ತುಮಕೂರು: ನೂರು ವರ್ಷ ಒಬ್ಬರಿಗೊಬ್ಬರು ಜೊತೆಯಾಗಿ ಇರ್ತೀವಿ ಅಂತ ಹಿರಿಯ ಸಮ್ಮುಖದಲ್ಲಿ ಗಂಡನ (Husband) ಕೈ ಹಿಡಿದಿದ್ದ ಮಹಿಳೆಯೇ (Women) ಗಂಡನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ಘಟನೆ ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal)ನಲ್ಲಿ ಬೆಳಕಿಗೆ ಬಂದಿದೆ. ಹೆಂಡತಿಯೇ ಗಂಡನ (Wife) ಕೊಲೆಗೆ ಸುಪಾರಿ ಕೊಟ್ಟು ಆತನನ್ನು ಪರಲೋಕಕ್ಕೆ ಕಳುಹಿಸಿದ್ದಾಳೆ. ಇದರೊಂದಿಗೆ ಹುಟ್ಟುಹಬ್ಬದ ದಿನವೇ ಅನುಮಾನಸ್ಪದಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣವನ್ನು ಕುಣಿಗಲ್ ಪೊಲೀಸರು (Police) ಬೇದಿಸಿದ್ದು, ಪ್ರಕರಣದಲ್ಲಿ ಕೊಲೆದ …
Read More »ಸಿದ್ದರಾಮಯ್ಯ’ ವಿರುದ್ಧ ಸ್ಪರ್ಧಿಸಲು ಕೃಷ್ಣಾರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ಆಫರ್ : ಶಾಸಕ ಶ್ರೀನಿವಾಸ ಗೌಡ ಹೊಸ ಬಾಂಬ್
ಕೋಲಾರ : ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹಲವು ಭಾರಿ ಘೋಷಣೆ ಮಾಡಿದ್ದಾರೆ. ಇದೀಗ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವಂತೆ ಬಿಜೆಪಿ ಕೃಷ್ಣಾರೆಡ್ಡಿಗೆ ಆಫರ್ ನೀಡಿದೆ ಎನ್ನಲಾಗಿದೆ. ನಾವೇ ದುಡ್ಡು ಕೊಡುತ್ತೇವೆ, ನೀವು ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ನಿಲ್ಲಿ ಎಂದು ಸಚಿವ ಸುಧಾಕರ್ ಆಫರ್ ನೀಡಿದ್ದಾರೆ ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ. ಕೋಲಾರ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಮನೆಗೆ ಜ.25 …
Read More »ಜನಸೇವೆಗಾಗಿ ಜಡ್ಜ್ ಹುದ್ದೆಗೆ ರಾಜೀನಾಮೆ, ಜೆಡಿಎಸ್ ಸೇರ್ಪಡೆ!
ಕಲಬುರಗಿ, ಫೆಬ್ರವರಿ 13; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿದು, ಜನಸೇವೆ ಮಾಡಲು ಹಲವರು ಮುಂದಾಗಿದ್ದಾರೆ. ವಿವಿಧ ಪಕ್ಷಗಳ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಏಪ್ರಿಲ್ ಅಥವ ಮೇನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ವಿಜಯಪುರದ ವ್ಯಕ್ತಿಯೊಬ್ಬರು ಜನಸೇವೆ ಮಾಡಲು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ …
Read More »ಸಿದ್ದರಾಮಯ್ಯ ಹೊಸ ಪ್ಲಾನ್: ‘ಬಂಡೆ’ ಬುಡಕ್ಕೆ ಡೈನಾಮೇಟ್- ಕುಮಾರಸ್ವಾಮಿಗೆ ಲಾಕ್; ಚನ್ನಪಟ್ಟಣದಿಂದ ಸ್ಯಾಂಡಲ್ ವುಡ್ ಕ್ವೀನ್?
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ, ಮೂರು ಪಕ್ಷಗಳು ಬಹುಮತ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ಕಾಂಗ್ರೆಸ್, ಜೆಡಿಎಸ್ ಜೊತೆ ಬಿಜೆಪಿ ಕೂಡ ಹಣಾಹಣಿ ನಡೆಸುತ್ತಿದೆ. ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ, ಮೂರು ಪಕ್ಷಗಳು ಬಹುಮತ ಪಡೆಯಲು ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಪಡೆಯಲು ಕಾಂಗ್ರೆಸ್, ಜೆಡಿಎಸ್ ಜೊತೆ ಬಿಜೆಪಿ …
Read More »ಪತ್ನಿ, ಮಗುವಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ : ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು : ಪತ್ನಿ, ಮಗುವಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಕೆಲಸವಿಲ್ಲದಿದ್ದರೂ ಕೆಲಸ ಹುಡುಕಿಕೊಂಡು ಪತ್ನಿ, ಮಗುವನ್ನು ಸಾಗಬೇಕು. ದುಡಿಯಲು ಸಮರ್ಥನಾದ ಗಂಡ ಪತ್ನಿ, ಮಗುವಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ದುಡಿಯಲು ಸಮರ್ಥನಿರುವ ಪತಿ ಜೀವನಾಂಶ ನೀಡಬೇಕು. …
Read More »ಯಾವ ಪೊದೆ, ಮರ ನೋಡಿದರೂ ಜೋಡಿಗಳು.
ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯಾಪ್ತಿ ಹೆಚ್ಚಾಗಿದ್ದು, ವೀಡಿಯೋಗಳನ್ನು ಹಂಚಿಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಕೆಲವೊಂದು ವೀಡಿಯೋ ಧನಾತ್ಮಕವಾಗಿದ್ದರೆ, ಇನ್ನೂ ಕೆಲವೊಂದು ಋಣಾತ್ಮಕವಾಗಿರುತ್ತೆ. ಆದರೆ ಕೆಲವೊಂದು ವೀಡಿಯೋಗಳು ಯಾರೂ ಊಹಿಸದ, ನೋಡದ ರೀತಿಯಲ್ಲಿರುತ್ತದೆ. ಹಾಗೆಯೇ ಇಲ್ಲೊಂದು ವೀಡಿಯೋ ನೆಟ್ಟಿಗರನ್ನು ನಿಬ್ಬರಗಾಗಿಸುವಂತೆ ಮಾಡಿದೆ. ಹೌದು.. ಈ ವೈರಲ್ ವಿಡಿಯೋದಲ್ಲಿ, ಕೆಲವು ಜನರು ಈ ಸ್ಥಳಕ್ಕೆ ಭೇಟಿ ನೀಡಲು ಹೋಗಿದ್ದಾರೆ, ಆದರೆ ಅಲ್ಲಿಗೆ ತಲುಪಿದ ನಂತರ ಅವರಿಗೆ ಶಾಕ್ ಕಾದಿತ್ತು. ವಾಸ್ತವವಾಗಿ, ಪ್ರತಿ ಮರದ ಹಿಂದೆ …
Read More »ಮಾಜಿ ಮುಖ್ಯೋಪಾಧ್ಯಾಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾಟ ತಾಳಲಾರದೇ ಪ್ರಾಣ ಬಿಟ್ಟ ಹೆಡ್ಮಾಸ್ಟರ್.
ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ರವಿವಾರ ರಾತ್ರಿ ಮುಖ್ಯೋಪಾಧ್ಯಾಯರೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಎಚ್ಪಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಮಲ್ಲಪ್ಪ ನಾಯಕಲ್(54) ನೇಣಿಗೆ ಕೊರಳೊಡ್ಡಿದ ದುರ್ದೈವಿ. ತನ್ನ ಸಾವಿನ ಬಗ್ಗೆ ಬರೆದಿರುವ ಎರಡು ಪುಟಗಳ ಡೆತ್ ನೋಟ್ನಲ್ಲಿ ಸಿಆರ್‌ಸಿಯಾಗಿ ಬಡ್ತಿಯಾಗಿರುವ ಶಾಲೆಯ ಹಳೆ ಮುಖ್ಯೋಪಾಧ್ಯಾಯ ಜಿ.ಎನ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ, ಸಾಸಾಬಾಳ ಗ್ರಾಮದ ಸಂಗಮೇಶ ಚಿಂಚೊಳ್ಳಿ, ಎಸ್.ಎಲ್.ಬಜಂತ್ರಿ, ಬಿ.ಎಂ.ತಳವಾರ ಅವರ …
Read More »ಮಹದಾಯಿ ವಿವಾದ: ಸುಪ್ರೀಂಕೋರ್ಟ್ನಲ್ಲಿ ಗೋವಾಗೆ ಹಿನ್ನಡೆ; ಆಗಿದ್ದೇನು?
ನವದೆಹಲಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ-ಗೋವಾ ನಡುವಿನ ಸಂಘರ್ಷದಲ್ಲಿ ಸದ್ಯ ಗೋವಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಅರ್ಥಾತ್ ಮಹದಾಯಿ ಸಂಬಂಧ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವ್ ಖನ್ನ ನೇತೃತ್ವದ ದ್ವಿಸದಸ್ಯ ಪೀಠ ಗೋವಾ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಮಹದಾಯಿ ಕಾಮಗಾರಿ ಸಂಬಂಧ ಕರ್ನಾಟಕದ ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೇಂದ್ರ ಜಲ ಆಯೋಗ ಮಹದಾಯಿ …
Read More »ಆನ್ಲೈನ್ ವಂಚಕರದ್ದು ಈಗ ಬೆಸ್ಕಾಂ ಬಿಲ್ ಹೆಸರಲ್ಲೂ ಮೋಸ; ವಂಚನೆ ಹೇಗೆ?
ಬೆಂಗಳೂರು: ವಿದ್ಯುತ್ ಬಿಲ್ ವಸೂಲಿ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ವಂಚನೆ ಮಾಡುವ ಸೈಬರ್ ಕಳ್ಳರ ಹಾವಳಿ ತಪ್ಪಿಲ್ಲ. ವೃದ್ಧರೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ಖಾತೆಗೆ 1.98 ಲಕ್ಷ ರೂ. ಕನ್ನ ಹಾಕಿರುವ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಸ್ವತಿನಗರ ನಿವಾಸಿ ಎ.ಆರ್.ಕೃಷ್ಣಮೂರ್ತಿ ಎಂಬುವರು ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಫೆ.2ರಂದು …
Read More »ರಿಷಭ್ ಶೆಟ್ಟಿ, ಭೇಟಿ ಮಾಡಿದ ಪ್ರಧಾನಿ ಮೋದಿ!
ಬೆಂಗಳೂರು: ‘ಏರೋ ಇಂಡಿಯಾ-2023’ರ ಉದ್ಘಾಟನೆ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿದರು. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ ಅವರನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು. ಇದಾದ ಮೇಲೆ ನಿನ್ನೆ ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಈ ಸಂದರ್ಭ ಕನ್ನಡ ಸ್ಟಾರ್‌ಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಈ ಔತಣ ಕೂಟದಲ್ಲಿ ನಟರಾದ ಯಶ್, ರಿಷಭ್ ಶೆಟ್ಟಿ, ನಿರ್ಮಾಪಕ …
Read More »
Laxmi News 24×7