ಶಾಲಾ ಕಾಲೇಜಿನ ಮಕ್ಕಳು ಶಾಲೆ ಕಾಲೇಜು ಬಿಟ್ಟ ತಕ್ಷಣ ಟ್ಯೂಶನ್ ಕಂಪ್ಯೂಟರ್ ಕ್ಲಾಸ್ ಎಂದೆಲ್ಲ ಬೇರೆ ಕಡೆ ಹೋಗುತ್ತಾರೆ. ಆದರೆ ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಏನು ಮಾಡಿದ್ದಾರೆ ಎನ್ನುವುದನ್ನು ನೀವೇ ನೋಡಿ. ಮೈ ಮೇಲೆ ಶಾಲೆಯ ಯೂನಿಫಾರ್ಮ್. ಬೆನ್ನ ಮೇಲೆ ಶಾಲೆಯ ಬ್ಯಾಗ್ ಹಾಕಿಕೊಂಡು ಈ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಬಡಿದಾಡಿಕೊಳ್ಳುತ್ತಿದ್ದಾರೆ. ಇನ್ನು ತಾವು ನಿಂತಿರೋದು ಬಸ್ ನಿಲ್ದಾಣದಲ್ಲಿ. ಇದರಿಂದ ಇನ್ನೊಬ್ಬರಿಗೆ ತೊಂದರೆಯಾಗುತ್ತೆ …
Read More »ಕುಂದಾನಗರಿಯಲ್ಲಿ ಮಳೆಯ ಆರ್ಭಟ
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಸಾಯಂಕಾಲ ಮಳೆಯ ಆರ್ಭಟ ಜೋರಾಗಿದ್ದು. ಸತತ ಎರಡು ಘಂಟೆಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನ ಹೈರಾಣಾದರು. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಏಕಾಏಕಿ ಮಳೆಯ ಆರ್ಭಟಕ್ಕೆ ಕುಂದಾನಗರಿ ಜನತೆ ಬೆಚ್ಚಿ ಬಿದ್ದರು. ಸತತ ಎರಡು ಗಂಟೆಗಳಿಂದ ನಿರಂತರ ಮಳೆ ಆದರಿಂದ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಯ್ತು. ಇನ್ನು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಖಡೇಬಜಾರ್‍ಗೆ ಹೋಗುವ ರಸ್ತೆ ಮೇಲೆ …
Read More »ಕುಡಿದ ಅಮಲಿನಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆ
ಕುಡಿದ ಅಮಲಿನಲ್ಲಿ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ಪಟ್ಟಣದ ಹಾಲಟ್ಟಿಯಲ್ಲಿ ನಡೆದಿದೆ… ಗೌಸಮೋದಿನ ಮುಸ್ತಫಾ ಜಮಾದಾರ (35) ಆತ್ಮಹತ್ಯೆಯನ್ನು ಮಾಡಿಕೊಂಡ ಯುವಕ.ಕುಡಿದ ಅಮಲಿನಲ್ಲಿ ನಿನ್ನೆ ರಾತ್ರಿ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋರಗೆ ಹೋಗಿ,ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಾತ್ರಿಯಿಂದ ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು.ಇವತ್ತು ಬೆಳಗ್ಗೆಯಿಂದ ಪುರಸಭೆ ಪೌರಕಾರ್ಮಿಕರು ಹಾಗೂ ಅಗ್ನಿಶಾಮಕದಳದಿಂದ …
Read More »ಹಿಂದೂ, ಮುಸ್ಲೀಂ ಯುವಕರ ಹತ್ಯೆ ಎಂದು ತಾರತಮ್ಯವಿಲ್ಲದೇ ಪರಿಹಾರ ನೀಡಿ – ಮಂತ್ರಾಲಯ ಶ್ರೀ
ರಾಯಚೂರು: ರಾಜ್ಯ ಸರ್ಕಾರದಿಂದ ಹಿಂದೂ ಯುವಕರ ಹತ್ಯೆಗೆ ಮಾತ್ರವೇ ಪರಿಹಾರ ನೀಡಿ, ಮುಸ್ಲೀಂ ಯುವಕರ ಹತ್ಯೆಯಂತಹ ಸಂದರ್ಭದಲ್ಲಿ ಪರಿಹಾರವನ್ನು ವಿತರಿಸುತ್ತಿಲ್ಲ. ಆದ್ರೇ ಈ ತಾರತಮ್ಯ ಸರಿಯಲ್ಲ. ಯಾವುದೇ ತಾರತಮ್ಯ ಮಾಡದೇ ಹತ್ಯೆಯಂತ ಸಂದರ್ಭದಲ್ಲಿ ಪರಿಹಾರ ನೀಡುವಂತೆ ಮಂತ್ರಾಲಯದ ಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಪರಿಹಾರ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಪ್ರಾಣ ಕಳೆದುಕೊಂಡವರೆಲ್ಲರೂ ಸಮಾನರು, …
Read More »ಪಿಎಸ್ಸೈ ನೇಮಕಾತಿ ಹಗರಣ: ದಿವ್ಯಾ ಹಾಗರಗಿ ವಿರುದ್ಧ ಹೈಕೋರ್ಟ್ ಅಸಮಾಧಾನ, ಪಿಐಎಲ್ ವಜಾ
ಬೆಂಗಳೂರು, ಆ.2: ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಮನವಿಯನ್ನು ನಾವು ಏಕೆ ಪರಿಗಣಿಸಬೇಕೆಂದು ದಿವ್ಯಾ ಪರ ಹಾಜರಿದ್ದ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹಾಗರಗಿ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿ ಆದೇಶಿಸಿದೆ. ನರ್ಸಿಂಗ್ ಮಂಡಳಿ ಕಾರ್ಯವೈಖರಿ ಪ್ರಶ್ನಿಸಿ ದಿವ್ಯಾ ಹಾಗರಗಿ 2020ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ …
