Breaking News

ರಾಜಕೀಯ

ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ

ಬೆಂಗಳೂರು: ಅಡ್ಡಾದಿಡ್ಡಿ ಆಟೋ ಚಲಾಯಿಸಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಜಾಲ ಬಳಿಯ ಬಾಗಲೂರಿನಲ್ಲಿ ನಡೆದಿದೆ. ಆಟೋ ಚಾಲಕ ಸೇರಿ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಕಿರಣ್ (26), ಪ್ರಯಾಣಿಕರಾದ ಅನ್ವರ್ ಹುಸೇನ್ (28) ಮತ್ತು ರಾಹುಲ್( 21) ಮೃತ ದುರ್ದೈವಿಗಳು. ಇನ್ನು ಆಟೋದಲ್ಲಿದ್ದ ವಾಸಪ್ಪ ಎಂಬಾತನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರನ್ನ ಕೂರಿಸಿಕೊಂಡು …

Read More »

ಕಾರ್ ಪಲ್ಟಿ ಸಚಿವ ಹೆಬ್ಬಾರ್ ಸಭೆಗೆ ತೆರಳುವಾಗ ಭೀಕರ ಅಪಘಾತ;

ಕಾರವಾರ; ಕಾರ್ ಪಲ್ಟಿಯಾಗಿ ಲೋಕೊಪಯೋಗಿ ಇಲಾಖೆ ಇಂಜಿನಿಯರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಕೋಲಾದಲ್ಲಿ ನಡೆದಿದೆ.           ಸಿದ್ದಾಪುರದ ಲೋಕೊಪಯೋಗಿ ಇಲಾಖೆ ಎಇಇ ಮುದುಕಣ್ಣವರ್ ( 58 ) ಮೃತಪಟ್ಟವರು. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಸಭೆಗೆ ಶಿರಸಿ ಸಿದ್ದಾಪುರ ಮತ್ತು ಮುಂಡಗೋಡದ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಬರುತ್ತಿದ್ದರು. ಈ ವೇಳೆ ಅಂಕೋಲಾ …

Read More »

ಯಾರಿಗೆ ಯಾವ ಖಾತೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಉಮೇಶ್​ ಕತ್ತಿ- ಅರಣ್ಯ, ಆಹಾರ ಎಸ್. ಅಂಗಾರ- ಮೀನುಗಾರಿಕೆ ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ ಅರಗ ಜ್ಞಾನೇಂದ್ರ- ಗೃಹ ಇಲಾಖೆ ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ ಆನಂದ್​ ಸಿಂಗ್- ಪರಿಸರ, ಪ್ರವಾಸೋದ್ಯಮ ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಪ್ರಭು ಚೌಹಾಣ್​- ಪಶು ಸಂಗೋಪನೆ ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ ಶಿವರಾಮ್ ಹೆಬ್ಬಾರ್​- ಕಾರ್ಮಿಕ …

Read More »

ಶ್ರೀಮಂತ ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು: ಮರಾಠಾ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕರಾಗಿರುವ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ ಅಧ್ಯಕ್ಷ ರಾಣೋಜಿರಾವ್‌ ಸಾಠೆ, ‘ಶ್ರೀಮಂತ ಪಾಟೀಲ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಿಂದ ಅವರನ್ನು ಕೈಬಿಟ್ಟಿರುವುದರಿಂದ …

Read More »

ಲಾರಿ ಚಾಲಕನ ಅಜಾಗರೂಕತೆ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ

ಅಂಕೋಲಾ : ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 63 ಹೆಬ್ಬುಳ ಬಳಿ ಶುಕ್ರವಾರ ನಡೆದಿದೆ. ಗದಗ ಜಿಲ್ಲೆಯ ಪಂಚಾಕ್ಷರಿನಗರದ ವಸಂತ ದಾಕಪ್ಪ ಅಕ್ಕಿ(73) ಮೃತ ದುರ್ದೈವಿ, ಕಾರಿನಲ್ಲಿದ್ದ ಉಳಿದ ಮೂವರಿಗೆ ಗಂಭಿರ ಗಾಯಗಳಾಗಿದ್ದು ಅವರಿಗೆ ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಈ ಅವಘಡಕ್ಕೆ ಕಾರಣ …

Read More »

ಖಾತೆ ಹಂಚಿಕೆಗೂ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರು. ಜತೆಗೆ ಮಠದ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಠದಲ್ಲಿಯೇ ಪ್ರಸಾದ ಸೇವಿಸಿದರು. ಇಂದೇ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಈಮುನ್ನ ತಿಳಿಸಿದ್ದ ಅವರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಹಿಂದುರಿಗಿದ ನಂತರ ಖಾತೆ ಹಂಚಿಕೆ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಸಿದ್ದಗಂಗಾ ಮಠಕ್ಕೆ …

Read More »

