Breaking News

ರಾಜಕೀಯ

ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ

ಗೋಕಾಕ: ನಗರದ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರಗಳಾದ ಗೋಕಾಕ, ಅರಭಾವಿ, ಕೌಜಲಗಿ ಹಾಗೂ ಬೀಜ ಮಾರಾಟ ಕೇಂದ್ರಗಳ ಜೊತೆಗೆ 18 ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು ವಿತರಿಸಲಾಗುತ್ತಿದೆ …

Read More »

ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ದೆಹಲಿ: ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್ ಗೆ 25 ರಿಂದ 26 ಪೈಸೆ ಹಾಗೂ ಡೀಸೆಲ್ ದರ ಲೀಟರ್ ಗೆ 28ರಿಂದ 30 ಪೈಸೆ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಈವರೆಗೆ 15 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂ ಗಡಿ ದಾಟಿದ್ದು, 100.19 ರೂಪಾಯಿಯಾಗಿದೆ. ಡೀಸೆಲ್ ದರ 92.17 ರೂಪಾಯಿ …

Read More »

ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದು ಕೊಳ್ಳುತ್ತಿದು ಒಂದು ರೋಚಕ ವಿಷಯ ಹೊರ ಬಂದಿದೆ.ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.  ವಿವರಣೆ : ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಗೆ ಕೆಲಸದ ಅಮಿಷೆ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ಹೊರಸಿರುವ ಆರೋಪ. ವಿಪರ್ಯಾಸವೆಂದರೆ ಆಕೆ ಇಂಜಿನಿಯರಿಂಗ್ ಪದವಿ ಸೇರಿದ್ದು ಬಿಟ್ಟರೆ ಬರೋಬ್ಬರಿ …

Read More »

ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

ಮಹಾಲಿಂಗಪುರ : ಕಾರ್ಮಿಕ ಇಲಾಖೆಯಲ್ಲಿ ನೇಕಾರರನ್ನು ಕಾರ್ಮಿಕರು ಅಂತಾ ಸೇರಿಸಿ. ಪಾವರ್‌ ಲೂಮ್ ನೇಕಾರರಿಗೆ ಕನಿಷ್ಠ ಮೂರು ವರ್ಷ ನಿರಂತರ ಉಚಿತ ವಿದ್ಯುತ್ ನೀಡಬೇಕು. ಆ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಸರಕಾರಕ್ಕೆ ಮನವಿ ಮಾಡಿದರು. ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. …

Read More »

ಕೋವಿಡ್ : ರಾಜ್ಯದಲ್ಲಿಂದು 52253 ಜನರು ಗುಣಮುಖ; 22823 ಪಾಸಿಟಿವ್ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 52253 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೆ ಅವಧಿಯಲ್ಲಿ ಹೊಸದಾಗಿ 22823 ಜನರಿಗೆ ಕೋವಿಡ್ ಪಾಸಿಟಿವ್ ‍ಪ್ರಕರಣ ವರದಿಯಾಗಿದೆ. ಇಂದು ಸಂಜೆ ( ಮೇ.28) ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ( ದಿನಾಂಕ:27.05.2021, 00:00 ರಿಂದ 23:59 ರವರೆಗೆ) ಅವಧಿಯಲ್ಲಿ 22823 ಕೋವಿಡ್ ಹೊಸ ಪ್ರಕರಣಗಳು ದೃಢ ಪಟ್ಟಿವೆ, ಹಾಗೂ …

Read More »

ನಾನು ಗರ್ಭಿಣಿ, ಹೊಟ್ಟೆ ನೋವು ಎಂದರೂ ಬಿಡುತ್ತಿಲ್ಲ: ಪೊಲೀಸರ ವಿರುದ್ಧ ಮಹಿಳೆ ಆರೋಪ

ಮೈಸೂರು, : ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನ ತಪಾಸಣೆ ವೇಳೆ ಗರ್ಭಿಣಿ ಮಹಿಳೆ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಗರ್ಭಿಣಿ ಮಹಿಳೆ ಕಣ್ಣೀರಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ರಾಮಸ್ವಾಮಿ ವೃತ್ತದಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಸಂಬಂಧಿಯೊಂದಿಗೆ ವಾಹನದಲ್ಲಿ ಬರುತ್ತಿದ್ದ ಗರ್ಭಿಣಿ ಮಹಿಳೆಯನ್ನು ಪೊಲೀಸರು ತಡೆದಿದ್ದಾರೆ. ನಾನು ಗರ್ಭಿಣಿ, ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದರೂ ಲೇಡಿ ಸಬ್ ಇನ್ಸ್ ಪೆಕ್ಟರ್ ಬಿಡಲಿಲ್ಲ. ಇದರಿಂದ ಮಹಿಳೆ ಮತ್ತು ಮಹಿಳಾ …

