ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಬಂಡೆದ್ದು ಸರ್ಕಾರ ಪತನಗೊಳಿಸವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಕಸರತ್ತು ಆರಂಭಿಸಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಿದ್ದರು. ಆದರೆ ಇವರದೇ ನಾಯಕ ಸಮುದಾಯದ ಬಿ. ಶ್ರೀರಾಮುಲು ಅವರನ್ನು ಬಿಜೆಪಿ ಚುನಾವಣೆಗೂ ಮುನ್ನವೇ ಉಪಮುಖ್ಯಮಂತ್ರಿ …
Read More »ಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ- ದಾಖಲೆ ಬರೆದ ಮಂಗ್ಳೂರು ಬಾಲಕಿ
ಮಂಗಳೂರು: ಮಾಮೂಲಿಯಾಗಿ ಎಲ್ಲರೂ ಒಂದು ಕೈಯಲ್ಲಿ ಬರೆಯೋದು ನಾವೆಲ್ಲ ನೋಡಿದ್ದೇವೆ, ನಾವೂ ಬರೆಯುತ್ತೇವೆ. ಆದರೆ ಮಂಗಳೂರಿನ ಬಾಲಕಿಯೋರ್ವಳು ಎರಡು ಕೈಗಳಲ್ಲಿಯೂ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾಳೆ. ಅದು ಉಲ್ಟಾ ಬರವಣಿಗೆಯೂ ಇರಲಿ, ಮಿರರ್ ಏಫೆಕ್ಟ್ ರೈಟಿಂಗೂ ಇರಲಿ ಎಲ್ಲವನ್ನೂ ಆಕೆ ಸಲೀಸಾಗಿ ಬರೆಯುತ್ತಾಳೆ. ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುವ ಅದ್ಭುತ ಕಲೆ ಹೊಂದಿರುವ ಬಾಲಕಿ ಹೆಸರು ಆದಿ ಸ್ವರೂಪ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ದಂಪತಿಯ ಪುತ್ರಿಯಾಗಿರುವ …
Read More »ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ …
Read More »ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ರಾಜ್ಯ ಸರ್ಕಾರವು ಸೋಮವಾರ ಎಂ.ಎಸ್. ಶ್ರೀಕರ, ಟಿ.ಎಚ್.ಎಂ. ಕುಮಾರ್ ಸೇರಿದಂತೆ ನಾಲ್ಕು ಮಂದಿ ಐಎಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಣಿಜ್ಯ ತೆರಿಗೆಗಳ ಆಯುಕ್ತರಾಗಿದ್ದ ಎಂ.ಎಸ್. ಶ್ರೀಕರ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಹಾಗೂ ಉಳಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಟಿ.ಎಚ್.ಎಂ. ಕುಮಾರ್ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು …
Read More »ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ’ ಎಂದ ಕೇಂದ್ರ ಸಚಿವ ರಾಜನಾಥ್ ಸಿಂಗ್
ನವದೆಹಲಿ : ಎಂದಿನಂತೆಯೇ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಈ ಮಧ್ಯೆಯೇ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತಾಡಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳ …
Read More »ಬೆಂಗಳೂರು, : ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ
ಬೆಂಗಳೂರು, : ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲೇ ಮುಗಿದಿದ್ದು, ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಕೊರೋನಾ ಭೀತಿಯಿಂದ ಮುಂದೂಡಲಾಗಿದ್ದು. ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ಕಂದಾಯ ಇಲಾಖೆಗೆ ಮಹತ್ವದ ಸೂಚನೆ ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ …
Read More »ಮೊಘಲ್ ಅಲ್ಲ ಶಿವಾಜಿ! ಸ್ಪಾಟ್‌ನಲ್ಲಿ ಹೆಸರು ಬದಲಾಯಿಸಿದ ಯೋಗಿ!
