Breaking News

ರಾಜ್ಯ

ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆ,ಮುಂದುವರಿದ ಶೋಧ ಕಾರ್ಯ

ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಓರ್ವ ಬಹಳ ಸಮಯದವರೆಗೆ ಮೇಲೆ ಬಂದಿಲ್ಲ. ಹೀಗೆ ನೀರಿನಲ್ಲಿ ನಾಪತ್ತೆಯಾಗಿರುವ ಯುವಕನ ಹೆಸರು 22 ವರ್ಷದ ಸತೀಶ ಎನ್ನಲಾಗುತ್ತಿದೆ. ಈತ …

Read More »

ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: ಚಾರ್ಜ್​ಶೀಟ್​ನಲ್ಲಿ ಕೀಚಕ ಕಾಂತರಾಜ್​ನ ಕರಾಳ ಇತಿಹಾಸ ಬಯಲು​

ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: ಚಾರ್ಜ್​ಶೀಟ್​ನಲ್ಲಿ ಕೀಚಕ ಕಾಂತರಾಜ್​ನ ಕರಾಳ ಇತಿಹಾಸ ಬಯಲು​ ಮಂಡ್ಯ: ಅ.11 ರಂದು ಮಳವಳ್ಳಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎರಡೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 638 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಪೊಲೀಸರು, ಟ್ಯೂಷನ್ ಮೇಲ್ವಿಚಾರಕ ಎಸಗಿದ ಭಯಾನಕ ಕೃತ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.   ಅ. 11ರಂದು ಟ್ಯೂಷನ್​ ಮೇಲ್ವಿಚಾರಕ ಕಾಂತರಾಜು …

Read More »

ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..

ವರ್ಷಕ್ಕೆ ಎರಡೇ ದಿನ ವೇಷ.. ಹೀಗೆ 8 ವರ್ಷಗಳಿಂದ ವೇಷ ಹಾಕಿ ತಿರುಗಿ ಹಣ ಸಂಗ್ರಹಿಸಿ ಅನಾರೋಗ್ಯದಲ್ಲಿದ್ದ ಮಕ್ಕಳ ಚಿಕಿತ್ಸೆಗೆ ಪೂರ್ತಿಯಾಗಿ ಕೊಟ್ಟಿರುವ ಇವರು ಆ ಮಕ್ಕಳ ಪಾಲಿಗೆ ಆಪದ್ಬಾಂಧವ. ಇನ್ನೂ ಇರುವ ಅಂಥ ಇತರ ಮಕ್ಕಳ ಪಾಲಿಗೆ ಆಶಾಕಿರಣ.   ರವಿಕಾಂತ ಕುಂದಾಪುರ ‘ಉದರನಿಮಿತ್ತಂ ಬಹುಕೃತ ವೇಷಂ..’ ಹೌದು.. ಹೊಟ್ಟೆಪಾಡಿಗಾಗಿ ಹಲವರು ನಾನಾ ವೇಷ ಹಾಕುತ್ತಾರೆ. ಆದರೆ ಇಲ್ಲೊಬ್ಬರು ನಾನಾ ವೇಷ ಹಾಕುತ್ತಾರಾದರೂ ಅದು ಹೊಟ್ಟೆಪಾಡಿಗಲ್ಲ. ಅವರ ವೇಷ …

Read More »

ರಾಜ್ಯದಲ್ಲಿ ತಾಪಮಾನ ಭಾರಿ ಕುಸಿತ : ಮೈನಡುಗುವ ಚಳಿಗೆ ಹೊರಬಾರದ ಜನ!

ಬೆಂಗಳೂರು : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ.   ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ರಾಜ್ಯದ ಶೇ. 73 ರಷ್ಟು ಭೂ ಭಾಗದಲ್ಲಿ 12 ರಿಂ ದ16 ಡಿಗ್ರಿ ಸೆಲ್ಸಿಯಸ್ …

Read More »

ದೀಪಾವಳಿ ವಿಶೇಷ; ಬಲಿಪಾಡ್ಯದ ಮಹತ್ವ

ಐದು ದಿನಗಳ ಕಾಲ ಶ್ರದ್ಧಾಭಕ್ತಿ-ಸಡಗರದಿಂದ ಆಚರಿಸುವ ಹಬ್ಬ ದೀಪಾವಳಿ. ಇದರಲ್ಲಿ ಬಲಿಪಾಡ್ಯವನ್ನು ಈ ಬಾರಿ ಅ. 26ರಂದು ಆಚರಿಸಲಾಗುತ್ತದೆ. ವಾಮನನು ತ್ರಿವಿಕ್ರಮರೂಪಿಯಾಗಿ ಬಲಿಚಕ್ರವರ್ತಿಯನ್ನು ಸುತಲಲೋಕಕ್ಕೆ ಕಳುಹಿಸಿದ ದಿನವೇ ಬಲಿಪ್ರತಿಪತ್. ಮಹಾಧಾರ್ವಿುಕನಾದ ಬಲಿಮಹಾರಾಜನಿಗೂ ತಾನು ಎಲ್ಲವನ್ನು ಗೆದ್ದ ಮಹಾಚಕ್ರವರ್ತಿ ಎಂಬ ಅಹಂಕಾರ ಬಂದಿತು. ಆ ಅಹಂಕಾರವನ್ನು ನಾಶಗೊಳಿಸಬೇಕೆಂದೇ ನಾರಾಯಣನು ವಾಮನರೂಪಿಯಾಗಿ ಬಂದು ಮೂರು ಪಾದ ಭೂಮಿಯನ್ನು ದಾನವಾಗಿ ಕೇಳಿದನು. ಸರ್ವಸ್ವವೂ ನನ್ನಾಧೀನದಲ್ಲಿರುವಾಗ ಬೇಕಾದ್ದನ್ನು ಕೊಡುವೆ ಎಂಬ ಅಹಂಕಾರದಿಂದ ಬಲಿಯು ಹೇಳುತ್ತಾನೆ. ಅದಕ್ಕೆ …