Read More »

ಪತಿಯನ್ನು ಜಿಲ್ಲಾಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕರೆತಂದ ಪತ್ನಿ

ಗದಗ: ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ ಡೌನ್‌ ಘೋಷಣೆಯಾಗಿದ್ದರಿಂದ ವಾಹನ ಸಿಗದೇ ಮಹಿಳೆಯೊಬ್ಬರು ಪತಿಯನ್ನು ಸುಮಾರು 4 ಕಿ.ಮೀ. ದೂರದ ಜಿಲ್ಲಾ ಆಸ್ಪತ್ರೆಗೆ ತಳ್ಳುಗಾಡಿಯಲ್ಲೇ ಕರೆದೊಯ್ದ ಮನಕಲುಕುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಇಲ್ಲಿನ ಸಿದ್ಧರಾಮೇಶ್ವರ ನಗರದ ಗೋವಿಂದಪ್ಪ ಎಂಬಾತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಎರಡು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಒಂದು ಕಾಲು ತೆಗೆದಿದ್ದರು. ಇಂದು ಮತ್ತೆ ಚಿಕಿತ್ಸೆ ಪಡೆದು, ಕಾಲಿಗೆ ಡ್ರೆಸ್ಸಿಂಗ್‌ ಮಾಡಿಸಿಕೊಂಡು ಔಷಧತೆಗೆದುಕೊಂಡು ಹೋಗಲು …

Read More »

ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ

ಮಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಢಿಕ್ಕಿ ಪಡೆದ ಪರಿಣಾಮ ಓಮ್ನಿ ವ್ಯಾನ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ, ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಎಂಬಲ್ಲಿ ನಡೆದಿದೆ. ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್(22) ಹಾಗೂ ಕುಂಜತ್ಕಲ ನಿವಾಸಿ ಉನೈಸ್(27) ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳು. ತೀವ್ರವಾಗಿ ಗಾಯಗೊಂಡಿರುವವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳೂರಿನಿಂದ ಫರಂಗಿಪೇಟೆ ಕಡೆಗೆ ಬರುತ್ತಿದ್ದ …

Read More »

ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ: H.D.K.

ಬೆಂಗಳೂರು, ಮೇ 28: ಜಿಂದಾಲ್‌ಗೆ ಭೂಮಿ ಮಾರಾಟ ಹಿಂದಕ್ಕೆ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಡಿದ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಎಚ್‌ಡಿಕೆ, “”ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ” ಎಂದಿದ್ದಾರೆ. ರಾಜಕೀಯ …

Read More »

2000 ರೂ. ನೋಟ್ ಗೆ ಗೇಟ್ ಪಾಸ್ ಗ್ಯಾರಂಟಿ.? ಪ್ರಿಂಟ್ ನಿಲ್ಲಿಸಿದ ನಂತ್ರ ಚಲಾವಣೆಯಿಂದಲೂ ಹೊರಕ್ಕೆ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್(RBI) ಪ್ರಜ್ಞಾಪೂರ್ವಕವಾಗಿಯೇ ಗುಲಾಬಿ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯುತ್ತಿದೆ. 2000 ರೂ. ನೋಟುಗಳಿಗೆ ಪಿಂಕ್ ಸ್ಲಿಪ್ ನೀಡುವುದು ಖಚಿತವಾಗಿದೆ. ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನು ತೆಗೆದುಹಾಕುವುದು ಖಚಿತವೆನ್ನಲಾಗಿದೆ. ಗುರುವಾರ ಬಿಡುಗಡೆಯಾದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2021 ರ ಹಣಕಾಸು ವರ್ಷದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ 57,757 ಕೋಟಿ ನೋಟುಗಳು ಚಲಾವಣೆಯಿಂದ ಹೊರ …

Read More »