ನಾಗ್ಪುರ: ನಾಗ್ಪುರದ ತನ್ನ ಕಚೇರಿಯಲ್ಲಿ ಲ್ಯಾಂಡ್ಲೈನ್ ಫೋನ್ ಮೂಲಕ ಅಪರಿಚಿತ ವ್ಯಕ್ತಿಗೆ ಕೊಲೆ ಬೆದರಿಕೆ ಬಂದಿದೆ. ನಿತಿನ್ ಗಡ್ಕರಿ ಕಚೇರಿ ನಾಗ್ಪುರ ಪೊಲೀಸರಿಗೆ ದೂರು ನೀಡಿದೆ ಎನ್ನಲಾಗಿದೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ
Read More »ಕಾಂಗ್ರೆಸ್‌ನ 36 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಬಿಸಿ-
ಬೆಂಗಳೂರು, ಜನವರಿ 14: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ರಾಜ್ಯದ ಮೂರು ಪ್ರಬಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡುವುದರಲ್ಲಿ ನಿರತವಾಗಿವೆ. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯು ಫೆಬ್ರುವರಿಯಲ್ಲಿ ತನ್ನ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಪಕ್ಷವು ಜನವರಿ ಕೊನೆಯ ವಾರದಲ್ಲಿ ಮೊದಲ ಪಟ್ಟಿಯನ್ನು ಸಿದ್ದಪಡಿಸಲಿದೆ. ಇದನ್ನು ಕೆಪಿಸಿಸಿ ಅಧ್ಯಕ್ಷ …
Read More »ಸಿದ್ದುಗೆ ಎರಡರ ಇಕ್ಕಟ್ಟು: ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲೇಬೇಕೆಂದು ಆಪ್ತರು ಪಟ್ಟು
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿರುವ ಬೆನ್ನಲ್ಲೇ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವುದು ಸುರಕ್ಷಿತವೇ ಎಂಬ ಚಿಂತನೆಯೂ ಚಾಲ್ತಿ ಪಡೆದಿದೆ. ಕೋಲಾರದೊಂದಿಗೆ ಬಾದಾಮಿ ಅಥವಾ ವರುಣಾದಿಂದ ಸ್ಪರ್ಧಿಸುವುದು ಸೂಕ್ತ ಎಂದು ಸಿದ್ದು ಆಪ್ತರು ಒತ್ತಡ ಹಾಕುತ್ತಿದ್ದು, ಇದೀಗ ‘ಚೆಂಡು’ ಹೈಕಮಾಂಡ್ ಅಂಗಳ ತಲುಪುವ ಲಕ್ಷಣಗಳಿವೆ. ಕೋಲಾರದಲ್ಲಿ ಮಾತ್ರ ಸ್ಪರ್ಧಿಸಿ ಅಪಾಯವನ್ನು ಮೈಮೇಲೆ ಎಳೆದು ಕೊಳ್ಳು ವುದು ಬೇಡ ಎಂಬುದು ಆಪ್ತರ ಸಲಹೆ. ಕೆಪಿಸಿಸಿ ಅಧ್ಯಕ್ಷ …
Read More »ತಲೆ ಮರೆಸಿಕೊಂಡಿದ್ದ ಆರೋಪಿ ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧನ
ಮೈಸೂರು: ಅತ್ಯಾಚಾರ, ವೇಶ್ಯಾವಾಟಿಕೆ, ಗೂಂಡಾ ಪ್ರಕರಣಗಳ ಆರೋಪಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯನ್ನು (51) ಪೊಲೀಸರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ‘ಪ್ರತಿದಿನ ಸ್ಥಳ ಬದಲಾಯಿಸುತ್ತಿದ್ದ ಆರೋಪಿಯ ಜೊತೆಗೆ ಆತನ ನಿಕಟವರ್ತಿಗಳಾದ ಕೇರಳದ ಶ್ರುತೇಶ್ (35) ಮತ್ತು ರಾಮ್‌ಜಿ (45) ಎನ್ನುವವರನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಮೈಸೂರಿನ ಮಧುಸೂದನ ಎಂಬಾತನನ್ನು ಬಂಧಿಸಲಾಗಿತ್ತು’ ಎಂದು ತಿಳಿಸಿದರು. ‘ತಲೆ ಮರೆಸಿಕೊಂಡಿದ್ದ ಆರೋಪಿ ಯು ಕೇರಳ, …
