Breaking News

ರಾಜಕೀಯ

ಬಾಂಗ್ಲಾದೇಶ ಹುಟ್ಟಿದೆ ಭಾರತದಿಂದ ಎಂಬುದನ್ನು ಮರೆತಿದೆ

ಬಾಂಗ್ಲಾದೇಶ ಹುಟ್ಟಿದೆ ಭಾರತದಿಂದ ಎಂಬುದನ್ನು ಮರೆತಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಮಧ್ಯಾಗಳೊಂದಿಗೆ ಮಾತನಾಡಿದ ಅವರು ಚಿನ್ಮಾಯನ ಕೃಷ್ಣದಾಸ ಸ್ವಾಮೀಜಿಯವರನ್ನು ಬಂಧಿಸಿದ ಬಾಂಗ್ಲಾದೇಶದ ನಡೆಯನ್ನ ಖಂಡಿಸಿದ ಕಿಡಿ ಕಾರಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿದೆ. ಸಾಕಷ್ಟು ಹಿಂಸಾಚಾರ, ಕೊಲೆ, ಅತ್ಯಾಚಾರ ನಡೆದಿವೆ. ಇದರ ವಿರುದ್ಧ ಚಿನ್ಮಾಯನ ಕೃಷ್ಣದಾಸ ಸ್ವಾಮೀಜಿ ನೇತೃತ್ವದಲ್ಲಿ 10 ಸಾವಿರ ಜನರೊಂದಿಗೆ ಹೋರಾಡಿದ್ದಾರೆ.ನಿನ್ನೆ ಸ್ವಾಮೀಜಿಯವರ ಬಂಧನವಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ತಪ್ಪೇನು ಎಂದು ಪ್ರಶ್ನಿಸಿದರು.  ಬಾಂಗ್ಲಾದೇಶ ಹುಟ್ಟಿದೆ …

Read More »

ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು: ಹೆಬ್ಬಾಳಕರ್

ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತಂತೆ ವಿಜಯಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ದೇಶದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗೂ ಒಂದೇ ಕಾನೂನು, ಜನಸಾಮಾನ್ಯರಿಗೂ …

Read More »

ಹಲಸಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಹಂಜಿ ಪ್ಯಾನೆಲ್ ಭರ್ಜರಿ ಗೆಲುವು

ಖಾನಾಪೂರ ತಾಲೂಕಿನ ಐತಿಹಾಸಿಕ ಹಲಸಿ ಗ್ರಾಮದ ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಹಂಜಿ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಹಂಜಿ ಕುಟುಂಬದ ವರ್ಚಸ್ಸು ತೋರಿಸಿದೆ ವಾರ್ಡ್ ನಂಬರ್ 1 ರ ಉಪ ಚುನಾವಣೆಯಲ್ಲಿ ಶ್ರೀಮತಿ ಉಮಾ ಉದಯ ಪಾರಿಪತ್ಯದಾರ ಅವರು 401 ಮತಗಳಲ್ಲಿ 287ಮತಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. ವರ್ಷಾ ವಿದ್ಯಾಧರ ಜಾಧವ್ ಅವರು 58 ಮತಗಳನ್ನು ಪಡೆದರೆ ವೈಶಾಲಿ ಮಲ್ಲಿಕಾರ್ಜುನ ರಜಕಣ್ಣವರ ಅವರು 47 …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ(ವೀರಭೂಮಿ) ಕಾಮಗಾರಿ ಪರಿಶೀಲನೆಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಚಿವ ಶಿವರಾಜ ತಂಗಡಗಿ ಸೂಚನೆ

ಬೆಳಗಾವಿ, : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ(ವೀರಭೂಮಿ) ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಳೆದ 3-4 ವರ್ಷಗಳಿಂದ ಮ್ಯೂಸಿಯಂ ಕಾಮಗಾರಿ ಚಾಲನೆಯಲಿದ್ದು, ಚಳಿಗಾಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮ್ಯೂಸಿಯಂ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದರು. ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯದಲ್ಲಿ ಮಂಗಳವಾರ (ನ.26) ಕ್ರಾಂತಿವೀರ …

Read More »

ಬೆಳಗಾವಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕೆ ಸೆಟ್ ಪರೀಕ್ಷೆಗೆ ಹೋದಾಗ ಮೊಬೈಲ್, ಚಿನ್ನಾಭರಣ ಹಾಗೂ ಹಣ ಕಳ್ಳತನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಬೆಳಗಾವಿ :ಬೆಳಗಾವಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕೆ ಸೆಟ್ ಪರೀಕ್ಷೆಗೆ ಹೋದಾಗ ಮೊಬೈಲ್, ಚಿನ್ನಾಭರಣ ಹಾಗೂ ಹಣ ಕಳ್ಳತನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌. ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಕಳೆದ ಭಾನುವಾರ ‌ನಡೆದ ಕೆ ಸೆಟ್ ಪರೀಕ್ಷೆಯ ವೇಳೆ ವೈಶಾಲಿ ಹಾಗೂ ರೂಪಾ ಎಂಬ ಯುವತಿಯರ ಬೆಲೆ ಬಾಳುವ ಚಿನ್ನಾಭರಣವನ್ನು, ಹಣ ಹಾಗೂ ಮೊಬೈಲ್ ಕಳ್ಳತವಾಗಿದೆ. ಕಾಲೇಜು ಸಿಬ್ಬಂದಿಗಳ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ.ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ಕಲಬುರಗಿ ನವಜಾತ ಶಿಶು ಅಪಹರಣ ಪ್ರಕರಣ: 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು

