Breaking News

ರಾಜಕೀಯ

ಪ್ರೌಢಶಾಲೆ ಕೊಠಡಿ ನಿರ್ಮಾಣಕ್ಕೆ ಎಂಎಲ್ ಸಿ ಚನ್ನರಾಜ ಭೂಮಿಪೂಜೆ

ಯರಗಟ್ಟಿ : 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿ.ಎಂ.ಎಫ್) ಯೋಜನೆಯಡಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರ ಸೂಚನೆಯಂತೆ, ಯರಗಟ್ಟಿಯ ಶ್ರೀ ಬಸವೇಶ್ವರ ಪ್ರೌಢಶಾಲೆಗೆ ಹೊಸ ಕೊಠಡಿ ಮಂಜೂರಾಗಿದ್ದು, ನಿರ್ಮಾಣದ ಕಾಮಗಾರಿಗೆ ಮಂಗಳವಾರ ಚನ್ನರಾಜ ಹಟ್ಟಿಹೊಳಿ ಮತ್ತು ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರ ನಿಧಿಯಲ್ಲದೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಜಿಲ್ಲಾದ್ಯಂತ ವಿವಿಧ ಅಭಿವೃದ್ದಿ ಕಾಮಗಾರಿ …

Read More »

ನ್ಯಾಯಾಲಯದ ಆವರಣದಲ್ಲಿ ಪತ್ನಿಯ ಮೇಲೆ ಗಂಡನಿಂದ ಹಲ್ಲೆ

ನ್ಯಾಯಾಲಯದ ಆವರಣದಲ್ಲಿ ಪತ್ನಿಯ ಮೇಲೆ ಗಂಡನಿಂದ ಹಲ್ಲೆ ನ್ಯಾಯಾಲಯದ ಆವರಣದಲ್ಲಿ ಪತಿಯೊಬ್ಬರು ಪತ್ನಿಯ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಗಂಭೀರ ಘಟನೆ ನಡೆದಿದೆ. ವಿಚ್ಛೇದನ ವಿಚಾರಣೆಗಾಗಿ ಪತಿ ಮತ್ತು ಪತ್ನಿ ನ್ಯಾಯಾಲಯಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಸವದತ್ತಿ ತಾಲೂಕಿನ ಕರಿಂಕಟ್ಟಿ ಗ್ರಾಮದ ನಿವಾಸಿ ಐಶ್ವರ್ಯ ಗಣಾಚಾರಿ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪತಿ ಮುತ್ತಪ್ಪ ಗಣಾಚಾರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೌಟುಂಬಿಕ …

Read More »

ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು!

ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು! ಬೆಳಗಾವಿ ಸಮರ್ಥ ನಗರದಲ್ಲಿ ಘಟನೆ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ ಬಾತಕಾಂಡೆ(75) ರೈಲ್ವೇ ಹಳಿ ದಾಟುವಾಗ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ ರೈಲ್ವೇ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಬವಿಸಿದೆ ಬೆಳಗಾವಿ ಮಹಾನಗರದ ಸಮರ್ಥ ನಗರದ ಹತ್ತಿರ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ …

Read More »

ಬೆಳಗಾವಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ

ಬೆಳಗಾವಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಬೆಳಗಾವಿ ನಗರದಲ್ಲಿ ಚಾಕು ದಾಳಿಯ ಘಟನೆಗಳು ಹೆಚ್ಚುತ್ತಿರುವ ನಂತರ ಪೊಲೀಸರು ಈಗ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದರ ಭಾಗವಾಗಿ, ಮಾರ್ಕೆಟ್ ಮತ್ತು ತಿಳಕವಾಡಿ ಪೊಲೀಸರು ಎರಡು ವಿಭಿನ್ನ ಪ್ರಕರಣಗಳಲ್ಲಿ ಅಕ್ರಮವಾಗಿ ಮಾರಕ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮೂವರನ್ನು ಬಂಧಿಸಿದ್ದಾರೆ. ಜುಲೈ 20 ರಂದು ಮಧ್ಯಾಹ್ನ, ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ವಿಠ್ಠಲ್ ಹವನ್ನವರ್ ಸಲ್ಮಾನ್ ಮೊಹಮ್ಮದ್ ಹರ್ಷದ್ ದಲಾಯತ್ (ವಯಸ್ಸು 35, …

Read More »

ಬೆಳಗಾವಿಯಲ್ಲಿ ನಡೆದ ಹಿಟ್ ಅಂಡ್ ರನ್ ಕೇಸ್ ಹಿಟ್ ಅಂಡ್ ರನ್ ಪ್ರಕರಣ ನಡೆದ ನಾಲ್ಕು ಗಂಟೆಗಳಲ್ಲಿ ಪೊಲೀಸರಿಂದ ಆರೋಪಿಯ ಬಂಧನ

ಬೆಳಗಾವಿಯಲ್ಲಿ ನಡೆದ ಹಿಟ್ ಅಂಡ್ ರನ್ ಕೇಸ್ ಹಿಟ್ ಅಂಡ್ ರನ್ ಪ್ರಕರಣ ನಡೆದ ನಾಲ್ಕು ಗಂಟೆಗಳಲ್ಲಿ ಪೊಲೀಸರಿಂದ ಆರೋಪಿಯ ಬಂಧನ ಅಪಘಾತದ ನಂತರ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ನಾಲ್ಕು ಗಂಟೆಗಳಲ್ಲಿ ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಶನಿವಾರ, ಬೆಳಗಾವಿ-ಗೋಕಾಕ್ ರಸ್ತೆಯ ಅಷ್ಟೇ ಬಳಿ ಸರಕು ವಾಹನಕ್ಕೆ ಡಿಕ್ಕಿ ಹೊಡೆದು ಮಹಾದೇವ್ ಕಾರ್ಯಪ್ಪ ಲೋಹರ್ …

