Breaking News

ರಾಜ್ಯ

ವರ್ಷಾಂತ್ಯಕ್ಕೆ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ: ಹೈಕೋರ್ಟ್‌ಗೆ ಸರ್ಕಾರ

ಬೆಂಗಳೂರು: ಈ ವರ್ಷದ ಡಿಸೆಂಬರ್ ವೇಳೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಸಂಬಂಧ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.   ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ‘ಹೆಚ್ಚುವರಿಯಾಗಿ 70 ಗೋಶಾಲೆಗಳನ್ನು ತೆರೆಯಲು ಸರ್ಕಾರ …

Read More »

ರಾಯಚೂರು: ನೀರಿನಲ್ಲಿ ಮಿತಿಮೀರಿದ ರಾಡಿಯಿಂದ ವಾಂತಿಭೇದಿ?

ರಾಯಚೂರು: ನಗರದಲ್ಲಿ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ‘ರಾಡಿ’ ಮತ್ತು ಆಮ್ಲದ ಪ್ರಮಾಣ (ಪಿಎಚ್‌) ಮಿತಿಮೀರಿದ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ. ಕಲಷಿತ ನೀರು ಕುಡಿದು ಜನರು ವಾಂತಿ-ಭೇದಿಯಿಂದ ಬಳಲುತ್ತಿರುವುದು ಮತ್ತು ಕೆಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀರಿನ ಪರೀಕ್ಷೆ ಮಾಡಿಸಿದೆ.   ರಾಂಪುರ ಜಲ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕಳೆದ ಮೇ 30ರಂದು ಪರೀಕ್ಷಿಸಿದಾಗ ರಾಡಿ ಪ್ರಮಾಣ 14 ಮತ್ತು ಪಿಎಚ್‌ ಪ್ರಮಾಣ 8.8ರಷ್ಟು ಪತ್ತೆ …

Read More »

ಮಳೆ ನೀರು ತೆರವು: ದರ್ಶನಕ್ಕೆ ಅವಕಾಶ

(ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನದೊಳಕ್ಕೆ ನುಗ್ಗಿದ್ದ ಮಳೆ ನೀರನ್ನು ಹೊರಹಾಕಿ ಶುಚಿಗೊಳಿಸಲಾಗಿದ್ದು ಶುಕ್ರವಾರ ಭಕ್ತರು ಎಂದಿನಂತೆ ದೇವಿಯ ದರ್ಶನ ಪಡೆದರು. ಗುರುವಾರ ಸಂಜೆ ಸುರಿದ ಧಾರಾ ಕಾರ ಮಳೆಯಿಂದಾಗಿ ಸುತ್ತಲಿನ ಗುಡ್ಡದ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದುಬಂದಿತ್ತು. ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿತ್ತು. ಇದರಿಂದ ಭಕ್ತರು ಪರದಾಡಿದ್ದರು. ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರಿಯೇ ಚರಂಡಿ ಸ್ವಚ್ಛಗೊಳಿಸಿ, ನೀರು ಹರಿದು ಹೋಗಲು ಅನುವು ಮಾಡಿದರು. ನಸುಕಿನಿಂದಲೇ …

Read More »

PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

ಬೆಂಗಳೂರು: 2021-2022ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ‌ಪ್ರಕಟವಾಗಿದ್ದು, ರಾಜ್ಯದಲ್ಲಿ 61.88% ಮಕ್ಕಳು ಪಾಸ್‌ ಆಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ್ದು, ಈ ವೇಳೆ ಮಾತನಾಡಿದ ಅವರು, ಮಕ್ಕಳು ನಿರೀಕ್ಷೆಗಿಂತ ಚೆನ್ನಾಗಿ ಮಾಡಿದ್ದಾರೆ. ಕೋವಿಡ್ ಮಧ್ಯೆ ಉತ್ತಮವಾಗಿ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಮಕ್ಕಳು ಸ್ಪೋಟೀವ್ ಆಗಿ ಫಲಿತಾಂಶ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ದಕ್ಷಿಣ ಕನ್ನಡ ಮೊದಲ ಸ್ಥಾನ (88.02%) ಪಡೆದಿದ್ದು, …

Read More »

