ಜೈಪುರ: ಜುಲೈ ತಿಂಗಳ 4ರಿಂದ 10ರ ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಸಭೆ ನಡೆಯಲಿದೆ. ರಾಜಸ್ಥಾನದ ಜುಂಜುನು ಅಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ರೈಲಿನಲ್ಲಿ ಜೈಪುರಕ್ಕೆ ಬಂದಿರುವ ಅವರು ರವಿವಾರ ಆಚಾರ್ಯ ಮಹಾಶ್ರಮಣ್‌ರನ್ನು ಭೇಟಿ ಮಾಡಲಿದ್ದಾರೆ. ಅನಂತರ ಜುಂಜುನು ಅಲ್ಲಿ ತಂಗಲಿದ್ದಾರೆ. ಆರ್‌ಎಸ್‌ಎಸ್ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಸೇರಿ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.
Read More »‘ಅಂಬಾರಿ’ ಏರಲು ನೀರಸ ಪ್ರತಿಕ್ರಿಯೆ: 6 ಡಬಲ್ ಡೆಕ್ಕರ್ ಬಸ್‌ಗಳಲ್ಲಿ 2 ಮಾತ್ರ ಬಳಕೆ
ಮೈಸೂರು: ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ವೃದ್ಧಿಸುವ ಭಾಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ‘ಡಬಲ್ ಡೆಕ್ಕರ್ ಬಸ್’ನಲ್ಲಿ ಸಂಚಾರಕ್ಕೆ ಜನರು ಮತ್ತು ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 6ರಲ್ಲಿ 2 ಬಸ್‌ಗಳನ್ನಷ್ಟೆ ರಸ್ತೆಗಿಳಿಸಲಾಗುತ್ತಿದೆ. ಪ್ರವಾಸಿಗರು, ಸಾಂಸ್ಕೃತಿಕ ನಗರಿಯ ಪಾರಂಪರಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ಬಸ್‌ನಲ್ಲಿ ಕುಳಿತು ವೀಕ್ಷಿಸಲು ಅನುಕೂಲ ಆಗುವಂತೆ ರೂಪಿಸಿರುವ ಯೋಜನೆ ಇದು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆರು ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ …
Read More »ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ
ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ. …
Read More »ಸಾಧನೆ ಶ್ರಮಿಕರ ಸ್ವತ್ತು ರಾಜ್ಯ ಕ್ರೈಡಲ್ ಎಮ್.ಡಿ. ಮಹಾಂತೇಶ ಹಿರೇಮಠ ಅಭಿಮತ
ವೈಜ್ಞಾನಿಕ ಕೊಡುಗೆಗಳಿಂದ ಜಗತ್ತು ಅಂಗೈಯಲ್ಲಿ ಹಿಡಿಯಲು ಸಾಧ್ಯವಾಗಿದೆ. ಇಂಥಹ ವಿಶೇಷತೆಗಳನ್ನು ಕೊಡಲು ಶ್ರಮ ಅತ್ಯಗತ್ಯ. ಸಾಧನೆಗಳು ಶ್ರಮಿಕರ ಸ್ವತ್ತಾಗಿದೆ ಎಂದು ರಾಜ್ಯ ಕ್ರೈಡಲ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಹಿರೇಮಠ ಹೇಳಿದರು. ಅವರು ಶನಿವಾರ ಬೆಂಗಳೂರಿನ ಭೂಸೇನಾ ನಿಗಮದ ಕೇಂದ್ರ ಕಚೇರಿಯಲ್ಲಿ ಅಕ್ಕತಂಗೇರಹಾಳ ಗ್ರಾಮದ ಐ.ಐ.ಎಸ್.ಸ್ಸಿ. ಪಿ.ಎಚ್.ಡಿ ಸಾಧಕ , ಚೇತನ ಉರಬಿನಹಟ್ಟಿ ಅವರಿಂದ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದರು. ಜಗತ್ತಿನ ಹೆಸರಾಂತ ತಾಂತ್ರಿಕ ಸಂಸ್ಥೆಗಳಲ್ಲಿ ಅಗ್ರಮಾನ್ಯ ಹೆಸರು ಭಾರತೀಯ ವಿಜ್ಞಾನ ಸಂಸ್ಥೆಗಿದೆ. …
Read More »ಡಿಒ ಕೈ ಹಿಡಿದು ಚುಂಬಿಸಿದ ಪಂಚಾಯಿತಿ ಸದಸ್ಯ
ತುಮಕೂರು: ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನೊಬ್ಬ ಪಿಡಿಒಗೆ ಮುತ್ತು ಕೊಟ್ಟಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಚಿವ ಮಾಧುಸ್ವಾಮಿ ಅವರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಪಿಡಿಒ ಕೋಕಿಲಾ ಅವರಿಗೆ ಕಚೇರಿಯಲ್ಲೇ ಪಿಡಿಒ ಕೈ ಹಿಡಿದು ಚುಂಬಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದು ದೃಶ್ಯದಲ್ಲಿ ಪಿಡಿಒ ಅವರ ಕೈ ಹಿಡಿದುಕೊಂಡು ಬಲವಂತವಾಗಿ ಎಳೆದಾಡಿ ಮುತ್ತುಕೊಟ್ಟಿದ್ದಾನೆ. ಕೆಲ ದಿನಗಳ …
Read More »ಜಮೀನು ವಿವಾದ; ತಮ್ಮನ ಕಾಟಕ್ಕೆ ಬೇಸತ್ತು ಅಣ್ಣ ಆತ್ಮಹತ್ಯೆ
ಬೆಳಗಾವಿ; ಜಮೀನು ವಿಚಾರದಲ್ಲಿ ತಮ್ಮನ ಕಿರುಕುಳ ತಾಳಲಾರದೇ ಅಣ್ಣನೋರ್ವ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚಗಾಂವ ಗ್ರಾಮದಲ್ಲಿ ನಡೆದಿದೆ. ಶ್ರೀಕಾಂತ್ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡವರು. ಮೃತ ಶ್ರೀಕಾಂತ್ ಮತ್ತು ಅವರ ಸಹೋದರ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತೆನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ …
Read More »ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಮೂವರಿಗೆ ತಗುಲಿತು ಬೆಂಕಿ..!
