Breaking News

ರಾಜಕೀಯ

ನೂತನ ” ಶ್ರೀದೇವಿ ಇನ್ಸೂರೆನ್ಸ್ ಜೋನ್” ಉದ್ಘಾಟಿಸಿದ ಸತೀಶ ಜಾರಕಿಹೊಳಿ

ಸವದತ್ತಿ: ತಾಲೂಕಿನ ಯರಗಟ್ಟಿಯಲ್ಲಿ ನೂತನ ನಿರ್ಮಾಣವಾದ ಶ್ರೀದೇವಿ ಇನ್ಸೂರೆನ್ಸ್ ಜೋನ್ ನನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸೋಮವಾರ ಉದ್ಘಾಟಿಸಿ, ಹೊಲ್ ಸೆಲ್ ಕಿರಾಣಿ ಅಂಗಡಿಯನ್ನು ಪರಿಶೀಲಿಸಿದರು.   ಕಾಂಗ್ರೆಸ್ ಮುಖಂಡರು ಬಸವರಾಜ್ ಸಾಯನ್ನವರ.     ಪಂಚನಗೌಡ ದ್ಯಾಮನಗೌಡರ, ರವೀಂದ್ರ ಯಲಿಗಾರ, ವಿಶ್ವಾಸ ವೈದ್ಯ, ಯುವ ನಾಯಕ ಗೌತಮ ದ್ಯಾಮನಗೌಡರ ಮಲ್ಲು ಜಕಾತಿ, ಆ.ಆ. ಟೋಪೋಜಿ, ಯಶವಂತ ಯಲಿಗಾರ, ಈರಣ್ಣ ಸಂಗಪನವರ, ಹರಳಿ , ಹಾಗೂ ಸವದತ್ತಿ ತಾಲೂಕಿನ …

Read More »

ಮನೆಯ ಯಜಮಾನನಿಂದಲೇ ಕಳ್ಳತನ : ಘಟನೆ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಕೊಪ್ಪಳ: ಕೊಪ್ಪಳದಲ್ಲಿನ ಕಲ್ಯಾಣ ನಗರದ ಮನೆಯೊಂದರಲ್ಲಿ ಆಭರಣ, ನಗದು ಕಳ್ಳತನ ಪ್ರಕರಣದಲ್ಲಿ ಮನೆಯ ಯಜಮಾನನೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ನಡೆದಿದ್ದು ಈ ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ಗಂಟೆಯಲ್ಲಿ ಪತ್ತೆ ಮಾಡಿ ಬಂಧಿತನಿಂದ ನಗದು, ಆಭರಣ ಜಪ್ತಿ ಮಾಡಿದ ಪ್ರಸಂಗವೂ ನಡೆದಿದೆ. ಕೊಪ್ಪಳದ ಕಲ್ಯಾಣ ನಗರದ ಜ್ಯೋತಿ ಶಿವರಾಜ ಭಜೇಂತ್ರಿ ಎನ್ನುವವರು ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ಮನೆಗೆ ಬಂದು ನೋಡಿದಾಗ ಆಭರಣ, ನಗದು …

Read More »

ತಗ್ಗಿದ ಮಳೆಯ ಅಬ್ಬರ: ಜಲಾಶಯಗಳಲ್ಲಿ ಹೆಚ್ಚಿದ ನೀರು

ಬೆಂಗಳೂರು: ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸೋಮವಾರ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆರ್ಭಟಿಸಿದ್ದ ಮಳೆ ಸೋಮವಾರ ಸ್ವಲ್ಪ ಬಿಡುವು ನೀಡಿದೆ. ಶಿವಮೊಗ್ಗ ಸೇರಿ ಹಲವೆಡೆ ಬಿಸಿಲ ದರ್ಶನವಾದರೆ, ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರದ ಕೆಲವೆಡೆ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ. ಮಳೆ ಕ್ಷೀಣಿಸಿದರೂ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಹೊಸನಗರ ತಾಲ್ಲೂಕಿನಲ್ಲಿ 17.1 ಸೆಂ.ಮೀ, ಹುಲಿಕಲ್‌ನಲ್ಲಿ 13.6 ಸೆಂ.ಮೀ, ಮಾಣಿಯಲ್ಲಿ 11.5 …

Read More »

ಮಹಿಳೆ ಸುಪಾರಿ ಕೊಲೆ ಶಂಕೆ ; ಗಂಡನ ತೀವ್ರ ವಿಚಾರಣೆ

ಉಡುಪಿ: ಇಲ್ಲಿಗೆ ಸಮೀಪದ ಬ್ರಹ್ಮಾವರದ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಜುಲೈ.12 ರಂದು ಸಂಭವಿಸಿದ ವಿಶಾಲಾ ಗಾಣಿಗ ಎಂಬ ಮಹಿಳೆಯ ಕೊಲೆಗೆ ಸಂಬಂದಿಸಿದಂತೆ ಮಹಿಳೆಯ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಪೊಲೀಸರು ನಾಲ್ಕು ತಂಡ ರಚಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹೊರ ರಾಜ್ಯದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ …

Read More »

ರಾಜ್ಯ ಶಿಕ್ಷಣ ಇಲಾಖೆಯಿಂದ ಬೆಳಗಾವಿ ಡಿಡಿಪಿಐ ತಂಡಕ್ಕೆ ಅಭಿನಂದನಾ ಸಂದೇಶ

ಬೆಳಗಾವಿ–   ಎಸ್ಎಸ್ಎಲ್ ಸಿ ಪರೀಕ್ಷೆಯ ಮೊದಲ ಹಂತದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಬೆಳಗಾವಿ ಡಿಡಿಪಿಐ ಮತ್ತು ಅವರ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ. ಈ ಕುರಿತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಕೆ. ಎಸ್. ಕರಿಚಣ್ಣವರ ಸಂದೇಶ ಕಳಿಸಿದ್ದಾರೆ. ಅವರ ಸಂದೇಶ ಹೀಗಿದೆ – “ಬೆಳಗಾವಿ ಜಿಲ್ಲೆಯಾದ್ಯಂತ ಇಂದು ದಿ: ೧೯-೦೭-೨೦೨೧ ರಂದು ನಡೆದ SSLC ಪರೀಕ್ಷೆಯ ಯಶಸ್ಸಿಗೆ ಕಾರಣರಾದ ಉಪ ನಿರ್ದೇಶಕರು(ಆಡಳಿತ) ಹಾಗೂ ತಂಡ,  (ಅಭಿವೃದ್ಧಿ) …

Read More »

3 ದಿನಗಳಲ್ಲಿ ದೇವಸ್ಥಾನಗಳಲ್ಲಿ ಎಲ್ಲ ಸೇವೆಗೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ದೇವಸ್ಥಾನಗಳಲ್ಲಿ ಎಲ್ಲ ಸೇವೆಗಳು ಮತ್ತು ಅನ್ನಪ್ರಸಾದ ವಿತರಣೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಅನುಮತಿ ನೀಡಲಾಗು ವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮವಾರ ಕೊರ್ಗಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಅವರು ಉದಯವಾಣಿ ಜತೆ ಮಾತನಾಡಿದರು. ಧ್ವನಿ ಸುರುಳಿ ಬಗ್ಗೆ ಶಂಕೆೆ ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಾಮಾನ್ಯ ಕಾರ್ಯ ಕರ್ತನಾಗಿ ಬಂದು ರಾಜ್ಯದ …

Read More »

ವಿದ್ಯಾಕಾಶಿ ಧಾರವಾಡದಲ್ಲಿ SSLC ಪರೀಕ್ಷೆ : ವಿದ್ಯಾರ್ಥಿಗಳಿಗೆ ಚಾಕೊಲೇಟ್ ‌ಸ್ವಾಗತ

ಧಾರವಾಡ : ಜಿಲ್ಲೆಯಲ್ಲಿ ಎಸ್‌ಎಸ್‌ಎಲಸಿ‌ ಪರೀಕ್ಷೆ ಆರಂಭಗೊಂಡಿದ್ದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಶುಭ ಹಾರೈಸಿದ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಸಿ, ಚಾಕೊಲೇಟ್ ನೀಡಿ ಸ್ವಾಗತಿಸಿ ಗಮನ ಸೆಳೆದಿವೆ. ಇಲ್ಲಿನ.ಮಾಳಮಡ್ಡಿಯಲ್ಲಿರುವ ಕೆ.ಇ.ಬೋರ್ಡ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರೆಲ್ಲಾ ಪರೀಕ್ಷೆ ಬರೆಯಲು ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ಚಾಕೊಲೇಟ್ ನೀಡಿ ಅವರಿಗೆ ಸ್ವಾಗತಿಸಿದರು. ಶಾಲೆಯ ದ್ವಾರ ಬಾಗಿಲಿಗೆ ಬಲೂನಿನಿಂದ ಅಲಂಕಾರ ಮಾಡಿ, ತಳಿರು ಕಟ್ಟಿಸಿಂಗರಿಸಲಾಗಿತ್ತು. ಕೋವಿಡ್ ಬಗ್ಗೆ ಪರೀಕ್ಷಾರ್ಥಿಗಳು‌ಅಂಜಿಕೊಳ್ಳುವ ಅಗತ್ಯವಿಲ್ಲ. …

Read More »

