Breaking News

ರಾಜ್ಯ

ಸಿದ್ದರಾಮಯ್ಯಗೆ ಹಿಂದಿ ಬರುವುದಿಲ್ಲ, ಸಿನಿಮಾ ನೋಡುವುದಿಲ್ಲ:ಜೋಶಿ

ಧಾರವಾಡ: ಸಿದ್ದರಾಮಯ್ಯ ಅವರು ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಬೇರೆ ಸಿನಿಮಾ ನೋಡೋಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ಮಾಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ ನೋಡುವುದಿಲ್ಲ. ಬೇರೆ ಸಿನಿಮಾ ನೋಡಲು ಹೋಗುತ್ತಾರೆ. ಈ ಸಿನಿಮಾಗೆ ಇಂಗ್ಲೀಷ್ ಸಬ್ …

Read More »

ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು

ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿನಯದಷ್ಟೇ, ಗಾಯನದಿಂದಲೂ ಜನಪ್ರಿಯರಾದವರು. ಪ್ರಸ್ತುತ ಉಪೇಂದ್ರ ಅವರು ʼಹುಷಾರ್ʼ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸತೀಶ್ ರಾಜ್ ಬರೆದಿರುವ ʼನೀ ನೋಡೊಕೆ ಸಿಕ್ಸಟಿನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿʼ ಎಂಬ ಹಾಡನ್ನು ಇತ್ತೀಚಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ಹಾಡಿದ್ದಾರೆ.ಸತೀಶ್ ರಾಜ್ ಮೂವೀ ಮೇಕರ್ಸ್ ಲಾಂಛನದಲ್ಲಿ ಸತೀಶ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಅರುಣ್ ಕೃಷ್ಣ ಈ ಚಿತ್ರದ ಸಹ ನಿರ್ಮಾಪಕರು.  …

Read More »

40 ಅಡಿ ಆಳದ ಬಾವಿಗೆ ಬಿದ್ದಿದ್ದ ಹೋರಿಯನ್ನು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಯಶಸ್ವಿಯಾಗಿ ರಕ್ಷಣೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಿರಣಗಿ ಗ್ರಾಮದ ಹೊರವಲಯದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದಿದ್ದ ಹೋರಿಯನ್ನು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಕಿರಣಗಿ ಗ್ರಾಮದ ರೈತರಾದ ಬಸಪ್ಪ ಅವರ ಹೋರಿ ಕಾಲುಜಾರಿ ಬಾವಿಗೆ ಬಿದ್ದಿತ್ತು. ತಕ್ಷಣವೇ ಗ್ರಾಮಸ್ಥರು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಠಾಣಾಧಿಕಾರಿ ರಾಜು ತಳವಾರ ತಂಡ ಸತತ ಮೂರು ಗಂಟೆಗಳ ಕಾಲ …

Read More »

ಕೋರ್ಟ್‍ನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಡಿಸ್ಮಿಸ್: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮೇನ್ ಪಿಐಎಲ್ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟೇಟ್ ಕೋರ್ಟ್‍ಗೆ ರಿಪೋರ್ಟ್ ಸಬ್ಮಿಟ್ ಆಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಪಡೆಯಲು ಯಾವುದೇ ಅಡೆತಡೆಗಳಿಲ್ಲ ಎಂದು ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಸ್ಟ್ ಟೈಮ್ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಆದ ಮೇಲೆ ಅದನ್ನೇ ನೆಪ ಇಟ್ಟುಕೊಂಡು ರಿಸೈನ್ ಮಾಡಿಸಿದರು. ಆದರೀಗ ಕೋರ್ಟ್‍ನಲ್ಲಿ ಕೇಸ್ ಮುಗಿಯುತ್ತದೆ. …

Read More »

ಕಾಂಗ್ರೆಸ್‌ ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೆ,ನಾನು ಭಗವದ್ಗೀತೆ ವಿರೋಧಿಯಲ್ಲ: ಸಿದ್ದರಾಮಯ್ಯ

ಮಂಗಳೂರು: ನಾನು ಭಗವದ್ಗೀತೆ, ಬೈಬಲ್, ಕುರಾನ್ ಯಾವುದರ ವಿರೋಧಿಯೂ ಅಲ್ಲ. ನಮ್ಮದು ಬಹುಸಂಸ್ಕೃತಿ ಇರುವ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರೋನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನದ್ದು ಸಾಫ್ಟ್ ಮತ್ತು ಹಾರ್ಡ್ ಹಿಂದುತ್ವ ಅಂತ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೇವೆ ಎಂದರು.ಶಾಲೆಗಳಲ್ಲಿ ಭಗವದ್ಗೀತೆ ಕಲಿಸೋ ಬಗ್ಗೆ ಚಿಂತನೆ …

Read More »

ಕೋರ್ಟ್ ತೀರ್ಪಿನ ಬಳಿಕವೂ ಪ್ರತಿಭಟನೆ; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಗೃಹ ಸಚಿವ

ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ನೀಡಿದ ಬಳಿಕವೂ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ತೀರ್ಪು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.   ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಶಾಲಾ-ಕಾಲೇಜುಗಳಲ್ಲಿ ಸರ್ಕಾರದ ಸಮವಸ್ತ್ರ ಆದೇಶ ಕಾನೂನು ಬದ್ಧ ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದ್ದು, ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆಗಳು ರಾಜ್ಯದಲ್ಲಿ ಬಂದ್ ಗೆ ಕರೆಕೊಟ್ಟು …

Read More »

