Breaking News

ರಾಜ್ಯ

ಲಂಚ ಪ್ರಕರಣ: ಪ್ರಶಾಂತ್‌ ಮಾಡಾಳ್‌ ವಿರುದ್ಧ ಮತ್ತೆರಡು ಎಫ್‌ಐಆರ್‌

ಬೆಂಗಳೂರು: ಖಾಸಗಿ ಕಚೇರಿಯಲ್ಲಿ ₹ 1.62 ಕೋಟಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಬುಧವಾರ ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ.   ಕೆಎಸ್‌ಡಿಎಲ್‌ ಕಚ್ಚಾವಸ್ತು ಖರೀದಿ ಟೆಂಡರ್‌ ಅಂತಿಮಗೊಳಿಸುವ ಸಂಬಂಧ ₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಮಾರ್ಚ್‌ 2ರಂದು ಪ್ರಶಾಂತ್‌ ಮಾಡಾಳ್‌ ಅವರನ್ನು ಬಂಧಿಸಲಾಗಿತ್ತು. ಕೆಎಸ್‌ಡಿಎಲ್‌ ಅಧ್ಯಕ್ಷರೂ …

Read More »

ಕಬಡ್ಡಿ ಸ್ಪರ್ಧೆ ವೇಳೆ ಮೈದಾನದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು

ಬೆಂಗಳೂರು: ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಮೈದಾನದಲ್ಲಿ ನಡೆದ ಕಬಡ್ಡಿ ಸ್ಪರ್ಧೆ ವೇಳೆ ಮೈದಾನದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಶ್ರೀ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ಮೂಲದ, ಬಾಲಾಜಿ ಕಾಲೇಜ್ ಆಫ್ ಫಾರ್ಮಸಿಯ ಪ್ರಥಮ ವರ್ಷದ ಫಾರ್ಮಸಿ ವಿದ್ಯಾರ್ಥಿ ತನುಜ್ ಕುಮಾರ್ ನಾಯಕ್ (18) ಮೃತಪಟ್ಟವ. ಇತ್ತೀಚೆಗಷ್ಟೇ ಕಾಲೇಜಿಗೆ ಸೇರಿದ್ದ ಈತ ತನ್ನ ಸ್ನೇಹಿತರೊಂದಿಗೆ ಕಬಡ್ಡಿ ಆಡುತ್ತಿದ್ದ. ಕಬಡ್ಡಿ ಅಂಕಣದಲ್ಲಿ ಎದುರಾಳಿ ತಂಡದವರು ಬಂದಾಗ ಅವರನ್ನು …

Read More »

ವಿಕಲಚೇತನರು ದೃಢ ಸಂಕಲ್ಪ, ಅವಿರತ ದುಡಿಮೆಯಿಂದ ಜೀವನದಲ್ಲಿ ಮುನ್ನಡೆಯಬೇಕು: ಕಿರಣ ಜಾಧವ

ಬೆಳಗಾವಿ: “ಅನೇಕ ವಿಕಲಚೇತನರು ಅಂಗವೈಕಲ್ಯಕ್ಕೆ ಹೆದರದೆ ಪರಿಸ್ಥಿತಿಯನ್ನು ಮೆಟ್ಟಿನಿಂತು ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಇಂಥವರ ಮಾದರಿಯನ್ನು ಕಣ್ಣೆದುರು ಇಟ್ಟುಕೊಂಡು ಸಾಮಾನ್ಯ ವಿಕಲಚೇತನರು ದೃಢ ಸಂಕಲ್ಪ, ಅವಿರತ ದುಡಿಮೆಯಿಂದ ಜೀವನದಲ್ಲಿ ಮುನ್ನಡೆಯಬೇಕು” ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಹಾಗೂ ಸಕಲ ಮರಾಠ ಸಮಾಜದ ಸಂಚಾಲಕ ಕಿರಣ ಜಾಧವ ಹೇಳಿದರು. ಶಹಾಪುರದ ಅಳವಾನ ಗಲ್ಲಿಯಲ್ಲಿರುವ ಎಪಿಎಚ್ ಸ್ಪೋರ್ಟ್ಸ್ ಕ್ಲಬ್ ಆಫ್ ದಿ ಅಸೋಸಿಯೇಷನ್ ​​ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ನಲ್ಲಿ ವಿಕಲಚೇತನ ಟೇಬಲ್ ಟೆನ್ನಿಸ್ …