ಬೊಮ್ಮಾಯಿ V/s ಶೆಟ್ಟರ್: ಸಿಕ್ಕಾಪಟ್ಟೆ ಸಸ್ಪೆನ್ಸ್! ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಿಸಿದ ನಂತರ ನೀಡಿದ ಸಂದರ್ಶನದಲ್ಲಿ, ‘ನನಗಿಂತ ಜೂನಿಯರ್ ಆದ ಬೊಮ್ಮಾಯಿಯವರ ಸಂಪುಟದಲ್ಲಿ ನಾನು ಸಚಿವನಾಗಿರಲಾರೆ’ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದರು. ತಮ್ಮನ್ನು ಡ್ರಾಪ್ ಮಾಡಬಹುದೆಂಬ ವಿಷಯ ಮೊದಲೇ ಗೊತ್ತಿತ್ತೋ ಅಥವಾ ಹುಬ್ಬಳ್ಳಿ ರಾಜಕೀಯದಲ್ಲಿ ಒಂದು ಲೆಕ್ಕದಲ್ಲಿ ಬೊಮ್ಮಾಯಿ ಅಗೋಚರ ಪರ್ಯಾಯ ಲಿಂಗಾಯತ ನಾಯಕರಾಗುವ ಆತಂಕವೋ ಗೊತ್ತಿಲ್ಲ. ಒಟ್ಟಿನಲ್ಲಿ ಶೆಟ್ಟರ್ ಮೊದಲೇ ಸಂಪುಟ ಸೇರಲಾರೆ ಎಂದರು. ಈ ಹಿಂದೆ ಒಮ್ಮೆ ಸ್ಪೀಕರ್ ಸ್ಥಾನದಲ್ಲಿ, 4 ತಿಂಗಳು …

Read More »

ತಾವು ಮಾಡದ ತಪ್ಪಿಗೆ ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದ ಸಚಿವೆ ಶಶಿಕಲಾ ಜೊಲ್ಲೆ

ನಿಪ್ಪಾಣಿ : ತಾವು ಮಾಡದ ತಪ್ಪಿಗೆ ಅಗ್ನಿಪರೀಕ್ಷೆ ಎದುರಿಸಿ ಬಂದಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಭಾವುಕರಾಗಿ ನುಡಿದರು. ನಿಪ್ಪಾಣಿ ಕ್ಷೇತ್ರಕ್ಕೆ ಸಚಿವರಾಗಿ ಮೊದಲಬಾರಿಗೆ ಆಗಮಿಸಿ ಪಕ್ಷದ ಕಚೇರಿಗೆ ಭೇಟಿ ಮಾಡಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಅದ್ದೂರಿ ಸತ್ಕಾರ ಮಾಡಿದ್ದೀರಿ ನಾನು ಇದನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರು, ಹಿಂದಿನ ಮುಖ್ಯಮಂತ್ರಿಗಳಾದ …

Read More »

‘ಮುಸ್ಲಿಂ ನಾಯಕ ವೀಕ್ ಆಗ್ಲಿ ಅಂತ ರೇಡ್’ ED ದಾಳಿ ಬಗ್ಗೆ ಸಿದ್ದರಾಮಯ್ಯ ಆಪ್ತನ ಆಕ್ರೋಶ

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ರೇಡ್​​ಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಬಳಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಮಾಜಿ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಶೋಕ್ ಪಟ್ಟಣ್.. ಐಎಂಎ ಪ್ರಕರಣ ನಡೆದು ತುಂಬಾ ದಿನ ಆಯ್ತು.. ಈ ದಾಳಿ ರಾಜಕೀಯ ಪ್ರೇರಿತ ಅಂತ ಗೊತ್ತಾಗುತ್ತಿದೆ.. ತಪ್ಪಿದ್ರೆ ಆವತ್ತೇ ಅರೆಸ್ಟ್ ಮಾಡ್ತಾ ಇದ್ರು.. ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. ಅಶೋಕ್ ಪಟ್ಟಣ್, …

Read More »

ವಿಸ್ಕಿ ಬಾಟಲ್ ಕಾಣಿಸುತ್ತಿಲ್ಲ ಎಂದು ತನಿಖೆ ಆರಂಭ

ವಿಸ್ಕಿ ಬಾಟಲ್ ಕಾಣಿಸಲಿಲ್ಲ ಎಂದು ಯುಎಸ್ ತನಿಖೆಯು ಬಹಿರಂಗಪಡಿಸಿದೆ. ಖಜಾನೆ ಇಲಾಖೆಯ ಪ್ರಕಾರ, ವಿಸ್ಕಿಯ ಬೆಲೆ $ 5,800 (ರೂ. 4.30 ಲಕ್ಷ) ಮತ್ತು ಜಪಾನ್ ಸರ್ಕಾರವು ಆಗಿನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊಗೆ 2019 ರಲ್ಲಿ ಉಡುಗೊರೆಯಾಗಿ ನೀಡಿತು. ಅಧಿಕೃತ ಅಂಕಿಅಂಶಗಳಲ್ಲಿ ಬಾಟಲ್ ಕಾಣಿಸದಿರುವುದಕ್ಕೆ ಅಧಿಕಾರಿಗಳು ಪ್ರಸ್ತುತ ಕಾಳಜಿ ವಹಿಸಿದ್ದಾರೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ವಿಸ್ಕಿ ಬಾಟಲ್ ಕಾಣೆಯಾದ ಬಗ್ಗೆ ತನಿಖೆ ಆರಂಭಿಸಿದರು. ಪೊಂಪಿಯೊ …

Read More »