Breaking News

ರಾಜ್ಯ

ಪಿಎಸ್ಐ ನೇಮಕ ದೊಡ್ಡ ಹಗರಣ ಇದೆ, ಇದನ್ನು ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ: ಶಾಸಕ ಯತ್ನಾಳ

ಪಿಎಸ್ಐ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅಕ್ರಮದಲ್ಲಿ ಪಾಲು (ಪೌಲ್) ಎಲ್ಲರದ್ದು ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂದು ಎಲ್ಲರೂ ಬಿಚ್ಚಿ ಹೇಳಬೇಕು ಎಂದು ಆಗ್ರಹಿಸಿದರು ‌ ಮಾಜಿ ಸಿಎಂ ಮಗ ಸಹಿತ ಪಿಎಸ್ಐ ಹಗರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದು ಒಂದು ದೊಡ್ಡ …

Read More »

12 ಕ್ವಿಂಟಾಲ್ ರೇಶನ್ ಅಕ್ಕಿ ಜಪ್ತಿ ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿ

ಟ್ರಕ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ರೇಶನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ರೇಶನ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಂಕೇಶ್ವರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳು 12 ಕ್ವಿಂಟಾಲ್ ಅಕ್ಕಿಯನ್ನು ಟ್ರಕ್ ಸಮೇತ ಜಪ್ತಿ ಮಾಡಿದ್ದಾರೆ. ಏಂ 24 1751 ಅಶೋಕ್ ಲೈಲೆಂಡ್ ಟ್ರಕ್ ಇದಾಗಿದೆ. ಬೆಳಗಾವಿ ತಾಲೂಕಿನ ಬಸವಣ್ಣ ಕುಡಚಿ …

Read More »

ಬೆಳಗಾವಿಯಲ್ಲಿಯೂ ಕೂಡ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು.

ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಇಡೀ ವಿಶ್ವದಾಧ್ಯಂತ ಆಚರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಕೂಡ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು. ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಬಿಮ್ಸ ಉಪನ್ಯಾಸ ಕೊಠಡಿಯಲ್ಲಿ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತಿಯ ಹೊಸ ಅಧ್ಯಾಯ …

Read More »

ನಿರಂತರ ಮಳೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಬೆಂಗಳೂರು: ನೆರೆಯ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವದರಿಂದ ಕೃಷ್ಣಾ ನದಿಯ ಒಳಹರಿವು ಹೆಚ್ಚಿದೆ. ಆಲಮಟ್ಟಿ ಜಲಾಶಯದ ಒಳಹರಿವು ಇಂದು 75,149 ಕ್ಯೂಸೆಕ್ಸ್ ಇದೆ. ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.   ಇನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು …

Read More »

ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್​ಪಿನ್​

ಅಫಜಲಪುರ (ಕಲಬುರಗಿ): ಪಿಎಸ್​ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಆಳಕ್ಕೆ ಹೋದಷ್ಟೂ ಹಲವು ಗಣ್ಯರ ಹೆಸರು ಹೊರಕ್ಕೆ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಮೃತ್ ಪೌಲ್ ಅವರು ಈ ಕೇಸ್​ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಕಾಂಗ್ರೆಸ್​ ಶಾಸಕರೊಬ್ಬರ ಮಗ ಹಾಗೂ ಅವರ ಸಹೋದರ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.   ಅಫಜಲಪುರದ ಕಾಂಗ್ರೆಸ್​ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಶಾಸಕರ ಸಹೋದರ ಎಸ್.ವೈ.ಪಾಟೀಲ್​ಗೆ ಸಂಕಷ್ಟ ಎದುರಾಗಿದೆ. ಶಾಸಕ ಎಂ.ವೈ.ಪಾಟೀಲ್ …

Read More »

ಆಸ್ತಿ ಖರೀದಿ, ಮಾರಾಟಗಾರರು, ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಆಸ್ತಿ ನೋಂದಣಿ, ಪೌತಿ ಖಾತೆ ಆಕ್ಷೇಪಣೆ ಅವಧಿ ಕಡಿತ

ಕಂದಾಯ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿ ಮತ್ತು ಪೌತಿ ಖಾತೆಯ ಆಕ್ಷೇಪಣೆ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಒಬ್ಬರ ಹೆಸರಿನಿಂದ ಮತ್ತೊಬ್ಬರ ಹೆಸರಿಗೆ ಆಸ್ತಿ ನೋಂದಣಿ ಆದ ನಂತರ ಖಾತೆ ಬದಲಾವಣೆಯಾಗಲು 35 ದಿನ ಕಾಯಬೇಕು. ಪೌತಿ ಖಾತೆಯಡಿ ಆಸ್ತಿ ವರ್ಗಾವಣೆಯಾದಾಗಲೂ 45 ದಿನ ಕಾಯಬೇಕು. ಇದರ ಅವಧಿಯನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿಗೆ ಹಾಲಿ ಆಕ್ಷೇಪಣೆ ಅವಧಿ 35 …