Read More »ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ: ಕೋಡಿಮಠ ಸ್ವಾಮೀಜಿ
ಹೊಸಪೇಟೆ(ವಿಜಯನಗರ): ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ನಗರದಲ್ಲಿ ಶುಕ್ರವಾರ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಮನೆಗೆ ಭೇಟಿ ನೀಡಿದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಸಮ್ಮಿಶ್ರ ಸರ್ಕಾರ ಬರುವುದಿಲ್ಲ ಎಂದರು. ಸಂಕ್ರಾಂತಿ ಫಲ ಹೇಳುವುದಕ್ಕೆ ಒಂದು ದಿನ ಬಾಕಿ ಇದೆ. ಇದು ಕಳೆಯದೇ ಭವಿಷ್ಯ ಹೇಳಲಾಗದು. ಸಂಕ್ರಾಂತಿ, ಯುಗಾದಿ …
Read More »ಡಾ.ವಿಷ್ಣುವರ್ಧನ್ ಸ್ಮಾರಕ: 13 ವರ್ಷಗಳ ಹೋರಾಟ ಸಾರ್ಥಕ, ಅಭಿಮಾನಿಗಳ ಸಂಭ್ರಮ
ಮೈಸೂರು: ಚಲನಚಿತ್ರ ನಟ ದಿ. ವಿಷ್ಣುವರ್ಧನ್ ಅವರ ಸ್ಮಾರಕದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕಲಿಕೆಯ ತಾಣವಾಗುವ ಮಹತ್ವಾಕಾಂಕ್ಷೆಯೊಂದಿಗೆ ಜಿಲ್ಲೆಯ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ ‘ಸಾಹಸ ಸಿಂಹ ದಿ. ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ ನಿರ್ಮಾಣವಾಗಿದೆ. ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. 2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ವೇದಿಕೆಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಕರ್ನಾಟಕ ಪೊಲೀಸ್ ವಸತಿ ನಿಗಮವು …
Read More »ವರ್ಗಾವಣೆ ದಂಧೆ: 2022ರ ಮೊದಲ ವರ್ಗಾವಣೆ ಸಂಭ್ರಮಿಸಿದ್ದ ಸ್ಯಾಂಟ್ರೊ ರವಿ
ಬೆಂಗಳೂರು: ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದನೆಂಬ ಆರೋಪ ಕೇಳಿಬಂದಿದೆ. ಸ್ಯಾಂಟ್ರೊ ರವಿ ವಿರುದ್ಧ ಮೈಸೂರು ವಿಜಯನಗರ ಠಾಣೆಗೆ ಜ. 2ರಂದು ದೂರು ನೀಡಿರುವ ಎರಡನೇ ಪತ್ನಿ, ವಾಟ್ಸ್‌ಆಯಪ್ ಸಂದೇಶ ಹಾಗೂ ಸ್ಟೇಟಸ್‌ಗಳನ್ನು ಪುರಾವೆಯಾಗಿ ನೀಡಿದ್ದಾರೆ. ಆರೋಪಿ ರವಿ ತನ್ನ ಸ್ಟೇಟಸ್‌ಗಳಲ್ಲಿ ವರ್ಗಾವಣೆಗೆ ಸಂಬಂಧಪಟ್ಟಂತೆ …
Read More »ಹಲವು ಅಚ್ಚರಿಗಳ ಆಚರಣೆ ಮಕರ ಸಂಕ್ರಾಂತಿ
