ಗೋಕಾಕ 31: ಗೋಕಾಕ ನಗರದ ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಹರಿಯುತ್ತಿರುವ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮದ ಪವಿತ್ರ ಸ್ಥಳವನ್ನು ಅಭಿವೃದ್ಧಿ ಪಡಿಸಲು ಸರಕಾರವನ್ನು ಆಗ್ರಹಿಸಲಾಯಿತು. ಈ ಕುರಿತು ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಇಂದು ನಡೆದ ನಾಗರೀಕರ ಸಭೆಯಲ್ಲಿ ಈ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಗ್ಲಾö್ಯಕ್ಸೋ ಪ್ಯಾಕ್ಟರಿ ಮತ್ತು ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದ ನಡುವೆ ಇರುವ ಸರಕಾರಿ ಹಾದಿಯನ್ನು ಅಭಿವೃದ್ಧಿ ಪಡಿಸಿ ನದಿಯಲ್ಲಿ ಬ್ರಿಜ್ಡ …
Read More »ಫೆ.6ಕ್ಕೆ ‘ ಕರಿಕಾಡ ‘ ರಿಲೀಸ್
ಗಿಲ್ಲಿ ವೆಂಕಟೇಶ್ ನಿರ್ದೇಶನದ ಕರಿಕಾಡ ಚಿತ್ರ ಫೆಬ್ರವರಿ 6ರಂದು ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ವಿಭಿನ್ನ ಶೀರ್ಷಿಕೆಯ ಕರಿಕಾಡ ಚಿತ್ರ ಕನ್ನಡ ಅಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕರ್ನಾಟಕದಲ್ಲಿ ಒಟ್ಟು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಟೀಸರ್ ಇದೊಂದು ಅಡ್ವೆಂಚರಸ್ ಹಾಗೂ ಹಳ್ಳಿ ಸೊಗಡಿನ ಸಿನಿಮಾ ಎನ್ನುವುದನ್ನು ಹೇಳುತ್ತದೆ. ಕಾಡಿನಲ್ಲಿ ನಡೆಯುವ ಕಥೆಯಲ್ಲಿ ದ್ವೇಷ, ಪ್ರೀತಿ, ಪ್ರತೀಕಾರ …
Read More »ಗೃಹ ಸಚಿವರೇ ಅಸಹಾಯಕರಾಗಿದ್ದಾರೆ: ಅಕ್ರಮ ಮರಳು ಸಾಗಣೆಗೆ ಹೈಕೋರ್ಟ್ ತೀವ್ರ ಕಳವಳ, ಸರ್ಕಾರಕ್ಕೆ ನೋಟಿಸ್
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ಪ್ರಕರಣಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ‘ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರೆ …
Read More »ಅನುಮಾನಾಸ್ಪದ ವಸ್ತು ಸ್ಫೋಟ – ಬಾಲಕ ಸೇರಿ ಮೂವರ ಸ್ಥಿತಿ ಗಂಭೀರ
ಬೀದರ್: ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಓರ್ವ ಬಾಲಕ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ. ಮೂವರ ಮುಖ, ಮೈ, ಕೈ ಸುಟ್ಟಿದ್ದು ಎಲ್ಲರನ್ನೂ ಬ್ರೀಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಅನ್ವರ್ ಪಷಾ ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್‌ಗೆ ರವಾನೆ ಮಾಡಲಾಗಿದೆ. ವಸ್ತು ಬ್ಲಾಸ್ಟ್ ಆದಾಗ ಪಕ್ಕದಲ್ಲೇ ಆರು ಜನ ಮಕ್ಕಳು ಮತ್ತು ಇಬ್ಬರು ಯುವರು ನಿಂತಿದ್ದರು ಎಂದು ತಿಳಿದು …
Read More »40,000 ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ‘ಲೋಕಾ’ ಬಲೆಗೆ ಬಿದ್ದ ಪಿಎಸ್‌ಐ
ತುಮಕೂರು: ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ವಾಹನ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಮೂಲದ ವಕೀಲರ ವಾಹನ ಇದಾಗಿದ್ದು, ವಾಹನ ಬಿಡುಗಡೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿನ್ನೆ ರಾತ್ರಿ 11:30 ರ ಸುಮಾರಿಗೆ ಕ್ಯಾತಸಂದ್ರ ಬಳಿಯ ನಮಸ್ತೆ ತುಮಕೂರು ಹೋಟೆಲ್‌ನಲ್ಲಿ 40 ಸಾವಿರ ರೂ. ಲಂಚ ಪಡದುಕೊಳ್ಳುತ್ತಿದ್ದಾಗ ಪಿಎಸ್‌ಐ ಚೇತನ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. …
Read More »ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಮೈಸೂರಲ್ಲಿ ದಾಳಿ ಬೆನ್ನಲ್ಲೇ ಅಶೋಕ್ ವಾಗ್ದಾಳಿ
