Breaking News

ರಾಜ್ಯ

ರೈಲು ಅಪಘಾತ 53 ಮಂದಿ ಗಾಯ

ಮಹಾರಾಷ್ಟ್ರ: ರಾಯ್‌ಪುರದಿಂದ ನಾಗ್ಪುರ ಮಾರ್ಗವಾಗಿ ಹೋಗುತ್ತಿದ್ದ ಭಗತ್ ಕಿ ಕೋಠಿ ರೈಲು ಗೊಂದಿಯಾ ನಗರದ ಬಳಿ ಅಪಘಾತಕ್ಕೀಡಾಗಿದ್ದು, 53 ಮಂದಿ ಗಾಯಗೊಂಡಿದ್ದಾರೆ. ಭಗತ್ ಕಿ ಕೋಠಿ ರೈಲು ಮುಂಭಾಗದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಕೆಲವು ಕೋಚ್‌ಗಳು ಹಳಿ ತಪ್ಪಿವೆ. ಘಟನೆಯಿಂದ 53 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಬಂಧಿಯಾಗಿರುವ ಐಪಿಎಸ್​ ಅಧಿಕಾರಿ, ಜಾಮೀನು ನಿರಾಕರಿಸಿದ ಸೆಷನ್ಸ್ ನ್ಯಾಯಾಲಯ

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮೃತ್ ಪಾಲ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಅಮೃತ್‌ ಪಾಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 51ನೇ ಹೆಚ್ಚುವರಿ ನಗರ ಮತ್ತು ಸೆಷನ್ಸ್ ಕೋರ್ಟ್​​​​ನ ನ್ಯಾಯಾಧೀಶ ಯಶವಂತ ಕುಮಾರ್‌ ಅವರು ಮಂಗಳವಾರ ತೀರ್ಪು ನೀಡಿ ಜಾಮೀನು ಅರ್ಜಿ ವಜಾಗೊಳಿಸಿದರು. ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಅಮೃತ್ ಪಾಲ್​​ ಅವರು ಪಿಎಸ್‌ಐ …

Read More »

ಸ್ವಾತಂತ್ರ್ಯೋತ್ಸವದ ದಿನ ಜೇಬಿನಲ್ಲಿ ಚಾಕು ಯಾಕಿತ್ತು?, ಧ್ವಜ ಇರಬೇಕಿತ್ತು: ಪ್ರಮೋದ ಮುತಾಲಿಕ್

ಧಾರವಾಡ: ಶಿವಮೊಗ್ಗದಲ್ಲಿ ಸೋಮವಾರ ನಡೆದ ಗಲಾಟೆ ಆಕಸ್ಮಿಕವಾದದ್ದಲ್ಲ. ಮುಂಬರುವ ಗಣೇಶ ಮೆರವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆದಿದೆ ಎಂದು ಪ್ರಮೋದ ಮುತಾಲಿಕ್ ದೂರಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 40 ವರ್ಷದಿಂದ ಹಿಂದೂ ಮಹಾಸಭಾದ ಗಣೇಶ ಮೆರವಣಿಗೆ ಆಗುತ್ತದೆ. ಈ ಹಿಂದೆ ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದೆಂದು ಗಲಾಟೆ ಮಾಡಿದ್ದರು. ಆಗಿನಿಂದಲೇ ಸಂಘರ್ಷ ಆರಂಭವಾಗಿದೆ ಎಂದರು. ಸಾವರ್ಕರ್​ ಓರ್ವ ಪ್ರಖರ ಹಿಂದೂವಾದಿ ಮತ್ತು ರಾಷ್ಟ್ರೀಯವಾದಿ. ಅವರನ್ನು ವಿರೋಧಿಸುವುದು …

Read More »

ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ

ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ. ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ವೀರ ಸಾವರ್ಕರ್​ …

Read More »

ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.

ಬಳ್ಳಾರಿ: ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೈತರ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿತ್ತು. ಕೆಐಎಡಿಬಿ ಮೂಲಕ ವಶಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇತ್ತ ಉದ್ಯೋಗವಿಲ್ಲದೇ ಅತ್ತ ಭೂಮಿಯೂ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಬಳ್ಳಾರಿ ತಾಲೂಕಿನ ಕುಡುತಿನಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳಲ್ಲಿ ಬ್ರಹ್ಮಿಣಿ ಸ್ಟಿಲ್ ಹಾಗೂ ಮಿತ್ತಲ್ ಕಂಪನಿಗಾಗಿ ರೈತರಿಂದ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇತ್ತ ರೈತರು ತಮ್ಮ …

Read More »

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣಿಗೆ ಶರಣು

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ದೇಗಿನಾಳ ಗ್ರಾಮದಲ್ಲಿ ನಡೆದಿದೆ.   44 ವರ್ಷದ ಸುರೇಶ ಮಾಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಲ್ಲದೇ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.