ನಾಗರಹಾವು-ನಾಯಿ ನಡುವಿನ ಕಾದಾಟ

ಗದಗ: ಸಾಮಾನ್ಯವಾಗಿ ಹಾವು ಮುಂಗುಸಿಗೆ ಆಗಿ ಬರಲ್ಲ ಅಂತ ಕೇಳಿದ್ದೇವೆ‌. ಹಾವು- ಮುಂಗುಸಿ ಕಾಳಗವನ್ನೂ ನೋಡಿದ್ದೇವೆ. ಆದ್ರೆ, ವಿಷಕಾರಿ ಹಾವಿನ ಜೊತೆ ನಾಯಿಯೊಂದು ಕಾದಾಟ ನಡೆಸಿದ ಅಪರೂಪದ ಕಾಳಗ ನೋಡಿ ಇಡೀ ಗ್ರಾಮಸ್ಥರೇ ದಂಗಾಗಿ ಹೋಗಿದ್ದಾರೆ. ಹೌದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ರೈತ ಶೇಖಪ್ಪ ಚಲವಾದಿ ಎಂಬುವರು ಮಧ್ಯಾಹ್ನ ಊಟ ತೆಗೆದುಕೊಂಡು ಜಮೀನಿಗೆ ಬರಬೇಕಾದರೆ ತಮ್ಮ ಸಾಕು ನಾಯಿ ಸಹ ಓಡೋಡಿ ಬರ್ತಿತ್ತು. ಊಟ ತೆಗೆದುಕೊಂಡು …

Read More »

ಬಾಡಿಗೆಗೆ ಕಾರು ಪಡೆದು ಬೀಚ್‌ನಲ್ಲಿ ಹುಚ್ಚಾಟ: ಪೇಚಿಗೆ ಸಿಲುಕಿದ ಚಾಲಕ

ಪಣಜಿ: ಗೋವಾ ಬೀಚ್‌ನಲ್ಲಿ ಪ್ರವಾಸಿಗನೊಬ್ಬ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ, ಪೇಚಿಗೆ ಸಿಲುಕಿದ ಘಟನೆ ಶುಕ್ರವಾರ (ಜೂ.17) ನಡೆದಿದೆ. ದೆಹಲಿ ಮೂಲದ ಲಲಿತ್‍ಕುಮಾರ್ ದಯಾಳ್ ಎಂಬಾತ ಬಾಡಿಗೆಗೆ ಕಾರನ್ನು ಪಡೆದು ಕಡಲ ತೀರದಲ್ಲಿ ಚಲಾಯಿಸಿದ್ದಾನೆ. ಈ ವೇಳೆ ಕಾರು ನೀರಿನಲ್ಲಿ ಮುಳುಗಿದೆ. ಘಟನೆ ಹಣಜುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು, ಶೇಟಯೆ ವಾಡಾದ ಸಂಗೀತಾ ಗವಂಡಾಳಕರ್ ರವರಿಗೆ ಸೇರಿದೆ ಎಂದು …

Read More »

ಮತ್ತಷ್ಟು ಕ್ಷೀಣಿಸಿದ ಸೋನಿಯಾ ಆರೋಗ್ಯ; ಮೂಗಿನಲ್ಲಿ ರಕ್ತಸ್ರಾವ

ನವದೆಹಲಿ; ಕೊವಿಡ್‌ ಹಿನ್ನೆಲೆಯಲ್ಲಿ ವಾರದ ಹಿಂದೆ ನವದೆಹಲಿಯ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್‌ ನಾಯಕ ಸೋನಿಯಾಗಾಂಧಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ. ಅವರಿಗೆ ಪಂಗಲ್‌ ಇನ್ಫೆಕ್ಷನ್‌ ಹೆಚ್ಚಾಗಿದ್ದು ಚಿಕಿತ್ಸೆ ಮುಂದವರೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಪ್ರಕಟಣೆಯಲ್ಲಿ ತಿಳಿಸಿದೆ.   ಫಂಗಲ್‌ ಇನ್ಫೆಕ್ಷನ್‌ನಿಂದ ಸೋನಿಯಾಗಾಂಧಿಯವರ ಮೂಗಿನಿಂದ ರಕ್ತಸ್ರಾವವಾಗಿದೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಸೋನಿಯಾಗಾಂಧಿಯವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಕೊವಿಡ್‌ ಬಂದಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊವಿಡ್‌ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ತಿಳಿದುಬಂದಿದೆ.

