Breaking News

ರಾಜಕೀಯ

ಟೆಲಿಫೋನ್ ಕದ್ದಾಲಿಕೆ ಆರೋಪ: ಕಾಂಗ್ರೆಸ್‌ನಿಂದ ರಾಜಭವನಕ್ಕೆ ಮುತ್ತಿಗೆ

ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರತಿಭಟಿಸಿ ಕಾಂಗ್ರೆಸ್‌ ಶಾಸಕರು, ಮುಖಂಡರು ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ಮುಖಂಡರಾದ ಎಚ್.ಕೆ. ಪಾಟೀಲ, ಅಲ್ಲಂ ವೀರಭದ್ರಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್ ಕುಮಾರ್, ಸಲೀಂ ಅಹ್ಮದ್‌ ವಹಿಸಿದ್ದರು. ಅದಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ …

Read More »

ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಗದಗ: ಛತ್ತೀಸ್​ಘಡದಲ್ಲಿ ನಕ್ಸಲರೊಂದಿಗೆ ಹೋರಾಡುತ್ತಾ ಹುತಾತ್ಮನಾದ ಯೋಧನ ಅಂತ್ಯಕ್ರಿಯೆ ತಡರಾತ್ರಿ ಗದಗ ಜಿಲ್ಲೆಯ ಸ್ವಗ್ರಾಮ ಗೊಜನೂರಿನಲ್ಲಿ ನಡೆದಿದೆ.     ನಕ್ಸಲರೊಂದಿಗೆ ಹೋರಾಡುವಾಗ ಗುಂಡು ತಗುಲಿ ಎರಡು ದಿನಗಳ ಹಿಂದೆ ಯೋಧ ಲಕ್ಷ್ಮಣ ಗೌರಣ್ಣವರ್ (30) ಹುತಾತ್ಮರಾಗಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿದ್ದು ತಡರಾತ್ರಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.. ಯೋಧನ ಸಾವಿಗೆ ಇಡೀ …

Read More »

ಜುಲೈ 30 ರ ಒಳಗೆ ಸರ್ಕಾರ ಶಾಲೆ ತೆರೆಯದಿದ್ದರೆ.. ಆಗಸ್ಟ್ 1 ಕ್ಕೆ ನಾವೇ ಆರಂಭಿಸ್ತೇವೆ- ರುಪ್ಸಾ ಎಚ್ಚರಿಕೆ

ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ರುಪ್ಸಾ ಎಚ್ಚರಿಕೆ ನೀಡಿದ್ದು ಸರ್ಕಾರ ಶಾಲೆ ಆರಂಭಕ್ಕೆ ಅವಕಾಶ ಕೊಟ್ಟಿಲ್ಲ ಅಂದ್ರೆ ತಾವೇ ಸ್ವತಃ ಶಾಲೆ ಆರಂಭಕ್ಕೆ ಸಿದ್ಧ ಎಂದಿದೆ. ತಮ್ಮ ಶಾಲೆಯಲ್ಲಿ ಇರುವ ಪೋಷಕರ ಅಭಿಪ್ರಾಯ ಪಡೆದು ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದೇವೆ.. ಕಳೆದ ವರ್ಷದ SOPಗೆ ಅನುಗುಣವಾಗಿ ಆಗಸ್ಟ್ 1 ಕ್ಕೆ ಶಾಲೆ ಆರಂಭಿಸುತ್ತೇವೆ ಎಂದಿದೆ. ಶಾಲೆಗಳ ಆರಂಭಕ್ಕೆ ICMR ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ರುಪ್ಸಾ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯ್ತು.. …

Read More »

ಕಾಂಗ್ರೆಸ್ ನ ಮಂಗಳೂರು ಸಭೆ ರದ್ದು: ಆಸ್ಕರ್ ಆರೋಗ್ಯ ವಿಚಾರಿಸಲು ಡಿಕೆ ಶಿವಕುಮಾರ್ ಮಂಗಳೂರಿಗೆ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಶುಕ್ರವಾರ ನಡೆಸಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ. ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಮಂಗಳೂರಿಗೆ ತೆರಳಲಿದ್ದಾರೆ. ಉಳಿದಂತೆ ತುಮಕೂರಿನಲ್ಲಿ ಶನಿವಾರ ನಡೆಯಲಿರುವ ಸಭೆ ನಿಗದಿಯಂತೆ ಮುಂದುವರಿಯಲಿದೆ.

Read More »

ಡಿಕೆಶಿ ಬಿಟ್ಟು ಸಿದ್ದು ಜತೆ ರಾಹುಲ್‌ ಪ್ರತ್ಯೇಕ ಮಾತುಕತೆ : ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ

ಬೆಂಗಳೂರು: ರಾಜ್ಯ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಪ್ರತ್ಯೇಕ ಮಾತುಕತೆ ನಡೆಸಿರುವುದು ಕಾಂಗ್ರೆಸ್‌ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್‌ ಯಾವ ರೀತಿಯ ಹೆಜ್ಜೆ ಇಡಬಹುದು. ಮುಂದಿನ ಕಾರ್ಯತಂತ್ರ ಹಾಗೂ ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಬಿಜೆಪಿ ಸೇರಿ ಸಚಿವರಾಗಿರುವವರ ಮನಸ್ಥಿತಿ ಮತ್ತಿತರ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿರುವುದ ಕುತೂಹಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಬದಲಾವಣೆಯಾದರೆ ಆರು …

Read More »

