ಆರ್ಎಸ್ಎಸ್ನದ್ದು ತಾಲಿಬಾನ್ ಸಂಸ್ಕೃತಿ ಎಂದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭರ್ಜರಿ ಟಾಂಗ್ ನೀಡಿದ್ದಾರೆ. ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಎಂದು ಗುಡುಗಿದ್ರು. ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಅನೇಕರ ಹತ್ಯೆಯಾಯ್ತು. ಅವರ ಆಡಳಿತದಲ್ಲಿ ರಾಜ್ಯದಲ್ಲಿ ತಾಲಿಬಾನ್ ಸ್ಥಿತಿಯೇ ಇತ್ತು. ರಾಜ್ಯದಲ್ಲಿ 24 ಹಿಂದೂ ಯುವಕರನ್ನು ಕೊಲೆಗೈಯಲಾಯ್ತು. ದಕ್ಷಿಣ ಕನ್ನಡದಲ್ಲಿ …
Read More »ನಾಡ ಹಬ್ಬ ಮೈಸೂರು ದಸರಾ ಉದ್ಘಾಟಕರ ಹೆಸರು ಘೋಷಣೆ
ಮೈಸೂರು: ನಾಡ ಹಬ್ಬ ದಸರಾ ಉದ್ಘಾಟಕರ ಹೆಸರು ಘೋಷಣೆಯಾಗಿದೆ. ಈ ಬಾರಿ ನಡೆಯಲಿರುವ ದಸರಾ ಹಬ್ಬವನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಉದ್ಘಾಟಿಸಲಿದ್ದಾರೆ. ಇಂದು (ಸೆ.28) ಸಂಜೆ ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ರವರಿಗೆ ಆಹ್ವಾನ ನೀಡಲು …
Read More »ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ..?
ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್ ಕುಮಾರ್ ಜೊತೆಗೆ ‘ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ ಬಹು ದೂರ ಸಾಗಿ ಬಂದಿದ್ದಾರೆ. ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಹೊಂದಿರುವ ಮೌನಿ, ಬಾಲಿವುಡ್‌ಗೆ ಬರಬೇಕಾದರೆ ತಾವೆಂತೆಂಥಾ ತ್ಯಾಗಗಳನ್ನು ಮಾಡಿದ್ದಾರೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನಟನೆಯ ಕನಸು ಕಾಣುತ್ತಿದ್ದ ಮೌನಿ, ಇದಕ್ಕಾಗಿ ತಮ್ಮ ಕಾಲೇಜು ವ್ಯಾಸಂಗ ತ್ಯಜಿಸಿ ಕನಸಿನ ನಗರಿಗೆ …
Read More »ಲಂಚ ಪಡೆಯುವಾಗಲೇ ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕುಂದಗೋಳ ಅಧಿಕಾರಿ
ಕುಂದಗೋಳ: ರೈತರೊಬ್ಬರ ಬಳಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾದ ಕಂದಾಯ ನಿರೀಕ್ಷಕರೊಬ್ಬರು ಎಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕುಂದಗೋಳ ಪಟ್ಟಣದ ಕಂದಾಯ ನಿರೀಕ್ಷಕ ಶಿವಾನಂದ ಬೆಮಣ್ಣವರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರೈತನ ಹೊಸ ಪಾಣಿಯನ್ನ ಮಾಡಿಕೊಡಲು ಅಧಿಕಾರಿ 35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ರೈತ ಎಸಿಬಿ ಪೊಲೀಸರಿಗೆ ಅಧಿಕಾರಿ ವಿರುದ್ಧ ದೂರು ನೀಡಿದ್ದರಂತೆ. ಇಂದು ಕಚೇರಿಯಲ್ಲಿ ರೈತನಿಂದ ಅಧಿಕಾರಿ ಹಣ …
Read More »ಕುಡುಕುನ ವೇಷ ಧರಿಸಿ ಆರೋಪಿ ಬಂಧಿಸಿದ ಪೊಲೀಸರು.. 9 ವರ್ಷಗಳ ಹಿಂದಿನ ಕೇಸ್ಗೆ ಕೊನೆಗೂ ಮುಕ್ತಿ
ಬೆಂಗಳೂರು: ಒಂಭತ್ತು ವರ್ಷದ ಹಿಂದಿನ ಪ್ರಕರಣವೊಂದನ್ನ ಪೊಲೀಸರು ಬೇಧಿಸಿದ್ದಾರೆ, ಕುಡುಕನ ಸೋಗಿನಲ್ಲಿ ಹೋಗಿ ಆರೋಪಿಯನ್ನ ಬಂಧಿಸಿದ್ದಾರೆ. ಟ್ರ್ಯಾಕ್ಟರ್ ಓಡಿಸುತ್ತಿದ್ದ ಆಂಥೋನಿ ಎಂಬಾತ ಆಟೋಗೆ ಡಿಕ್ಕಿಹೊಡೆದು ಪರಾರಿಯಾಗಿದ್ದನಂತೆ. ಘಟನೆಯಲ್ಲಿ 8 ವರ್ಷದ ಕೌಶಲ್ ಕುಮಾರ್ ಎಂಬಾತ ಮೃತಪಟ್ಟಿದ್ದ. ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಬಾಪೂಜಿನಗರದಲ್ಲಿ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಗೆ 10 ತಿಂಗಳು 15 ದಿನ ಜೈಲು ಶಿಕ್ಷೆಯಾಗಿತ್ತು. ಆತನಿಗೆ ಶಿಕ್ಷೆ ಪ್ರಕಟ ಆಗ್ತಿದ್ದಂತೆ ಆತ ತಲೆಮೆರೆಸಿಕೊಂಡಿದ್ದ. ಬಳಿಕ ವಿಳಾಸ ಬದಲಿಸಿಕೊಂಡು …
Read More »ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು
ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನ ಪಲ್ಟಿಯಾದ ಘಟನೆ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಕ್ಯಾರಕೊಪ್ಪ ಗ್ರಾಮದ ಎನ್‌ಎಚ್ 4 ಬಳಿ ಅನಾಹುತ ಸಂಭವಿಸಿದೆ. ನಿದ್ರೆ ಮಂಪರಿನಲ್ಲಿ ಕ್ಯಾಂಟರ್ ಚಾಲಕ ಇದ್ದ. ಹೀಗಾಗಿ ದುರ್ಘಟನೆ ನಡೆದಿರಬಹುದು ಅಂತಾ ಹೇಳಲಾಗಿದೆ. ಮೃತರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಗಾಯಗೊಂಡಿರುವವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ …
Read More »ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಉಳಿಗಾಲವಿಲ್ಲ: ಆಶ್ರಫ ಮಾಚಾರ
ಶಹಾಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ ಭಾರತ್ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವೆಡೆ ಅಂಗಡಿ ಮುಗ್ಗಟ್ಟು ತೆರೆದಿದ್ದವು. ಸಾರಿಗೆ ವ್ಯವಸ್ಥೆ ಸಾಮಾನ್ಯವಾಗಿತ್ತು. ನಂತರ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಬಸವೇಶ್ವರ ವೃತ್ತದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಆಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಎಸ್ಡಿಪಿಐ ಕನ್ನಡಪರ …
Read More »ಆಯುಧಪೂಜೆ ವೇಳೆಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ:ಡಿ.ಕೆ.ಶಿವಕುಮಾರ್
ಬೆಂಗಳೂರು: ಆಯುಧ ಪೂಜೆ ಒಳಗೆ ಪದಾಧಿಕಾರಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಗಳ ಆಯ್ಕೆಯಲ್ಲಿ ಯುವಕರು ಎಂದರೆ ತೀರಾ ಚಿಕ್ಕವರಲ್ಲ, ಅವರಿಗೆ ತಕ್ಕಮಟ್ಟಿಗೆ ಅನುಭವವೂ ಇರಬೇಕು. ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು. ದೆಹಲಿಯಲ್ಲಿ ನಾನು ರಾಷ್ಟ್ರೀಯ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೇನೆ ಎಂದು …
Read More »ಆರ್ ಎಸ್ ಎಸ್, ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ:ಸಿದ್ದರಾಮಯ್ಯ
ಬಾದಾಮಿ: ಆರ್ ಎಸ್ ಎಸ್, ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ, ತಾಲಿಬಾನಿಗಳಿಗೆ ಹೇಗೆ ಮನುಷ್ಯತ್ವ, ಸಂಸ್ಕೃತಿ ಇಲ್ಲವೋ ಅದೇ ರೀತಿ ಆರ್ ಎಸ್ ಎಸ್, ಬಿಜೆಪಿಯವರು ಕೂಡ ತಾಲಿಬಾನಿಗಳಂತೆ ವರ್ತಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟು ಟೀಕೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕ ಸಿ ಟಿ ರವಿಯವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ …
Read More »ನಾಳೆ ಸಿಲಿಕಾನ್ ಸಿಟಿಯ ಈ ಭಾಗದ ಜನರಿಗೆ ಕಾಡಲಿದೆ ವಿದ್ಯುತ್ ಸಮಸ್ಯೆ : ಬೆಸ್ಕಾಂ ನಿಂದ ಮಾಹಿತಿ
ಬೆಂಗಳೂರು: ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳಲ್ಲಿ ನಾಳೆ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆವರೆಗೂ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಮತ್ತು ಅಗತ್ಯ ಕೆಲಸಗಳನ್ನು ನಡೆಸಬೇಕಾದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇನ್ನು ಸೋಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಹಾಗೂ ಐಐಎಚ್‌ಆರ್, ಕುಂಬಾರಹಳ್ಳಿ, ಕಸಘಟ್ಟಪುರ, ಕೆಂಪಾಪುರ, ದೊಡ್ಡಬ್ಯಾಲದಕೆರೆ, , ಮಾದಪ್ಪನಹಳ್ಳಿ ಮುಂತಾದ ಸುತ್ತಮುತ್ತ ಪ್ರದೇಶಗಳಲ್ಲಿ …
Read More »
Laxmi News 24×7