Read More »

ವಿವಿಧ ಇಲಾಖೆಗಳಲ್ಲಿನ ಗ್ರೂಪ್ ‘ಬಿ’, ‘ಸಿ’ ಹುದ್ದೆಗಳ ಅರ್ಹತಾ ಪಟ್ಟಿ ಪ್ರಕಟ

ಬೆಂಗಳೂರು, ಜೂ. 17: ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್ಸಿ)ದಿಂದ ಅಧಿಸೂಚಿಸಲಾದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ‘ಬಿ’ ಮತ್ತು ‘ಸಿ’ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಆಯುಷ್ ಇಲಾಖೆಯಲ್ಲಿನ ಫಾರ್ಮಸಿಸ್ಟ್ ಹುದ್ದೆಗಳ 1:3 ಅರ್ಹತಾ ಪಟ್ಟಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಸಹಾಯಕ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.   ಅಭ್ಯರ್ಥಿಗಳ ಮಾಹಿತಿಗಾಗಿ ಕಟ್‍ಆಫ್ ಅಂಕಗಳನ್ನು ಆಯೋಗದ ವೆಬ್‍ಸೈಟ್ https://kpsc.kar.nic.in/List ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಪಿಎಸ್ಸಿ ಅಧಿಕೃತ ಪ್ರಕಟನೆ …

Read More »

ಸಾಲ ವಸೂಲಾತಿ ವೇಳೆ ದರ್ಪ ತೋರುವಂತಿಲ್ಲ: RBI ಗವರ್ನರ್ ಎಚ್ಚರಿಕೆ

ಮುಂಬೈ: ಸಾಲ ವಸೂಲಾತಿ ಏಜೆಂಟ್‌ ಗಳು ಬಳಸುವ ಕಠಿಣ ಕ್ರಮಗಳ ವಿರುದ್ಧ ಆರ್‌.ಬಿ.ಐ. ಗವರ್ನರ್ ಎಚ್ಚರಿಕೆ ನೀಡಿದ್ದಾರೆ. ಕೆಲವು ಸಾಲದಾತರು ತಮ್ಮ ವಸೂಲಾತಿ ಏಜೆಂಟ್‌ ಗಳ ಮೇಲೆ ಸಾಕಷ್ಟು ದೂರು ನೀಡಿದ್ದಾರೆ. ಏಜೆಂಟರ ಮೇಲೆ ನಿಯಂತ್ರಣಗಳಿಲ್ಲದಿದ್ದರೆ ಕಿರುಕುಳ ನೀಡುತ್ತಾರೆ ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ನಿಯಂತ್ರಿತ ಘಟಕಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ಆರ್.ಬಿ.ಐ. ಗಂಭೀರ ಕ್ರಮ ತೆಗೆದುಕೊಳ್ಳುತ್ತದೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡುವುದು, ಅಸಭ್ಯ …

Read More »

ಖಾನಾಪೂರ ತಾಲೂಕಿನ ಮದುವೆಯಾದ ಏಳೇ ದಿನಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳಗಾವಿ: ಮದುವೆಯಾದ ಏಳೇ ದಿನಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಖಾನಾಪೂರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ನಡೆದಿದೆ. ಖಾನಾಪೂರ ತಾಲೂಕಿನ ಲಕ್ಕೇಬೈಲ್ ಗ್ರಾಮದ ದೇಮಪ್ಪ ಅರ್ಜುನ್ ಸನದಿ (23) ಮೃತ ಯುವಕ. ಮೃತ ದೇಮಪ್ಪ ಕಳೆದ ವಾರವಷ್ಟೇ ತನ್ನ ಸೋದರತ್ತೆಯ ಮಗಳನ್ನು ಮದುವೆಯಾಗಿದ್ದನು‌. ತನ್ನ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಮರಳಿದ್ದ ಬಳಿಕ ಮಧ್ಯರಾತ್ರಿ ಮಲಗುವ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ …

Read More »