Breaking News

ರಾಜಕೀಯ

ಪಾರ್ಕ್ ಗಳಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದೆ. ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗೆ ಸ್ಥಳ ಇಕ್ಕಟ್ಟಾದ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ಪಾರ್ಕ್ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ದೆಹಲಿಯ ಸರಾಯ ಕಾಲೇಂ ಖಾಂ ಪಾರ್ಕ್ ಸ್ಮಶಾನವಾಗಿ ಬದಲಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹ ಬರುತ್ತಿರೋದರಿಂದ ಜನರು ಕ್ಯೂ ಹಚ್ಚುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ದೆಹಲಿ ಸರ್ಕಾರ ಅಲ್ಲಿರುವ ಪಾರ್ಕ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಸರಾಯ ಕಾಲೇಂ ಖಾಂನಲ್ಲಿ ಏಕಕಾಲದಲ್ಲಿ …

Read More »

ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ, ಏಪ್ರಿಲ್ 25; ಭಾರತದಲ್ಲಿ 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2,767 ಜನರು ಸಾವನ್ನಪ್ಪಿದ್ದು, 2,17,113 ಜನರು ಡಿಸ್ಚಾರ್ಜ್ ಆಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಭಾರತದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26,82,751.   ದೇಶದಲ್ಲಿ ಇದುವರೆಗೂ 1,40,85,110 ಜನರು ಗುಣಮುಖಗೊಂಡಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 1,92,311. ಇದುವರೆಗೂ …

Read More »

ಸ್ವಂತ ಟಿವಿ ಚಾನೆಲ್ ಆರಂಭಿಸಿದ ‘ಕಾಂಗ್ರೆಸ್’

ದೇಶದ ಜನತೆಯನ್ನು ತಲುಪಲು ಕಾಂಗ್ರೆಸ್ ಪಕ್ಷ ಇದೀಗ ತನ್ನ ಸ್ವಂತ ಟಿವಿ ಚಾನೆಲ್ ಆರಂಭಿಸಿದೆ. ಐ.ಎನ್.ಸಿ. ಟಿವಿಗೆ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ (ಏಪ್ರಿಲ್ 24)ವಾದ ಶನಿವಾರದಂದು ಚಾಲನೆ ನೀಡಲಾಗಿದೆ. ದೇಶದಲ್ಲಿ ವಿವಿಧ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದರೂ ಸಹ ಇದು ಬಹಳಷ್ಟು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ. ಹೀಗಾಗಿ ನೈಜ ವಿಷಯವನ್ನು ಜನರಿಗೆ ತಲುಪಿಸಲು ಟಿವಿ ಚಾನೆಲ್ ಆರಂಭಿಸಿರುವುದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನೂತನ ಟಿವಿ ಚಾನೆಲ್ …

Read More »

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಆದೇಶ

ನವದೆಹಲಿ: ದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿದ್ದು, ಮತ್ತೊಂದೆಡೆ ಇಲ್ಲಿನ ಆಸ್ಪತ್ರೆಗಳನ್ನು ಆಮ್ಲಜನಕದ ಕೊರತೆೆ ಅತಿಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ‘ಆಮ್ಲಜನಕ ಪೂರೈಕೆಗೆ ಸಹಾಯವಾಗಲು ಪೋರ್ಟಲ್‌ ಆರಂಭಿಸಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್‌ಡೇಟ್‌ ಆಗಲಿದೆ. ಪ್ರತಿ 2 ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ. ಕೇಂದ್ರ …

Read More »

ಭಾರತಕ್ಕೆ ಆಮ್ಲಜನಕ ಸಿಲಿಂಡರ್ ಪೂರೈಸಲು ನೆರವಾಗುವಂತೆ ಅಖ್ತರ್ ಮನವಿ

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತಕ್ಕೆ ನೆರವಾಗುವಂತೆ ಪಾಕಿಸ್ತಾನ ಸರ್ಕಾರ ಹಾಗೂ ಅಭಿಮಾನಿಗಳಲ್ಲಿ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮನವಿ ಮಾಡಿದ್ದಾರೆ. ಏಪ್ರಿಲ್ 24 ಶನಿವಾರದಂದು ಭಾರತದಲ್ಲಿ ಗರಿಷ್ಠ 3,46,786 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇದು ದಿನವೊಂದರಲ್ಲೇ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ. ಹಾಗೆಯೇ ಕಳೆದ 24 ತಾಸಿನಲ್ಲಿ 2,624 ಮಂದಿ ಮೃತಪಟ್ಟಿದ್ದಾರೆ. ‘ಈಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವುದು ಯಾವುದೇ ಸರ್ಕಾರಕ್ಕೆ ಕಷ್ಟಕರವಾಗಿದೆ. ಈ ಕಷ್ಟದ ಪರಿಸ್ಥಿತಿಯಲ್ಲಿ …

Read More »

