ಬೆಂಗಳೂರು : ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಆಹಾರ ಸಚಿವ ಉಮೇಶ್ ಕತ್ತಿ ಸಿಹಿಸುದ್ದಿ ನೀಡಿದದು, ಶೀಘ್ರವೇ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಚಿವ ಉಮೇಶ್ ಕತ್ತಿ, ಬಿಪಿಎಲ್ ಕಾರ್ಡ್ ಗೆ 1.5 ಲಕ್ಷ ಹೊಸ ಅರ್ಜಿ ಸ್ವೀಕರಿಸಲಾಗಿದೆ. ಹೊಸ ಕಾರ್ಡುದಾರರಿಗೆ ಪಡಿತರ ವಿತರಿಸಿದಲ್ಲಿ ಸರ್ಕಾರಕ್ಕೆ ಆಗುವ ಹೆಚ್ಚುವರಿ ಹೊರೆ ಬಗ್ಗೆ ಚರ್ಚೆಯಾಗಿದೆ. ಹೊಸ …
Read More »ಕೆಪಿಎಟಿಸಿಎಲ್ ಪರೀಕ್ಷೆ ಅಕ್ರಮ: ಮತ್ತೆ ಮೂವರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ದರ್ಜೆ ಸಹಾಯಕ ಹುದ್ದೆ ಲಿಖೀತ ಪರೀಕ್ಷೆ ವೇಳೆ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿ ಸಲಾಗಿದ್ದು, ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹುಕ್ಕೇರಿಯ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿರುವ ಕಮತನೂರ ಗ್ರಾಮದ ಆದೇಶ ಈರಪ್ಪ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರನಗಟ್ಟಿ (36) ಹಾಗೂ ಹೊಸಕೋಟಿ ಗ್ರಾಮದ ಶಂಕರ ಕಲ್ಲಪ್ಪ ಉಣಕಲ್ (30) ಎನ್ನುವವರನ್ನು ಬಂ ಧಿಸಲಾಗಿದೆ. ಬಂಧಿತರಿಂದ ಒಂದು …
Read More »ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಎಂಬುದಾಗಿ ಈಶ್ವರಪ್ಪಗೆ ಬೆದರಿಕೆ ಪತ್ರ
ಶಿವಮೊಗ್ಗ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಇಂದು ಬೆದರಿಕೆ ಪತ್ರವೊಂದುಬಂದಿದೆ. ಆ ಪತ್ರದಲ್ಲಿ ನಾಲಿಗೆ ಕಟ್ ಮಾಡುತ್ತೇನೆ ಹುಷಾರ್ ಎಂಬುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಅವರು ಪೊಲೀಸರಿಗೆ ಸೂಕ್ತ ತನಿಖೆ ನಡೆಸಿ, ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸುವಂತೆ ದೂರು ನೀಡಿದ್ದಾರೆ. ಶಾಸಕ ಕೆ.ಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಗರದಲ್ಲಿನ ಮಲ್ಲೇಶ್ವರದ ನಿವಾಸಕ್ಕೆ ಅನಾಮದೇಯ ಬೆದರಿಕೆ ಪತ್ರವೊಂದು ಬಂದಿದೆ. ಆ ಪತ್ರದಲ್ಲಿ ಸ್ವತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ …
Read More »ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ
ನವದೆಹಲಿ: ಕರ್ನಾಟಕದ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಆರೋಪಿ ತಪ್ಪಿಸಿಕೊಂಡಿದ್ದರೂ, ವಿದ್ಯುನ್ಮಾನ ಸಾಧನಗಳನ್ನು ಬಳಸಿ, ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ ಮತ್ತು ವಿಡಿಯೋ ಮಾರ್ಗವಾಗಿಯೂ ಪಡೆದುಕೊಳ್ಳಬಹುದು. ಈ ವೇಳೆ ಆರೋಪಿ ಪರ ವಕೀಲರು ಹಾಜರಿದ್ದರೆ ಸಾಕು. ಹಾಗೆಯೇ ಆರೋಪಿಯ ಗೈರಿನಲ್ಲೇ ವಿಚಾರಣೆ ನಡೆಸಿ, ಶಿಕ್ಷೆಯನ್ನೂ ಪ್ರಕಟಿಸಬಹುದು. ಈ ಕುರಿತ ಕರ್ನಾಟಕದ ತಿದ್ದುಪಡಿ ಮಸೂದೆ “ದ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್-2021’ಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. …
Read More »ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ
ಬೆಂಗಳೂರು : ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಅವರು ಬುಧವಾರ ಪ್ರೆಸ್ ಕ್ಲಬ್ ಬೆಂಗಳೂರು, ಇಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪತ್ರಕರ್ತರ ಹಲವಾರು ಬೇಡಿಕೆಗಳಿವೆ. ಪತ್ರಕರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಸಮಿತಿ ರಚಿಸಲು ನಾಳೆಯೇ ಆದೇಶ ಹೊರಡಿಸಲಾಗುವದು. ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದರು. ವಿಧಾನಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. …
Read More »ಗುತ್ತಿಗೆದಾರ ಸಂತೋಷ್ಗೂ ನನಗೂ ಯಾವುದೇ ಸಂಬಂಧವಿಲ್ಲ ನನಗೆ ಕ್ಲೀನ್‌ಚಿಟ್ ಸಿಗುತ್ತೆ: ಈಶ್ವರಪ್ಪ
ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ತಪ್ಪಿತಸ್ಥನಲ್ಲ. ಕೋರ್ಟ್ನಲ್ಲೂ ನನಗೆ ಕ್ಲೀನ್‌ಚಿಟ್ ಸಿಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅರ್ಜಿ ಸಲ್ಲಿಕೆ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತನಿಖೆಯಲ್ಲಿ ನನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಪ್ರಕರಣದಿಂದ ಮುಕ್ತವಾಗಿ ಹೊರಬಂದಿದ್ದೇನೆ. ಅವರಿಗೆ ಕೋರ್ಟ್‌ಗೆ ಹೋಗೋ ಅಧಿಕಾರ ಇದೆ, ಹೋಗಿದ್ದಾರೆ ಎಂದರು.
