ಬೆಂಗಳೂರು: ಬಸವನಗುಡಿಯ ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 10ರಂದು ವೈಕುಂಠ ಏಕಾದಶಿ ಇದ್ದು, ಅದರ ಅಂಗವಾಗಿ ಭಕ್ತರಿಗೆ 1 ಲಕ್ಷ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಟಿ. ಎ. ಶರವಣ ಬುಧವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆರೆಯಲಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ …
Read More »ಸಮುದ್ರದಲ್ಲಿ ಈಜುವಾಗ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಸುರತ್ಕಲ್ ಬಳಿ ಸಂಭವಿಸಿದೆ.
ಮಂಗಳೂರು: ನಗರದ ಸುರತ್ಕಲ್ನ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ಸಮುದ್ರಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಇಂದು (ಬುಧವಾರ) ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ (30) ಹಾಗೂ ಬೆಂಗಳೂರು ಜೆ.ಪಿ. ನಗರದ ನಿವಾಸಿ ಸತ್ಯವೇಲು (30) ಮೃತ ವಿದ್ಯಾರ್ಥಿಗಳು. ಬೀದರ್ ಜಿಲ್ಲೆಯ ಹಂಗರಗಾ ನಿವಾಸಿ ಪರಮೇಶ್ವರ್ (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ. …
Read More »ಮನೆಯಲ್ಲೇ ಮೂವರನ್ನು ಭೀಕರವಾಗಿ ಕೊಲೆ ಮಾಡಿ, ಆರೋಪಿಯು ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ರಾಜಧಾನಿಯಲ್ಲಿ ತ್ರಿವಳಿ ಕೊಲೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿರುವ ಜಾಲಹಳ್ಳಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ಇಂದು (ಬುಧವಾರ) ಸಂಜೆ ಬೆಳಕಿಗೆ ಬಂದಿದೆ. ಆರೋಪಿ ಗಂಗರಾಜು ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಗಂಗರಾಜು ಪತ್ನಿ ಭಾಗ್ಯಮ್ಮ (38), ಪುತ್ರಿ ನವ್ಯ (19) ಹಾಗೂ ಭಾಗ್ಯಮ್ಮರ ಅಕ್ಕನ ಮಗಳಾದ ಹೇಮಾವತಿ (22) ಕೊಲೆಗೀಡಾದವರು. ಕೌಟುಂಬಿಕ ಕಲಹದಿಂದ ಪತಿಯು ಪತ್ನಿ ಸೇರಿ ಮೂವರನ್ನು ಹತ್ಯೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇಂದು …
Read More »ಹುಕ್ಕೇರಿ ಮಠ ಜಾತ್ರೆಯಲ್ಲಿ ಭಕ್ತರಿಗಾಗಿ ಖಡಕ್ ರೊಟ್ಟಿ, ಗೋದಿ ಹುಗ್ಗಿ,
ಹಾವೇರಿ : ಏಲಕ್ಕಿ ಕಂಪಿನ ನಗರಿ ಹಾವೇರಿಗೆ ಎರಡನೇಯ ಕಲ್ಯಾಣ ಎಂಬ ಹೆಸರು ಸಹ ಇದೆ. ಇದಕ್ಕೆ ಕಾರಣ ಬಸವಣ್ಣನವರ ಕಲ್ಯಾಣದಲ್ಲಿ 64 ಮಠಗಳಿದ್ದರೆ, ಹಾವೇರಿ ನಗರದಲ್ಲಿ 63 ಮಠಗಳಿವೆ. ಈ ಮಠಗಳಲ್ಲಿ ಪ್ರಮುಖವಾದ ಹುಕ್ಕೇರಿಮಠದ ಜಾತ್ರೆ ಆರಂಭವಾಗಿದೆ. ಈ ಜಾತ್ರೆ ಆರಂಭದೊಂದಿಗೆ ಉತ್ತರ ಕರ್ನಾಟಕದ ಜಾತ್ರೆಗಳು ಆರಂಭವಾಗುತ್ತವೆ. ಈ ಮಠದ ಜಾತ್ರೆಗೆ ಜಾತ್ರೆಗಳ ಆರಂಭಿಕ ಜಾತ್ರೆ ಎಂದು ಸಹ ಕರೆಯಲಾಗುತ್ತದೆ. ಐದು ದಿನಗಳ ಕಾಲ ಈ ಮಠದಲ್ಲಿ ಸಾಂಸ್ಕೃತಿಕ, ಧಾರ್ಮಿಕ …
Read More »ಮುಂದೂಡಿಕೆಯಾಗಿದ್ದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ಜ.21ಕ್ಕೆ: ಡಿ.ಕೆ.ಶಿ
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ‘ಗಾಂಧಿ ಭಾರತ’ ಕಾರ್ಯಕ್ರಮ ಜನವರಿ 21ರಂದು ನಡೆಯಲಿದೆ. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಂಜೆ ಕರೆದಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಗಾಂಧಿ ಭಾರತ ಕಾರ್ಯಕ್ರಮವನ್ನು ಪಕ್ಷ ಈಗಾಗಲೇ …