ನೀವು ತಿನ್ನಲು ಅನ್ನ ಸಿಗದೆ ಸಾಯುತ್ತೀರಿ: ಆಂಬುಲೆನ್ಸ್-ಸ್ಮಶಾನದವರ ವಿರುದ್ಧ ಜಗ್ಗೇಶ್ ಆಕ್ರೋಶ

ಬೆಂಗಳೂರು: ಕೋವಿಡ್ ಮಹಾಮಾರಿಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಆಯಂಬುಲೆನ್ಸ್ ಹಾಗೂ ಚಿತಾಗಾರದ ಸಿಬ್ಬಂದಿಗಳು ಹಣ ಪೀಕುತ್ತಿರುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಬಿಬಿಎಂಪಿಯವರೇ ಮಾಡಬೇಕು. ಆದರೆ, ಈ ನಿಮಯ ಗಾಳಿಗೆ ತೂರಿರುವ ಕೆಲವರು, ಕೋವಿಡ್‍ನಿಂದ ಬಲಿಯಾದವರ ಶವಗಳ ಮೇಲೆ ಹಣದ ದಂಧೆಗೆ ಇಳಿದಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಸ್ವತಃ ಕನ್ನಡದ ನಟ ನವರಸ ನಾಯಕ ಜಗ್ಗೇಶ್ …

Read More »

ಖಾಸಗಿ ಆಸ್ಪತ್ರೆಗಳಿಗೆ ₹600, ರಾಜ್ಯಗಳಿಗೆ ₹400, ಕೇಂದ್ರಕ್ಕೆ 150 ರೂಪಾಯಿಗೆ ಕೊರೊನಾ ಲಸಿಕೆ ಮಾರಾಟ: ಸೀರಮ್ ಸ್ಪಷ್ಟನೆ

ನವದೆಹಲಿ: ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಯ ಮುಕ್ತ ಮಾರುಕಟ್ಟೆ ಬೆಲೆ ನಿಗದಿ ಕುರಿತು ಟೀಕೆಗೆ ಸೀರಮ್ ಸಂಸ್ಥೆ ಶನಿವಾರ ಪ್ರತಿಕ್ರಿಯಿಸಿದ್ದು, ‘ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ ₹600 ಮಾರಾಟ ಮಾಡಲಾಗುವುದು, ರಾಜ್ಯಗಳಿಗೆ ₹400 ಮತ್ತು ಕೇಂದ್ರಕ್ಕೆ 150 ರೂಪಾಯಿಗೆ ನೀಡಲಾಗುವುದು’ ಎಂದಿದ್ದಾರೆ. ತಯಾರಕರು ‘ಭಾರತದೊಂದಿಗೆ ಲಸಿಕೆಯ ಜಾಗತಿಕ ಬೆಲೆಗಳ ನಡುವೆ ಮಾಡಲಾದ ನಿಖರವಲ್ಲದ ಹೋಲಿಕೆ’ಯಾಗಿದೆ. ಪ್ರಸ್ತುತ ದೇಶದಲ್ಲಿ ಬಳಸಲಾಗುತ್ತಿರುವ ಎರಡು ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ …

Read More »

BIG BREAKING: ಬೆಳಗ್ಗೆ 11 ಗಂಟೆಗೆ ಮೋದಿ ಭಾಷಣ, ದೇಶಾದ್ಯಂತ ಲಾಕ್ ಡೌನ್ ಜಾರಿ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಬಿತ್ತರವಾಗಲಿದೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ನಂತಹ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಹಲವೆಡೆ ಲಾಕ್ಡೌನ್ ಮಾದರಿಯ ನಿರ್ಬಂಧ ಹೇರಲಾಗಿದೆ. ಕೊರೋನಾಗೆ ಲಾಕ್ಡೌನ್ …

Read More »

ಬೆಡ್​ ಸಿಗದೇ ಬೆಂಗಳೂರಿನ ಸ್ವಾಬ್​ ಕಲೆಕ್ಟರ್​ ದಾರುಣ ಸಾವು

ಬೆಂಗಳೂರು (ಏ. 24): ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಸಾಕಷ್ಟು ಕ್ರೂರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗದಾಗಿದ್ದು, ದಿನನಿತ್ಯ ಸಾವಿರಾರು ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಕೂಡ ಎದುರಾಗಿದೆ. ಜನರ ರಕ್ಷಣೆ ಮಾಡಬೇಕಾದ ವೈದ್ಯರು ಸೇರಿದಂತೆ ಅನೇಕ ಕೊರೋನಾ ವಾರಿಯರ್​ಗಳು ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಸಿಲಿಕಾನ್​ ಸಿಟಿಯಲ್ಲಿ ಸ್ವಾಬ್​ ಕಲೆಕ್ಟರ್​ರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮರ್ಸಿಟೌನ್​ ಗೀತಾ …

Read More »

ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ರೈತರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಎರಡು ಸಾವಿರ ಅಡಿಗಳ ಪಾತಾಳದಿಂದ ನೀರು ತೆಗೆದು, ತರಕಾರಿ ಹಾಗೂ ಹಣ್ಣು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಇನ್ನೇನು ಕಟಾವು ಮಾಡಿ ಅದರಿಂದ ಆದಾಯ ಗಳಿಸಬಹುದು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಅಷ್ಟರಲ್ಲಿ ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಎಲ್ಲವೂ ಮಣ್ಣು ಪಾಲಾಗಿವೆ. ಮತ್ತೊಂದೆಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಪಾಲಿ ಹೌಸ್​ಗಳು ಅಸ್ತವ್ಯಸ್ತವಾಗಿವೆ. ಕೊರೊನಾ …

Read More »