Breaking News

ರಾಜ್ಯ

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೈಸೂರು: ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮೊದಲು ಅವರ‌ ಮಂಪರು ಪರೀಕ್ಷೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿದರೆ ಮಂಗಳೂರಿನಲ್ಲಿ ಪಿಎಫ್ ಐ – ಎಸ್ ಡಿಪಿಐ ಜೊತೆ ಯಾರ ಸಂಬಂಧವಿದೆ ಎಂದು ಗೊತ್ತಾಗುತ್ತದೆ ಎಂದರು. ಗುಜರಾತ್ ಚುನಾವಣೆ ವೇಳೆ ಯಾವಾಗಲೂ ನರೇಂದ್ರ ಮೋದಿಗೆ …

Read More »

ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

ಸರ್ಕಾರಿ ಉದ್ಯೋಗವೇ ಹಾಗೆ, ಒಮ್ಮೆ ಜಾಬ್ ಆದ್ರೆ ಸಾಕು ಆಮೇಲೆ ಲೈಫ್ ಫುಲ್ ಸೆಟಲ್ ಅನ್ನೋದು ಹೆಚ್ಚಿನವರ ಅಭಿಪ್ರಾಯ. ‌ಅದರಲ್ಲೂ ವೇತನ‌ ಹೆಚ್ಚಾಯಿತು ಅಂದ್ರೆ ಅದರಲ್ಲಿ ಸಿಗೋ ಸಂತೋಷ ಮತ್ಯಾವುದರಿಂದಲೂ‌ ಸಿಗಲ್ಲ‌‌ ಎಂಬ‌ ಅನುಭವ ಆಗುತ್ತದೆ. ಇದೀಗ ಇದೇ ಸರ್ಕಾರಿ ನೌಕರರಿಗೆ ಹೊಸ ವರ್ಷಾರಂಭದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಮೂಲಕ ಚುನಾವಣೆ ವರ್ಷದಲ್ಲಿ ನೌಕರ ವರ್ಗಕ್ಕೆ ಭರ್ಜರಿ ಗಿಫ್ಟ್ ದೊರಕಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ …

Read More »

BIGGNEWS : ನಾನು ಮನಸ್ಸು ಮಾಡಿದ್ರೆ, ಬಿಜೆಪಿ ಕಾರ್ಯಕ್ರಮ ಫ್ಲೆಕ್ಸ್‌ ಎಲ್ಲೂ ಹಾಕೋದಕ್ಕೆ ಬಿಡಲ್ಲ : ಡಿಕೆಶಿ

ಬೆಂಗಳೂರು : ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ‌ ಯಾತ್ರೆ ಫ್ಲೆಕ್ಸ್‌ ಹಾಕಿದ್ದನ್ನು ಹರಿದು ಹಾಕಿದ ವಿಚಾರ ತಿಳಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಫ್ಲೆಕ್ಸ್‌ ಹರಿದು ಹಾಕುವುದು ಒಳ್ಳೆಯ ಸಂಸ್ಕೃತಿಯಲ್ಲ. ಚುಚ್ಚಿದರು ಗುಂಡುಕ್ಕಿದರೂ ಕಾಂಗ್ರೆಸ್ಸಿಗರು ಹೆದರಲ್ಲ. ನಾನು ಮನಸ್ಸು ಮಾಡಿದ್ರೆ ಅವರು ಎಲ್ಲೂ ಕಾರ್ಯಕ್ರಮ ಪ್ಲೇಕ್ಸ್‌ ಹಾಕೋದಕ್ಕೆ ಆಗಲ್ಲ. ಸಿಎಂ ಮತ್ತು ಅವರ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ …

Read More »

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ರಬಕವಿ-ಬನಹಟ್ಟಿ: ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಅದನ್ನೇ ಪ್ರತಿನಿತ್ಯ ತಮ್ಮ ಕುಟುಂಬದೊಂದಿಗೆ ಮುಂದುವರೆಸಿಕೊಂಡು ಕಲ್ಲು ಗುಡ್ಡಗಳ ಭೂಮಿಯನ್ನು ಹದ ಮಾಡಿ ಈ ಭಾಗದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದು ಲಕ್ಷಾಂತರೂಗಳ ಲಾಭಗಳಿಸಬಹುದು ಎಂಬುದನ್ನು ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿಯ ಮಲ್ಲಿಕಾರ್ಜುನ ಹನಮಂತ ಜನವಾಡ ತೋರಿಸಿಕೊಟ್ಟಿದ್ದಾರೆ.   ಮಲ್ಲಿಕಾರ್ಜುನ ಕಲಿತಿದ್ದು ಎಸ್.ಎಸ್.ಎಲ್.ಸಿ ಆದರೆ ಸಾಧನೆ ಮಾತ್ರ ಮುಗಿಲೆತ್ತರದು. ಕೇವಲ 1 ಎಕರೆ ಜಾಗದಲ್ಲಿ ಗ್ಯಾಲನ್ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳ ಅವಧಿಯಲ್ಲಿ …

Read More »

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಬುಧವಾರ (ಸೆಪ್ಟೆಂಬರ್ 28) ಶೇ.34ರಿಂದ ಶೇ.38ಕ್ಕೆ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ದೇಶಾದ್ಯಂತ 50 ಲಕ್ಷಕ್ಕಿಂತ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.     ಭಾರತ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಅಥವಾ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆಯನ್ನು ನೀಡುತ್ತದೆ. ಈ ಹಿಂದೆ ಕೇಂದ್ರ …

