೆ. ಘಟನೆಯಲ್ಲಿ ನಂದೀಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಡಿದ ಅಮಲಿನಲ್ಲಿ …
Read More »ಬೀದರ್: ನಗರದ ಕೊಳಚೆ ನೀರಿನಿಂದ ಮಲಿನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು
ಬೀದರ್: ಐತಿಹಾಸಿಕ ಬೀದರ್ ಕೋಟೆಯೊಳಗೊಂದು ಪುಟ್ಟ ಊರಿದೆ. ಈ ಊರಲ್ಲಿರುವ ಇನ್ನೂರು ಎಕರೆಯಷ್ಟು ಜಮೀನಿನಲ್ಲಿ ರೈತರು ತರಕಾರಿ ಬೆಳೆಸುತ್ತಾ ನೆಮ್ಮದಿಯಿಂದಿದ್ದರು. ಇಲ್ಲಿ ಬೆಳೆಸುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆದರೀಗ ಆ ರೈತರಿಗೆ ತರಕಾರಿ ಬೆಳೆಯೋಕೆ ಸಾಧ್ಯವಾಗುತ್ತಿಲ್ಲ ಯಾಕೆ ಅಂತೀರಾ ಈ ವರದಿ ನೋಡಿ. ನಗರದ ಗಲೀಜು ನೀರು ಗ್ರಾಮದ ಹೊಲಕ್ಕೆ ಬರುತ್ತಿದೆ. ಇದರಿಂದ ಇಲ್ಲಿರುವ ಬಾವಿಯ ನೀರು ಮಲಿನವಾಗುತ್ತಿದೆ. ಕುಡಿಯೋ ನೀರು ಸೇರಿ ಕೃಷಿಗೂ ಇದರಿಂದ …
Read More »ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು ಕ್ವಾರಿಗೆ ಒಬ್ಬ ಯುವಕ ಪಾರಾಗಿದ್ದಾನೆ. ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿ ನಡೆದಿದೆ. ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ. ಈ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋಟೋ ಶೂಟ್ಗೆಂದು ಕ್ವಾರಿಯಲ್ಲಿ ಯುವಕರು ಇಳಿದಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು …
Read More »ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ನಿರ್ಧಾರ!
ಬೆಂಗಳೂರು: ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಏರಿಕೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ (Lorry Owners Association) ನಿರ್ಧರಿಸಿದೆ. ರಾಜ್ಯಾದ್ಯಂತ ಲಾರಿ ಮುಷ್ಕರದ ಬಗ್ಗೆ ಲಾರಿ ಮಾಲೀಕರ ಸಂಘ ಅಕ್ಟೋಬರ್ 23ರಂದು ತೀರ್ಮಾನ ಕೈಗೊಳ್ಳಲಿದೆ. ಅಕ್ಟೋಬರ್ 23ರ ರೊಳಗೆ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಿದರೆ ಮಾತ್ರ ಲಾರಿಗಳು ರಸ್ತೆಗೆ ಇಳಿಯುತ್ತವೆ. ಇಲ್ಲವಾದಲ್ಲಿ ಗೂಡ್ಸ್ ವೆಹಿಕಲ್ಗಳ ಓಡಾಟ ರಾಜ್ಯಾದ್ಯಂತ ನಿಲ್ಲುತ್ತವೆ …
Read More »ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ
ಹುಬ್ಬಳ್ಳಿ: ಪರ್ಯಾಯ ಆದಾಯ ಮೂಲವಾಗಿ ಆರಂಭಿಸಿರುವ ಸಾರಿಗೆ ಸಂಸ್ಥೆಯ “ನಮ್ಮ ಕಾರ್ಗೋ’ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಟ್ರ್ರ್ಯಾಕಿಂಗ್ ವ್ಯವಸ್ಥೆ ಇರುವುದರಿಂದ ವಿಶ್ವಾಸಾರ್ಹತೆ ಮೂಡಿಸಿದೆ. ಪ್ರತಿ ತಿಂಗಳು ಆದಾಯದ ಪ್ರಮಾಣ ಹೆಚ್ಚುತ್ತಿದ್ದರೂ ಸದ್ಯ ಪ್ರಮುಖ ಸ್ಥಳಗಳಿಗೆ ಮಾತ್ರ ಈ ಸೌಲಭ್ಯವಿದೆ. ನಾಲ್ಕು ಸಂಸ್ಥೆಗಳ ಅತೀ ದೊಡ್ಡ ಸಾರಿಗೆ ಜಾಲಕ್ಕೆ ಹೋಲಿಸಿದರೆ ನಿರೀಕ್ಷಿತ ಆದಾಯವೇನಲ್ಲ. ಕೋವಿಡ್ ಲಾಕ್‌ಡೌನ್, ನೌಕರರ ಮುಷ್ಕರ, ಡೀಸೆಲ್ ದರ, ಬಿಡಿ ಭಾಗಗಳ ಏರಿಕೆ, ಸರ್ಕಾರಗಳಿಂದ ಬಾರದ ಬಾಕಿ …
