ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಕಾಂಗ್ರೆಸ್ ಕಟ್ಟಾಳುಗಳನ್ನು ಕೂಗಿ ಕರೆದ ಹೈಕಮಾಂಡ್ ಕಟ್ಟುನಿಟ್ಟಿನ ಕಟ್ಟಪ್ಪಣೆಯೊಂದನ್ನು ನೀಡಿದೆ. ಸುಖಾಸುಮ್ಮನೆ ವೈಯಕ್ತಿಕ ದಾಳಿ ನಡೆಸದಂತೆ ಎಚ್ಚರಿಕೆ ನೀಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌಪ್ಯ ಸಭೆಯೊಂದನ್ನು ನಡೆಸಿದ್ದಾರೆ. ಈ ವೇಳೆ ಚುನಾವಣಾ ತಂತ್ರಗಾರಿಕೆ ಕುರಿತು …
Read More »ಯಾಕ್ರೈಯ್ಯಾ ಮೋದಿ ಮೋದಿ ಅಂತಿರಾ? ಮೋದಿ ನಿಮ್ಮ ಮನೆ ಹಾಳು ಮಾಡಿದ್ದಾರೆ”: ಸಿದ್ದರಾಮಯ್ಯ
ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಮನೆ ಮೈದಾನದಲ್ಲಿ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಯುವ ಗರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ದೇಶದ …
Read More »ಬೆಳಗಾವಿ ವಿಭಾಗ ಅಮ್ಲನ್ ಆದಿತ್ಯ ಬಿಸ್ವಾಸ್, & 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 8 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶಿಸಿದೆ. ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳ ವಿವರ ಹೀಗಿದೆ. ಅಮ್ಲನ್ ಆದಿತ್ಯ ಬಿಸ್ವಾಸ್, ಐಎಎಸ್ (ಕೆ.ಎನ್: 1997) ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ವಿಭಾಗಕ್ಕೆ …
Read More »ಹೀಗಿರಬೇಕು ಮದುವೆ ಅಗ್ರಿಮೆಂಟ್! ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ!
ಮದುವೆಯಲ್ಲಿ ನವ ವಧು-ವರರು ಏಳೇಳು ಜನ್ಮಕ್ಕೂ ಜತೆಯಾಗಿರುವುದಾಗಿ ಪ್ರಮಾಣಿಸುವುದು ಸಾಮಾನ್ಯ. ಆದರೆ ಈ ಮದುವೆಯಲ್ಲಿ ನಡೆದ ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ. ‘ತಿಂಗಳಿಗೊಂದೇ ಪಿಜ್ಜಾ ತರಿಸಬೇಕು’, ’15 ದಿನಕ್ಕೊಮ್ಮೆ ಶಾಪಿಂಗ್‌ಗೆ ಕರೆದೊಯ್ಯಬೇಕು’, ‘ಮನೆ ಊಟಕ್ಕೆ ಯಾವಾಗಲೂ ಬೇಡ ಎನ್ನಕೂಡದು’, ‘ಪ್ರತಿದಿನ ಜಿಮ್‌ಗೆ ಹೋಗಬೇಕು’, ‘ಪ್ರತಿ ಪಾರ್ಟಿಯಲ್ಲಿ ಒಳ್ಳೊಳ್ಳೆ ಫೋಟೋ ತೆಗೆದುಕೊಡಬೇಕು’, ‘ಪ್ರತಿ ಭಾನುವಾರ ಗಂಡನೇ ತಿಂಡಿ ರೆಡಿ ಮಾಡಬೇಕು’. ಇದು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಮದುವೆಯಾದ ವರ-ವಧು …
Read More »ಕುಸಿಯುತ್ತಿದೆ ದೊಡ್ಡ ಕೆರೆ ತಡೆಗೋಡೆ
ಎಂ.ಕೆ.ಹುಬ್ಬಳ್ಳಿ: ಬೆಳೆದ ಗಿಡಕಂಟಿಗಳು, ತಿಪ್ಪೆ ಗುಂಡಿಗಳು, ಬೀಳುತ್ತಿರುವ ತಡೆಗೋಡೆಗಳು, ತ್ಯಾಜ್ಯಗಳನ್ನು ಎಸೆಯುವ ಜಾಗೆಯಾಗಿದೆ ಇಟಗಿ ಗ್ರಾಮದ ದೊಡ್ಡ ಕೆರೆ. ಒಂದು ಕಾಲಕ್ಕೆ ಈ ಕೆರೆ ನೀರನ್ನು ದೇವರ ಪೂಜೆಗೂ, ದಿನಬಳಕೆಗೂ ಉಪಯೋಗಿಸುತ್ತಿದ್ದರು ಎಂದರೆ ಈಗ ಯಾರೂ ನಂಬಲು ಸಾಧ್ಯವಿಲ್ಲ. ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಸುಮಾರು 53 ಎಕರೆ 15 ಗುಂಟೆ ಈ ಕೆರೆಯತ್ತ ಯಾವೋಬ್ಬ ಅಧಿ ಕಾರಿಗಳು ಗಮನ ಹರಿಸುತ್ತಿಲ್ಲ. ಮಳೆಗಾಲ ಮುಗಿದು ಮತ್ತೆ ಮತ್ತೆ ಬಂದರೂ, ಕೆರೆ …
Read More »ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ
ಚಿಕ್ಕೋಡಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ. ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆ, ಬ್ರಿಡ್ಜ್ಗಳ ಕಾಮಗಾರಿ ಮುಕ್ತಾಯಗೊಂಡಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಇದರಿಂದ ನದಿ ತೀರದ ಜನ ಸಂಕಷ್ಟ ಪಡುವಂತಾಗಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ …
Read More »ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ.: ಗೋವಿಂದ ಕಾರಜೋಳ
ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇದೆ. ಎರಡು ದಿನಗಳ ಹಿಂದೆ 30 ಟಿಎಂಸಿ ಅಡಿಯಷ್ಟು ನೀರು ಅಲ್ಲಿ ಸಂಗ್ರಹವಾಗಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಒಟ್ಟು 105 ಟಿಎಂಸಿ ಅಡಿ. ಅದು ಸಂಪೂರ್ಣ ತುಂಬುವವರೆಗೆ ನೀರನ್ನು ಹೊರ ಬಿಡುವುದಿಲ್ಲ. …
Read More »ನ್ಯಾ.ಸಂದೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು,ಜು.11. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲಿ ನ್ಯಾ.ಎಚ್.ಪಿ. ಸಂದೇಶ್ ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದರೊಂದಿಗೆ ನ್ಯಾ.ಸಂದೇಶ್ ಮತ್ತು ಸೀಮಂತ್ ಕುಮಾರ್ ಸಿಂಗ್ ಅವರ ನಡುವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅವರು ನ್ಯಾ. ಸಂದೇಶ್ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಇನ್ನೂ …
Read More »ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆ..?!
ಬೆಂಗಳೂರು,ಜು.11- ಕರ್ನಾಟಕದಲ್ಲಿ ಅವಧಿಗೂ ಮುನ್ನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ಮೇ ತಿಂಗಳಲ್ಲಿ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆಯೂ ಈ ವರ್ಷದ ಡಿಸೆಂಬರ್‍ನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಜರಾತ್ ಚುನಾವಣೆಯೂ ಡಿಸೆಂಬರ್‍ಲ್ಲೇ ನಡೆಯಲಿದ್ದು, ಅದರ ಜೊತೆಯಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಗಿಸುವ ತವಕದಲ್ಲಿ ಬಿಜೆಪಿ ಇದ್ದು, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಬಿಜೆಪಿ ಇಡುತ್ತಿರುವ ಹೆಜ್ಜೆಗಳನ್ನು …
Read More »ಅಮೃತ್ ಪೌಲ್ ಬಂಧನ ಪ್ರಕರಣ: ಪ್ರಭಾವಿ ವ್ಯಕ್ತಿಗಳಿಗೆ ಶುರುವಾಯ್ತು ಸಂಕಷ್ಟ
ಬೆಂಗಳೂರು: ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ಅವರ ಬಂಧನದ ಬೆನ್ನಲ್ಲೇ ಕೆಲ ಪ್ರಭಾವಿಗಳಿಗೆ ಸಂಕಷ್ಟ ಎದುರಾಗಿದೆ. ಪೌಲ್ ಅವರ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮನೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಹಾಗೂ ಕಚೇರಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಡೈರಿ ಹಾಗೂ ಇತರೆ ದಾಖಲೆಗಳು ಸಿಕ್ಕಿದ್ದು, ಇವುಗಳೇ ಪ್ರಭಾವಿ ವ್ಯಕ್ತಿಗಳಿಗೆ ಸಂಕಷ್ಟ ತಂದೊಡ್ಡಲಿವೆ ಎಂದು ಹೇಳಲಾಗಿದೆ. ಈ ಪ್ರಭಾವಿಗಳು ತಮಗೆ ಬೇಕಾದವರ ನೇಮಕಾತಿಗೆ ಎಡಿಜಿಪಿಯವರಿಗೆ …
Read More »
Laxmi News 24×7