Read More »

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಜೊಲ್ಲೆ

ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ “ಕುಂಕುಮಾರ್ಚನೆ”ನಡೆಸಲು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾಜೊಲ್ಲೆ ಸೂಚನೆ ನೀಡಿದ್ದಾರೆ.   ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿದೆ. ಅದರಂತೆ ದಿನಾಂಕ 30.09.2022 …

Read More »

ಬೂತ್ ಕಾರ್ಯಕರ್ತರೇ ಬಿಜೆಪಿ ಪಕ್ಷದ ಮಾಲೀಕರು: ಅರುಣ್ ಸಿಂಗ್

ಕಲಬುರಗಿ: ಸಾಮಾನ್ಯ ಕಾರ್ಯಕರ್ತರ ಗುರುತಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಏಕೈಕ ಪಕ್ಷ ದೇಶದಲ್ಲಿ ಇದ್ದರೆ ಅದು ಬಿಜೆಪಿ ಪಕ್ಷ. ಹೀಗಾಗಿ ಪಕ್ಷದ ಕಾರ್ಯಕರ್ತರೆ ನಮ್ಮ ಮಾಲೀಕರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ಹೇಳಿದರು.   ಜೇವರ್ಗಿ ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತ್ರ ಯಜಮಾನರು.ಆದರೆ ನಮ್ಮಲ್ಲಿ ಕಾರ್ಯಕರ್ತರೇ ನಮ್ಮ ಜೀವಾಳ ಎಂದರು.

Read More »

ಕಾಂಗ್ರೆಸ್ ನ ನಾಗೇಂದ್ರ ಸೇರಿದಂತೆ ನಾಲ್ಕು ಶಾಸಕರು ಬಿಜೆಪಿಗೆ: ಸೋಮಶೇಖರ ರೆಡ್ಡಿ ಹೊಸ ಬಾಂಬ್

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮೂರು -ನಾಲ್ಕು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. ಬಳ್ಳಾರಿ ನಗರ ಬಿಜೆಪಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಷ್ಟೇ ಸಿನಿಮಾ ಶುರುವಾಗಿದ್ದು, ಮುಂದೆ ಯಾರು ಎಲ್ಲಿ ಹೋಗುತ್ತಾರೆ ಎಂಬುದು ತಿಳಿಯಲಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರು ಹೋಗಲ್ಲವೆಂದು ತಿಳಿಸಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ …

Read More »

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಬೆಂಗಳೂರು: ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದೇ ಮೊದಲ ಆದ್ಯತೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಪೂರ್ವ ವಿಭಾಗದ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ವೊಬ್ಬರು ತಮ್ಮ ಅಧೀನ ಸಿಬ್ಬಂದಿಗೆ ಪ್ರತಿ ದಿನ 40 ಪ್ರಕರಣ ದಾಖಲಿಸಬೇಕು ಎಂದು ಆದೇಶ ನೀಡಿರುವ ಪತ್ರವೊಂದು ವೈರಲ್‌ ಆಗಿದೆ.   ನಿತ್ಯ ಕನಿಷ್ಠ 40 ಪ್ರಕರಣ ದಾಖಲಿಸಿಕೊಳ್ಳಬೇಕು. ನಿಗದಿತ ಸಂಖ್ಯೆಯಲ್ಲಿ ಕೇಸ್‌ ದಾಖಲಿಸದಿದ್ದರೆ ಕರ್ತವ್ಯ …

Read More »

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಕೇರಳ: ಪತ್ರಕರ್ತೆಯೊಬ್ಬರಿಗೆ ನಟನೊಬ್ಬ ಅಸಭ್ಯವಾಗಿ ನಿಂದಿಸಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಮಲಯಾಳಂ ಸಿನಿಮಾರಂಗದಲ್ಲಿ ಮತ್ತೊಂದು ಘಟನೆ ನಡೆದಿದೆ. ಸಿನಿತಾರೆಯರು ತಮ್ಮ ಚಿತ್ರದ ಪ್ರಮೋಷನ್‌ ಗಾಗಿ ಮಾಲ್‌, ಥಿಯೇಟರ್‌ ಗೆ ಹೋಗುವಾಗ, ಅಭಿಮಾನಿಗಳು, ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ.‌ ಮಂಗಳವಾರ ಕೇರಳದ ಕೋಜಿಕೋಡ್‌ ಮಾಲ್ ವೊಂದರಲ್ಲಿ “ಸ್ಯಾಟರ್‌ ಡೇ ನೈಟ್”‌ ಎನ್ನುವ ಸಿನಿಮಾ ಪ್ರಚಾರದಲ್ಲಿ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು.   ಮೆಚ್ಚಿನ ಕಲಾವಿದರನ್ನು ನೋಡಲು ಅಭಿಮಾನಿಗಳು, ಪ್ರೇಕ್ಷಕರು ಮುಗಿಬಿದ್ದಿದ್ದು, ಅವರನ್ನು ನಿಯಂತ್ರಣ ಮಾಡಲು ಪೊಲೀಸರು …

Read More »