ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋದವರನ್ನು ಸಂಕನೂರು ಗ್ರಾಮದ ಗಿರಿಜಾ ಕಲ್ಲನಗೌಡ ಮಾಲಿ ಪಾಟೀಲ್ (32), ಭುವನೇಶ್ವರಿ ಶಾಂತವೀರಯ್ಯ ಪೊಲೀಸ್ ಪಾಟೀಲ್ (40) ಪವಿತ್ರಾ ಸಿದ್ದಯ್ಯ ಪೊಲೀಸ್ ಪಾಟೀಲ್(45) ವೀಣಾ ಬಸವರಾಜ ಮಾಲಿ ಪಾಟೀಲ್(19) ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಮಹಿಳೆಯರು ಗ್ರಾಮ ಸಮೀಪದಲ್ಲಿನ ಸೀಡ್ಸ್ ಕಂಪನಿಯಲ್ಲಿ ಹತ್ತಿ ಬೀಜ …
Read More »ಹೌಸಿಂಗ್ ಸೊಸೈಟಿ ಹೆಸರಿನಲ್ಲಿ ವಂಚನೆ: ನಿರ್ದೇಶಕ ಅರೆಸ್ಟ್, ಮಾಜಿ ಅಧ್ಯಕ್ಷ ಎಸ್ಕೇಪ್
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭೂಮಿ ಕಬಳಿಸಲು ಕಿಡಿಗೇಡಿಗಳು ಇಲ್ಲದ ದಾಖಲೆಗಳನ್ನು ಸೃಷ್ಟಿ ಮಾಡಿ ಮೋಸ ಮಾಡುತ್ತಿರುವ ಹಲವು ಪ್ರಕರಣಗಳು ಕಂಡುಬಂದಿವೆ. ಅದೇ ರೀತಿಯಲ್ಲಿ ಬೋಗಸ್ ಹೌಸಿಂಗ್ ಸೊಸೈಟಿ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಸ್ಥೆಯ ನಿರ್ದೇಶಕ ಹಾಗೂ ಸಿಇಒ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇತ್ತೀಚೆಗೆ ವಂಚನೆ ಪ್ರಕರಣವೊಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೌಸಿಂಗ್ ಸೊಸೈಟಿಯ ಹಾಲಿ ನಿರ್ದೇಶಕ …
Read More »ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
ದಾವಣಗೆರೆ: ರೀಲ್ಸ್ (Reels) ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davangere) ಜಿಲ್ಲೆ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ನಡೆದಿದೆ. ಮೃತರನ್ನು ಹರಿಹರದ ಆಶ್ರಯ ಬಡಾವಣೆ ಪವನ್ (25), ಪ್ರಕಾಶ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರಾಗಿದ್ದು, ರೀಲ್ಸ್ ಮಾಡಲು ಹೋಗಿ ನೀರಲ್ಲಿ ಬಿದ್ದ ಪ್ರಕಾಶ್ ನನ್ನು ರಕ್ಷಿಸಲು ಹೋಗಿ ಪವನ್ ಸಹ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
Read More »ನಾನು ಬ್ಲ್ಯಾಕ್ ಇದ್ದೇನೆ, ಆದ್ರೆ ಬ್ಲ್ಯಾಕ್ ಮೇಲರ್ ಅಲ್ಲ:H.D.K.
ರಾಮನಗರ: ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ (Blackmail) ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ತಿಳಿಸಿದ್ದಾರೆ. ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದರು. ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ನಾನು ಬ್ಲ್ಯಾಕ್ ಇದ್ದೇನೆ, ಆದರೆ ಬ್ಲ್ಯಾಕ್ ಮೇಲರ್ …
Read More »ಮಾಜಿ ಸಿಎಂ ಎಸ್ಎಂ ಕೃಷ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಎಸ್ಎಂ ಕೃಷ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ ಭಾನುವಾರ ಹಿರಿಯ ಮುಖಂಡ ಎಸ್.ಎಂ ಕೃಷ್ಣ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಮಾಜಿ ಸಿಎಂ ಇದೀಗ ಸಂಪೂರ್ಣ ಗುಣಮುಖರಾಗಿ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆಸ್ಪತ್ರೆಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಸಚಿವರು ಭೇಟಿ ನೀಡಿ, ಮಾಜಿ ಸಿಎಂ ಆರೋಗ್ಯ …
Read More »ಗಾಂಧಿ ಜಯಂತಿ ಹಿನ್ನೆಲೆ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
ಬೆಂಗಳೂರು: ಗಾಂಧಿ ಜಯಂತಿಯ ಪ್ರಯುಕ್ತ ನಾಳೆ ಅಕ್ಟೋಬರ್ 2ರಂದು ನಗರದಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶುಸಂಗೋಪನಾ ವಿಭಾಗ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಕಸಾಯಿಖಾನೆಗಳಲ್ಲಿ ಪ್ರಾಣಿಗಳನ್ನು ಕಡಿಯುವುದನ್ನು ಮತ್ತು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
Read More »ಡಿಕೆಶಿ, ಸಿದ್ದರಾಮಯ್ಯ ಎಂದರೆ 3 ,6 ಇದ್ದ ಹಾಗೆ, ಎಣ್ಣೆ ಮತ್ತು ಸೀಗೇ ಕಾಯಿ ಒಂದಾಗಲು ಸಾಧ್ಯವೇ?