ಬಾಗಲಕೋಟೆ: ಶಾಲೆಯಲ್ಲಿ ಕಳ್ಳತನ; ಕಂಪ್ಯೂಟರ್ ಕದ್ದೋಯ್ದ ಖದೀಮರು

ಬಾಗಲಕೋಟೆ: ತಾಲೂಕಿನ ತುಳಸಿಗೇರಿ ಗ್ರಾಮದ ಸರ್ಕಾರಿ ಮಾದರಿ ಕುವೆಂಪು ಪ್ರಾಥಮಿಕ ಶಾಲೆಯಲ್ಲಿ ಕಳ್ಳತನವಾಗಿದೆ. ಶಾಲೆಯಲ್ಲಿನ ಒಟ್ಟು ನಾಲ್ಕು ಕಂಪ್ಯೂಟರ್ ಮತ್ತು ಒಂದು ಪ್ರಿಂಟರ್​ನ ಕದ್ದೊಯ್ದಿದ್ದಾರೆ. ಕಂಪ್ಯೂಟರ್ ಎಜ್ಯುಕೇಶನ್ ಕೊಠಡಿಯಲ್ಲಿದ್ದ ಒಟ್ಟು 11 ಕಂಪ್ಯೂಟರ್​ಗಳ ಪೈಕಿ ಮೂರು ಕಂಪ್ಯೂಟರ್, ಶಾಲೆ ಕಾರ್ಯಾಲಯದಲ್ಲಿದ್ದ ಒಂದು ಕಂಪ್ಯೂಟರ್, ಒಂದು ಪ್ರಿಂಟರ್​ನ ಕಳ್ಳತನ ಮಾಡಿದ್ದಾರೆ. ಶಾಲೆಯಲ್ಲಿ ಇಂದು (ಜುಲೈ 19) ಬೆಳಿಗ್ಗೆ ಎಸ್‌ಎಸ್‌ಎಲ್​ಸಿ ಪರೀಕ್ಷೆ ನಡೆದಿದೆ. ಎಲ್ಲ ಪರೀಕ್ಷಾ ಕೊಠಡಿಗಳನ್ನು ಓಪನ್ ಮಾಡಿದ್ದಾರೆ. ಕಚೇರಿ ಕೊಠಡಿಯಲ್ಲಿದ್ದ …

Read More »

ಬೆಳಗಾವಿ ವಿವಾಹಿತೆಯ ಜೀವ ತೆಗೆಯಿತು ಯುವಕನ ಆ ಒಂದು ವಾಟ್ಸ್​ಆಯಪ್​ ಸ್ಟೇಟಸ್​!

ಬೆಳಗಾವಿ: ವಿವಾಹಿತೆಯೊಬ್ಬಳನ್ನು ಪ್ರೀತಿಸುವುದಾಗಿ ತನ್ನ ಸ್ಟೇಟಸ್​ನಲ್ಲಿ ಯುವಕನೊಬ್ಬ ಬರೆದುಕೊಂಡಿದ್ದು, ಇದರಿಂದ ಹೆದರಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ನಡೆದಿದೆ. ಸುತಗಟ್ಟಿ ಗ್ರಾಮದ ಅಕ್ಷತಾ ಪೂಜಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುತಗಟ್ಟಿ ಗ್ರಾಮದ ಸಂತೋಷ ತನ್ನ ವಾಟ್ಸ್​ಆಯಪ್​ ಸ್ಟೇಟಸ್​ಗೆ ಅಕ್ಷತಾರ ಫೋಟೋ ಹಾಕಿಕೊಂಡು ಅದರಲ್ಲಿ ಮೆಸೇಜ್​ ಬರೆದಿದ್ದ. ಇದನ್ನು ನೋಡಿ ಗಾಬರಿಯಿಂದ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ತಿಂಗಳ …

Read More »

ಬೆಂಗಳೂರಿಗರೇ ಗಮನಿಸಿ; ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ

ಬೆಂಗಳೂರು: ಮೆಟ್ರೋ ರೈಲು ಸಂಚಾರದ ಅವಧಿ ರಾತ್ರಿ 9ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ನಮ್ಮ ಮೆಟ್ರೋ ಸಂಚರಿಸುತ್ತಿತ್ತು. ಆದರೆ ಈಗ ರಾತ್ರಿ 9ರವರೆಗೆ ಮೆಟ್ರೋ ಸಂಚಾರ ಸೇವೆಯನ್ನು ಒದಗಿಸವಂತೆ ಅವಧಿ ವಿಸ್ತರಿಸಿ ಬಿಎಂಆರ್​ಸಿಎಲ್ ಆದೇಶಿಸಿದೆ. ಈ ಮೂಲಕ ಬೆಂಗಳೂರು ಮಹಾನಗರದ ಮೆಟ್ರೋ (Bengaluru Namma metro) ಪ್ರಯಾಣಿಕರ ಸಂಚಾರಕ್ಕೆ ಇನ್ನಷ್ಟು ಸೌಲಭ್ಯ ಒದಗಿಸಿದೆ. ಇತ್ತೀಚಿಗಷ್ಟೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾಗಿ …

Read More »