Breaking News

ರಾಜಕೀಯ

ಕೋವಿಡ್ ಸಂಕಟದ ಸಮಯದಲ್ಲಿ ನೆರವಿಗೆ ಧಾವಿಸದ ಕಾಂಗ್ರೆಸ್ನಿಂದ ಮೊಸಳೆ ಕಣ್ಣೀರು: ಕ್ಯಾ.ಕಾರ್ಣಿಕ್

ಬೆಂಗಳೂರು: ತಾವು ಆಯ್ಕೆಯಾದ ಕ್ಷೇತ್ರದ ಜನರ ಸಹಾಯಕ್ಕೆ ಕೋವಿಡ್ ಸಂಕಟದ ಸಂದರ್ಭದಲ್ಲಿ ಧಾವಿಸದ ಕಾಂಗ್ರೆಸ್‍ನ ಮಹಾನ್ ನಾಯಕರುಗಳು ಈಗ “ಡೆತ್ ಆಡಿಟ್”ನ ಕುರಿತಾಗಿ ಮಾತನಾಡುತ್ತ ರಾಜ್ಯಾದ್ಯಂತ ಪ್ರವಾಸ ಮಾಡುವ ಹೇಳಿಕೆ ನೀಡಿರುವುದು ರಾಜಕೀಯ ಸೋಗಲಾಡಿತಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗೆ ಧಾವಿಸದ ಕಾಂಗ್ರೆಸ್ ಕೇವಲ ಟ್ವಿಟರ್ ಅಭಿಯಾನದ ಮೂಲಕ ಕೇಂದ್ರ …

Read More »

ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಲಸಿಕೆ ನೀಡಿಕೆ; ಕೇಂದ್ರದಿಂದ ಸುಪ್ರೀಂಕೋರ್ಟ್​ಗೆ ಹೊಸ ಅಫಿಡವಿಟ್ ಸಲ್ಲಿಕೆ

ದೆಹಲಿ: ಜುಲೈ ತಿಂಗಳ ಅಂತ್ಯದೊಳಗೆ ಅಂದರೆ, ಜುಲೈ 31ರ ಒಳಗೆ 51.6 ಕೋಟಿ ಡೋಸ್ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಹೊಸ ಅಫಿಡವಿಟ್ ಸಲ್ಲಿಕೆ ಮಾಡಿದೆ. ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. 94 ಕೋಟಿ ಜನರಿಗೆ 188 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಹೀಗಾಗಿ ಆಗಸ್ಟ್‌ನಿಂದ ಡಿಸೆಂಬರ್‌ಗೆ 135 ಕೋಟಿ ಡೋಸ್ ನೀಡಲಾಗುತ್ತದೆ. ಅಗತ್ಯವಿರುವಷ್ಟು ಲಸಿಕೆ ಆಗಸ್ಟ್-ಡಿಸೆಂಬರ್ ಅವಧಿಯಲ್ಲಿ ಲಭ್ಯವಾಗಲಿದೆ ಎಂದು …

Read More »

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟ ಮತ್ತಷ್ಟು ಪ್ರಬಲವಾಗಲಿದೆ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾದಕ ವಸ್ತುಗಳ ಸರಬರಾಜು ನಿಯಂತ್ರಣಕ್ಕೆ ರೂಪಿಸಲಾಗಿರುವ ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಕಾಯ್ದೆಗೆ ಕರ್ನಾಟಕದಲ್ಲಿ ನಿಯಮಾವಳಿ ರೂಪಿಸುವ ಮೂಲಕ ಆ ಕಾಯಿದೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಜೊತೆಗೆ ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟ ಮತ್ತಷ್ಟು ಪ್ರಬಲವಾಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಪೊಲೀಸ್ …

Read More »

ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ, 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯವೇ ಇಲ್ಲ

ಬೆಂಗಳೂರು: ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ ಇವೆ. 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. 18 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್‌ ಇಲ್ಲ. ಇದನ್ನು ಸರಿಪಡಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಸ್ವತಃ ರಾಜ್ಯ ಸರ್ಕಾರ ಹೈಕೋರ್ಟ್‌ ಮುಂದೆ ಒಪ್ಪಿಕೊಂಡಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಲಾದ ಲಿಖೀತ …

Read More »

ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!