Read More »ಚಿಕ್ಕೋಡಿಯಲ್ಲಿ ವಿವಿಧ ದಲಿತ ಸಂಘಟನೆಗಳಿಂದ ತಾಲ್ಲೂಕು ಆಡಳಿತ ವಿರುದ್ಧ ಪ್ರತಿಭಟನೆ
ಇತ್ತೀಚೆಗೆ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸದೇ ತಾಲ್ಲೂಕು ಆಡಳಿತ ಅವಮಾನ ಮಾಡಿರೋದಾಗಿ ಆರೋಪಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕೋಡಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಯಿಂದ ಹೊರಟ ಮೆರವಣಿಗೆಯು ಬಸವ ಸರ್ಕಲ್ ಮೂಲಕ …
Read More »ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ
ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ರಿಲೀಫ್ ಪಡೆದುಕೊಂಡಿದ್ದ ಮಾಜಿ ಸಚಿವ ಈಶ್ವರಪ್ಪಗೆ ಇದೀಗ ಮತ್ತೆ ಸಂಕಷ್ಟ ಶುರವಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವರಿಗೆ ಕ್ಲೀನ್‌ಚಿಟ್ ನೀಡಿದ್ದ ತನಿಖಾಧಿಕಾರಿಗಳ ಕ್ರಮ ಪ್ರಶ್ನಿಸಿ ಸಂತೋಷ್ ಪಾಟೀಲ್ ಕುಟುಂಬ ಸದಸ್ಯರು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಲ್ಲಿಸಿರುವ ಬಿ-ವರದಿ ಪ್ರಶ್ನಿಸಿ ಮೃತ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ …
Read More »ಸರ್ಕಾರ ಸಮಯಕ್ಕೆ ಸರಿ ನಿರ್ಧಾರ ಕೈಗೊಳ್ಳುತ್ತಿಲ್ಲ: ಸಚಿವ ನಿತಿನ್ ಗಡ್ಕರಿ
ಮುಂಬೈ: “ಸರ್ಕಾರವು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಅದೇ ದೊಡ್ಡ ಸಮಸ್ಯೆ’ -ಹೀಗೆ ಹೇಳಿರುವುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ. ಮುಂಬೈನಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿತಿನ್ ಗಡ್ಕರಿ ಈ ಮಾತುಗಳನ್ನಾಡಿದ್ದಾರೆ. “ನೀವು ಪವಾಡಗಳನ್ನು ಸೃಷ್ಟಿಸಬಹುದು. ಆ ಸಾಮರ್ಥ್ಯ ಇಲ್ಲಿದೆ. ಮೂಲ ಸೌಕರ್ಯ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ನಾವು ಅತ್ಯುತ್ತಮ ತಂತ್ರಜ್ಞಾನ, ನಾವಿನ್ಯತೆ, ಸಂಶೋಧನೆಯನ್ನು ಅಳವಡಿಸಿಕೊಳ್ಳಬೇಕು. …
Read More »ಕೊಡವರ ಪರ ಜಗ್ಗೇಶ ಹೇಳಿಕೆಗೆ ಯತ್ನಾಳ್ ಸಮರ್ಥನೆ
ವಿಜಯಪುರ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಉರುಳುತ್ತವೆ ಎಂದಿರುವ ಸಂಸದ ಜಗ್ಗೇಶ ಹೇಳಿಕೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆ ಸಮರ್ಥಿಸಿದ್ದಾರೆ. ಮಾಧ್ಯಮಗಳ ಮಟ್ಟಿಗೆ ಅದು ವಿವಾದಾತ್ಮಕ ಇರಬಹುದು, ಆದರೆ ವಾಸ್ತವ ಹಾಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬುಧವಾರ ನಗರದಲ್ಲಿ ವಿಜಯಪುರ ನಗರದ ಗಾಂಧಿಚೌಕ್ ಬಳಿ ಪಾಲಿಕೆಯ ವಲಯ ಕಚೇರಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು …
Read More »
Laxmi News 24×7