Read More »ಭಾರೀ ಮಳೆಗೆ ಧರೆಗುರುಳಿ ಕಾರಿನ ಮೇಲೆ ಬಿದ್ದ ಮರ: ಕರೆ ಮಾಡಿ ತಿಳಿಸಿದ್ರು ಕ್ಯಾರೆ ಎನ್ನದ ಬಿಬಿಎಂಪಿ ಸಿಬ್ಬಂದಿ
ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದ ಘಟನೆ ನಾಗರಭಾವಿ-ಬೆಂಗಳೂರು ಯೂನಿವರ್ಸಿಟಿ ರಸ್ತೆಯಲ್ಲಿ ನಡೆದಿದೆ. ಕಾರಿನ ಬಾನೆಟ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೇ ಕರೆ ಮಾಡಿದರೂ ಘಟನಾ ಸ್ಥಳಕ್ಕೆ ಬರಲು ಬಿಬಿಎಂಪಿ …
Read More »‘ಸಿದ್ದರಾಮಯ್ಯ’ ಜೀವನಾಧಾರಿತ ಚಲನಚಿತ್ರ ನಿರ್ಮಿಸಲು ಮುಂದಾದ ಉದ್ಯಮಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಇಂದು ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಲಾಗಿದೆ. ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, 6 ಲಕ್ಷಕ್ಕೂ ಅಧಿಕ ಮಂದಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯಲ್ಲಿ 150 ಗಣ್ಯರು ಕುಳಿತುಕೊಳ್ಳಲು ಸಜ್ಜುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ …
Read More »ಥೈಲ್ಯಾಂಡ್ಗೆ ಹಾರಿದ 777 ಚಾರ್ಲಿ ಚಿತ್ರತಂಡ:
ಸ್ಯಾಂಡಲ್ವುಡ್ನ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದು ಇದೀಗ ಹಳೆಯ ವಿಷಯ. ಚಿತ್ರವು ಬಾಕ್ಸ್ ಆಫೀಸ್ನಲ್ಲಿಯೂ ಸಖತ್ ಆಗಿ ಸದ್ದು ಮಾಡಿದ್ದು, ಸ್ಯಾಂಡಲ್ವುಡ್ನಲ್ಲಿ (Sandalwood) ಹೊಸದ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 777 ಚಾರ್ಲಿ (777 Charlie) ಯಾವ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿತ್ತು ಎಂದರೆ …
Read More »ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ: ಕಾಂಗ್ರೆಸ್ ಟೀಕೆ
ಬೆಂಗಳೂರು: ‘ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!. ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ ಅಥವಾ ಬಿಜೆಪಿvsಬಿಜೆಪಿ ಜಟಾಪಟಿಯ ಮುಂದುವರೆದ ಭಾಗವೇ? ಅಥವಾ ವಲಸಿಗ ಬಸವರಾಜ ಬೊಮ್ಮಾಯಿ ವಿರುದ್ದದ ಅಸಹನೆಯೇ’ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ …
Read More »ಸಮಾವೇಶ.. ಹಲವು ಸಂದೇಶ: ಸಿದ್ದರಾಮಯ್ಯ ಕೇಂದ್ರಬಿಂದು;
ಸಿದ್ದರಾಮಯ್ಯ-75 ಸಂಭ್ರಮಾಚರಣೆಯತ್ತ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಈ ಶಕ್ತಿ ಪ್ರದರ್ಶನದ ವೇದಿಕೆ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಿಸಲು ಕಾರಣವಾಗಬಹುದೇ? ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಭೂಮಿಕೆಯಾಗಬಹುದೇ? ಜಾತಿ ಸಮೀಕರಣ, ಮತಗಳ ಧ್ರುವೀಕರಣಕ್ಕೆ ಬೀಜಾಂಕುರವಾಗಬಹುದೇ? ಎಂಬ ಚರ್ಚೆಗಳು ನಡೆದಿವೆ. ಈ ಚರ್ಚೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಕಾಂಗ್ರೆಸ್ ಮಾತ್ರವಿಲ್ಲ, ಇತರ ಎರಡು ಪಕ್ಷಗಳೂ ಸಮಾವೇಶದ ಪರಿಣಾಮವನ್ನು ಆತಂಕದಿಂದಲೇ ಎದುರು ನೋಡುತ್ತಿವೆ. ಈ ಸಮಾವೇಶ ಸಿದ್ದರಾಮಯ್ಯ ಪಾಲಿಗೆ ಮಹತ್ವದ್ದು. ಕಾಂಗ್ರೆಸ್ ಹೆಸರಿನಲ್ಲಿ ಸಂಘಟನೆ …
Read More »
Laxmi News 24×7