Read More »

ಅಂಕೋಲಾ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ

ಶಿರಸಿ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಕೋರಿಕೆಯ ಮೇರೆಗೆ ಅಂಕೋಲಾ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಅಂಕೋಲಾ ನಿಲ್ದಾಣದಲ್ಲಿ ನಾಳೆ(ಮಾ.9)ಯಿಂದ ಕೊಚುವೆಲಿ- ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ. ಭಟ್ಕಳ ನಿಲ್ದಾಣದಲ್ಲಿ ತಿರುವಂತನಪುರ-ಪನವೇಲ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ. ಈ ಮೂಲಕ ಅಂಕೋಲಾ‌ ಹಾಗೂ ಭಟ್ಕಳ ಭಾಗದ ಜನರ ದೀರ್ಘ ಕಾಲದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದಂತಾಗಿದೆ. …

Read More »

ಡಿಸಿ ಕಚೇರಿಯಲ್ಲಿ ಮೂವರು ಹೆಣ್ಣುಮಕ್ಕಳಿಗೆ ಪಿನಾಯಿಲ್ ಕುಡಿಸಿ, ತಾನೂ ಕುಡಿದ ಮಹಿಳೆ

ಬೆಳಗಾವಿ: ಜೀವನ ನಿರ್ವಹಣೆ ಕಷ್ಟವಾದ ಕಾರಣಕ್ಕೆ ಮಹಿಳೆಯೊಬ್ಬರು ಬುಧವಾರ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲೇ ಮೂವರು ಹೆಣ್ಣುಮಕ್ಕಳಿಗೆ ಪಿನೈಲ್‌ ಕುಡಿಸಿ ತಾವೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಕಾರ್ಯ‍ಪ್ರವೃತ್ತರಾದ ಸಿಬ್ಬಂದಿ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.   ನಗರದ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದವರು. ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ಅವರಿಗೂ ಪಿನೈಲ್‌ ಕುಡಿಸಿದ್ದರಿಂದ ನಾಲ್ವರೂ ಅಸ್ವಸ್ಥಗೊಂಡಿದ್ದಾರೆ. ಬೈಲಹೊಂಗಲ ಜನತಾ ಪ್ಲಾಟ್‌ನಲ್ಲಿ …

Read More »

ರಾಜ್ಯಪಾಲರಿಗೆ ಡಾ.ಕೋರೆ ಪತ್ರ

ಬೆಳಗಾವಿ: ‘ಬೆಳಗಾವಿಯಿಂದ ದೆಹಲಿ, ಮುಂಬೈ, ಪುಣೆ ಮುಂತಾದ ಕಡೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ವಿಮಾನ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿದ್ದರೂ ಹಾರಾಟ ನಿಲ್ಲಿಸಿದ್ದು ಸಮಂಜಸವಲ್ಲ. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮೊದಲಿದ್ದ ಎಲ್ಲ ವಿಮಾನಗಳನ್ನೂ ಮರು ಹಾರಾಟ ಆರಂಭಿಸಲು ಕ್ರಮ ವಹಿಸಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆದಿದ್ದಾರೆ.   ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ …

Read More »

ಜ್ಞಾನ ಸಂಪಾದನೆಗೆ ಗುರು ಅನಿವಾರ್ಯ’

