ಬೆಳಗಾವಿ: ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬೆಳಗಾವಿ ಜಿಲ್ಲೆಯ ಯೋಧ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಇಂದು ನಡೆದಿದೆ. ಮೂಡಲಗಿ ತಾಲೂಕಿನ ಕಲ್ಲೋಳಿಯ ಸುಭಾಷ ಖಾನಗೌಡ್ರ (24) ಮೃತಪಟ್ಟ ಯೋಧ. ಇವರು ಕಳೆದ ಐದು ವರ್ಷಗಳಿಂದ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.2020ರಲ್ಲಿ ನೌಕಾಪಡೆಗೆ ನೇಮಕಾತಿ ಹೊಂದಿದ್ದ ಸುಭಾಷ ಅವರು ಕೇರಳದ ಕೊಚ್ಚಿಯಲ್ಲಿ ತರಬೇತಿ ಪಡೆದಿದ್ದರು. ನಂತರ …
Read More »ನಿಯಮ ಮೀರಿ ನಿರಾತಂಕವಾಗಿ ನಡೆದಿರುವ ಗಣಿಗಾರಿಕೆ
ಬಾಗಲಕೋಟೆ : ನಿಯಮ ಮೀರಿ ನಿರಾತಂಕವಾಗಿ ನಡೆದಿರುವ ಗಣಿಗಾರಿಕೆ ಗಣಿಗಾರಿಕೆ ನಿಯಮ ಬದ್ಧವಾಗಿ ನಡೆಸಲು ಅದಕ್ಕಂತೆನೇ ಇಲಾಖೆ ಇದೆ.ಅಕ್ರಮ,ನಿಯಮ ಮೀರಿ ಗಣಿಗಾರಿಕೆ ನಡೆಸುವವರ ಮೇಲೆ ಕ್ರಮ ವಹಿಸುವ ಮತ್ತು ಗಣಿಗಾರಿಕೆ ಸ್ಥಳ ಪರಿಶೀಲನೆ ಮಾಡುವ ಕೆಲಸ ಮೈನಿಂಗ್ ಅಧಿಕಾರಿಗಳದ್ದು,ಆದ್ರೆ ಇಲ್ಲಿ ಸ್ಥಳೀಯರು ದೂರು ನೀಡಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಅಕ್ರಮ ಮರಂ ಸಾಗಾಟದ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಒಂದೆಡೆ ಜೆಸಿಬಿಗಳ ಮೂಲಕ ಅಗೆಯುತ್ತಿರೋ ಗುಡ್ಡ.ಮತ್ತೊಂದೆಡೆ ಮರಂ ಸಾಗಾಟ …
Read More »ನೀರಿಗಾಗಿ ಮಜಗಾವ ದಲ್ಲಿ ಪ್ರತಿಭಟನೆ
ನೀರಿಗಾಗಿ ಮಜಗಾವ ದಲ್ಲಿ ಪ್ರತಿಭಟನೆ ಬೆಳಗಾವಿ ನಗರದ ಮಜಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಅಲ್ಲಿಯ ನಿವಾಸಿಗಳು ಇಂದು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಿದರು. ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷಿಗೂ ಮೀರಿ ಮಳೆಯಾಗಿದ್ದರ ಪರಿಣಾಮವಾಗಿ ಜಿಲ್ಲೆಯ ಘಟಪ್ರಭಾ ಮಲಪ್ರಭಾ ಹಾಗೂ ರಕ್ಕಸಕೊಪ್ಪ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ನಗರದ ಅನೇಕ ಬಡಾವಣೆಯಲ್ಲಿ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಆರಂಭವಾಗಿದ್ದು, ನೀರು ಸಿಗದಿರುವುದಕ್ಕೆ ಜನರು …
Read More »ಬೆಟಗೇರಿಯ ಬಡ್ಡಿ ಯಲ್ಲಪ್ಪನ ಮನೆಯಲ್ಲಿ ಕಂತೆ ಕಂತೆ ಹಣ: ಪೊಲೀಸರೇ ಶಾಕ್!
ಗದಗ, ಫೆಬ್ರವರಿ 12: ಆತ ಬಡ್ಡಿ ಬಕಾಸುರ, ಅಕ್ರಮವಾಗಿ ಬಡ್ಡಿ ದಂಧೆ (meter interest) ಮಾಡುತ್ತಿದ್ದ. ಕೋಟಿ ಕೋಟಿ ಲೆಕ್ಕದಲ್ಲಿ ಬಡ್ಡಿದಂದೆ ಮಾಡ್ತಾಯಿದ್ದ. ಬಡ ಜನರ ರಕ್ತ ಹೀರಿ ಹೀರಿ ಕುಬೇರನಾಗಿದ್ದ. ಆದರೆ ಬಡ್ಡಿ ಬಕಾಸುರನ ಖಜಾನೆಯನ್ನು ಪೊಲೀಸರು ಜಾಲಾಡಿದ್ದಾರೆ. ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ರೂ. ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ರೂ. …
Read More »ಬಿಎಂಆರ್ಸಿಎಲ್ಗೆ ಸಿಎಂ ಮಹತ್ವದ ಸೂಚನೆ: ಏರಿಕೆಯಾಗಿರುವ ಮೆಟ್ರೋ ದರ ಇಳಿಕೆಯಾಗುತ್ತಾ?
