Breaking News

ರಾಜ್ಯ

ರಸ್ತೆ ಬದಿ ಕಟ್ಟಡ ನಿರ್ಮಾಣಕ್ಕೆ ಅಂಕುಶ: ಸಚಿವ ಸಿ.ಸಿ.ಪಾಟೀಲ್‌

ಗದಗ: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನ ಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಲೋಕೋಪಯೋಗಿ ಇಲಾಖೆ ಯಿಂದ ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ವಿವರ ಗಳನ್ನೂ ನೀಡಿದ್ದಾರೆ. ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ 40 ಮೀ. ಅಂತರದವರೆಗೆ ಯಾವುದೇ ಕಟ್ಟಡ ಅಥವಾ …

Read More »

ಫಾಝಿಲ್‌ ಕೊಲೆ ಪ್ರಕರಣ: ಆರೋಪಿಗಳು 14 ದಿನ ಪೊಲೀಸ್‌ ಕಸ್ಟಡಿಗೆ

ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್‌ ಫಾಝಿಲ್‌ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳಾದ ಸುಹಾಸ್‌ ಶೆಟ್ಟಿ, ಮೋಹನ್‌, ಅಭಿಷೇಕ್‌, ಶ್ರೀನಿವಾಸ್‌, ದೀಕ್ಷಿತ್‌ ಮತ್ತು ಗಿರಿಧರ್‌ನನ್ನು ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಮೊದಲು ಬಂಧಿಸಲ್ಪಟ್ಟ ಕಾರು ಮಾಲಕ ಅಜಿತ್‌ ಕ್ರಾಸ್ತಾನನ್ನು ಈ …

Read More »

ತ್ರಿವರ್ಣ ಧ್ವಜ ವೈಭವ; ಕೆಂಪುಕೋಟೆಯಿಂದ ಸಂಸತ್‌ ಭವನಕ್ಕೆ ಸಂಸದರ ಬೈಕ್‌ ರ‍್ಯಾಲಿ

ನವದೆಹಲಿ: ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಅಭಿಯಾನಗಳನ್ನು ಕೈಗೊಂಡಿರುವಂತೆಯೇ ಎಲ್ಲೆಲ್ಲೂ “ತ್ರಿವರ್ಣ ಧ್ವಜ’ಗಳು ಕಂಗೊಳಿಸತೊಡಗಿವೆ. ರಾಜಕೀಯ ನಾಯಕರಾದಿಯಾಗಿ ಎಲ್ಲರ ಪ್ರೊಫೈಲ್‌ ಪಿಕ್ಟರ್‌ಗಳಲ್ಲಿ ತಿರಂಗಾ ರಾರಾಜಿಸುತ್ತಿವೆ.   ಮಂಗಳವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು “ತಿರಂಗಾ ಉತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಮನೆ -ಮನೆಗಳಲ್ಲೂ ಧ್ವಜ ಹಾರಾಟ ನಡೆಯಲಿದೆ. ಇದರ ನಡುವೆಯೇ, ದೆಹಲಿಯಲ್ಲಿ ಬುಧವಾರ ಸಂಸದರು ತಿರಂಗಾ ಬೈಕ್‌ ರ‍್ಯಾಲಿ ನಡೆಸಿದ್ದಾರೆ. ಕೆಂಪುಕೋಟೆಯಿಂದ ಹೊರಟು ಸಂಸತ್‌ ಭವನದವರೆಗೆ …

Read More »

ಬಿಜೆಪಿಗೆ ಬಿಸಿ ತಂದ ಸಿದ್ದರಾಮೋತ್ಸವದ ಯಶಸ್ಸು

ಬೆಂಗಳೂರು: ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಾ ಹೈರಾಣಾಗಿದ್ದ ರಾಜ್ಯ ಸರಕಾರಕ್ಕೆ‌ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸು ಈಗ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಹಾಗೂ‌ ಹೈಕಮಾಂಡ್ ನ ವಿಮರ್ಶೆಯ‌ ನಿಕಶಕ್ಕೆ ಒಳಗಾಗುವ ಸಾಧ್ಯತೆ ನಿಚ್ಚಳವಾಗಿದೆ.   ಬೊಮ್ಮಾಯಿ ಅವರ ಕಾರ್ಯಶೈಲಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಂಘ‌ಪರಿವಾರದ ಮುಖಂಡರು‌ ಇತ್ತೀಚೆಗೆ ತೀವ್ರ ಬೇಸರ‌ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಹತ್ಯೆಯಿಂದ‌ ಸೃಷ್ಟಿಯಾದ ಸೈದ್ಧಾಂತಿಕ …

Read More »

ಭೂ ಹಗರಣ ಪ್ರಕರಣ: ಸಂಜಯ್ ರಾವತ್ ಇ.ಡಿ ಕಸ್ಟಡಿ ಆಗಸ್ಟ್ 8ರವರೆಗೆ ವಿಸ್ತರಣೆ

ಮುಂಬೈ: ಪಟ್ರಾ ಚಾವ್ಲ್ ಭೂ ಪುನರ್ ಅಭಿವೃದ್ಧಿ ಪ್ರಕರಣ ಮತ್ತು ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಶಿವಸೇನಾ ಹಿರಿಯ ಮುಖಂಡ ಸಂಜಯ್ ರಾವತ್ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ.   ಇಂದು ರಾವತ್ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನಂತರ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ. ಭೂ ಹಗರಣಕ್ಕೆ …

Read More »

: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಲಿ ಎಂದ ಅಶ್ವತ್ಥ ನಾರಾಯಣ .