Read More »

ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರಸ್ತುತ ಕೇಂದ್ರ

ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರಸ್ತುತ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆಗಾಗಿ ಕಾಯುತ್ತಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಹೇಳಿದರು ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಮಹಾದಾಯಿ ಯೋಜನೆ ಬಹಳ ಮುಖ್ಯವಾಗಿದೆ ಟೀಕಿಸುವ ಬದಲು ಅದನ್ನು ಕಾರ್ಯಗತಗೊಳಿಸಬೇಕು ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ದಿವಂಗತ ಅನಂತ್ ಕುಮಾರ್ ಅವರನ್ನು ಅವರು ನೆನಪಿಸಿಕೊಂಡರು. ಈಗ, ಕೇಂದ್ರ ಸಚಿವ …

Read More »

ಒಂದೇ ವೇದಿಕೆಯಲ್ಲಿ ಪಂಚಪೀಠಾಧೀಶ್ವರರು

ದಾವಣಗೆರೆ: ನಗರದಲ್ಲಿ ನಡೆದ ಅದ್ಧೂರಿ ಶೃಂಗ ಸಮ್ಮೇಳನದಲ್ಲಿ ವೀರಶೈವ ಪಂಚಪೀಠಗಳ ಪೀಠಾಧೀಶ್ವರರು, ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭಕ್ತರಿಗೆ ದರ್ಶನ ನೀಡಿದರು. ದರ್ಶನದ ಜೊತೆಗೆ ಎಲ್ಲ ಶ್ರೀಗಳು ತಮ್ಮ ಹಿತವಚನ ನೀಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ರೇಣುಕಾ ಮಂದಿರದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ವೀರಶೈವ ಧರ್ಮದಲ್ಲಿ ಪಂಚಪೀಠಗಳಿಗೆ ಇರುವ ಮಹತ್ವ ಯಾವುದಕ್ಕೂ ಇಲ್ಲ. …

Read More »

ಬಿಹಾರ ಉದ್ಯಮಿಗೆ 10 ಕೋಟಿ ರೂಪಾಯಿ ವಂಚನೆ ಆರೋಪ: ಆರೋಪಿ ರೋಶನ್ ಸಲ್ಡಾನ್ ಪ್ರಕರಣ ಸಿಐಡಿಗೆ

ಮಂಗಳೂರು: ದೇಶಾದ್ಯಂತ ಸಿರಿವಂತ ಉದ್ಯಮಿಗಳನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರಿಂದ ಕೋಟ್ಯಂತರ ಹಣ ಲಪಟಾಯಿಸುತ್ತಿದ್ದ ಆರೋಪಿ ರೋಶನ್ ಸಲ್ಡಾನ್ ವಿರುದ್ಧ ಬಿಹಾರ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೋಶನ್ ಸಲ್ಡಾನ್ ತನಗೆ ಭೂಮಿ ಖರೀದಿ ವಿಚಾರದಲ್ಲಿ 10 ಕೋಟಿಗೂ ಅಧಿಕ ಮೋಸ ಮಾಡಿದ್ದಾಗಿ ಆರೋಪಿಸಿ ದೂರು ನೀಡಿದ್ದಾರೆ. 10 ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ ಅದನ್ನು ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮಂಗಳೂರು …

Read More »

ನಿಪ್ಪಾಣಿ ನಗರದ ಶ್ರೀ ದುರ್ಗಾಮಾತಾ ಮಂದಿರದ ಹತ್ತಿರ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಮೊತ್ತದಲ್ಲಿ ಸಮುದಾಯ ಭವನದ ಭೂಮಿ ಪೂಜೆ

ನಿಪ್ಪಾಣಿ ನಗರದ ಶ್ರೀ ದುರ್ಗಾಮಾತಾ ಮಂದಿರದ ಹತ್ತಿರ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಮೊತ್ತದಲ್ಲಿ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಲಾಯಿತು. ಇದಕ್ಕೂ ಮೊದಲು ದೇವಿಯ ದರ್ಶನ ಪಡೆದು,ಆರತಿ ಬೆಳಗಿ,ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು. ಈಗಾಗಲೇ 11 ಲಕ್ಷ ರೂ ಮೊತ್ತದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದ್ದು ,ಹಂತ ಹಂತವಾಗಿ ಅನುದಾನ ನೀಡಿ,ಸಮುದಾಯ ಭವನ …

Read More »

ಎಐಸಿಸಿ ಅಧ್ಯಕ್ಷರಿಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರವರಿಂದ ಹುಟ್ಟುಹಬ್ಬದ ಶುಭಾಶಯ ಸಲ್ಲಿಕೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

ಎಐಸಿಸಿ ಅಧ್ಯಕ್ಷರಿಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರವರಿಂದ ಹುಟ್ಟುಹಬ್ಬದ ಶುಭಾಶಯ ಸಲ್ಲಿಕೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಜೀ ಅವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು ಈ ಸಂದರ್ಭದಲ್ಲಿ ಕೆಲವು ಸಮಯ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರೊಂದಿಗೆ ಆತ್ಮೀಯವಾಗಿ ಎಐಸಿಸಿ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಮಾರ್ಗದರ್ಶನ …

Read More »