Read More »

ಬ್ರಿಟಿಷರ ಮಂಡಿಯೂರಿಸಿದ್ದ ರಾಣಿ ಕಿತ್ತೂರು ಚನ್ನಮ್ಮಾಜಿ

1585 ರಿಂದ 1824ರವರೆಗೆ 12 ರಾಜರ ಆಳ್ವಿಕೆಯನ್ನು ನಂತರ ಸಂಸ್ಥಾನದ ಸಂದಿಗ್ಧತೆಯಲ್ಲಿ ರಾಣಿ ಚನ್ನಮ್ಮಾಜಿಯ ಸೂಕ್ತ ನಾಯಕತ್ವ ಕಿತ್ತೂರು ಸಂಸ್ಥಾನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಸಿತು. ರಾಣಿ ಚನ್ನಮ್ಮಾ ಇವತ್ತಿನ ಬೆಳಗಾವಿ ಜಿಲ್ಲೆಯ ಕಾಕತಿಯ(ಸಾಂಗ್ಲಿ ಸಂಸ್ಥಾನ) ದೂಳಪ್ಪಗೌಢ ದೇಸಾಯಿಯ ಮಗಳಾಗಿ ಜನ್ಮ ತಾಳಿದಳು. ನಂತರ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿಯ ಕೈ ಹಿಡಿದು ಕಿತ್ತೂರಿನ ಸಂಸ್ಥಾನಕ್ಕೆ ರಾಜ ಕಳೆ ತಂದು ಕೊಟ್ಟಳು. 1816ರಲ್ಲಿ ದೊರೆ ಮಲ್ಲಸರ್ಜ ದೇಸಾಯಿ ನಿಧನದ ನಂತರ ಸಂಸ್ಥಾನದಲ್ಲಿ …

Read More »

ಅಸಾಮಾನ್ಯ ಮಕ್ಕಳಿಗೆ ಬೇಕು ವಿಶೇಷ ಕಾಳಜಿ-ಆರೈಕೆ

ಬೆಳಗಾವಿ: ಸಾಮಾನ್ಯ ಮಕ್ಕಳ ಬೆಳವಣಿಗೆಯಂತೆ ಆರೋಗ್ಯದ ಹಾಗೂ ಅಂಗವೈಕಲ್ಯದ ಸವಾಲು ಎದುರಿಸುತ್ತಿರುವ ಅಸಾಮಾನ್ಯ ಮಕ್ಕಳ ಬೆಳವಣಿಗೆ ಇರುವುದಿಲ್ಲ. ಅವರಿಗೆ ವಿಶೇಷ ಕಾಳಜಿ ಹಾಗೂ ಆರೈಕೆ ಮಾಡುವುದು ಬಹಳ ಮುಖ್ಯ. ಅವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಭೌತಿಕ ಚಿಕಿತ್ಸೆ ಅತ್ಯವಶ್ಯವಾಗಿ ಬೇಕು. ಇದರಲ್ಲಿ ತಾಯಂದಿರ ಕಾರ್ಯ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕಾಹೆರನ ಉಸ್ತವಾರಿ ಉಪಕುಲಪತಿ ಹಾಗೂ ಡಾ| ಎನ್‌ ಎಸ್‌ ಮಹಾಂತಶೆಟ್ಟಿ ಹೇಳಿದರು. ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ …

Read More »

ಬೆಳಗಾವಿಯಲ್ಲಿ ಕಸಾಪದಿಂದ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆಯನ್ನು ಬೆಳಗಾವಿಯಲ್ಲಿ ಆಚರಿಸಲಾಯಿತು. ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಸರ್.ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಈ ವೇಳೆ ಮೈಸೂರಿನ ನಲ್ವಡಿ ಕೃಷ್ಣರಾಜ್ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಇಸ್ಮಾಯಿಲ್ ಮಿರ್ಜಾ ಅವರ ಭಾವಚಿತ್ರಗಳಿಗೆ ಗಣ್ಯರು ಪೂಜೆ ಸಲ್ಲಿಸಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ …

Read More »

80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

ಬೆಂಗಳೂರು: ಕಾಂಗ್ರೆಸ್‍ನ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದರು. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಬಸ್ ಯಾತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರ ಬಸ್ ಈಗಾಗಲೇ ಪಂಕ್ಚರ್ ಆಗಿದೆ. 80 ವರ್ಷ ಆದ ಮೇಲೆ ಖರ್ಗೆ (Mallikarjun Kharge) ಅವರನ್ನು ಈಗ ಡ್ರೈವರ್ ಸೀಟ್‍ನಲ್ಲಿ …

Read More »

ಬಸವಲಿಂಗಶ್ರೀ ವಿರುದ್ಧ ನಡೆದಿತ್ತು ಹನಿಟ್ರ್ಯಾಪ್; ಹೆಣ್ಣಿನ ಮೋಹ ಪಾಶಕ್ಕೆ ಸಿಲುಕಿದ್ರಾ ಸ್ವಾಮೀಜಿ?

ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ರಾಮನಗರ: ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಡೆತ್ನೋಟ್ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) …

Read More »