ಬೆಳಗಾವಿ: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಆಗ್ರಹಿಸಿದರು. ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ರಾಜಕೀಯ ನಿವೃತ್ತಿ ಪಡೆಯಬೇಕು. ಔಟ್‌ಡೇಟೆಡ್‌ ಮಾಡಲ್‌ಗ‌ಳು ಎಲ್ಲ ಆಯ್ತು. ಐದು ವರ್ಷ ಜನ ಭಾರ ಹೊತ್ತುಕೊಂಡಿದ್ದರು. ಇನ್ನು ಯಾರು ಭಾರ ಹೊರುವವರು ಎಂದು ಟೀಕಿಸಿದರು. ಜತೆಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ತಿಳಿಸಿದರು. ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ …

Read More »

ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಕೊನೆಯಾಗಲಿದೆಯೇ?

ನವದೆಹಲಿ: ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಕೊನೆಯಾಗಲಿದೆಯೇ? ರಾಜ್ಯಸಭೆಯಲ್ಲಿ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಆಡಿರುವ ಮಾತು ಇಂಥದ್ದೊಂದು ಸುಳಿವು ನೀಡಿದೆ. ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್‌ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ. ನಮ್ಮ ಮುಂದೆ 2 ಆಯ್ಕೆಗಳಿವೆ. ಒಂದನೆಯದು, ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ. ಇಲ್ಲಿ ಕಾರಿನಲ್ಲೇ ಜಿಪಿಎಸ್‌ ಅಳವಡಿಸಲಾಗುತ್ತದೆ. ಕಾರು ಟೋಲ್‌ ಪ್ಲಾಜಾ ದಾಟಿದ ತಕ್ಷಣ ಬ್ಯಾಂಕ್‌ ಖಾತೆಯಿಂದ ಟೋಲ್‌ ಮೊತ್ತ ಕಡಿತಗೊಳ್ಳುತ್ತದೆ. ಇನ್ನೊಂದು, …

Read More »

ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಅತಿಹೆಚ್ಚು ಜನ ಸೇರಿದ ಕಾರ್ಯಕ್ರಮ ‘ಸಿದ್ದರಾಮಯ್ಯ ಅಮೃತ ಮಹೋತ್ಸ’ವ

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು ಎನ್ನಲಾಗಿದೆ. ಬಹುಶ: ದೇಶದಲ್ಲಿಯೇ ಯಾವ ನಾಯಕನ ಹುಟ್ಟುಹಬ್ಬ ಇಷ್ಟೊಂದು ಅದ್ದೂರಿಯಾಗಿ ಆಚರಿಸಿರಲಿಲ್ಲ ಎಂದು ಹೇಳಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ದಾವಣಗೆರೆಗೆ ಜನಸಾಗರ ಹರಿದು ಬಂದಿತ್ತು. ಕಿಲೋಮೀಟರುಗಟ್ಟಲೇ ಜನ ಸೇರಿದ್ದು, ಈ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರು ಸೇರಿದ ಕಾರ್ಯಕ್ರಮ ಇದಾಗಿದೆ ಎನ್ನುವ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಾಕ್ಷಿಯಾಗಿದೆ. …

Read More »

ಸಾಲಗಾರರಿಗೆ ಮತ್ತೆ ಬಿಗ್ ಶಾಕ್: ರೆಪೊ ದರ ಹೆಚ್ಚಳದೊಂದಿಗೆ ಲೋನ್ ದುಬಾರಿ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್‌.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಷ್ಟು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಆಗಸ್ಟ್ 5 ರಂದು ರೆಪೊ ದರ ಹೆಚ್ಚಳದ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಸಾಲ ಮತ್ತೆ ದುಬಾರಿಯಾಗಲಿದೆ. ಎಲ್ಲಾ ಸಾಲಗಳ ಮೇಲಿನ …

Read More »

ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿತ

ಆಸ್ತಿ ವಿಚಾರವಾಗಿ ಮಾತನಾಡುವುದಿದೆ ಬಾ ಎಂದು ಕರೆದು ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಬೆಳಗಾವಿಯ ಅಂಕಲಗಿ ಮದುವಾಲ್‍ನಲ್ಲಿ ನಡೆದಿದೆ. ಅಂಕಲಿಗಿಯ ಮದುವಾಲ್ ಗ್ರಾಮದಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳಲ್ಲಿ ವಿವಾದ ಉಂಟಾಗಿದೆ. ಈ ವೇಳೆ ಹಿರಿಯರು ಕೂಡಿದ್ದಾರೆ ಬಾ ಎಂದು ಕರೆದು ಸವಿತಾ ಹಾಗೂ ಬಸಣ್ಣಿ ಸುತಗಟ್ಟಿ ಎಂಬ ದಂಪತಿಗಳನ್ನು ಹಿರಿಯರ ಸಮ್ಮುಖದಲ್ಲಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಾಳು ಸವಿತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ …

Read More »