ದಾವಣಗೆರೆ: ಜನಪ್ರತಿನಿಧಿಗಳೆಂದರೆ ಸಾಮಾನ್ಯವಾಗಿ ಭೇಟಿಗೆ ಸಿಗುವುದೇ ಅಪರೂಪ. ಇನ್ನು ಏನಾದರೂ ಕೆಲಸ ಆಗಬೇಕೆಂದರೆ ಗೆದ್ದ ಮೇಲೆ ಅವರು ಪ್ರಜೆಗಳ ಪಾಲಿಗೆ ಗಗನಕುಸುಮ. ಹೀಗಿರುವಾಗ ಇಲ್ಲೊಬ್ಬ ಜನಪ್ರತಿನಿಧಿ ತನ್ನ ತಮ್ಮನ ಮದುವೆಗಾಗಿ ಎರಡು ದಿನ ರಜೆ ತೆಗೆದುಕೊಳ್ಳಲಿಕ್ಕೂ ಅರ್ಜಿ ಹಾಕಿ ಮನವಿ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮಪಂಚಾಯಿತಿಯ ಅರೇಹಳ್ಳಿ ಗ್ರಾಮದ ವಾರ್ಡ್-04ರ ಸದಸ್ಯ ಚೇತನ್​ ಕುಮಾರ್ ಅರೇಹಳ್ಳಿ ಹೀಗೆ ರಜೆ ಅರ್ಜಿ ಸಲ್ಲಿಸಿ ವಿನಂತಿಸಿಕೊಳ್ಳುವ ಮೂಲಕ ಹಲವರ …

Read More »

ಪೊಲೀಸರೊಂದಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ವಾದ

ಬಾಗಲಕೋಟೆ : ಜಿಲ್ಲೆಯ ಇಳಕಲ್ಲ ನಗರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆದ ಪ್ರಸಂಗ ಶನಿವಾರ ಸಂಜೆ ನಡೆದಿದೆ. ಮಾಜಿ ಶಾಸಕ ಕಾಶಪ್ಪನವರ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವ ಜಾಮೀನುಸಹಿತ ವಾರೆಂಟ್ ಜಾರಿಯಾಗಿದ್ದು, ಅದನ್ನು ತಲುಪಿಸಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಇದಕ್ಕೂ ಮುಂಚೆ ಕಾಶಪ್ಪನವರ ಮನೆಯಲ್ಲಿ ಕೌಟುಂಬಿಕ ಜಗಳ ನಡೆದಿದೆ ಎಂದು ಅಕ್ಕ-ಪಕ್ಕದ ಮನೆಯವರು ಫೋನ್ ಕಾಲ್ ಮಾಡಿ, ದೂರಿದ್ದರು. …

Read More »

ದಕ್ಷಿಣ ಕನ್ನಡ: ಪದವಿ ವಿದ್ಯಾರ್ಥಿಗಳಿಗೆ, ಭೋಧಕರಿಗೆ ಕೋವಿಡ್‌ ಲಸಿಕೆ ನಾಳೆಯಿಂದ

ಮಂಗಳೂರು: ಮುಂದಿನ ತಿಂಗಳಿಂದ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಸೋಮವಾರದಿಂದ ಜಿಲ್ಲೆಯ ಎಲ್ಲ ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್‌, ಪ್ಯಾರಾಮೆಡಿಕಲ್‌ ಕಾಲೇಜುಗಳ 18 ವರ್ಷ ಮೇಲಿನ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗೆ ಲಭ್ಯತೆಗೆ ಅನುಗುಣವಾಗಿ ಲಸಿಕಾ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್ ಹೇಳಿದ್ದಾರೆ. ಜೂನ್‌ 28 ರಿಂದ ಜಿಲ್ಲೆಯ ಎಲ್ಲ …