Read More »ಜನವರಿ 21ಕ್ಕೆ ಬೆಳಗಾವಿಯಲ್ಲಿ AICCಯಿಂದ ಸಮಾವೇಶ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದ ಹಿನ್ನೆಲೆಯಲ್ಲಿ ರದ್ದಾಗಿದ್ದ, ಬೆಳಗಾವಿ ಎಐಸಿಸಿ ಅಧಿವೇಶನ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಸಮಾವೇಶ ಜನವರಿ21ರಂದು ನಡೆಯಲಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ ಸಿಸಿ ಅದ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ ಸಿಸಿ ಅದ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಷಯ ತಿಳಿಸಿದ್ದಾರೆ.ಡಿಸೆಂಬರ್ .26, 27ರಂದು ಬೆಳಗಾವಿಯಲ್ಲಿ ೨ ದಿನಗಳ ಕಾಲ ಎಐಸಿಸಿ ಅಧಿವೇಶನ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ …
Read More »ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಚೈನ್ ಸನ್ಯಾಚಿಂಗ್
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಚೈನ್ ಸನ್ಯಾಚಿಂಗ್ ಹುಬ್ಬಳ್ಳಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಕೊರಳಲ್ಲಿದ ಬಂಗಾರದ ಚೈನ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿ ಅರವಿಂದ ನಗರದಲ್ಲಿ ನಿನ್ನೆ ಸಂಜೆ ವೇಳೆ ಜನನಿಬಿಡ ಸ್ಥಳದಲ್ಲೇ ಮಹಿಳೆ ಹೋಗುತ್ತಿದ್ದಾಗ ಬೈಕ್’ನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆ ಕತ್ತಿನಲ್ಲಿರುವ 20 ಗ್ರಾಮ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸ್ಥಳಕ್ಕೆ ಎಸಿಪಿ ಚಿಕ್ಕಮಠ , ಸೇರಿದಂತೆ ಇನ್ಸ್ಪೆಕ್ಟರ್ ಘಟನೆ ನಡೆದ ಬೇಟಿನೀಡಿ ಪರಿಶೀಲನೆ ನಡೆಸಿ …
Read More »ಸಚಿವ ಎಂಬಿಪಿ ಕ್ಷೇತ್ರದಲ್ಲೇ ರೈತರಿಗೆ ಸಂಕಷ್ಟ: ಒಣಗುತ್ತಿರುವ ದ್ರಾಕ್ಷಿ ಬೆಳೆ: ಆತಂಕಕ್ಕೆ ಒಳಗಾದ ದ್ರಾಕ್ಷಿ ಬೆಳೆಗಾರರು
ಅನ್ನದಾತರಿಗೆ ಅದೇಕೋ ಸಂಕಷ್ಟಗಳು ಒಂದಿಲ್ಲಾ ಒಂದು ರೀತಿಯಿಂದ ವಕ್ಕರಿಸುತ್ತವೆ. ಪ್ರಕೃತಿ ವಿಕೋಪ, ಹುಳು ಭಾಧೆ, ಬೆಳೆ ರೋಗಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಆದ್ರೆ ಈ ಬಾರಿ ಈ ಬಾರಿ ರೈತರಿಗೆ ಮಾರಕವಾಗಿ ಪರಿಣಮಿಸಿದ್ದು ಮಾತ್ರ ಆ್ಯಸಿಡ್ ಮಿಶ್ರಿತ ನೀರು. ಅನುಮತಿ ಇಲ್ಲದೆ ಜಮೀನುಗಳಲ್ಲಿ ಲಾರಿ ಮೂಲಕ ಬರುತ್ತಿರುವ ಈ ನೀರು ದ್ರಾಕ್ಷಿ ಬೆಳೆಗೆ ಹಾನಿಕಾರಕವಾಗಿ ಪರಿಣಮಿಸಿ ರೈತರನ್ನು ಆತಂಕಕ್ಕೆ ಸಿಲುಕಿಸಿದೆ.ಈ ಕುರಿತು ಇಲ್ಲಿದೆ ಡಿಟೇಲ್ಸ್… …: ದ್ರಾಕ್ಷಿ ಬೆಳೆಗೆ ವಿಜಯಪುರ …
Read More »ಖಾನಾಪುರ ತಹಶೀಲ್ದಾರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಖಾನಾಪುರ ತಹಶೀಲ್ದಾರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕಾಶ ಗಾಯಕವಾಡ ಅವರ ಬೆಳಗಾವಿಯ ಗಣೇಶಪುರ ಬಳಿಯ ಮನೆ ನಿಪ್ಪಾಣಿಯಲ್ಲಿರುವ ಮನೆ ಹಾಗೂ ಖಾನಾಪುರ ಕಚೇರಿ ಮೇಲೆ ದಾಳಿ ಅಧಿಕಾರಿಗಳ ದಾಳಿ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ದಂಗಾದ ತಹಶಿಲ್ದಾರ್ ಗಾಯಕವಾಡ ಬೆಳಗಾವಿ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿಐ ನಿರಂಜನ್ ಪಾಟೀಲ ಸಾಥ್
Read More »ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು
ಹುಬ್ಬಳ್ಳಿ : ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ಕೆಎಸ್ಆರ್ ಬೆಂಗಳೂರು, ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್, ಎಸ್ಎಂವಿಟಿ ಬೆಂಗಳೂರು- ಟುಟಿಕೋರಿನ್- ಮೈಸೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ. ರೈಲು ಸಂಖ್ಯೆ 07319/07320 ಕೆಎಸ್ಆರ್ ಬೆಂಗಳೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು (1 ಟ್ರಿಪ್) ರೈಲು ಸಂಖ್ಯೆ 07319 ಕೆಎಸ್ಆರ್ …
Read More »
Laxmi News 24×7