ಬೆಂಗಳೂರು, (ಫೆಬ್ರವರಿ 13): ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ಭಾರೀ ಹೊರೆಯಾಗಿದೆ. ಶೇ.45 ರಿಂದ 50% ದರ ಏರಿಕೆ ಮಾಡಿದ್ದೇವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಆದ್ರೆ, ಏರಿಕೆ ಅಗಿರುವುದ ಒನ್ ಟು ಡಬಲ್ ಆಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ದರ ಏರಿಕೆಯಲ್ಲಿ ಗೊಂದಲ ನಿರ್ಮಾಣವಾಗಿದ್ದರಿಂದ ಖುದ್ದು ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು, ಮೆಟ್ರೋ ಪ್ರಯಾಣ ದರ ಹೆಚ್ಚಳದಲ್ಲಿ ಕೆಲವು ಸ್ಟೇಜ್ಗೆ ದುಪ್ಪಟ್ಟು …
Read More »ಬೆಳಗಾವಿ ಆರ್ ಸಿ ಯು ಹಾಗೂ ಅಮೆರಿಕ ವಿವಿ ಶೈಕ್ಷಣಿಕ ಒಪ್ಪಂದ
ಬೆಳಗಾವಿ ಆರ್ ಸಿ ಯು ಹಾಗೂ ಅಮೆರಿಕ ವಿವಿ ಶೈಕ್ಷಣಿಕ ಒಪ್ಪಂದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಬ್ರಿಡ್ಜ್ವಾಟರ್ ಸ್ಟೇಟ್ ವಿಶ್ವವಿದ್ಯಾಲಯದೊಂದಿಗೆ ವಿವಿಧ ಶೈಕ್ಷಣಿಕ ಒಡಂಬಡಿಕೆಗಳ ಒಪ್ಪಂದಕ್ಕೆ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸಹಿ ಹಾಕಲಾಯಿತು. ಈ ಕುರಿತು ಮಾತುಕತೆಗಳು ನಡೆದ ನಂತರ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಸಿಎಂ ತ್ಯಾಗರಾಜ್ ಮತ್ತು ಅಮೆರಿಕಾದ ಬ್ರಿಡ್ಜ್ ವಾಟರ್ ಸ್ಟೇಟ ವಿವಿ ಅಧ್ಯಕ್ಷ ಫ್ರೆಡ್ರಿಕ್ ಡಬ್ಲ್ಯೂ.ಕ್ಲಾರ್ಕ್ …
Read More »ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿ ಕೊಡಲು ತೊಂದರೆ ಇದೆಯಾ: ಸಚಿವ ಸಂತೋಷ್ ಲಾಡ್
ಅರಕಲಗೂಡು (ಹಾಸನ) : “ತುಂಬಾ ಪವರ್ಫುಲ್ ಪ್ರಧಾನಿ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ಅವರು ವಾಗ್ದಾಳಿ ನಡೆಸಿದ್ದಾರೆ. ಪಟ್ಟಣದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಅಥವಾ ಚುನಾವಣಾ ಕಮಿಷನ್ನವರಾಗಲಿ ಎಲೆಕ್ಷನ್ ವೋಟಿಂಗ್ ಪ್ಯಾಟರ್ನ್ಅನ್ನು ಕೊಡದಂತೆ ಕಾನೂನನ್ನೇ ತಂದಿದ್ದಾರೆ. ಈ ಹೊಸ …
Read More »ಹಾವೇರಿಯಲ್ಲಿ ಇಬ್ಬರು ರೈತರ ದುರ್ಮರಣ
ಹಾವೇರಿ: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ. ಒಂದೆಡೆ ರೈತ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟರೆ ಇನ್ನೊಂದೆಡೆ ಜೇನು ಹುಳು ಕಡಿದು ರೈತ ಮೃತಪಟ್ಟ ಘಟನೆ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ಹಾನಗಲ್ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಮಹಿಳೆಯನ್ನು 45 ವರ್ಷದ ರೇಣುಕಾ ಮರೆಯಪ್ಪನವರ್ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು …
Read More »ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ:ಡಿ ಕೆ ಶಿ
ಮೈಸೂರು : ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಣ್ಣ ಕಾರ್ಯಕರ್ತ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು. ಸಚಿವ ಕೆ.ಎನ್.ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ …
Read More »ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ ಪವಿತ್ರ ಸ್ನಾನ
ಮೈಸೂರು: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿಯಾದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದು ಮಾಘ ಪೂರ್ಣಿಮೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಫೆಬ್ರವರಿ 10ರಿಂದ ತಿರುಮಕೂಡಲಿನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಕುಂಭಮೇಳದಲ್ಲಿ ಇಂದು ಕೊನೆಯ ದಿನ. ಸಂಗಮದಲ್ಲಿ ಈ ಸಲ 6 ವರ್ಷಗಳ ಬಳಿಕ ಕುಂಭಮೇಳ ನಡೆಯುತ್ತಿದೆ. ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಗಳು ಸಂಗಮವಾಗುವ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬುದು ಜನರ ನಂಬಿಕೆ. …
Read More »
Laxmi News 24×7