ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸೇರಿದ್ದು ಎನ್ನಲಾದ ಸಿಡಿ, ರಮೇಶ್ ರಾಜಕೀಯ ಜೀವನದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಈ ಸಿಡಿ ವಿವಾದದ ಬಳಿಕ ರಮೇಶ್ ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸ್ಥಾನದಿಂದಲೂ ಕೆಳಗಿಳಿದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗೆ ಇಳಿದಿದ್ದರೂ ಸಹ ರಮೇಶ್ ಜಾರಕಿಹೊಳಿ ಖದರ್ ಕಡಿಮೆಯಾದಂತೆ ಕಾಣುತ್ತಿಲ್ಲ. ಗೋಕಾಕ್ನ ಗೃಹ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಡಿಹೆಚ್ಓರನ್ನ ಕರೆಸಿಕೊಂಡ …
Read More »ಸರಕಾರ ತಪಾಸಣೆ ಕಡಿಮೆಗೊಳಿಸಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಿದೆ: ಎಂ.ಬಿ.ಪಾಟೀಲ್ ಆರೋಪ
ಬೆಂಗಳೂರು, ಮೇ 15: ರಾಜ್ಯದಲ್ಲಿ ಕೊರೋನ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರಕಾರ ಮೌಖಿಕ ಆದೇಶದ ಮೂಲಕ ತಪಾಸಣೆಗಳನ್ನು ಕಡಿಮೆಗೊಳಿಸಲಾಗಿದೆ. ಕರ್ನಾಟಕದಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಂಕಿ ಅಂಶಗಳ ತೋರಿಸುವ ಮೂಲಕ ರಾಜ್ಯದ ಜನತೆಯ ಆರೋಗ್ಯದ ಸ್ಥಿತಿಯನ್ನು ತೀರ ಗಂಭೀರವಾಗಿಸುವತ್ತ ಸರಕಾರದ ಮುನ್ನಡೆದಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಪ್ರಕರಣಗಳು …
Read More »ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ – ಶಾಸಕ, ಡಿಎಚ್‍ಒಗೆ ತರಾಟೆ
ಧಾರವಾಡ: ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸದೇ ನಿರ್ಲಕ್ಷ್ಯ ತೊರಿದ ಶಾಸಕ ಹಾಗೂ ಡಿಎಚ್‍ಒ ಮೇಲೆ ಅಳ್ನಾವರ ಪಟ್ಟಣ ಪಂಚಾಯತಿ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರವಾಡ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆಯಲ್ಲಿ ಅಳ್ನಾವರದಲ್ಲಿ ನಡೆದಿದ್ದ ಸಭೆಯಲ್ಲಿ ಪಟ್ಟಣದಲ್ಲಿ ಹೆಚ್ಚಾಗಿರುವ ಕೊರೊನಾ ಬಗ್ಗೆ ಪ್ರಸ್ತಾಪಿಸಿದ ಪಟ್ಟಣ ಪಂಚಾಯತಿ ಸದಸ್ಯರು, ಈಗ ಬಂದು ಸಭೆ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ. ತಾಲೂಕು ಕೇಂದ್ರವಾಗಿದ್ದರೂ ಆರೋಗ್ಯ …
Read More »ಎರಡು ಡೋಸ್ ಪಡೆದಿದ್ದ ಹುಕ್ಕೇರಿ ಮೂಲದ ಮಂಗಳೂರು ಪೊಲೀಸ್ ಬಲಿ
ಮಂಗಳೂರು: ಎರಡು ಡೋಸ್ ಲಸಿಕೆ ಪಡೆದಿದ್ದ ಮಂಗಳೂರಿನ ಪೊಲೀಸ್ ಸಿಬ್ಬಂದಿ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಮಂಗಳೂರು ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಶಿಂಗೆ ಮೃತಪಟ್ಟವರು. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇವರು ಮಾಜಿ ಸೈನಿಕರು. ಕೊರೊನಾ ಪಾಸಿಟಿವ್ ಬಂದಿದ್ದ ಇವರು ಕಳೆದ ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುಅಂಗಾಂಗ ವೈಫಲ್ಯಗೊಂಡು ಬಳಲುತ್ತಿದ್ದ ಇವರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರು. ಇವರ ಸಾವಿಗೆ ಕೊರೋನಾ …
Read More »ಬ್ಲ್ಯಾಕ್ ಫಂಗಸ್ ನಿಂದ ಹೆಡ್ ಕಾನ್ಸ್ ಟೇಬಲ್ ಬ್ಲ್ಯಾಕ್ ಫಂಗಸ್ ಗೆ ಸಾವನ್ನಪ್ಪಿರುವ ಶಂಕೆ
ಕಲಬುರ್ಗಿ: ಕೊರೊನಾ ಎರದನೇ ಅಲೆ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಮಹಾಮಾರಿ ಅಬ್ಬರ ಹೆಚ್ಚುತ್ತಿದ್ದು, ಕಪ್ಫು ಶಿಲೀಂಧ್ರಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯ ಹೆಡ್ ಕಾನ್ಸ್ ಟೇಬಲ್ ಓರ್ವರು ಇದೀಗ ಬ್ಲ್ಯಾಕ್ ಫಂಗಸ್ ಗೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಲಬುರ್ಗಿ ಜಿಲ್ಲೆಯ ಅಶೋಕ ನಗರದ ಹೆಡ್ ಕಾನ್ಸ್ ಟೇಬಲ್ ಕೊರೊನಾಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಕೊರೊನಾದಿಂದ ಚೇತರಿಕೆ ಬಳಿಕ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ಮಧುಮೇಹ ಕೂಡ ತೀವ್ರ ಹೆಚ್ಚಳವಾಗಿತ್ತು. ಇದೀಗ. …
Read More »ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸಿಲುಕಿದ ಬೋಟ್; ಮೂವರು ಮೀನುಗಾರರ ರಕ್ಷಣೆ
ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಬೋಟ್ ವೊಂದು ಸಿಲುಕಿದ ಪರಿಣಾಮ ಅದರಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ. ಕಣ್ಣೂರಿನಿಂದ 10 ನಾಟಿಕಲ್ ಮೈಲಿ ದೂರದಲ್ಲಿ ದೋಣಿ ಕೆಟ್ಟು ನಿಂತಿತ್ತು. ಈ ಕುರಿತು ಕರಾವಳಿ ಕಾವಲು ಪಡೆ ಸಿಬ್ಬಂದಿ ಮಾಹಿತಿ ಪಡೆದು, ವಿಕ್ರಮ್ ಹಡಗಿನೊಂದಿಗೆ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಲಾಗಿದೆ, ರಕ್ಷಿಸಿದ ಮೀನುಗಾರರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆ. ‘ತೌಕ್ತೆ ಚಂಡಮಾರುತದಿಂದ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ …
Read More »ಕೋವಿಡ್ ಸೋಂಕಿಗೆ ತಂದೆ – ತಾಯಿ ಬಲಿ : ಅನಾಥವಾದ 5 ದಿನದ ಮಗು.!