Read More »

ದಿವಂಗತ ಸುರೇಶ್ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಒಂದು ಹಂತಕ್ಕೆ: ಗೋವಿಂದ ಕಾರಜೋಳ್

ದಿವಂಗತ ಸುರೇಶ್ ಅಂಗಡಿ ರವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನೆ ಈಗ ಒಂದು ಹಂತಕ್ಕೆ ಬಂದು ತಲುಪಿದ್ದು 444 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಒಂದು ವಾರದಲ್ಲಿ ಇದಕ್ಕೆ ಗೆಜೆಟ್ ನೋಟಿಫಿಕೇಶನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಚಿಂದ ಕಾರಜೋಳ್ ಹೇಳಿದ್ದಾರೆ. ಹೌದು ಇಂದು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿಯಲ್ಲಿ ಆಗಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಭೆಯನ್ನು ಆಯೋಜಿಸಲಾಗಿತ್ತು. …

Read More »

ಸರ್ಕಾರದ ಸೌಲಭ್ಯಗಳು ಸಮರ್ಪಕ ಬಳಕೆ ಆಗಲಿ: ಕಡಾಡಿ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಜಾರಿಗೆ ತರುವ ಸಾಲಸೌಲಭ್ಯಗಳನ್ನು ಕಲ್ಪಿಸಲು ಬ್ಯಾಂಕುಗಳು ಸಹಕರಿಸಬೇಕು. ವಿನಾಕಾರಣ ನೆಪವೊಡ್ಡಿ ಸೌಲಭ್ಯ ನಿರಾಕರಿಸಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.16) ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮಗಳಡಿ ಜಿಲ್ಲೆಗೆ ಒಟ್ಟಾರೆ 408 ಕೋಟಿ ರೂಪಾಯಿ ಅನುದಾನ ಹಾಗೂ ಸಾಲ-ಸೌಲಭ್ಯಗಳನ್ನು …

Read More »

ಬೊಮ್ಮಾಯಿ ಆರ್ ಎಸ್‌ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಇವರೇ. ಬೊಮ್ಮಾಯಿ ಆರ್ ಎಸ್‌ಎಸ್ ಕೈಗೊಂಬೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಫೋಟೋ ಹಾಕಲಿ ಬೇಡ ಎನ್ನುವುದಿಲ್ಲ. ಆದರೆ, ಸಾವರ್ಕರ್ ಫೋಟೋ ಹಾಕಿ ಟಿಪ್ಪು ಪೋಟೋ ತೆಗೆದಿದ್ದಾರೆ. ಹೀಗೆ ಮಾಡಿದರೆ ಗಲಭೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು. ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಲೇ …

Read More »

ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಕಾರಣ ಬಹಿರಂಗ

ಶಿವಮೊಗ್ಗ: ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಮುಬಾರಕ್‌ ಅಲಿಯಾಸ್‌ ಡಿಚ್ಚಿ ಹಲ್ಲೆ ನಡೆಸಿದ್ದಾನೆ. ಸೋಮವಾರ ಸಂಜೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಂತರ ಮುಬಾರಕ್‌ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಸುನೀಲ್ ದೂರು ನೀಡಿದ್ದಾನೆ.   ಈ ಹಲ್ಲೆಗೆ ಕಾರಣ ಎನ್ನಲಾದ ವಿಡಿಯೋ ಲಭ್ಯವಾಗಿದ್ದು, ಸೋಮವಾರ ಭದ್ರಾವತಿಯಲ್ಲಿ ಸುನೀಲ್‌ ಗುಡಿ-ಗುಡಿ ಆಡುತ್ತಿದ್ದಾಗ ಮುಬಾರಕ್‌ ಅದರ ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಮಾಡಿದ್ದಕ್ಕೆ ಮುಬಾರಕ್‌ ಅನ್ನು ಸುನೀಲ್‌ ಪ್ರಶ್ನಿಸಿದ್ದು, ಇಬ್ಬರ ನಡುವೆ ಜಗಳ …

Read More »