Breaking News

ರಾಜ್ಯ

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ

ಬಳ್ಳಾರಿ : ನವೆಂಬರ್ 18 ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಕಳೆದ 6 ತಿಂಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯ ನಡೆದಿರಲಿಲ್ಲ. ಸದ್ಯ ಇದೀಗ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನವೆಂಬರ್ 18 ರಂದು ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 39 ವಾರ್ಡ್ ಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿದ್ದು, ನಾಲ್ವರು …

Read More »

ಮೂರು ಕೆ.ಜಿ. ಚಿನ್ನದ ಸರ ಧರಿಸಿ ಮಿರಮಿರ ಮಿಂಚಿದ ‘ಬಾಹುಬಲಿ’: ಸರದ್‌ ಉತ್ಸವದಲ್ಲಿ ಗಮನ ಸೆಳೆದ ಕೋಣ

ಹೈದರಾಬಾದ್ (ತೆಲಂಗಾಣ): ದೀಪಾವಳಿ ಸಮಯದಲ್ಲಿ ಹೈದರಾಬಾದ್‌ನಲ್ಲಿ ಕೋಣಗಳ ಉತ್ಸವ ನಡೆಯುತ್ತದೆ. ಇದಕ್ಕೆ ಸದರ್‌ ಉತ್ಸವ ಎನ್ನುತ್ತಾರೆ. ಇದಕ್ಕಾಗಿ ಕೋಣಗಳಿಗೆ ಶೃಂಗಾರ ಮಾಡುವುದು, ಅವುಗಳನ್ನು ಉತ್ಸವಕ್ಕೆ ಸಜ್ಜುಗೊಳಿಸಲಾಗುವುದು, ಮಿರಮಿರ ಮಿಂಚುಗ ಕೋಣಗಳನ್ನು ನೋಡುವುದೇ ಒಂದು ಅಂದ. ಇವುಗಳಿಂದ ಹಲವಾರು ರೀತಿಯ ಸಾಹಸಗಳನ್ನೂ ಈ ಸಮಯದಲ್ಲಿ ಮಾಡಿಸಲಾಗುವುದು. ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬೇರೆ …

Read More »

ಆರ್ಯನ್ ಖಾನ್ ಡ್ರಗ್ಸ್‌ ಕೇಸ್: ದೆಹಲಿ ಎನ್‌ಸಿಬಿಗೆ ಹಸ್ತಾಂತರ

ಮುಂಬೈ, ನವೆಂಬರ್ 06: ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣವನ್ನು ದೆಹಲಿ ಎನ್‌ಸಿಬಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶುಕ್ರವಾರ ಮುಂಬೈ ಘಟಕದ ಉಸ್ತುವಾರಿ ಸಮೀರ್ ವಾಂಖೆಡೆ ಅವರನ್ನು ಕಾರ್ಡೆಲಿಯಾ ಕ್ರೂಸ್ ಶಿಪ್ ಮಾದಕ ದ್ರವ್ಯ ಪತ್ತೆ ಪ್ರಕರಣದಿಂದ ಸ್ಥಳಾಂತರಿಸಿದೆ. ಆದಾಗ್ಯೂ, ‘ತೆಗೆದುಹಾಕಲಾಗಿದೆ’ ಎಂಬುದು ಬಲವಾದ ಪದವಾಗಿದೆ ಎಂದು ವಾಂಖೆಡೆ ಹೇಳಿದ್ದಾರೆ ಮತ್ತು ಎನ್‌ಸಿಬಿಯ ಮುಂಬೈ ಘಟಕದ ವಲಯ ನಿರ್ದೇಶಕರಾಗಿ ತಾವು ಮುಂದುವರಿದಿರುವುದಾಗಿ ಅವರು …

Read More »

ಮೀನುಗಾರಿಕೆ ಬೋಟಿಗೆ ಬೆಂಕಿ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟಿಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಈ ಘಟನೆ‌ ನಡೆದಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಲಿಲ್ಲ. ಬೋಟಿನಲ್ಲಿದ್ದ ಏಳು ಮೀ‌ನುಗಾರರ ರಕ್ಷಣೆ ಮಾಡಲಾಗಿದೆ. ವರದ ವಿನಾಯಕ ಹೆಸರಿನ ಮೀನುಗಾರಿಕೆ ಬೋಟ್ ಇದಾಗಿದ್ದು, ಬೋಟಿನ ಎಂಜಿನ್‌ನಲ್ಲಿ ಆಗಿರುವ ಅನಾಹುತ ಇದಾಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

Read More »

ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ.. ಇನ್ನೇನಿದ್ದರೂ ನ.7ರ ಪಂದ್ಯದ ಮೇಲೆ ಗಮನ: ವಿರಾಟ್ ಕೊಹ್ಲಿ