ಮಂಡ್ಯ: ಕೋವಿಡ್ ಸೋಂಕಿನಿದ ತಂದೆ-ತಾಯಿ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ 5 ದಿನದ ಮಗು ಅನಾಥವಾದ ಕರುಣಾಜನಕ ಘಟನೆ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂಜುಂಡೇಗೌಡ(45) ಹಾಗೂ ಪತ್ನಿ ಮಮತಾ(31) ಕೋವಿಡ್ ಸೋಂಕಿನಿಂದ ಮೃತಪಟ್ಟವರು. ನಂಜುಂಡೇಗೌಡ ಅವರಿಗೆ ಕೋವಿಡ್ ಸೋಂಕು ತಗುಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಏ.30 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತುಂಬು ಗರ್ಭಿಣಿಯಾಗಿದ್ದ ಪತ್ನಿ ಮಮತಾಗೂ ಸೋಂಕು …
Read More »ರಕ್ಷಣೆ ಇಲ್ಲದೆ ಸೋಂಕಿತ ಶವ ಹಸ್ತಾಂತರ; ಆರೋಪ
ರಾಯಚೂರು: ಇಲ್ಲಿನ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತ ಸೊಂಕಿತರ ಶವಗಳಿಗೆ ಕವರ್ ಹಾಕದೆ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಸೋಂಕಿನಿಂದ ದಾಖಲಾದವರು ಮೃತಪಟ್ಟಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇಲ್ಲವೇ ಕುಟುಂಬಸ್ಥರು ಶವ ಕೇಳಿದರೆ, ಶವವನ್ನು ಸಂಪೂರ್ಣ ಕವರ್ ಮಾಡಿ ಕೊಡಬೇಕಿದೆ. ಈವರೆಗೂ ಹಾಗೆಯೇ ನೀಡಲಾಗುತ್ತಿದೆ. ಆದರೆ, ವೀಡಿಯೋ ಹರಿದಾಡುತ್ತಿದ್ದು ಅದರಲ್ಲಿ ಶವ ಹಸ್ತಾರಿಸುವಾಗ ಯಾವುದೇ ಕವರ್ ಹಾಕಿಲ್ಲ. ಪಿಪಿಇ ಕಿಟ್ ಸಹ ನೀಡದೆ ಸಂಬಂಧಿಕರೆ ಅಂತ್ಯ …
Read More »ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಅಶಿಮ್ ಬ್ಯಾನರ್ಜಿ ಕೊರೊನಾಗೆ ಬಲಿ
ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಅಶಿಮ್ ಬ್ಯಾನರ್ಜಿ ಅವರು ಶನಿವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಶಿಮ್ ಬ್ಯಾನರ್ಜಿ ಅವರು, ಕೋಲ್ಕತ್ತಾದ ಮೇದಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ. ಪಶ್ಚಿಮ ಬಂಗಾದಲ್ಲಿ ಶುಕ್ರವಾರ 20,846 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 10,94,802ಕ್ಕೆ ಏರಿಕೆಯಾಗಿದೆ. ಈ ನಡುವೆ …
Read More »ಕೋವಿಡ್ ಲಸಿಕೆ ಪೂರೈಕೆ; ಜೂನ್‌ನಿಂದ ಸುಧಾರಿಸಲಿದೆ ಪರಿಸ್ಥಿತಿ
ನವದೆಹಲಿ, ಮೇ 14; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕ ಮೂಡಿಸಿದೆ. ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಜನರು ತಯಾರಾಗಿದ್ದಾರೆ. ಆದರೆ ವಿವಿಧ ರಾಜ್ಯಗಳಲ್ಲಿ ಲಸಿಕೆಯ ಲಭ್ಯತೆಯೇ ಇಲ್ಲ. ಮೇ ತಿಂಗಳಿನಲ್ಲಿ 8.8 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಜೂನ್ ತಿಂಗಳ ಬಳಿಕ ಲಸಿಕೆ ಉತ್ಪಾದನೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ 15.81 ಕೋಟಿ ಡೋಸ್, ಆಗಸ್ಟ್‌ನಲ್ಲಿ 36.6 ಕೋಟಿ ಡೋಸ್, …
Read More »
Laxmi News 24×7