ಹಾವೇರಿ; ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಪ್ಯಾಂಟ್‌ಗೆ ಬೆಂಕಿ ತಗುಲಿ ಮೂವರು ಪ್ರತಿಭಟನಾಕಾರರು ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮೂವರು ಮಂದಿಯ ಪ್ಯಾಂಟ್‍ಗೆ ಬೆಂಕಿ ಕಿಡಿ ತಗುಲಿದ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಹಾವೇರಿಯಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ …
Read More »ಜೈಲಿನಿಂದ ಬಿಡುಗಡೆಯಾಗುತ್ತಲೇ ʼಶಾಕಿಂಗ್ʼ ಸಂಗತಿ ಹೇಳಿದ ನಟಿ ಚಿತಾಳೆ
ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಅವಹೇಳನಾಕಾರಿ ಪದ್ಯ ಬರೆದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮರಾಠಿ ನಟಿ ಕೇಟಕಿ ಚಿತಾಳೆ, ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕಿರುಕುಳ ಮತ್ತು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಮನೆಯಲ್ಲಿದ್ದಾಗ ನನ್ನನ್ನು ಕಾನೂನುಬಾಹಿರವಾಗಿ ವಶಕ್ಕೆ ತೆಗೆದುಕೊಂಡ ಪೊಲೀಸರು ಯಾವುದೇ ಬಂಧನ ವಾರಂಟ್ ಮತ್ತು ನೊಟೀಸ್ ನೀಡದೇ ನನ್ನನ್ನು ಜೈಲಿಗೆ ಹಾಕಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ನಾನು ಸತ್ಯವನ್ನೇ …
Read More »ಡಿಕೆಶಿ ಬುಡ ಅಲ್ಲಾಡಿಸಲು ತ್ರಿಶೂಲವ್ಯೂಹ! ‘ವಿಶ್ವನಾಥ್’ ಅಸ್ತ್ರ ಬಳಕೆಗೆ ಅಶ್ವಥ್ ನಾರಾಯಣ, ಸಿಪಿವೈ, ಜಾರಕಿಹೊಳಿ ರಣತಂತ್ರ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರ ರಾಜಕೀಯ ಬುಡ ಅಲ್ಲಾಡಿಸಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ. ಡಿಕೆಶಿಯ ಬದ್ಧವೈರಿಗಳಾದ ಅಶ್ವಥ್ ನಾರಾಯಣ, ಸಿ.ಪಿ.ಯೋಗೇಶ್ವರ್ ಮತ್ತು ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಮಣಿಸಲು ತ್ರಿಶೂಲವ್ಯೂಹ ರಚನೆ ಮಾಡಿದ್ದಾರೆ. ಸರ್ಕಾರ ಇರುವ ಸಂದರ್ಭದಲ್ಲಿ ಹಲವು ಬಿಜೆಪಿ ನಾಯಕರಿಗೆ ಖೆಡ್ಡಾ ತೋಡಲು ಸಿದ್ಧತೆ ನಡೆಸಿದ್ದ ಡಿಕೆಶಿಗೆ, ಇದೀಗ ಅವರ ಬದ್ಧವೈರಿಗಳು ‘ವಿಶ್ವನಾಥ್’ ಎಂಬ ಅಸ್ತ್ರವನ್ನ ಹೂಡುತ್ತಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಡಿಕೆಶಿ ವಿರುದ್ಧ ಅತ್ಯಂತ ಕಡಿಮೆ …
Read More »ಬೆಳಗಾವಿ: ಮಲಗಿರುವ ರೀತಿಯಲ್ಲಿ ವ್ಯಕ್ತಿಯ ಅಸ್ತಿಪಂಜರ ಪತ್ತೆ!
ಬೆಳಗಾವಿ: ಮನೆಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಸಾವನ್ನಪ್ಪಿದ ಮನುಷ್ಯನ ಅಸ್ತಿಪಂಜರ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ನಡೆದಿದೆ. ಮೃತರನ್ನು ಶಿವಾಪೂರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಮತ್ತು ಅಂದಾಜು 8 ರಿಂದ 9 ತಿಂಗಳ ಹಿಂದೆ ಸಾವಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬುದ್ಧಿಮಾಂದ್ಯನಾಗಿದ್ದ ಆತ ಮನೆಯಲ್ಲಿ ತಾನೊಬ್ಬನೇ ವಾಸ ಮಾಡುತ್ತಿದ್ದ. ಹಳೇ ಕಟ್ಟಡದಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ ಆತ ಪದವೀಧರನಾಗಿದ್ದ. ಮನೆಯ ಒಳಗೆ ಕೀಲಿ …
Read More »
Laxmi News 24×7