Read More »

ಆಟೋ ಚಾಲಕರಿಗೆ ಇನ್ನೂ ಬಾರದ ಕೊವಿಡ್​ ಪರಿಹಾರ ಪ್ಯಾಕೇಜ್​; ಧಾರವಾಡ ಆಟೋ ಚಾಲಕರ ಆಕ್ರೋಶ

ಧಾರವಾಡ: ಕರ್ನಾಟಕ ಸರ್ಕಾರ ಕೊರೊನಾ ಲಾಕ್​ಡೌನ್​​ ಪರಿಣಾಮ ಸಂತ್ರಸ್ತರಾದ ಕೆಲ ವರ್ಗದವರಿಗೆ ಪರಿಹಾರ ಘೋಷಿಸಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪುತ್ತಿಲ್ಲ ಎಂಬ ಕೂಗು ಎದ್ದಿದೆ. ಅದರಲ್ಲೂ ಆಟೋ ಚಾಲಕರಿಗೆ ಪರಿಹಾರ ಕೈಗೆ ಬಾರದೆ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಘೋಷಿಸಿದ್ದ 3 ಸಾವಿರ ರೂ. ಪರಿಹಾರ ಮೊತ್ತ ರಾಜ್ಯದ ಅನೇಕ ಕಡೆ ಆಟೋ ಚಾಲಕರಿಗೆ ಇನ್ನೂ ತಲುಪಿಲ್ಲ. ​ಧಾರವಾಡದಲ್ಲಿಯೂ ಆಟೋ ಚಾಲಕರಿಗೆ ಪರಿಹಾರ ಸಿಗದಿರುವುದರಿಂದ ಭಾರೀ ಆಕ್ರೋಶ …

Read More »

ಪಕ್ಷ ಸಂಘಟನೆ: ಡಿ.ಕೆ. ಶಿವಕುಮಾರ್ ನೇತತ್ವದಲ್ಲಿ ಕಾರ್ಯಾಧ್ಯಕ್ಷರ ಸಭೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಂಚೂಣಿ ಘಟಕಗಳನ್ನು ಪುನರ್‌ ರಚಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಕಾರ್ಯಾಧ್ಯಕ್ಷರ ಜತೆ ಶನಿವಾರ ಸಭೆ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂಚೂಣಿ ಘಟಕಗಳ ಪುನರ್ ರಚನೆ, ಕೆಲವು ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರ ಬದಲಾವಣೆ, ಬ್ಲಾಕ್ ಕಾಂಗ್ರೆಸ್ ಘಟಕಗಳ ಪುನರ್ ರಚನೆ ಸಿದ್ಧತೆ ಕುರಿತು ಚರ್ಚೆ ನಡೆಯಿತು. ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ, ಈಶ್ವರ್ …

Read More »

13 ವರ್ಷದ ಬಾಲಕನಲ್ಲಿ ರೂಪಾಂತರಿಯ ವಿಚಿತ್ರ ರೋಗ

ದಾವಣಗೆರೆ: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ರಾಜ್ಯದಲ್ಲಿ ಮಕ್ಕಳಲ್ಲಿ ಎ-ನೆಕ್ ಎಂಬ ಅಪರೂಪದ ಕಾಯಿಲೆ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ(ANEC) ಎಂಬ ಅಪರೂಪದ ಕಾಯಿಲೆ ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಹೂವಿನಹಡಗಲಿ ಮೂಲದ 13 ವರ್ಷದ ಬಾಲಕನಲ್ಲಿ ಎ-ನೆಕ್ ಕಾಯಿಲೆ ಪತ್ತೆಯಾಗಿದೆ. ಇದೇ ಆಸ್ಪತ್ರೆಯಲ್ಲಿ ಈ ಕಾಯಿಲೆಯ ರೋಗಲಕ್ಷಣವಿರುವ 6 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, …

Read More »