ಬೆಂಗಳೂರು: ಮೈಸೂರಿನಲ್ಲಿ ಗುಪ್ತವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಘಟಕವನ್ನು ದೆಹಲಿ ಎನ್ಸಿಬಿ ಪತ್ತೆ ಮಾಡಿರುವ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ ಮಾತ್ರ, ಮೈಸೂರಿನಲ್ಲಿ ಪತ್ತೆಯಾಗಿರುವುದು ಫಿನಾಯಿಲ್ ಫ್ಯಾಕ್ಟರಿ. ಅಲ್ಲಿ ಡ್ರಗ್ಸ್ ತಯಾರು ಮಾಡುವ ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಕ ಮಾಧ್ಯಮ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ …
Read More »ಉದ್ಯಮಿ ಸಿಜೆ ರಾಯ್ ಮೊಬೈಲ್‌ನಲ್ಲಿದ್ಯಾ ಡೆತ್ ಸೀಕ್ರೆಟ್ – ರಿಕವರಿಗಾಗಿ ಸಿಐಡಿ ಸೈಬರ್ ಸೆಲ್‌ಗೆ ರವಾನೆ
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆಗೂ ಮುನ್ನ ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದ್ರಾ? ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮೊಬೈಲ್‌ನ್ನು ಸಿಐಟಿ ಸೈಬರ್ ಸೆಲ್‌ಗೆ ರಿಕವರಿಗಾಗಿ ಕಳುಹಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ದೂರಿನಲ್ಲಿ ತಿಳಿಸಿರುವಂತೆ ಆತ್ಮಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಬೇಕೆಂದು ರಾಯ್ ತಿಳಿಸಿದ್ದರು. ಜೊತೆಗೆ ಗನ್‌ಮ್ಯಾನ್ ಬಳಿ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು. ಅದರಂತೆ ಆತ್ಮಹತ್ಯೆಗೂ ಮುನ್ನ ನಿಜಕ್ಕೂ ತಾಯಿ ಜೊತೆಗೆ ಮಾತನಾಡಿದ್ರಾ? …
Read More »ಸಿಎಂ, ಡಿಸಿಎಂ ಫೋಟೋ ತಿರುಚಿ ಅವಹೇಳನಕಾರಿ ಪೋಸ್ಟ್: ಬಿಜೆಪಿ ಕರ್ನಾಟಕದ ಎಕ್ಸ್ ಖಾತೆ ವಿರುದ್ಧ ದೂರು
ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ಕುರಿತು ಸುಳ್ಳು ಹಾಗೂ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಆರೋಪದಡಿ ಕರ್ನಾಟಕ ಬಿಜೆಪಿಯ ಎಕ್ಸ್ ಖಾತೆ ವಿರುದ್ಧ ದೂರು ದಾಖಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ (ಕೆಪಿಸಿಸಿ)ಯ ವಕೀಲರ ಘಟಕ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು ಎನ್‌ಸಿಆರ್ (ಗಂಭೀರವಲ್ಲದ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ ಜನವರಿ 29ರಂದು “ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯುತ್ತಿರುವ ಸ್ಕ್ಯಾಮ್ …
Read More »ಸರ್ಕಾರಿ ಬಸ್ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ತೆರವಿಗೆ ಸೂಚನೆ
ಬೆಂಗಳೂರು: ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತಿಯೊಂದು ಸರ್ಕಾರಿ ಬಸ್ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. …
Read More »ಐಟಿ ದಾಳಿ ವೇಳೆಯೇ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಹೊಸೂರು ರಸ್ತೆಯ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ಕಚೇರಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಶೋಕ್ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್ನ ನಾರಾಯಣ ಆಸ್ಪತ್ರೆಗೆ ಸಿಜೆ ರಾಯ್ ಶವ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು? ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನು ಹುಟ್ಟುಹಾಕಿದ್ದರು. ಪದೇ ಪದೆ ಐಟಿ ಇಲಾಖೆ …
Read More »
Laxmi News 24×7