ರಾಯಬಾಗ: ‘ಇಂದಿನ ದಿನಗಳಲ್ಲಿ ಗುರು- ಶಿಷ್ಯರ ಸಂಬಂಧಗಳು ಕದಡುತ್ತಿವೆ. ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯ ಎನ್ನುವ ಭಾವನೆಯೇ ಇದಕ್ಕೆ ಕಾರಣ. ಆದರೆ, ವಿದ್ಯಾರ್ಥಿಗಳಲ್ಲಿ ತಾಳ್ಮೆ, ವಿನಯ, ಭಕ್ತಿಭಾವ ಮೂಡಲು ಸಾಧ್ಯವಿಲ್ಲ. ಅದಕ್ಕೆ ಗುರುವೇ ಬೇಕು’ ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ವಿಷ್ಣು ಶಿಂಧೆ ಹೇಳಿದರು. ಪ್ರೊ.ಯಲ್ಲಪ್ಪ ಹಿಮ್ಮಡಿ ಅವರ ಸೇವಾ ನಿವೃತ್ತ ಪ್ರಯುಕ್ತ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಚಾರ ಸಮರ್ಪಣೆ, ಗುರುವಿಗೆ ವಂದನೆ, ವಿದ್ಯಾರ್ಥಿಗಳಿಗೆ …

Read More »

ಬೆಳಗಾವಿ ಜನಪದರು ವಿದ್ವಾಂಸರಿಗಿಂತ ಜ್ಞಾನವಂತರು.

ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನವಂತರು. ಅವರು ರೂಪಕ, ಪ್ರತಿಮೆಗಳನ್ನು ಬಹು ಸೊಗಸಾಗಿ ದೈನಂದಿನ ಬದುಕಿನಲ್ಲಿ ಬಳಸುತ್ತಲೇ ಬಂದಿರುವರು. ಅವುಗಳನ್ನೇ ನಾವು ನಾಟಕ, ಸಾಹಿತ್ಯ, ಕಲೆಗಳಲ್ಲಿ ಪುನಃ ರಚಿಸಿ ಹಣ, ಪ್ರಶಸ್ತಿಗಳನ್ನು ಪಡೆಯುತ್ತೇವೆ. ಆದರೆ ನಿಜವಾದ ಕಲಾವಿದರಾದ ಅವರು ಮಾತ್ರ ಸರ್ಕಾರದ ಸಹಾಯ ಧನಕ್ಕೆ ಕೈಚಾಚಿ ನಿಲ್ಲುವಂಥ ಪರಿಸ್ಥಿತಿ ಇರುವುದು ದುರಂತ’ ಎಂದು ನಾಟಕಕಾರ ಡಿ.ಎಸ್.ಚೌಗಲೆ ಬೇಸರ ವ್ಯಕ್ತಪಡಿಸಿದರು. ಇಲ್ಲಿಯ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ …

Read More »

ನಾಳೆಯಿಂದ ಪಿಯು ಪರೀಕ್ಷೆ ಆರಂಭ:

ಬೆಂಗಳೂರು: ಮಾರ್ಚ್‌ 9ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿದ್ದು, ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ 7,27,387 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ನಡೆಯುವ ರಾಜ್ಯದ 1,109 ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ …

Read More »

ಕಾಂಗ್ರೆಸಿನ ಗ್ಯಾರಂಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್‌ವೈ

ಯಾದಗಿರಿ: ಕಾಂಗ್ರೆಸ್‌ನವರು ನೀಡುತ್ತಿರುವ ಗೃಹಜ್ಯೋತಿ, ಗೃಹಲಕ್ಷ್ಮೀ‍, ಅನ್ನಭಾಗ್ಯ ಯೋಜನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ‌ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.   ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‌ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಹೇಳಿಕೊಳ್ಳುವುದಕ್ಕೆ ನಾನೇನು ಟೀಕೆ ಮಾಡುವುದಿಲ್ಲ ಎಂದರು. ವಿಜಯಸಂಕಲ್ಪ ಯಾತ್ರೆಯಲ್ಲಿ ಸೇರುವ ಜನರು ನೋಡಿದರೆ ವಿಜಯೋತ್ಸವ ಆಚರಣೆಗೆ ಬರುತ್ತಿದ್ದಾರೆ ಎಂದು ಭಾಸವಾಗುತ್ತದೆ.‌ ಬಿಜೆಪಿಯೇ ಸ್ಪಷ್ಟ …

Read More »