Read More »ಸಿದ್ದರಾಮಯ್ಯನವರೇ ನೀವೂ ಸೀರೆ ಉಟ್ಟುಕೊಳ್ಳಲು ಹಾನಗಲ್ ಕ್ಷೇತ್ರಕ್ಕೆ ಬಂದ್ರಾ? ಎಂದ ಸಂಸದ ಶಿವಕುಮಾರ ಉದಾಸಿ
ಹಾವೇರಿ: ‘ವಿರಾಟನಗರ’ ಎನಿಸಿರುವ ಹಾನಗಲ್ ಪಟ್ಟಣದ ಜನರು ಮೂರು ಲೋಕದ ಗಂಡು ಅರ್ಜುನನಿಗೇ ಸೀರೆ ಉಡಿಸಿದ್ದರು. ಸಿದ್ದರಾಮಯ್ಯನವರೇ ನೀವೂ ಸೀರೆ ಉಟ್ಟುಕೊಳ್ಳಲು ಹಾನಗಲ್ ಕ್ಷೇತ್ರಕ್ಕೆ ಬಂದ್ರಾ? ಎಂದು ಸಂಸದ ಶಿವಕುಮಾರ ಉದಾಸಿ ವ್ಯಂಗ್ಯವಾಡಿದರು. ಹಾನಗಲ್ ಪಟ್ಟಣದಲ್ಲಿ ಭಾನುವಾರ ಬಿಜೆಪಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಹಾನಗಲ್ ಕ್ಷೇತ್ರದ ಜನರು ಜಾಣರಿದ್ದಾರೆ. ಅವರಿಗೆ ಯಾರನ್ನು ಮನೆಗೆ ಕಳುಹಿಸಬೇಕು, ಯಾರನ್ನು ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಚೆನ್ನಾಗಿ ಗೊತ್ತಿದೆ. ಕಡ್ಡಿನಾ ಗುಡ್ಡ ಮಾಡೋದೂ, …
Read More »ಚಹಾದಲ್ಲಿ ನಿದ್ರೆ ಮಾತ್ರೆ ಕೊಟ್ಟು ಗಾಡಿಯಲ್ಲಿದ 30ಲಕ್ಷ ಮೌಲ್ಯದ ಟೈರ್ ಎಗರಿಸಿದ ಕಿರಾತಕರು ಅಂದರ
ಚಿಕ್ಕೋಡಿ:ಚೆನ್ನೈ ನಿಂದ ಮುಂಬೈಗೆ ಬರುತ್ತಿದ ಲಾರಿಯ ಚಾಲಕನಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವನಿಗೆ ಮತ್ತು ಬರುವ ಹಾಗೆ ಮಾಡಿ ಲಾರಿಯಲ್ಲಿದ 30 ಲಕ್ಷ ಮೌಲ್ಯದ ಟೈರ್ ಗಳನ್ನ ಎಗರಿಸಿದ ಕಿರಾತಕರು ಇವಾಗ ಚಿಕ್ಕೋಡಿ ಪೊಲೀಸರ ಅತಿಥಿ ಗಳಾಗಿದ್ದಾರೆ, ಹೌದು ಹೈವೇ ನಲ್ಲಿ ಇಂಥ ಕರಾಮತ್ ಮಾಡುವುದೇ ಈ ಖದೀಮರ ಕೆಲಸ 10ನೆಯ ತಾರೀಖಿನ ದಿನ ಲಾರಿ ಚಾಲಕನಿಗೆ ನಿದ್ರೆ ಮತ್ತೆ ಬೆರೆಸಿ ಕುಡಿಸಿ ಗಾಡಿಯನ್ನ ಅನ್ಲೋಡ್ ಮಾಡಿದ್ದಾರೆ.ಅದೇರೀತಿ ಈ …
Read More »CM ಮಾಸ್ಟರ್ ಪ್ಲಾನ್; ಓಲೇಕಾರ ನಿವಾಸಕ್ಕೆ ಬೊಮ್ಮಾಯಿ ಭೇಟಿ
ಹಾವೇರಿ: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲ ಬೇಕಾಗಿರುವ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು, ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರದ ವೈಭವ ಲಕ್ಷ್ಮೀ ಪಾರ್ಕ್ ನಲ್ಲಿರೋ ಶಾಸಕ ಓಲೇಕಾರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಓಲೇಕಾರ ನಡುವಿನ ಮುನಿಸು …
Read More »ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?
ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ದುರ್ಗೆ ಹಾಗೂ ಬಿಜೆಪಿ ಸರ್ಕಾರ ಭಸ್ಮಾಸುರ ಇದ್ದಂತೆ. ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ ಅಂತ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಕಿರಣ್ ಖಂಡೋಲ್ಕರ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಬಗ್ಗೆ ಮಾತುಕತೆ ನಡೆದಿದೆ ಅಂತ ಅವರು ಹೇಳಿದರು. ಈ ಮಾತಿಗೆ ಸಿಎಂ ಪ್ರಮೋದ್ …
Read More »ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?
ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ …
Read More »
Laxmi News 24×7