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಟೀಂ ಇಂಡಿಯಾ ಇದೀಗ ನವೆಂಬರ್ ರಂದು ನಡೆಯಲಿರುವ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.   ಇದನ್ನೂ ಓದಿ: 8ನೇ ಬಾರಿಗೆ 100ಕ್ಕಿಂತ ಕಡಿಮೆ ರನ್ ಗೆ ಆಲೌಟ್, ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ನಿದರ್ಶನ ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ …

Read More »

ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ: ಶಶಿಕಲಾ ಜೊಲ್ಲೆ

ಬೆಳಗಾವಿ : ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ( Shashikala Jolle ) ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವ, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ. ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ …

Read More »

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ನವೆಂಬರ್ 30 ರ ನಂತ್ರ `ಗರೀಬ್ ಕಲ್ಯಾಣ್ ಯೋಜನೆ’ ವಿಸ್ತರಣೆ ಇಲ್ಲ

ನವದೆಹಲಿ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) (Pradhan Mantri Garib Kalyan Anna Yojana) ಅಡಿಯಲ್ಲಿ, ನವೆಂಬರ್ ನಂತ್ರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ. ವಾಸ್ತವವಾಗಿ, ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವ್ರು, ಈ ಕುರಿತು ಸ್ಪಷ್ಟನೆ ನೀಡಿದ್ದು, ನವೆಂಬರ್ ನಂತ್ರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಶುಕ್ರವಾರ ಹೇಳಿದರು. ದೇಶದ …

Read More »

ಗೋವು ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ್- ದೀಪಾವಳಿ ಬಲಿ ಪಾಡ್ಯಮಿ ದಿನವಾದ ಇಂದು ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ ಸ್ವರೂಪಿಯಾಗಿದೆ. ಅಲ್ಲದೇ ಗೋವು ತನ್ನದೇಯಾದ ವಿಶೇಷ ಇತಿಹಾಸವನ್ನು ಹೊಂದಿದೆ. …

Read More »

ರಾಜ್ ಕುಟುಂಬದ ಮನವಿ ನಂತರವೂ ದುಡುಕಿದ ಅಪ್ಪು ಫ್ಯಾನ್ಸ್: ಮತ್ತಿಬ್ಬರು ಅಭಿಮಾನಿಗಳ ಸಾವು

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಬ್ಬರು ಮೃತಪಟ್ಟ ಘಟನೆ ಕೊಳ್ಳೆಗಾಲ ಮತ್ತು ತುಮಕೂರಿನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಪಟ್ಟಣದಲ್ಲಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಳ್ಳೆಗಾಲದ ಭೀಮನಗರದ ನಿವಾಸಿ ಶಿವಮೂರ್ತಿ ಮೃತಪಟ್ಟವರು ಎಂದು ಹೇಳಲಾಗಿದೆ. ತುಮಕೂರು ತಾಲೂಕಿನ ಅರೇಗುಜ್ಜನಹಳ್ಳಿಯಲ್ಲಿ 27 ವರ್ಷದ ರವಿಕುಮಾರ ಮೃತಪಟ್ಟಿದ್ದಾರೆ. ಪುನೀತ್ ರಾಜಕುಮಾರ್ ನಿಧನದ ನಂತರ ಊಟವನ್ನು ಬಿಟ್ಟಿದ್ದ ರವಿಕುಮಾರ್ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ …

Read More »

ಹಾನಗಲ್​​ನಲ್ಲಿ ಕಾಂಗ್ರೆಸ್​ಗೆ ಲಭಿಸಿದ ಜಯ 2023ರ ಮಹಾಚುನಾವಣೆಯ ಗೆಲುವಿನ ಪ್ರಾರಂಭ :

ಹಾವೇರಿ: ಹಾನಗಲ್​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಇಂದು ಶಿಗ್ಗಾವಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾನಗಲ್​​ನಲ್ಲಿ ಕಾಂಗ್ರೆಸ್​ಗೆ ಲಭಿಸಿದ ಜಯ 2023ರ ಮಹಾಚುನಾವಣೆಯ ಗೆಲುವಿನ ಪ್ರಾರಂಭವಾಗಿದೆ ಎಂದಿದ್ದಾರೆ. ‘ಕತ್ತಲೆಯಿಂದ ಬೆಳಕಿನಡೆಗೆ ಸಾಗೋಣ. ಇಷ್ಟು ದಿನ ರಾಜ್ಯ ಕತ್ತಲೆಯಲ್ಲಿ ಇತ್ತು. ಮಾನೆಗೆ ಆಶೀರ್ವಾದ ಮಾಡಿದ್ದೀರಿ. ಬೆಳಕು ಬಂದಿದೆ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸೋಕೆ …

Read More »