ವಿಜಯಪುರ : ಕುದುರಿಸಾಲವಾಡಗಿ ಸೈನಿಕನ ಮೇಲೆ ಹಲ್ಲೆ

ವಿಜಯಪುರ: ಜಿಲ್ಲೆಯಲ್ಲಿ ಸೈನಿಕನ‌ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಸೈನಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ್ದಾನೆ. ಬಸವನ ಬಾಗೇವಾಡಿ ತಾಲೂಕಿನ ಕುದರೆಸಾಲವಾಡಗಿ ಗ್ರಾಮದ ಸಂತೋಷ ಶಿವಪ್ಪ ಹಟ್ಟಿ(30) ಸೇನೆಯಲ್ಲಿ ಹವಾಲ್ದಾರ ಆಗಿದ್ದು, 10 ವರ್ಷದಿಂದ ಸೇನೆಯಲ್ಲಿದ್ದಾರೆ. ತನ್ನ ಮದುವೆಗಾಗಿ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಅರವಿಂದ ಕಡೇಮನಿ, ರಾಮಪ್ಪ ಕಡೇಮನಿ, ಬಸಗುಂಡಪ್ಪ ನಡುವಿನ ಮನಿ, ಮಲ್ಲವ್ವ ಕಡೇಮನಿ, ಭಾರತಿ ಕಡೇಮನಿ, ಸಾರ್‌ ಕಡೇಮನಿ, ರಮೇಶ ನಡುವಿನಮನಿ ಅವರು ಮಾರಕಾಸ್ತ್ರಗಳಿಂದ …

Read More »

ಹೊಸ ಸರ್ಕಾರ ರಚನೆಯಾದ್ರೆ ಬಾಂಬೆ ಟೀಂನ ಯಾರಿಗೂ ಮಂತ್ರಿಸ್ಥಾನ ನೀಡಬೇಡಿ : ವಿಶ್ವನಾಥ್

ಮೈಸೂರು : ಹೊಸ ಸಿಎಂ ನೇತೃತ್ವದ ಸರ್ಕಾರ ರಚನೆಯಾದರೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ತಿಳಿಸಿದರು. ‘ಬದಲಾವಣೆಗಾಗಿ 17 ಮಂದಿ ಬೆಂಬಲ ನೀಡಿದ್ದರು. ಆದರೆ, ಅಧಿಕಾರ ಸಿಕ್ಕ ಮೇಲೆ ಅವರು ಬದಲಾದರು. ಇವರಿಗೆಲ್ಲಾ ಮುಖ್ಯಮಂತ್ರಿ ಆಗಿದ್ದವರು ಯಡಿಯೂರಪ್ಪ ಅಲ್ಲ. ಬದಲಾಗಿ ಅವರ ಪುತ್ರ ವಿಜಯೇಂದ್ರ. ಇವರ ಸಾಧನೆ ಶೂನ್ಯ. ಹೀಗಾಗಿ, ಈ 17 ಜನಕ್ಕೆ ಅಧಿಕಾರ ನೀಡದಿದ್ದರೂ ಪರವಾಗಿಲ್ಲ. …

Read More »

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

ಯಾದಗಿರಿ: ಜಿಲ್ಲೆಯ ಹುಣಸಗಿ ಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಭೂಮಾಪಕ ನ ಲಂಚಾವತಾರ ಬಯಲು ಮಾಡಿದ್ದಾರೆ. ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ರೋಡಿನಲ್ಲಿ ಸರ್ವೇಯರ್ ರವಿಕುಮಾರ್ ಬನಹಟ್ಟಿಯ ಮಹಾದೇವಪ್ಪ ಬಾಗನಗೌಡ ಬಡಿಗೇರ್ ಇವರ ಹೊಲ ಸರ್ವೆ ನಂಬರ್.53 ನೇದ್ದರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೆ ಮಾಡುವ ವಿಷಯದಲ್ಲಿ 2,50,000/- ರೂ ಲಂಚದ ಹಣ ಪಡೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಕಲಬುರಗಿ ಎಸಿಬಿ …

Read More »

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ: ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನಿರೀಕ್ಷೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುವುದರ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟ ಗುರುವಾರ ಸಭೆ ಸೇರಲಿದ್ದು ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಿದೆ. ತೆರೆಮರೆಯಲ್ಲಿ ಈಗ ಹಲವು ಚಟುವಟಿಕೆಗಳು ವೇಗವಾಗಿ ನಡೆಯುತ್ತಿದ್ದು ಸಚಿವ ಸಂಪುಟ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಮುಖ್ಯಮಂತ್ರಿಗಳು ಹಲವು ಕ್ರಮಗಳನ್ನು ಇಂದಿನ ಸಭೆಯಲ್ಲಿ ಕೈಗೊಂಡು ಅದಕ್ಕೆ ಸಚಿವ ಸಂಪುಟ ಅನುಮೋದನೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಈ …

Read More »

ರಾಜಕೀಯದ ಬಗ್ಗೆ ಕುತೂಹಲದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳಿಂದ ಶಾಕಿಂಗ್ ನ್ಯೂಸ್

ಶಿರಸಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೇರಳಕಟ್ಟೆ ಗ್ರಾಮದ ಭೂದೇವಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಎದ್ದ ರಾಜಕೀಯ ವಿಪ್ಲವದ ಸುಖಾಂತ್ಯ ಕಾಣಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಬೆಂಬಲಿಸಿದ …

Read More »