ಕಲಬುರಗಿ, ನವೆಂಬರ್ 27: ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಶುಶ್ರೂಷಕಿಯರ (ನರ್ಸ್‌) ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ 36 ಗಂಟೆಗಳಲ್ಲಿ ಮಗು ಮತ್ತೆ ತಾಯಿಯ ಮಡಿಲು ಸೇರುವಂತಾಗಿದೆ. ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ಶಿಶುವನ್ನು ಅಪಹರಿಸಲಾಗಿತ್ತು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ನಾಲ್ಕು ವಿಶೇಷ …

Read More »

ಆರ್​ಟಿಒ ಅಧಿಕಾರಿಗಳ, ಬ್ರೋಕರ್​ಗಳ ಲಂಚತನಕ್ಕೆ ಬೀಳಲಿದೆ ಬ್ರೇಕ್: ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ಎಫ್​ಸಿ

ನವೆಂಬರ್ 27: ಆರ್​ಟಿಒ ಇನ್ಸ್‌ಪೆಕ್ಟರ್​ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್​ಸಿ! ಎಫ್​ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್​ಟಿಒದಲ್ಲಿ ಎಟಿಎಸ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಈ ಸೆಂಟರ್​​ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್​ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌. ಈ ಹಿಂದೆ ವಾಹನಗಳಿಗೆ …

Read More »

ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿ:ದೀಪಕ ಗುಡಗನಟ್ಟಿ

ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿ ಬೆಳಗಾವಿ- ಬೆಳಗಾವಿಯ ದಂಡು ಮಂಡಳಿಯ ಪ್ರದೇಶದಲ್ಲಿ ಬರುವ ಅಟೋಗಳಿಗೂ ಪೇ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವದನ್ನು ವಿರೋಧಿಸಿ ಶುಕ್ರವಾರ ದಂಡು ಮಂಡಳಿಯ ಅಧಿಕಾರಿಗಳಿಗೆ ಕರವೇ ನಿಯೋಗ ಭೇಟಿಯಾಗಿ ಅಟೋಗಳಿಗೆ ಶುಲ್ಕ ವಿಧಿಸುತ್ತಿರುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು. ಕರವೇ ಮನವಿಗೆ ಸ್ಪಂದಿಸಿದ ದಂಡು ಮಂಡಳಿಯ ಅಧಿಕಾರಿಗಳು ಆಟೋಗಳಿಗೆ ಪೇ ಪಾರ್ಕಿಂಗ್ ವಸೂಲಿ ಮಾಡುವದನ್ನು ನಿಲ್ಲಿಸುವಂತೆ ಮೌಖಿಕ ಆದೇಶ ಮಾಡಿದ್ದಾರೆ. ದಂಡು ಮಂಡಳಿಯ ವ್ಯಾಪ್ತಿಯಲ್ಲಿ …

Read More »

ಇವಿಎಂ ಹ್ಯಾಕ್ ಬಗ್ಗೆ ಸಮಗ್ರ ತನಿಖೆ ಆಗಬೇಕು: ಡಿ.ಕೆ ಶಿ

ಮಹಾರಾಷ್ಟ್ರ ಎಲೆಕ್ಷನ್ ನಲ್ಲಿ ಮಹಾ ವಿಕಾಸ ಆಘಾಡಿಗೆ ತೀವ್ರ ಹಿನ್ನಡೆ ಆದ ಪರಿಣಾಮ ಕೈ ನಾಯಕರು ಇವಿಎಂ ಹ್ಯಾಕ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.NCP ನಾಯಕಿ ಸುಪ್ರಿಯಾ ಸುಳೆ ಹೇಳಿರುವ ಮಾತಿನಂತೆ ನಾವೆಲ್ಲರೂ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಕೆಲವೇ ದಿನಗಳಲ್ಲಿ ತಾವು ಕೂಡ ದಿಲ್ಲಿಗೆ ಹೋಗಲಿದ್ದು, ಈ ಬಗ್ಗೆ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸೋದಾಗಿ …

Read More »

ತಂದೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ

ಮಗ ಮಹಾಶಯನೊಬ್ಬ ತಂದೆಯನ್ನೇ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ತಂದೆ-ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಸುತ್ತಿಗೆಯಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಮುಸ್ತಫಾ ಬೇಗ್ (42) ಕೊಲೆಯಾದ ವ್ಯಕ್ತಿ. ಶಾಹಿದ್ ಬೇಗ್ ತಂದೆಯನ್ನೇ ಹತ್ಯೆಗೈದ ಮಗ.ಶಿಕಾರಿಪುರ ಟೌನ್ ಪೊಲೀಸರು ಆರೋಪಿ ಮಗ ಶಾಹಿದ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Read More »