ದಿ ಕಾಶ್ಮೀರ್ ಫೈಲ್ಸ್ ಕಟ್ಟುಕಥೆ; ಕಾಂಗ್ರೆಸ್ ನಾಯಕರ ಹೇಳಿಕೆಗೆ ಶಾಸಕ ಪಿ.ರಾಜೀವ್ ಆಕ್ರೋಶ

ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಟ್ಟುಕಥೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿರುವ ಶಾಸಕ ಪಿ.ರಾಜೀವ್, ಕಾಂಗ್ರೆಸ್ ನವರಿಗೆ ಇನ್ನೊಬ್ಬರ ಸಾವು ಕಟ್ಟುಕಥೆ ಆಗುತ್ತೆ. ಅದೇ ನಿಮ್ಮ ಮನೆಯವರಿಗೆ ಅಂತಹ ಸ್ಥಿತಿ ಬಂದಿದ್ದರೆ ಏನೆಂದು ಮಾತನಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.   ಕಾಶ್ಮೀರಿ ಪಂಡಿತರನ್ನು ರಾತ್ರೋರಾತ್ರಿ ಅಲ್ಲಿಂದ ಓಡಿಸಿದರು. ಆ ಕ್ಷಣದಲ್ಲಿ ನಿಮ್ಮ ಕುಟುಂಬದವರು ಅಲ್ಲಿ ಇದ್ದಿದ್ದರೆ ಏನು ಮಾಡ್ತಿದ್ರಿ? ನಿಮ್ಮ ಹೆಂಡತಿಯೋ ಸಂಬಂಧಿಕರೋ ಅಲ್ಲಿ ಇದ್ದಿದ್ದರೆ ಏನಾಗುತಿತ್ತು? ಆಗ ಹೀಗೆ …

Read More »

ಪತ್ನಿ ಮಾಂಸದ ಅಡುಗೆ ಮಾಡಿಲ್ಲ’: 100 ನಂಬರ್​ಗೆ 6 ಬಾರಿ ಕರೆ ಮಾಡಿದ ವ್ಯಕ್ತಿ..

ನಲ್ಗೊಂಡ(ತೆಲಂಗಾಣ) ಸಾಮಾನ್ಯವಾಗಿ ಅಪಘಾತ ಮತ್ತು ಅಪರಾಧ ನಡೆದ ಸಂದರ್ಭದಲ್ಲಿ ನಾವು ತುರ್ತಾಗಿ ‘100’ ನಂಬರ್​ಗೆ ಕರೆ ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಹೋಳಿ ಹಬ್ಬದಂದು ಮಾಂಸದ ಅಡುಗೆ ಮಾಡಲಿಲ್ಲ ಎಂದು 100 ನಂಬರ್​ಗೆ 6 ಬಾರಿ ಕರೆ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಮಂಡಲದ ಚರ್ಲ ಗೌರಾರಾಮ್​ ಗ್ರಾಮದಲ್ಲಿ. ಹೋಳಿ ಹಬ್ಬದಂದು ನವೀನ್ ಎಂಬಾತ ತನ್ನ ಮನೆಗೆ …

Read More »

ಪಂಜಾಬ್ ನಲ್ಲಿ ಗೆದ್ದ ನಂತರ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಎಎಪಿ

ಬೆಂಗಳೂರು: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಆಮ್ ಆದ್ಮಿ ಪಕ್ಷ ಇದೀಗ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಯನ್ನು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ದೇಶದ ಇತರೆಡೆ ಹರಡಲು ಎದುರು ನೋಡುತ್ತಿದೆ. ಮಾರ್ಚ್ 10 ರಂದು ಪಂಜಾಬ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರು ನಗರದಲ್ಲಿ ಎಎಪಿಗೆ ಮೂರು ಪಟ್ಟು ಬೆಂಬಲ ಹೆಚ್ಚಾಗಿದೆ. ಸರ್ವೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎಎಪಿಯನ್ನು ಆತ್ಮ ಪಕ್ಷವಾಗಿ ಆಯ್ಕೆ ಮಾಡಲು ಬೆಂಗಳೂರಿಗೆ …

Read More »

LPG ಸಬ್ಸಿಡಿ ಬಗ್ಗೆ ಸರ್ಕಾರದ ಹೊಸ ಯೋಜನೆ, ಯಾರ ಖಾತೆಗೆ ಹಣ ಬರುತ್ತೆ ಗೊತ್ತಾ.?

ನವದೆಹಲಿ: ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದೊಡ್ಡ ಸುದ್ದಿ ಸಿಗಬಹುದು, ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ ಹೆಚ್ಚಳದ ಸುದ್ದಿ ಇದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕಚ್ಚಾ ತೈಲದ ಬೆಲೆ ಹೆಚ್ಚಾಗಿದೆ. ಇದೇ ವೇಳೆ ಎಲ್.ಪಿ.ಜಿ. ಸಿಲಿಂಡರ್ ಬೆಲೆ 1000 ರೂ.ಗೆ ತಲುಪಲಿದೆ ಎಂಬ ಚರ್ಚೆ ನಿರಂತರವಾಗಿ ನಡೆದಿದೆ. ಎಲ್.ಪಿ.ಜಿ. ಸಿಲಿಂಡರ್ ಗಳ ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಅಭಿಪ್ರಾಯಗಳು ಇನ್ನೂ ಮುನ್ನೆಲೆಗೆ ಬಂದಿಲ್ಲ. ಆದರೆ, ಸರ್ಕಾರದ ಆಂತರಿಕ ಮೌಲ್ಯಮಾಪನದಲ್ಲಿ, ಗ್ರಾಹಕರು ಸಿಲಿಂಡರ್‌ಗೆ …

Read More »