ಮಾನವ ಉತ್ಸವಪ್ರಿಯ. ದೇವತಾ ಉತ್ಸವಗಳನ್ನು ನಡೆಸುವುದು, ಹಬ್ಬಹರಿದಿನಗಳನ್ನು ಆಚರಿಸುವುದು ಎಂದರೆ ಎಲ್ಲಿಲ್ಲದ ಸಡಗರ. ಆದ್ದರಿಂದಲೇ ಕಾಳಿದಾಸ ಉತ್ಸವಪ್ರಿಯಾಃ ಖಲು ಮನುಷ್ಯಾಃ ಎಂದಿದ್ದಾನೆ.ನಾವು ಆಚರಿಸುವ ಉತ್ಸವಗಳಾಗಲಿ, ಹಬ್ಬಗಳಾಗಲಿ ವಿಶೇಷ ಅರ್ಥವನ್ನೊಳಗೊಂಡಿದೆ, ಪ್ರಾಕೃತಿಕ ಸಂಬಂಧ ವಿದೆ. ಅಧ್ಯಾತ್ಮದ ಹಿನ್ನೆಲೆಯಿದೆ. ವೈಜ್ಞಾನಿಕ ಪರಿಕಲ್ಪನೆ ಯಿದೆ. ಸುಸಂಸ್ಕೃತ ಮನುಕುಲದ ಹಂಬಲವಿದೆ. ಪಶುತ್ವ ವನ್ನು ಕಳೆದು ಮಾನವತ್ವದಿಂದ ದೈವತ್ವಕ್ಕೇ ರಿಸುವ ಉದಾತ್ತ ಭಾವವಿದೆ. ಪ್ರಾಕೃತಿಕ ಬದಲಾವಣೆಯನ್ನು ಗುರುತಿಸಿ ಅದು ಮನುಕುಲದ ಮೇಲೆ ಬೀರುವ ಪ್ರಭಾವವನ್ನು ನೆನಪಿಸುವು ದಕ್ಕಾಗಿ …
Read More »ಒಂದೂವರೆ ವರ್ಷದಿಂದ ನಿರೀಕ್ಷೆಯಲ್ಲಿದ್ದ ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ದಿನಾಂಕ ಪ್ರಕಟ
ಬೆಳಗಾವಿ – ಒಂದೂವರೆ ವರ್ಷದಿಂದ ನಿರೀಕ್ಷೆಯಲ್ಲಿದ್ದ ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ದಿನಾಂಕ ಪ್ರಕಟವಾಗಿದೆ. ಪ್ರಾಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಹಾಗೂ ಹಿಂದುಳಿದ ಬ ವರ್ಗದ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿದೆ. ಫೆಬ್ರವರಿ 6ರಂದು ಚುನಾವಣೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸ್ವೀಕಾರ ಆರಂಭವಾಗಲಿದೆ. 3 ಗಂಟೆಗೆ ಸಭೆ ಆರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ಕ್ರಮ ಬದ್ಧ ನಾಮಪತ್ರಗಳ ಘೋಷಣೆ, …
Read More »ಸಿದ್ದರಾಮಯ್ಯ ಸೀಟು ಖರೀದಿಸಿದ್ದು ನಾಚಿಕೆಗೇಡು: ಕೋಲಾರ ಸ್ಪರ್ಧೆಗೆ ಬಿಜೆಪಿ ಟೀಕೆ
ಬೆಂಗಳೂರು: ಕೋಲಾರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿರುವ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟೀಕೆ ಮಾಡಿದೆ. ‘ಇಷ್ಟು ದಿನ ಹುಡುಕಾಟ ನಡೆಸಿ ಈ ಸೀಟು ಖರೀದಿಸಿರುವ ಸಂಗತಿ ನಿಜಕ್ಕೂ ನಾಚಿಕೆಗೇಡಿನದ್ದು’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗಾಗಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಕ್ಷೇತ್ರ ತ್ಯಾಗ ಮಾಡುತ್ತಿರುವುದು, ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸಗೌಡ ಅವರು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿರುವುದು …
Read More »
Laxmi News 24×7