ಬೆಂಗಳೂರು: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಂದರೆ 36 ಇದ್ದಂತೆ. ಎರಡೂ ಮುಖ ಎಂದಿಗೂ ಸೇರುವುದಿಲ್ಲ. ಎಣ್ಣೆ ಮತ್ತು ಸೀಗೇ ಕಾಯಿ ಒಂದಾಗಲು ಸಾಧ್ಯವೇ? ಎಂದೂ ಸಾಧ್ಯವಿಲ್ಲ. ಅವರಿಬ್ಬರೂ ಒಂದಾಗಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಬ್ಬರೂ ಒಂದಾಗಲು ಪ್ರಯತ್ನ ಮಾಡುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರ ದಾರಿ …
Read More »ವರ್ಕೌಟ್ ವೇಳೆ ಹೃದಯ ಸ್ತಂಭನ: Jr ಸಲ್ಮಾನ್ ಖಾನ್ ನಿಧನ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಡೂಪ್ ಆಗಿ ಅಭಿನಯಿಸುತ್ತಿದ್ದ ಸಾಗರ್ ಪಾಂಡೆ ನಿಧನರಾಗಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನವಾಗಿ ಶುಕ್ರವಾರದಂದು ಇಹಲೋಕ ತ್ಯಜಿಸಿದ್ದಾರೆ. ಸಾಗರ್ ಪಾಂಡೆ ನಿಧನಕ್ಕೆ ಸಿನರಂಗ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಸಾಗರ್ ಪಾಂಡೆ ಭಜರಂಗಿ ಭಾಯಿಜಾನ್ ಸಿನಿಮಾ ಸೇರಿದಂತೆ ಸುಮಾರು 50 ಸಿನಿಮಾಗಳಲ್ಲಿ ಡೂಪ್ ಆಗಿದ್ದರು. ಕಬೀರ್ ಖಾನ್ ನಿರ್ದೇಶನದ 2015ರ ಭಜರಂಗಿ ಭಾಯಿಜಾನ್ ಸೆಟ್‌ನ ಥ್ರೋಬ್ಯಾಕ್ ಚಿತ್ರವನ್ನು ಸಲ್ಮಾನ್ …
Read More »ಭರ್ತಿಯಾಗಿ ಕೋಡಿ ಬಿತ್ತು ನಟ ಯಶ್ ಅಭಿವೃದ್ಧಿಪಡಿಸಿದ್ದ ತಲ್ಲೂರು ಕೆರೆ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಕೋಡಿ ಬಿದ್ದಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರು 2016 ರಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಹೂಳು ತೆಗೆಸಿ ಕೆರೆ ಅಭಿವೃದ್ಧಿಪಡಿಸಿದ್ದರು. ಸುಮಾರು 96 ಎಕರೆ ವಿಸ್ತೀರ್ಣದ ಕೆರೆಯಿಂದ 1038 ಎಕರೆ ಜಮೀನಿಗೆ ನೀರಾವರಿ ಕಲ್ಪಿಸಲಾಗುತ್ತದೆ. ಕಳೆದೆರಡು ದಿನಗಳಿಂದ ಭಾರಿ ಮಳೆಯಾಗಿ ಕೆರೆ ತುಂಬಿ ಕೋಡಿ ಬಿದ್ದಿದೆ. ಜಲಪಾತದಂತೆ ಕೋಡಿ ನೀರು ಭೋರ್ಗರೆಯುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ …
Read More »ಮೈಸೂರು ಅರಮನೆ; ಇತಿಹಾಸ, ನಿರ್ಮಾಣ ಖರ್ಚು, ವಿನ್ಯಾಸ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ
ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಮೈಸೂರು ಅರಮನೆ ಮೈಸೂರು ದಸರಾದ ಕೇಂದ್ರ ಬಿಂದುವಾಗಿದೆ. ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುವ ಅರಮನೆ ದಸರಾ ಬರುತ್ತಿದ್ದಂತೆಯೇ ಥೇಟ್ ಇಂದ್ರನ ಅಮರಾವತಿಯಾಗಿ ಬಿಡುತ್ತದೆ. ಮೈಸೂರು ದಸರಾದ ಪ್ರಮುಖ ವಿಧಿ ವಿಧಾನಗಳು ಇಲ್ಲಿಯೇ ನಡೆಯುತ್ತದೆ. ಖಾಸಗಿ ದರ್ಬಾರ್ ರಾಜವೈಭವಕ್ಕೆ ಸಾಕ್ಷಿಯಾಗಿದೆ. ಯಾರೇ ಆಗಲಿ ಮೈಸೂರು ಅರಮನೆ ನೋಡುತ್ತಿದ್ದಂತೆಯೇ ಇತಿಹಾಸವನ್ನು ಮೆಲುಕು ಹಾಕುವ ಪ್ರಯತ್ನ ಮಾಡುತ್ತಾರೆ. ಮೈಸೂರು …
Read More »
Laxmi News 24×7