Read More »

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಜಾ ಕೋರಿ ಪ್ರಧಾನಿ ಮೋದಿಗೆ ಖಾಸಗಿ ಶಾಲೆಗಳ ಪತ್ರ

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ( Textbook revision controversy ) ಸದ್ಯಕ್ಕೆ ಮುಗಿಯುವಂತಿಲ್ಲ. ಪಠ್ಯಪುಸ್ತಕ ಪರಿಷ್ಕರಣಾ ವಿಚಾರ ಸೇರಿದಂತೆ ಶಿಕ್ಷಣ ಇಲಾಖೆಯ ಸಾಲು ಸಾಲು ಆಡಳಿತ ವೈಫಲ್ಯಗಳ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ವಜಾಗೊಳಿಸುವಂತೆ ಸೂಚಿಸಬೇಕು ಎಂದು ರುಪ್ಸಾ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.   ಈ ಬಗ್ಗೆ ನೋಂದಾಯಿತ ಅನುದಾನ ರಹಿತ ಖಾಸಗಿ …

Read More »

ಯುವತಿಯ ಸೌಂದರ್ಯಕ್ಕೆ ಸೋತು ಬೆತ್ತಲಾದವನಿಗೆ 5 ಲಕ್ಷ ರೂಪಾಯಿಗು ಅಧಿಕ ಹಣ ವಸೂಲಿ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹಣದ ಜೊತೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೆಲ ಯುವತಿಯರ ಸೌಂದರ್ಯಕ್ಕೆ ಮರುಳಾಗಿ ಅವರ ಬಲೆ ಬಿದ್ದರಂತೂ ಅದರಿಂದ ಹೊರಬರಲು ಹೆಣಗಾಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.   ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವವತಿಯ ಹಿಂದೆ ಬಿದ್ದ ವ್ಯಕ್ತಿಯೊಬ್ಬ ಹಣ ಕಳೆದುಕೊಂಡು ಪರದಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಸುಂದರವಾಗಿರುವುದನ್ನು ನೋಡಿ ಮರುಳಾದ ಸಂತ್ರಸ್ತ ಆಕೆಯೊಂದಿಗೆ …

Read More »

ಇದೇ ಮೊದಲು: ರಾಜ್ಯದ ವಿವಿ, ಪದವಿ ಕಾಲೇಜಲ್ಲಿ ಇಂದಿನಿಂದ ‘ಆನ್ ಲೈನ್’ ಮೂಲಕ ಪ್ರವೇಶಾತಿ ಆರಂಭ

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಇಂದಿನಿಂದ ಏಕರೂಪದ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಪ್ರವೇಶಾತಿ ನಡೆಯಲಿದೆ. ಆಗಸ್ಟ್ 17ರಿಂದ ತರಗತಿಗಳು ಆರಂಭವಾಗಲಿವೆ.   ದ್ವಿತೀಯ ಪಿಯು ಫಲಿತಾಂಶ ಪ್ರಕಟದ ಬಳಿಕ, ಅನೇಕ ವಿವಿಗಳು, ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದವು. ಆದ್ರೇ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ …

Read More »

ಮಹಿಳಾಮಣಿಗಳೇ, ಮೋದಿ ಸರ್ಕಾರ ಉಚಿತವಾಗಿ ‘ಹೊಲಿಗೆ ಯಂತ್ರ’ ವಿತರಿಸ್ತಿದೆ ; ಅರ್ಜಿ ಪ್ರಕ್ರಿಯೆ ಆರಂಭ, ಇಂದೇ ಅಪ್ಲೈ ಮಾಡಿ

ದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮತ್ತು ಸ್ವಾವಲಂಬಿಗಳಾಗಲು ಸರ್ಕಾರ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆ (Free Silai Machine Scheme). ಸರ್ಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನ ಉಚಿತವಾಗಿ ನೀಡುತ್ತದೆ. ಈ ಯೋಜನೆಯ ಸಹಾಯದಿಂದ ಮಹಿಳೆಯರು ತಮ್ಮ ಆರ್ಥಿಕ ಅಗತ್ಯಗಳನ್ನ ಪೂರೈಸಿಕೊಳ್ಳಲು ಬೇರೆಯವರ ಮೇಲೆ ಅವಲಂಬಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಅವ್ರು ತಮ್ಮ ಪ್ರತಿಯೊಂದು ಅಗತ್ಯವನ್ನ ತಾವಾಗಿಯೇ ಪೂರೈಸಿಕೊಳ್ಳಲು ಸಮರ್ಥರಾಗಿರಬೇಕು ಮತ್ತು ಅಧಿಕಾರ ಹೊಂದಿರಬೇಕು. …

Read More »