ಲಕ್ನೋ : ಮೊಘಲರು ಹೇಗೆ ನಮ್ಮ ಆದರ್ಶಗಳಾಗಲು ಸಾಧ್ಯ? ಎಂದು ಪ್ರಶ್ನೆ ಮಾಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಒಂದು ದಿಟ್ಟ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಆಗ್ರಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ಇಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ. ಶಿವಾಜಿ ಮಹಾರಾಜ ಮೊಘಲರ ಕಾಲದ ಆಡಳಿತದ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಈ ಮ್ಯೂಸಿಯಂಗೆ ‘ಮೊಘಲ್ ಮ್ಯೂಸಿಯಂ’ ಎಂದೇ ಹೆಸರಿಡಲು ಆಲೋಚನೆ ಮಾಡಲಾಗಿತ್ತು. ಆದರೆ …
Read More »ಎಸ್‌ಡಿಪಿಐ ರೀತಿ ತರಬೇತಿ ಕೊಡುತ್ತಾರಂತಾ?: ಕಾಂಗ್ರೆಸ್‌ಗೆ ಬಿ.ಸಿ.ಪಾಟೀಲ ಪ್ರಶ್ನೆ
ಬೆಳಗಾವಿ: ‘ಎಸ್‌ಡಿಪಿಐ ರೀತಿ ತರಬೇತಿ ಕೊಡುತ್ತಾರಂತಾ?’ ‘ಆರ್‌ಎಸ್‌ಎಸ್ ರೀತಿ ನಮ್ಮ ಶತ್ರುಗಳನ್ನೂ ತಯಾರಿಸುವುದಿಲ್ಲ’ ಎಂಬ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ ತಿರುಗೇಟು ನೀಡಿದ್ದು ಹೀಗೆ. ‘ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಗಲಾಟೆ ಮಾಡಿದವರ‍್ಯಾರು? ಶತ್ರುಗಳನ್ನು ತಯಾರಿಸುತ್ತಿರುವವರು ಅವರೇ. ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ. ಕೋಮು ಗಲಭೆಗೆ ಪ್ರಚೋದಿಸುತ್ತಾರೆ’ ಎಂದು ದೂರಿದರು. ‘ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಪ್ರಶ್ನಿಸುವ ಯೋಗ್ಯತೆ ಕಾಂಗ್ರೆಸ್‌ನವರಿಗೆ …
Read More »ಉದ್ಘಾಟನೆ ನೆಪದಲ್ಲಿ ಮತ್ತೆ ಐದಾರು ಕಿ.ಮೀ. ಬಸ್ ಚಲಾಯಿಸಿದ ರೇಣುಕಾಚಾರ್ಯ
ದಾವಣಗೆರೆ, : ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ಹೌದು.. ಹೊನ್ನಾಳಿ ಡಿಪೋದ 6 ಬಸ್‌ಗಳನ್ನ ಉದ್ಘಾಟನೆ ಮಾಡಿದರು. ಬಳಿಕ ಸಿಕ್ಕಿದ್ದೇ ಚಾನ್ಸ್ ಅಂತ ಬಸ್ ಚಲಾಯಿಸಿಕೊಂಡು ನಗರ ಪ್ರದಕ್ಷಿಣೆ ಹಾಕಿದರು. ಸರಾಗವಾಗಿ ಪಟ್ಟಣದಲ್ಲಿ ಐದಾರು ಕಿ.ಮೀ. ಬಸ್ ಓಡಿಸಿದ ರೆಣುಕಾಚಾರ್ಯ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: …
Read More »ನಾಳೆ ಸಚಿವರು ರಮೇಶ ಜಾರಕಿಹೊಳಿ ದೆಹಲಿಗೆ: ಸಂಪುಟ ವಿಸ್ತರಣೆ ಚರ್ಚೆಯ ನಡುವೆ ಗರಿಗೆದರಿದ ಕುತೂಹಲ
ರಾಜ್ಯ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಹೊಸದೆಹಲಿಗೆ ಹೊರಟಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಸಚಿವರು ಮೂರನೇ ಬಾರಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ. ಜಲಸಂಪನ್ಮೂಲ ಸಚಿವಾಲಯದ ಮಾಹಿತಿಯಂತೆ ಸಚಿವ ರಮೇಶ ಜಾರಕಿಹೊಳಿ ಬುಧವಾರ ದೆಹಲಿಗೆ ತೆರಳುವರು. ಅಂದು ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುವರು. ದೆಹಲಿಯಲ್ಲಿ ಶುಕ್ರವಾರದವರೆಗೂ ಜಾರಕಿಹೊಳಿ ವಾಸ್ತವ್ಯ ಕಾರ್ಯಕ್ರಮ ನಿಗದಿಯಾಗಿದೆ. ಸಚಿವ ರಮೇಶ ಜಾರಕಿಹೊಳಿ …
Read More »
Laxmi News 24×7